Site icon Vistara News

Miss Universe 2023: ನಿಕಾರಗುವಾದ ಶೆಯ್‌ನ್ನಿಸ್‌ ಪಲಾಸಿಯೋಸ್‌ಗೆ ಭುವನ ಸುಂದರಿ ಕಿರೀಟ!

Miss Universe 2023

Miss Universe 2023 is Sheynnis Palacios from Nicaragua

ಅಲ್‌ ಸೆಲ್ವಡಾರ್:‌ ನಿಕಾರಗುವಾದ ಶೆಯ್‌ನ್ನಿಸ್‌ ಪಲಾಸಿಯೋಸ್‌ (Sheynnis Palacios) ಅವರು 2023ನೇ ಸಾಲಿನ ಭುವನ (Miss Universe 2023) ಸುಂದರಿಯಾಗಿ ಹೊರಹೊಮ್ಮಿದ್ದಾರೆ. ಸೆಂಟ್ರಲ್‌ ಅಮೆರಿಕದ ಅಲ್‌ ಸಾಲ್ವಡಾರ್‌ನಲ್ಲಿರುವ ಜೋಸ್‌ ಅಡೊಲ್ಫೊ ಪಿನಡೇ ಅರೇನಾದಲ್ಲಿ (Jose Adolfo Pineda Arena) ನಡೆದ 72ನೇ ಭುವನ ಸುಂದರಿ ಸ್ಪರ್ಧೆಯಲ್ಲಿ ನಿಕಾರಗುವಾದ ಸುಂದರಿ ಮುಡಿಗೆ ಭುವನ ಸುಂದರಿ ಕಿರೀಟ ಸೇರಿದೆ. 2022ರ ಭುವನ ಸುಂದರಿ ಬಾನಿ ಗಾಬ್ರಿಯೆಲ್‌ ಅವರು ಶೆಯ್‌ನ್ನಿಸ್‌ ಪಲಾಸಿಯೋಸ್‌ ಅವರಿಗೆ ಭುವನ ಸುಂದರಿ ಕಿರೀಟ ತೊಡಿಸಿದರು. ಇನ್ನು ಭಾರತದ ಶ್ವೇತಾ ಶಾರದಾ ಅವರು ಸೆಮಿಫೈನಲ್‌ನಲ್ಲಿಯೇ ಸ್ಪರ್ಧೆ ಅಂತ್ಯಗೊಳಿಸಿದರು.

ಶೆಯ್‌ನ್ನಿಸ್‌ ಪಲಾಸಿಯೋಸ್‌ ಅವರು ಭುವನ ಸುಂದರಿ ಪಟ್ಟ ಅಲಂಕರಿಸಿದ ನಿಕಾರಗುವಾದ ಮೊದಲ ರೂಪದರ್ಶಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇದುವರೆಗೆ ನಿಕಾರಗುವಾದ ಯಾರೊಬ್ಬರೂ ಭುವನ ಸುಂದರಿ ಕಿರೀಟ ಧರಿಸಿರಲಿಲ್ಲ. ಥಾಯ್ಲೆಂಡ್‌ನ ಆಂಟೋನಿಯಾ ಪೊರ್‌ಸ್ಲಿಡ್‌ ಅವರು ಮೊದಲ ರನ್ನರ್‌ ಅಪ್‌ ಆದರೆ, ಆಸ್ಟ್ರೇಲಿಯಾದ ಮೊರಾಯ ವಿಲ್ಸನ್‌ ಅವರು ಎರಡನೇ ರನ್ನರ್‌ ಅಪ್‌ ಎನಿಸಿದರು. ಭುವನ ಸುಂದರಿ ಎಂದು ಘೋಷಿಸುತ್ತಲೇ ಶೆಯ್‌ನ್ನಿಸ್‌ ಪಲಾಸಿಯೋಸ್‌ ಅವರು ಭಾವುಕರಾದರು. ಇಡೀ ಸಭಾಂಗಣವು ಶೆಯ್‌ನ್ನಿಸ್‌ ಪಲಾಸಿಯೋಸ್‌ ಅವರಿಗೆ ಚಪ್ಪಾಳೆಯ ಸುರಿಮಳೆ ಮೂಲಕ ಗೌರ ನೀಡಿತು.

ಟಾಪ್‌ 3 ಸ್ಥಾನ ತಲುಪಿದ್ದ ಬೆಡಗಿಯರು

ಭಾರತದಿಂದ ಸ್ಪರ್ಧಿಸಿದ್ದ ಶ್ವೇತಾ ಶಾರದಾ

ಭಾರತದಿಂದ 23 ವರ್ಷದ ಶ್ವೇತಾ ಶಾರದಾ ಅವರು ಮಿಸ್‌ ಯುನಿವರ್ಸ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇವರು ಸೆಮಿಫೈನಲ್‌ ತಲುಪಿದ್ದರು. ಮೂಲತಃ ಚಂಡೀಗಡದವರಾದ ಶ್ವೇತಾ ಅವರ ತಾಯಿ ಸಿಂಗಲ್ ಪೇರೆಂಟ್. 16ನೇ ವಯಸ್ಸಿಗೆ ಮುಂಬೈಗೆ ಶಿಫ್ಟ್ ಆದ ನಂತರ, ಓಪನ್ ಯೂನಿವರ್ಸಿಟಿಯಲ್ಲಿ ಡಿಗ್ರಿ ಪಡೆದಿದ್ದಾರೆ. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್, ಝಲಕ್ ದಿಕ್ಲಾಜಾ ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಜತೆಗೆ ಬಾಲಿವುಡ್‌ನ ಖ್ಯಾತನಾಮರೊಂದಿಗೆ ಕೊರಿಯೋಗ್ರಾಫರ್ ಆಗಿಯೂ ಹೆಸರು ಮಾಡಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ನಡೆದ ಮಿಸ್ ದಿವಾ 2023 ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗುವುದರೊಂದಿಗೆ ಮಿಸ್ ಬಾಡಿ ಬ್ಯೂಟಿಫುಲ್, ಮಿಸ್ ಟ್ಯಾಲೆಂಟೆಡ್, ಟಾಪ್ 5 ಮಿಸ್ ಫೋಟೋಜೆನಿಕ್, ಟಾಪ್ 6 ಮಿಸ್ ರ್‍ಯಾಂಪ್ ವಾಕ್ ಟೈಟಲ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ದಪ್ಪ ಇದ್ದರೂ ಭುವನ ಸುಂದರಿ ರೇಸ್‌ನಲ್ಲಿ ನೇಪಾಳ ಸುಂದರಿ ಕ್ಯಾಟ್‌ವಾಕ್‌; ಯಾರಿವರು ದೀಪಿಕಾ?

ದಪ್ಪ ಇದ್ದರೂ ಸ್ಪರ್ಧಿಸಿ ಗಮನ ಸೆಳೆದ ನೇಪಾಳ ಚೆಲುವೆ

ನೇಪಾಳದ ಜೇನ್‌ ದೀಪಿಕಾ ಗ್ಯಾರೆಟ್‌ (Jane Dipika Garrett) ಅವರು ನೋಡಲು ದಪ್ಪ ಇದ್ದರೂ ಭುವನ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಜಗತ್ತಿನ ಗಮನ ಸೆಳೆದರು. ಹಾಗೆಯೇ, ಭುವನ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿದ ಜಗತ್ತಿನ ಮೊದಲ ಪ್ಲಸ್‌ ಸೈಜ್‌ (ದಪ್ಪ ಇರುವವರು) ರೂಪದರ್ಶಿ ಎಂಬ ಖ್ಯಾತಿಗೂ ಜೇನ್‌ ದೀಪಿಕಾ ಗ್ಯಾರೆಟ್‌ ಪಾತ್ರರಾದರು.

ಈ ಬಾರಿಯ ಸ್ಪರ್ಧೆಯಲ್ಲಿ ಲಿಂಗ ಪರಿವರ್ತನೆ ಮಾಡಿಕೊಂಡ ಇಬ್ಬರು ಮಹಿಳೆಯರು, ಇಬ್ಬರು ತಾಯಂದಿರು ಭಾಗವಹಿಸಿರುವುದು ವಿಶೇಷವಾಗಿದೆ. ಜಗತ್ತಿನ 90ಕ್ಕೂ ಹೆಚ್ಚು ಸುಂದರಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Exit mobile version