Site icon Vistara News

Maya Neelakantan: ಅಮೆರಿಕವನ್ನು ಹುಚ್ಚೆಬ್ಬಿಸಿದ 10 ವರ್ಷದ ಭಾರತೀಯ ಗಿಟಾರ್‌ ಬಾಲೆ ಮಾಯಾ ನೀಲಕಂಠನ್‌, ಯಾರೀಕೆ?

maya neelakantan

ನ್ಯೂಯಾರ್ಕ್‌: ಭಾರತ (India) ಮೂಲದ 10 ವರ್ಷದ ಬಾಲಕಿ ಮಾಯಾ ನೀಲಕಂಠನ್ (Maya Neelakantan) ಇತ್ತೀಚೆಗೆ “ಅಮೆರಿಕಾಸ್ ಗಾಟ್ ಟ್ಯಾಲೆಂಟ್” (America’s got Talent) ಕಾರ್ಯಕ್ರಮದಲ್ಲಿ ತಮ್ಮ ಅಗಾಧ ಪ್ರತಿಭೆಯಿಂದ ನೋಡುಗರನ್ನು ಹುಚ್ಚೆಬ್ಬಿಸಿದರು. ಭಾರತೀಯ ಕ್ಲಾಸಿಕಲ್‌ (Classical) ಮತ್ತು ಪಾಪ್‌ ಫ್ಯೂಶನ್‌ (pop Fusion) ಮಾಡಿದ ನೋಟ್‌ ಅನ್ನು ಗಿಟಾರ್‌ನಲ್ಲಿ (Guitar) ನುಡಿಸಿ ಪ್ರೇಕ್ಷಕರಲ್ಲಿ ಪುಳಕ ಮೂಡಿಸಿದರು.

ಇದೀಗ ಅಮೆರಿಕಾದ ಹೊಸ ರಾಕ್ ಮ್ಯೂಸಿಕ್‌ ಡಾರ್ಲಿಂಗ್‌ ಆಗಿರುವ ಮಾಯಾ ನೀಲಕಂಠನ್‌ 10 ವರ್ಷದ ಗಿಟಾರ್ ಪ್ರತಿಭೆ. ರಾಕ್ ಸಂಗೀತದ ಅಸಾಧಾರಣ ಪ್ರತಿಭೆ ಮತ್ತು ಉತ್ಸಾಹವನ್ನು ಪ್ರದರ್ಶಿಸಿದ‌ ಮಾಯಾ, ಜಡ್ಜ್‌ಗಳ ಮನಗೆದ್ದರು. ತನ್ನ ಆಡಿಷನ್‌ಗಾಗಿ ಭಾರತದಿಂದ ಪ್ರಯಾಣಿಸಿದ ಮಾಯಾ, ಪಾಪಾ ರೋಚ್‌ನ “ಲಾಸ್ಟ್ ರೆಸಾರ್ಟ್” ಆಲ್ಬಂನ ನಿರೂಪಣೆಯೊಂದಿಗೆ ತೀರ್ಪುಗಾರರನ್ನು ಬೆರಗುಗೊಳಿಸಿದಳು. ಆತ್ಮವಿಶ್ವಾಸದಿಂದ ಗಿಟಾರ್ ನುಡಿಸಿ ರೋಮಾಂಚನಗೊಳಿಸಿದಳು.

ಮಾಯಾ ಕುಟುಂಬ ಜೊತೆಗಿದ್ದು ತೆರೆಮರೆಯಲ್ಲಿ ಅವಳನ್ನು ಹುರಿದುಂಬಿಸಿತು. ಮಾಯಾ ಕೌಶಲ್ಯ ತೀರ್ಪುಗಾರರಾದ ಸೈಮನ್ ಕೋವೆಲ್, ಸೋಫಿಯಾ ವೆರ್ಗರಾ, ಹೈಡಿ ಕ್ಲುಮ್ ಮತ್ತು ಹೋವೀ ಮ್ಯಾಂಡೆಲ್ ಅವರ ವಿಸ್ಮಯಕ್ಕೆ ಕಾರಣವಾಯಿತು. ಮಾಯಾ ತೀರ್ಪುಗಾರರು ಮತ್ತು ಪ್ರೇಕ್ಷಕರಿಂದ ಸಮಾನವಾಗಿ ಚಪ್ಪಾಳೆಗಳನ್ನು ಪಡೆದರು. ಈಗಾಗಲೇ ಎಲ್ಲಾ ಸೋಶಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಮಾಯಾ ಗಿಟಾರ್‌ ನುಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ವೀಡಿಯೊ ಲಕ್ಷಾಂತರ ವೀಕ್ಷಣೆಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಪಡೆದಿದೆ.

“ಭಾರತೀಯ ಉಡುಗೆ ಧರಿಸಿ ರಾಕ್ ಸಂಗೀತ ನುಡಿಸಿದ ನಿಮ್ಮ ಬಗ್ಗೆ ನಮಗೆ ತುಂಬಾ ಹೆಮ್ಮೆಯಾಗುತ್ತದೆ. ನೀವು ನಿಜವಾಗಿಯೂ ಆಶೀರ್ವದಿಸಲ್ಪಟ್ಟಿದ್ದೀರಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ನಿಮ್ಮ ಪ್ರತಿಭೆಗೆ ಯಾವುದೇ ಮಿತಿಯಿಲ್ಲ” ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಟೂಲ್, ಮೆಟಾಲಿಕಾ ಮತ್ತು ಸ್ಲೇಯರ್ ಅವರ ಹಾಡುಗಳನ್ನು ಒಳಗೊಂಡಿರುವ ನೀಲಕಂಠನ್ ಅವರ ರಾಕ್ ಮತ್ತು ಗಿಟಾರ್‌ ನುಡಿಸುವಿಕೆಗಳು ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯಗೊಳಿಸಿವೆ. 2022ರಲ್ಲಿ ಅವರು ಗಿಟಾರ್ ವಾದಕ ಆಡಮ್ ಜೋನ್ಸ್ ಅವರ “7ಎಂಪೆಸ್ಟ್” ನಿರೂಪಣೆಯೊಂದಿಗೆ ಪ್ರಭಾವಿಸಿದರು. ಮಾಯಾ ನೀಲಕಂಠನ್ ತನ್ನ ಇನ್ನೊಬ್ಬ ಗಿಟಾರ್‌ ಐಕಾನ್‌ ಗ್ಯಾರಿ ಹಾಲ್ಟ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಅವರಿಂದ ಉಡುಗೊರೆ ಪಡೆದಿದ್ದಾಳೆ. ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಆಕೆ ಆತನನ್ನು ಭೇಟಿಯಾದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾಳೆ. ಅವನ ಸಂಗ್ರಹದಿಂದ ಗಿಟಾರ್ ಅನ್ನು ಉಡುಗೊರೆಯಾಗಿ ಸ್ವೀಕರಿಸಿದಳು.

ಚಿಕ್ಕ ವಯಸ್ಸಿನಿಂದಲೇ ಸಂಗೀತದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡ ನೀಲಕಂಠನ್, ಥ್ರಾಶ್ ಮೆಟಲ್, ಟೂಲ್ ಹಾಡುಗಳು ಮತ್ತು ಭಾರತೀಯ ಶಾಸ್ತ್ರೀಯ ಕರ್ನಾಟಕ ಸಂಗೀತವನ್ನು ನುಡಿಸುತ್ತಾಳೆ. ಹಲವಾರು ಸಂದರ್ಭಗಳಲ್ಲಿ ನೇರ ಪ್ರದರ್ಶನ ನೀಡಿದ್ದಾಳೆ. ಕೇವಲ ಐದು ವರ್ಷದವಳಾಗಿದ್ದಾಗ ಆಕೆ ಆಟಿಕೆ ಗಿಟಾರ್ ನುಡಿಸುತ್ತಾ ಮನೆಯಲ್ಲಿ ನೃತ್ಯ ಮಾಡುತ್ತಿದ್ದಳಂತೆ. ಇದೇ ಆಸಕ್ತಿ ಆಕೆಯನ್ನು ನುರಿತ ಗಿಟಾರ್ ವಾದಕನಾಗಲು ಅವಳನ್ನು ಪ್ರೇರೇಪಿಸಿತು.

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರು ನೀಲಕಂಠನ್ ಅವರ ವೀಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವಳನ್ನು “ದೇವತೆಗಳ ಭೂಮಿಯಿಂದ ಬಂದ ರಾಕ್ ದೇವತೆ” ಎಂದು ಉಲ್ಲೇಖಿಸಿದ್ದಾರೆ. ಮಹೀಂದ್ರಾ ಗ್ರೂಪ್ ಪ್ರತಿ ವರ್ಷ ಮುಂಬೈನಲ್ಲಿ ಆಯೋಜಿಸುವ ಮಹೀಂದ್ರಾ ಬ್ಲೂಸ್ ಫೆಸ್ಟಿವಲ್‌ನಲ್ಲಿ ಈಕೆ ಕಾರ್ಯಕ್ರಮ ನೀಡಲು ಅರ್ಹಳು ಎಂದು ಮಹೀಂದ್ರಾ ಹೇಳಿದ್ದಾರೆ.

ಇದನ್ನೂ ಓದಿ: Viral Video: ಬಾಗಿಲ ಬಳಿ ಇದ್ದ ಆಹಾರ ಪ್ಯಾಕೆಟ್‌ ಕದ್ದೊಯ್ದ ಜೊಮ್ಯಾಟೊ ಡೆಲಿವರಿ ಬಾಯ್‌!

Exit mobile version