ವಾಷಿಂಗ್ಟನ್: ಇಸ್ರೇಲ್ ಮೇಲೆ ಹಮಾಸ್ ಉಗ್ರರು ಅಕ್ಟೋಬರ್ 7ರಂದು ಸಾವಿರಾರು ರಾಕೆಟ್‌ಗಳಿಂದ ದಾಳಿ ನಡೆಸುವ ಮೂಲಕ ಸಮರ (Israel Palestine War) ಸಾರಿದೆ. ಇದಾದ ಬಳಿಕ ಇಸ್ರೇಲ್ ಕೂಡ ಅಧಿಕೃತವಾಗಿ ಯುದ್ಧ ಸಾರಿದ್ದು, ಗಾಜಾ ನಗರದ (Gaza City) ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರು, ಗಾಜಾ ನಗರದ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸುತ್ತಿರುವ ಕಾರಣ ಇದುವರೆಗೆ 4 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ, ಇಸ್ರೇಲ್ ಹಾಗೂ ಉಗ್ರರ ನಡುವಿನ ಸಮರವು ಜಗತ್ತಿನಾದ್ಯಂತ ಪರಿಣಾಮ ಬೀರುತ್ತಿದೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರು (Hamas Terrorists) ದಾಳಿ ನಡೆಸಿದ ಕಾರಣ ಅಮೆರಿಕದಲ್ಲಿ ವ್ಯಕ್ತಿಯೊಬ್ಬ ಮುಸ್ಲಿಂ (Hate Crime) ಬಾಲಕನನ್ನು ಕೊಂದಿದ್ದಾನೆ. ಉಗ್ರರ ದಾಳಿಯು ಮುಸ್ಲಿಮರ ಮೇಲೆ ದ್ವೇಷ ಹುಟ್ಟಲು ಕಾರಣವಾಗಿದೆ ಎಂದು ತಿಳಿದುಬಂದಿದೆ.
ಅಮೆರಿಕದ ಇಲಿನೋಯಿಸ್ ಎಂಬ ಪ್ರದೇಶದಲ್ಲಿ 71 ವರ್ಷದ ಜೋಸೆಫ್ ಜುಬಾ (Joseph Czuba) ಎಂಬ ವ್ಯಕ್ತಿಯು ಮುಸ್ಲಿಮರು ಎಂಬ ಕಾರಣಕ್ಕಾಗಿ ತಾಯಿ ಹಾಗೂ ಮಗನಿಗೆ ಚಾಕು ಇರಿದಿದ್ದಾನೆ. ಜೋಸೆಫ್ ಜುಬಾ ದಾಳಿಯಿಂದ ಆರು ವರ್ಷದ ಮುಸ್ಲಿಂ ಬಾಲಕನು ಮೃತಪಟ್ಟರೆ, ಆತನ ತಾಯಿಗೆ ಗಂಭೀರವಾಗಿ ಗಾಯಗಳಾಗಿವೆ. ಪ್ರಕರಣದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆ ಕೇಸ್ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಜೋಸೆಫ್ ಜುಬಾ ಮನೆಯಲ್ಲಿಯೇ ತಾಯಿ-ಮಗ ಬಾಡಿಗೆಗೆ ಇದ್ದರು ಎಂದು ಮೂಲಗಳು ತಿಳಿಸಿವೆ.
“You Muslims must die!”
— Dr. Omar Suleiman (@omarsuleiman504) October 15, 2023
Wadea Al-Fayoume a 6 year old Palestinian American boy was just stabbed to death in Chicago by his landlord shouting these words. His mom Hanaan was stabbed as well and in critical condition.
Every child of Gaza is just as beautiful as him, and the hate… pic.twitter.com/cXzACK4MwZ
ಮುಸ್ಲಿಮರೆಲ್ಲ ಸಾಯಬೇಕು ಎಂದು ಘೋಷಣೆ
ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ, ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಹಿಂಸಾಚಾರಕ್ಕೆ, ಗಲಭೆಗೆ ಮುಸ್ಲಿಮರೇ ಕಾರಣರಾಗಿದ್ದಾರೆ ಎಂಬುದಾಗಿ ಜೋಸೆಫ್ ಜುಬಾ ಭಾವಿಸಿದ್ದಾನೆ. ಇದೇ ಕೋಪದಲ್ಲಿದ್ದ ಆತ ತಾಯಿ ಹಾಗೂ ಮಗನಿಗೆ ಚಾಕು ಇರಿದಿದ್ದಾನೆ. ಮಹಿಳೆಯೊಬ್ಬರು ಕರೆ ಮಾಡಿ ವಿಷಯ ತಿಳಿಸಿದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಚಾಕು ಇರಿಯುವ ಮುನ್ನ, ‘ನೀವು ಮುಸ್ಲಿಮರೆಲ್ಲ ಸಾಯಬೇಕು’ ಎಂಬುದಾಗಿ ಘೋಷಣೆ ಕೂಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Israel Palestine War: ಅವಳಿ ಮಕ್ಕಳ ಪ್ರಾಣ ಉಳಿಸಲು ತಮ್ಮ ಜೀವವನ್ನೇ ಬಲಿ ಕೊಟ್ಟ ಇಸ್ರೇಲ್ ದಂಪತಿ!
ಮೂವರು ಉಗ್ರರನ್ನು ಹತ್ಯೆಗೈದ ಇಸ್ರೇಲ್
ಗಾಜಾ ನಗರದ ಮೇಲೆ ಸಂಪೂರ್ಣವಾಗಿ ಯುದ್ಧ ಸಾರಿರುವ ಇಸ್ರೇಲ್, ನಿರಂತರವಾಗಿ ದಾಳಿ ನಡೆಸುತ್ತಿದೆ. ಎರಡು ದಿನದಲ್ಲಿಯೇ ಹಮಾಸ್‌ನ ಮೂವರು ಕಮಾಂಡರ್‌ಗಳನ್ನು ಹತ್ಯೆ ಮಾಡಿದೆ. ಶನಿವಾರ (ಅಕ್ಟೋಬರ್ 14) ಹಮಾಸ್ ಏರ್‌ಫೋರ್ಸ್ ಮುಖ್ಯಸ್ಥ ಮುರಾದ್ ಅಬು ಮುರಾದ್ ಹಾಗೂ ಹಿರಿಯ ಕಮಾಂಡರ್ ಆಗಿದ್ದ ಅಲಿ ಖಾದಿಯನ್ನು ಹೊಡೆದುರುಳಿಸಿದ್ದ ಇಸ್ರೇಲ್, ಭಾನುವಾರ (ಅಕ್ಟೋಬರ್ 15) ಬಿಲಾಲ್ ಅಲ್ ಕೆಡ್ರಾ (Bilal Al Kedra) ಎಂಬ ಕಮಾಂಡರ್‌ನನ್ನು ಹತ್ಯೆಗೈದಿದೆ. ಈತ ಹಮಾಸ್ ನೌಕಾಪಡೆಯ ಹಿರಿಯ ಕಮಾಂಡರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದ್ದು, ವಾಯುದಾಳಿ ಮೂಲಕ ಇಸ್ರೇಲ್ ಸೇನೆಯು ಈತನನ್ನು ಹತ್ಯೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.