ನವದೆಹಲಿ: ಆಕಾಶದಲ್ಲಿ ಗ್ರಹಗಳ ಸಮಾಗಮ ನೋಡುವುದೇ ಚೆಂದ. ಅದರಲ್ಲೂ ಮೂರು ಗ್ರಹಗಳು ಒಟ್ಟಿಗೆ ಕಾಣಿಸಿಕೊಂಡರೆ, ಆಕಾಶಕಾಯ ವೀಕ್ಷಕರಿಗೆ ಹಬ್ಬವೇ ಸರಿ. ಇಂಥದೊಂದು ಸೋಜಿಗವು ಆಕಾಶದಲ್ಲಿ ಕಾಣುಸಿಗುತ್ತಿದೆ. ಚಂದ್ರ, ಶುಕ್ರ ಮತ್ತು ಗುರು ಗ್ರಹ ಸಮಾಗಮವು ಮಾರ್ಚ್ 1ರವರೆಗೂ ಆಕಾಶದಲ್ಲಿ ನೋಡಬಹುದಾಗಿದೆ.
ಕಳೆದ ಶನಿವಾರದಿಂದಲೇ ಈ ಸೂಜಿಗ ಸಂಭವಿಸಿದ್ದು, ಈ ಮೂರು ಗ್ರಹಗಳ ಸಂಯೋಗದ ಮನಮೋಹಕ ಫೋಟೋವನ್ನು ಟ್ವೀಟ್ ಮಾಡಿರುವ ನಾಸಾ(NASA), ಪಶ್ಚಿಮ ಆಕಾಶದಲ್ಲಿ ಒಂದು ಸಮಾಗಮ ನಡೆಯುತ್ತಿದೆ. ಅರ್ಧಚಂದ್ರಾಕಾರವು ಗುರುಗ್ರಹದ ಹತ್ತಿರದಲ್ಲಿದೆ, ಅವುಗಳ ಕೆಳಗೆ ಶುಕ್ರವಿದೆ. ಗುರು ಮತ್ತು ಶುಕ್ರವು ಮಾರ್ಚ್ 1 ರವರೆಗೆ ಒಂದುಗೂಡಿ ಮುಂದುವರಿಯುತ್ತದೆ. ಈ ಮೂರು ಗ್ರಹಗಳನ್ನು ನೀವು ಆಕಾಶದಲ್ಲಿ ಗುರುತಿಸಿದ್ದೀರಾ? ಹಾಗಿದ್ದರೆ, ಅವುಗಳ ಫೋಟೋ ಸೆರೆ ಹಿಡಿದು ನಮಗೆ ಕಳುಹಿಸಿ ಎಂದು ಹೇಳಿದೆ.
ನಾಸಾ ಟ್ವೀಟ್ ಹೀಗಿದೆ…
ನಮ್ಮ ಸೌರ ಮಂಡಲದಲ್ಲಿ ಗುರು ಮತ್ತು ಶುಕ್ರ ಗ್ರಹಗಳು ಅತ್ಯಂತ ಪ್ರಕಾಶಮಾನ ಗ್ರಹಗಳಾಗಿವೆ. ಕಳೆದ ಕೆಲವು ವಾರಗಳಿಂದ ಈ ಎರಡೂ ಗ್ರಹಗಳು ಒಂದಕ್ಕೊಂದು ಹತ್ತಿರವಾಗುತ್ತಿವೆ. ಈ ಪ್ರಕ್ರಿಯೆ ಮಾರ್ಚ್ 1ರವರೆಗೂ ಮುಂದುವರಿಯಲಿದೆ ಎಂದು ನಾಸಾ ತಿಳಿಸಿದೆ.
ಇದನ್ನೂ ಓದಿ: NASA Chief Technologist | ಇಂಡಿಯನ್- ಅಮೆರಿಕನ್ ಎ ಸಿ ಚರಾನಿಯಾ ಈಗ ನಾಸಾದ ಚೀಫ್ ಟೆಕ್ನಾಲಜಿಸ್ಟ್
ಭಾರತದಲ್ಲಿ ಗ್ರಹಗಳ ಸಮಾಗಮದ ಟ್ವೀಟ್…
ನಾಸಾ ನೀಡಿದ ಕರೆಗೆ ಸಾವಿರಾರು ಜನರು ಸ್ಪಂದಿಸಿದ್ದು, ಭಾರತೀಯರು ಸೇರಿದಂತೆ ವಿಶ್ವಾದ್ಯಂತ ಅನೇಕರ ಈ ಗ್ರಹಗಳ ಸಮಾಗಮ ಫೋಟೋಗಳನ್ನು ಸೆರೆ ಹಿಡಿದು ಕಳುಹಿಸಿವೆ. ಆಕಾಶಕಾಯ ವೀಕ್ಷಕರಿಗೆ ಗ್ರಹಗಳು ಒಂದೇ ರೇಖೆಯಲ್ಲಿ ಸಂಧಿಸುತ್ತಿರುವ ಪ್ರಕ್ರಿಯಿ ಸೂಜಿಗವನ್ನು ಸೃಷ್ಟಿಸಿದೆ. ವಿದ್ಯಾರ್ಥಿಗಳು, ಮಕ್ಕಳು, ಬಾಹ್ಯಾಕಾಶ ಆಸಕ್ತರ ಈ ಮನಮೋಹನ ದೃಶ್ಯವನ್ನು ಆನಂದಿಸುತ್ತಿದ್ದಾರೆ.