Site icon Vistara News

ಮನೆ ಹಿತ್ತಿಲಿಗೆ ಬಂದು ಸ್ಫೋಟಿಸಿ ಬಿತ್ತು ಉಲ್ಕಾ ಶಿಲೆ; ಡೋರ್​ಬೆಲ್​ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ ಇಲ್ಲಿದೆ ನೋಡಿ

Meteor crashes in Texas Video Viral

#image_title

ಟೆಕ್ಸಾಸ್​​ನ ಮೆಕ್‌ಅಲೆನ್ ನಗರದ ಮನೆಯ ಹಿತ್ತಿಲಿನಲ್ಲಿಯೇ ಉಲ್ಕಾಪಾತ (Meteor Crashes-ಉಲ್ಕಾ ಶಿಲೆ ಪತನ) ಆಗಿದೆ. ಭಯಂಕ ಶಬ್ದದೊಂದಿಗೆ ಉಲ್ಕಾಶಿಲೆ ಹಿತ್ತಲಿಗೆ ಅಪ್ಪಳಿಸಿದ ದೃಶ್ಯ ಪಕ್ಕದ ಮನೆಯ ಡೋರ್​ಬೆಲ್​ ಕ್ಯಾಮೆರಾದಲ್ಲಿ ಅಂದರೆ, ಕಾಲಿಂಗ್​ ಬೆಲ್​ಗೆ ಅಳವಡಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ @disdikmark ಟ್ವಿಟರ್​ ಅಕೌಂಟ್​​ನಲ್ಲಿ ವಿಡಿಯೊ ಪೋಸ್ಟ್ ಆಗಿದ್ದು, ‘ನೀವು ಇಲ್ಲಿ ಉಲ್ಕಾ ಶಿಲೆ ಸ್ಫೋಟದ ಶಬ್ದವನ್ನು ಕೇಳಬಹುದು’ ಎಂದು ಕ್ಯಾಪ್ಷನ್​ ಬರೆಯಲಾಗಿದೆ. ಹೀಗೆ ಕೆಳಗೆ ಬಿದ್ದಿದ್ದು 454 ಕೆಜಿ (ಅರ್ಧ ಟನ್​) ತೂಕದ ಉಲ್ಕಾ ಶಿಲೆ ಎಂದು ಹೇಳಲಾಗಿದೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ವೇಗವಾಗಿ ವೈರಲ್ ಆದ ಬೆನ್ನಲ್ಲೇ ನಾಸಾ ಕೂಡ ಇದು ಉಲ್ಕಾ ಶಿಲೆಯೇ ಹೌದು ಎಂದು ದೃಢಪಡಿಸಿದೆ. ಉಲ್ಕಾಯು ಭೂವಾತಾವರಣ ಪ್ರವೇಶಿಸಿ ಬೆಂಕಿಯ ಉಂಡೆಯಾಗಿ (ಉಲ್ಕಾಶಿಲೆ) ಪರಿವರ್ತನೆಗೊಂಡು ಫೆ.15ರಂದು ಸಂಜೆ 5ಗಂಟೆ ಹೊತ್ತಿಗೆ ಟೆಕ್ಸಾಸ್​​ನ ಮೆಕ್‌ಅಲೆನ್​​ನಲ್ಲಿ ಅಪ್ಪಳಿಸಿದೆ. ಈ ಶಿಲೆಯ ವ್ಯಾಸ 2 ಅಡಿ ಮತ್ತು ಸುಮಾರು 1000 ಪೌಂಡ್​ಗಳಷ್ಟು ( 454 ಕೆಜಿ ) ತೂಕವಿದೆ ಎಂದು ನಾಸಾ ಹೇಳಿದೆ. ಹಾಗೇ, ಈ ಉಲ್ಕಾಪಾತದ ಬಗ್ಗೆ ಸವಿವರವಾಗಿ ಫೇಸ್​ಬುಕ್​ ಪೋಸ್ಟ್ ಹಾಕಿಕೊಂಡಿದೆ.

ಇದನ್ನೂ ಓದಿ: Yoga for Relaxation: ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಲು ಈ ಯೋಗ ಮಾಡಬೇಕು; ಬಾಲಿವುಡ್ ಯೋಗ ಮಾಸ್ಟರ್ ವಿಡಿಯೊ

ಈ ಉಲ್ಕಾಶಿಲೆ ಬಿದ್ದಿದ್ದರಿಂದ ಹೆಚ್ಚೇನೂ ಅಪಾಯ ಆಗಲಿಲ್ಲ. ಆ ಪ್ರದೇಶದಲ್ಲಿ ಯಾರೂ ಇಲ್ಲದ ಕಾರಣ ಜೀವ ಹಾನಿಯಾಗಿಲ್ಲ. ಆದರೆ ವಿಡಿಯೊ ಮತ್ತು ನಾಸಾದ ಪೋಸ್ಟ್​ ನೋಡಿದ ನೆಟ್ಟಿಗರು ಅಚ್ಚರಿಯಿಂದ ಕಮೆಂಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಆತಂಕ ವ್ಯಕ್ತಪಡಿಸಿದ್ದಾರೆ. ಅದರಲ್ಲೊಬ್ಬರು ಕಮೆಂಟ್ ಮಾಡಿ, ‘ನನ್ನ ತಂದೆ-ತಾಯಿ ಮತ್ತು ಸಹೋದರ ಬೆಂಟ್ಸನ್ ರಸ್ತೆಯ ಮೈಲ್ 9ರಲ್ಲಿ ವಾಸಿಸುತ್ತಿದ್ದಾರೆ. ಈ ಉಲ್ಕಾ ಪಾತ ಆಗುವ ಸಂದರ್ಭದಲ್ಲಿ ದೊಡ್ಡದಾದ ಶಬ್ದ ಕೇಳಿದ್ದಾಗಿ ಅವರು ಹೇಳಿದ್ದಾರೆ ಎಂದು ಹೇಳಿದ್ದಾರೆ.

ಇಲ್ಲಿದೆ ನೋಡಿ ಉಲ್ಕಾಪಾತದ ವಿಡಿಯೊ:

Exit mobile version