Site icon Vistara News

Blasphemy In Pakistan: ಧರ್ಮನಿಂದನೆ ಆರೋಪ, ವ್ಯಕ್ತಿಯನ್ನು ಜೈಲಿನಿಂದ ಎಳೆದು ಸುಟ್ಟುಹಾಕಿದ ಮೂಲಭೂತವಾದಿಗಳು

Blasphemy In Pakistan

#image_title

ಇಸ್ಲಾಮಾಬಾದ್‌: ಧರ್ಮದ ಅಮಲೇರಿಸಿಕೊಂಡಿರುವ ಭಯೋತ್ಪಾದಕರಿಗೆ ಆಶ್ರಯ ನೀಡಿದ ಪಾಕಿಸ್ತಾನ ಈಗ ಆರ್ಥಿಕವಾಗಿ ದಿವಾಳಿಯಾಗಿದೆ. ಹಣಕಾಸು ನೆರವು ನೀಡಿ ಎಂದು ಜಗತ್ತಿನ ಎದುರು ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಆಹಾರ ಸಾಮಗ್ರಿಗಳು ಸೇರಿ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಜನ ತತ್ತರಿಸಿದರೂ ನೆರೆರಾಷ್ಟ್ರದಲ್ಲಿ ಮೂಲಭೂತವಾದಿಗಳ ಉಪಟಳ ಮಾತ್ರ ಮುಂದುವರಿದಿದೆ. ಇದಕ್ಕೆ ಉದಾಹರಣೆ ಎಂಬಂತೆ, ಧರ್ಮನಿಂದನೆ (Blasphemy In Pakistan) ಆರೋಪದಿಂದಾಗಿ ಮೂಲಭೂತವಾದಿಗಳು ಪೊಲೀಸ್‌ ಠಾಣೆಗೆ ನುಗ್ಗಿ, ವ್ಯಕ್ತಿಯನ್ನು ಹೊರಗೆಳೆದು, ಆತನಿಗೆ ಬೆಂಕಿ ಹಚ್ಚಿ ಹತ್ಯೆಗೈದಿದ್ದಾರೆ. ಈ ವಿಡಿಯೊ ವೈರಲ್‌ ಆಗಿದೆ.

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ನಂಕಾನ ಸಾಹಿಬ್‌ನಲ್ಲಿ ಫೆಬ್ರವರಿ ೧೧ರಂದು ಜನ ಪೊಲೀಸ್‌ ಠಾಣೆಗೆ ನುಗ್ಗಿ, ಆರೋಪಿಯನ್ನು ಹೊರಗೆ ಎಳೆದು ಕುಕೃತ್ಯ ಎಸಗಿದ್ದಾರೆ. ವಾರಿಸ್‌ ಇಸ್ಸಾ ಎಂಬ ವ್ಯಕ್ತಿಯು ಇಸ್ಲಾಂ ಧರ್ಮದ ಗ್ರಂಥಕ್ಕೆ ಅವಮಾನ ಮಾಡಿದ ಎಸಗಿದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದರು. ಆದರೆ, ಕೆರಳಿದ ನೂರಾರು ಜನ ಪೊಲೀಸ್‌ ಠಾಣೆಗೆ ನುಗ್ಗಿ ಹಿಂಸಾಕೃತ್ಯ ಎಸಗಿದ್ದಾರೆ.

ನೂರಾರು ಜನ ನುಗ್ಗಿದ ಕಾರಣ ಠಾಣೆಯಲ್ಲಿದ್ದ ಪೊಲೀಸರಿಗೆ ಪರಿಸ್ಥಿತಿ ನಿಯಂತ್ರಣ ಮಾಡಲು ಆಗಿಲ್ಲ. ಠಾಣೆಗೆ ನುಗ್ಗಿದ ಜನ ವಾರಿಸ್‌ ಇಸ್ಸಾ ಎಂಬ ವ್ಯಕ್ತಿಯನ್ನು ಹೊರಗೆ ಎಳೆದುಕೊಂಡು ಬಂದಿದ್ದಾರೆ. ಆತನಿಗೆ ಮನಬಂದಂತೆ ಥಳಿಸಿ, ಬಟ್ಟೆ ಹರಿದು, ಬೆಂಕಿ ಹಚ್ಚಿದ್ದಾರೆ. ಉದ್ರಿಕ್ತ ಗುಂಪು ಮೈಮೇಲೆ ಎರಗಿ ಹಲ್ಲೆ ನಡೆಸಿದ ಕಾರಣ ಗಂಭೀರವಾಗಿ ಗಾಯಗೊಂಡಿದ್ದ ವಾರಿಸ್‌, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಕುರಿತು ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಪ್ರಕರಣವನ್ನು ತನಿಖೆಗೆ ಆದೇಶಿಸಿದ್ದಾರೆ.

ಇದನ್ನೂ ಓದಿ: Pakistan economic crisis : ಪಾಕಿಸ್ತಾನ 2024ರ ಮಾರ್ಚ್‌ ವೇಳೆಗೆ ದಿವಾಳಿ ಸಂಭವ : ವರದಿ

Exit mobile version