Site icon Vistara News

Lashkar Terrorist: ಕರಾಚಿಯಲ್ಲಿ ಮೋಸ್ಟ್ ವಾಂಟೆಂಡ್ ಲಷ್ಕರೆ ಉಗ್ರ ಕೈಸರ್ ಫಾರೂಕ್ ಹತ್ಯೆ, 26/11 ದಾಳಿಯ ಮಾಸ್ಟರ್ ಮೈಂಡ್?

Qaiser Farooq

ಕರಾಚಿ: ಲಷ್ಕರೆ ತಯ್ಬಾ ಉಗ್ರ ಸಂಘಟನೆಯ (Lashkar-e-Taiba LeT)) ನಾಯಕ, ಮೋಸ್ಟ್ ವಾಂಟೆಡ್ ಟೆರರಿಸ್ಟ್ ಕೈಸರ್ ಫಾರೂಕ್ (Most Wanted Lashkar Terrorist Qaiser Farooq) ಹತ್ಯೆಯಾಗಿದೆ ಎಂಬ ಸುದ್ದಿಯು ಸೋಷಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿದೆ. ಫಾರೂಕ್ ಹತ್ಯೆಯ ಸಿಸಿಟಿವಿ ದೃಶ್ಯಾವಳಿಗಳು ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದ ದಿನಾಂಕ ಹಾಗೂ ಸ್ಥಳದ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ. ವ್ಯಕ್ತಿಯೊಬ್ಬ ಫಾರೂಕ್‌ಗೆ ಹಿಂದಿನಿಂದ ಶೂಟ್ ಮಾಡಿ, ಕರಾಚಿಯ (Karachi City) ರಸ್ತೆಗಳಲ್ಲಿ ಆತ ಹೋಗುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣಬಹುದು(Pakistan). ಈತ ಭಾರತಕ್ಕೆ ತಲೆ ನೋವಾಗಿದ್ದ.

ಗುಂಡಿನ ಶಬ್ದ ಕೇಳುತ್ತಿದ್ದಂತೆ ಜನರು ಆತನ ರಕ್ಷಣೆ ಮುಂದಾಗುತ್ತಾರೆ. ಆಗ ಜನರು ಮೃತ ವ್ಯಕ್ತಿ ಕೈಸರ್ ಫಾರೂಕ್ ಎಂಬ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಎಂದು ಕೂಗುತ್ತಾರೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಕೈಸರ್ ನೆಲಕ್ಕೆ ಬಿದ್ದು ಉಸಿರು ಚೆಲ್ಲುತ್ತಾನೆ.

ಈ ಸುದ್ದಿಯನ್ನೂ ಓದಿ: Lashkar-e-Taiba: ಡ್ರೋನ್ ಮೂಲಕ ಭಾರತಕ್ಕೆ ಉಗ್ರರ ಎಂಟ್ರಿ! ಇದು ಲಷ್ಕರೆ ತಯ್ಬಾ ಸಂಘಟನೆಯ ಹೊಸ ತಂತ್ರ

ನಿಷೇಧಿತ ಉಗ್ರ ಸಂಘಟನೆಯಾಗಿರುವ ಲಷ್ಕರೆ ತಯ್ಬಾ ಸಂಸ್ಥಾಪಕ ಸದಸ್ಯರ ಪೈಕಿ ಕೈಸರ್ ಫಾರೂಕ್ ಕೂಡ ಒಬ್ಬ. ಮುಂಬೈ ದಾಳಿಯ ಮಾಸ್ಟರ್ ಮೈಂಡ್‌ನ ಅತ್ಯಂತ ನಿಕಟವರ್ತಿಯಾಗಿದ್ದ ಅಲ್ಲದೇ, ಎಲ್ಇಟಿ ಮುಖ್ಯಸ್ಥ ಕೂಡ ಆಗಿದ್ದ. ವಿಶೇಷ ಎಂದರೆ, ಮತ್ತೊಬ್ಬ ಉಗ್ರ ನಾಯಕ ಹಫೀಜ್ ಸೈಯದ್‌ನ ಪುತ್ರ ಕಾಣೆಯಾದ ಮಾರನೇ ದಿನವೇ ಈ ಹತ್ಯೆ ನಡೆದಿರುವುದ ಹಲವು ಲೆಕ್ಕಾಚಾರಗಳಿಗೆ ಕಾರಣವಾಗಿದೆ.

ಮೋಸ್ಟ್ ವಾಂಟೆಡ್ ಭಯೋತ್ಪಾದಕ ಹಫೀಜ್ ಸಯೀದ್ ಪುತ್ರರಲ್ಲಿ ಒಬ್ಬನಾದ ಕಮಾಲುದ್ದೀನ್ ಸಯೀದ್ ಮಂಗಳವಾರದಿಂದ (ಸೆಪ್ಟೆಂಬರ್ 26) ನಾಪತ್ತೆಯಾಗಿದ್ದಾನೆ. ಪೇಶಾವರದಲ್ಲಿ ಕಮಾಲುದ್ದೀನ್ ಸಯೀದ್‌ನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನದ ಪ್ರಜೆಯಾಗಿರುವ ಹಫೀಜ್ ಸಯೀದ್ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದಾನೆ. ಅಂತಾರಾಷ್ಟ್ರೀಯವಾಗಿ ಗುರುತಿಸಲಾಗಿರುವ ಉಗ್ರನಾಗಿದ್ದು, ಪಾಕಿಸ್ತಾನವು ಆತನನ್ನು ಸೆರೆ ಹಿಡಿದು ಜೈಲಿನಲ್ಲಿಟ್ಟಿತ್ತು.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version