Hate Crime: ಮುಸ್ಲಿಮರೆಲ್ಲ ಸಾಯಬೇಕು ಎನ್ನುತ್ತ ಮುಸ್ಲಿಂ ಬಾಲಕನ ಕೊಂದ ವ್ಯಕ್ತಿ; ಹಮಾಸ್‌ ಕಾರಣ - Vistara News

ಪ್ರಮುಖ ಸುದ್ದಿ

Hate Crime: ಮುಸ್ಲಿಮರೆಲ್ಲ ಸಾಯಬೇಕು ಎನ್ನುತ್ತ ಮುಸ್ಲಿಂ ಬಾಲಕನ ಕೊಂದ ವ್ಯಕ್ತಿ; ಹಮಾಸ್‌ ಕಾರಣ

Hate Crime: ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರವು ಜಾಗತಿಕವಾಗಿ ಮುಸ್ಲಿಮರ ಮೇಲೆ ದ್ವೇಷ ಹೆಚ್ಚಾಗಲು ಕಾರಣವಾಗುತ್ತಿದೆ. ಅಮೆರಿಕದಲ್ಲಿ ವ್ಯಕ್ತಿಯೊಬ್ಬ ಮುಸ್ಲಿಂ ಬಾಲಕನನ್ನು ಕೊಂದಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

VISTARANEWS.COM


on

Muslim Killed In US
ಹತ್ಯೆಗೀಡಾದ ಬಾಲಕ ಹಾಗೂ ಹತ್ಯೆ ಆರೋಪಿ ಜೋಸೆಫ್‌ ಜುಬಾ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಾಷಿಂಗ್ಟನ್‌: ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ಅಕ್ಟೋಬರ್‌ 7ರಂದು ಸಾವಿರಾರು ರಾಕೆಟ್‌ಗಳಿಂದ ದಾಳಿ ನಡೆಸುವ ಮೂಲಕ ಸಮರ (Israel Palestine War) ಸಾರಿದೆ. ಇದಾದ ಬಳಿಕ ಇಸ್ರೇಲ್‌ ಕೂಡ ಅಧಿಕೃತವಾಗಿ ಯುದ್ಧ ಸಾರಿದ್ದು, ಗಾಜಾ ನಗರದ (Gaza City) ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು, ಗಾಜಾ ನಗರದ ಮೇಲೆ ಇಸ್ರೇಲ್‌ ಸೇನೆ ದಾಳಿ ನಡೆಸುತ್ತಿರುವ ಕಾರಣ ಇದುವರೆಗೆ 4 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ, ಇಸ್ರೇಲ್‌ ಹಾಗೂ ಉಗ್ರರ ನಡುವಿನ ಸಮರವು ಜಗತ್ತಿನಾದ್ಯಂತ ಪರಿಣಾಮ ಬೀರುತ್ತಿದೆ. ಇಸ್ರೇಲ್ ಮೇಲೆ ಹಮಾಸ್‌ ಉಗ್ರರು (Hamas Terrorists) ದಾಳಿ ನಡೆಸಿದ ಕಾರಣ ಅಮೆರಿಕದಲ್ಲಿ ವ್ಯಕ್ತಿಯೊಬ್ಬ ಮುಸ್ಲಿಂ (Hate Crime) ಬಾಲಕನನ್ನು ಕೊಂದಿದ್ದಾನೆ. ಉಗ್ರರ ದಾಳಿಯು ಮುಸ್ಲಿಮರ ಮೇಲೆ ದ್ವೇಷ ಹುಟ್ಟಲು ಕಾರಣವಾಗಿದೆ ಎಂದು ತಿಳಿದುಬಂದಿದೆ.

ಅಮೆರಿಕದ ಇಲಿನೋಯಿಸ್‌ ಎಂಬ ಪ್ರದೇಶದಲ್ಲಿ 71 ವರ್ಷದ ಜೋಸೆಫ್‌ ಜುಬಾ (Joseph Czuba) ಎಂಬ ವ್ಯಕ್ತಿಯು ಮುಸ್ಲಿಮರು ಎಂಬ ಕಾರಣಕ್ಕಾಗಿ ತಾಯಿ ಹಾಗೂ ಮಗನಿಗೆ ಚಾಕು ಇರಿದಿದ್ದಾನೆ. ಜೋಸೆಫ್‌ ಜುಬಾ ದಾಳಿಯಿಂದ ಆರು ವರ್ಷದ ಮುಸ್ಲಿಂ ಬಾಲಕನು ಮೃತಪಟ್ಟರೆ, ಆತನ ತಾಯಿಗೆ ಗಂಭೀರವಾಗಿ ಗಾಯಗಳಾಗಿವೆ. ಪ್ರಕರಣದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆ ಕೇಸ್‌ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಜೋಸೆಫ್‌ ಜುಬಾ ಮನೆಯಲ್ಲಿಯೇ ತಾಯಿ-ಮಗ ಬಾಡಿಗೆಗೆ ಇದ್ದರು ಎಂದು ಮೂಲಗಳು ತಿಳಿಸಿವೆ.

ಮುಸ್ಲಿಮರೆಲ್ಲ ಸಾಯಬೇಕು ಎಂದು ಘೋಷಣೆ

ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರ ದಾಳಿ, ಮಧ್ಯಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಹಿಂಸಾಚಾರಕ್ಕೆ, ಗಲಭೆಗೆ ಮುಸ್ಲಿಮರೇ ಕಾರಣರಾಗಿದ್ದಾರೆ ಎಂಬುದಾಗಿ ಜೋಸೆಫ್‌ ಜುಬಾ ಭಾವಿಸಿದ್ದಾನೆ. ಇದೇ ಕೋಪದಲ್ಲಿದ್ದ ಆತ ತಾಯಿ ಹಾಗೂ ಮಗನಿಗೆ ಚಾಕು ಇರಿದಿದ್ದಾನೆ. ಮಹಿಳೆಯೊಬ್ಬರು ಕರೆ ಮಾಡಿ ವಿಷಯ ತಿಳಿಸಿದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಚಾಕು ಇರಿಯುವ ಮುನ್ನ, ‘ನೀವು ಮುಸ್ಲಿಮರೆಲ್ಲ ಸಾಯಬೇಕು’ ಎಂಬುದಾಗಿ ಘೋಷಣೆ ಕೂಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.  

ಇದನ್ನೂ ಓದಿ: Israel Palestine War: ಅವಳಿ ಮಕ್ಕಳ ಪ್ರಾಣ ಉಳಿಸಲು ತಮ್ಮ ಜೀವವನ್ನೇ ಬಲಿ ಕೊಟ್ಟ ಇಸ್ರೇಲ್‌ ದಂಪತಿ!

ಮೂವರು ಉಗ್ರರನ್ನು ಹತ್ಯೆಗೈದ ಇಸ್ರೇಲ್‌

ಗಾಜಾ ನಗರದ ಮೇಲೆ ಸಂಪೂರ್ಣವಾಗಿ ಯುದ್ಧ ಸಾರಿರುವ ಇಸ್ರೇಲ್‌, ನಿರಂತರವಾಗಿ ದಾಳಿ ನಡೆಸುತ್ತಿದೆ. ಎರಡು ದಿನದಲ್ಲಿಯೇ ಹಮಾಸ್‌ನ ಮೂವರು ಕಮಾಂಡರ್‌ಗಳನ್ನು ಹತ್ಯೆ ಮಾಡಿದೆ. ಶನಿವಾರ (ಅಕ್ಟೋಬರ್‌ 14) ಹಮಾಸ್‌ ಏರ್‌ಫೋರ್ಸ್‌ ಮುಖ್ಯಸ್ಥ ಮುರಾದ್‌ ಅಬು ಮುರಾದ್‌ ಹಾಗೂ ಹಿರಿಯ ಕಮಾಂಡರ್‌ ಆಗಿದ್ದ ಅಲಿ ಖಾದಿಯನ್ನು ಹೊಡೆದುರುಳಿಸಿದ್ದ ಇಸ್ರೇಲ್‌, ಭಾನುವಾರ (ಅಕ್ಟೋಬರ್‌ 15) ಬಿಲಾಲ್‌ ಅಲ್‌ ಕೆಡ್ರಾ (Bilal Al Kedra) ಎಂಬ ಕಮಾಂಡರ್‌ನನ್ನು ಹತ್ಯೆಗೈದಿದೆ. ಈತ ಹಮಾಸ್‌ ನೌಕಾಪಡೆಯ ಹಿರಿಯ ಕಮಾಂಡರ್‌ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದ್ದು, ವಾಯುದಾಳಿ ಮೂಲಕ ಇಸ್ರೇಲ್‌ ಸೇನೆಯು ಈತನನ್ನು ಹತ್ಯೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Aishwarya Arjun : ಚೆನ್ನೈನಲ್ಲಿ ವಿವಾಹವಾದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್​; ಇಲ್ಲಿವೆ ಚಿತ್ರಗಳು

Aishwarya Arjun : ಉಮಾಪತಿ ಅವರು ತಮಿಳಿನ ಖ್ಯಾತ ಹಾಸ್ಯನಟ ರಾಮಯ್ಯ ಅವರ ಪುತ್ರ ಹಾಗೂ ಇವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಬ್ಬರು ಹಲವಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಮದುವೆಯಾಗಲು ನಿರ್ಧರಿಸಿದ ಅವರು ಕಳೆದ ವರ್ಷ ಎಂಗೇಜ್​ಮೆಂಟ್ ಮಾಡಿಕೊಂಡು ಇದೀಗ ಮದುವೆಯಾಗಿದ್ದಾರೆ. ಮದುವೆ ಚಿತ್ರಗಳ ಮೇಲೆ ನ 10-06-2024 ಎಂದಷ್ಟೇ ಬರೆದುಕೊಂಡಿದ್ದಾರೆ.

VISTARANEWS.COM


on

Aishwarya Arjun
Koo

ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯಾ ಸರ್ಜಾ (Aishwarya Sarja) ಅವರ ವಿವಾಹ ನಟ ಉಮಾಪತಿ ರಾಮಯ್ಯ ಅವರೊಂದಿಗೆ ಚೆನ್ನೈನಲ್ಲಿ ಸೋಮವಾರ (ಜೂನ್​ 10ರಂದು) ನಡೆದಿದೆ. ಸರಳ ಕಾರ್ಯಕ್ರಮದಲ್ಲಿ ನಡೆದ ಮದುವೆ ಫೋಟೋಗಳನ್ನು ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅರ್ಜುನ್ ಸರ್ಜಾ ಅವರ ಕುಟುಂಬವೇ ಕಳೆದ ವರ್ಷ ಚೆನ್ನೈನಲ್ಲಿ ನಿರ್ಮಿಸಿದ್ದ ಆಂಜನೇಯ ದೇವಸ್ಥಾನದಲ್ಲಿ ಅವರಿಬ್ಬರ ಮದುವೆ ನಡೆದಿದೆ. 2023ರ ಅಕ್ಟೋಬರ್ 27 ರಂದು ಈ ಇವರಿಬ್ಬರ ಎಂಗೇಜ್​ಮೆಂಟ್​ ಇದೇ ದೇವಸ್ಥಾನದ ಆವರಣದಲ್ಲಿ ನಡೆದಿತ್ತು. ದಂಪತಿಯ ಫೊಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಗಣ್ಯರು ಶುಭಾಶಯ ತಿಳಿಸಿದ್ದಾರೆ.

ಮದುವೆಯಲ್ಲಿ ಯಾರು ಹಾಜರಿದ್ದರು ಎಂಬ ಮಾಹಿತಿ ಇಲ್ಲ. ಉಮಾಪತಿ ಅವರು ತಮಿಳಿನ ಖ್ಯಾತ ಹಾಸ್ಯನಟ ರಾಮಯ್ಯ ಅವರ ಪುತ್ರ ಹಾಗೂ ಇವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಬ್ಬರು ಹಲವಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಮದುವೆಯಾಗಲು ನಿರ್ಧರಿಸಿದ ಅವರು ಕಳೆದ ವರ್ಷ ಎಂಗೇಜ್​ಮೆಂಟ್ ಮಾಡಿಕೊಂಡು ಇದೀಗ ಮದುವೆಯಾಗಿದ್ದಾರೆ. ಮದುವೆ ಚಿತ್ರಗಳ ಮೇಲೆ ನ 10-06-2024 ಎಂದಷ್ಟೇ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Pawan Kalyan: ಪವನ್‌ ಕಲ್ಯಾಣ್‌ ಮಾಜಿ ಪತ್ನಿ ಮರು ಮದುವೆಗೆ ರೆಡಿ!

ಐಶ್ವರ್ಯಾ ಮತ್ತು ಉಮಾಪತಿ ಪ್ರೀತಿಗೆ ಎರಡು ಕುಟುಂಬದ ಸಮ್ಮತಿಯಿತ್ತು. ಬಳಿಕ ಅದ್ಧೂರಿಯಾಗಿ ಎಂಗೇಂಜ್‌ಮೆಂಟ್ ನಡೆದಿತ್ತು. ಐಶ್ವಯಾ ಅರ್ಜುನ್​ 2018ರಲ್ಲಿ ‘ಪ್ರೇಮ ಬರಹ’ ಚಿತ್ರದಲ್ಲಿ ನಟಿಸಿದ್ದರು. ಮಗಳ ಚಿತ್ರಕ್ಕೆ ಅರ್ಜುನ್ ಸರ್ಜಾ ನಿರ್ದೇಶನ ಮಾಡಿದ್ದರು. ಸಿನಿಮಾ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ತೆರೆಕಂಡಿತ್ತು. ಅದೇ ರೀತಿ ‘ಪಟ್ಟತು ಯಾನೈ’, ‘ಪ್ರೇಮ ಬರಹ’, ‘ಸೊಲ್ಲಿವಿಡವ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಐಶ್ವರ್ಯಾ ನಾಯಕಿಯಾಗಿ ಕೆಲ ಚಿತ್ರಗಳಲ್ಲಿ ಮಾಡಿದ್ದರೂ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗಲಿಲ್ಲ. ಅವರ ಅಭಿನಯದ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಯಶಸ್ಸು ಕಂಡಿಲ್ಲ

Continue Reading

ವೈರಲ್ ನ್ಯೂಸ್

Viral News: ಕೊಳದಲ್ಲಿ ತೇಲುತ್ತಿದ್ದ ದೇಹ ಮೇಲೆತ್ತಲು ಹೋದ ಪೊಲೀಸರು! ಹೆಣ ನಡೆಯತೊಡಗಿತು!

Viral News: ವ್ಯಕ್ತಿಯ ದೇಹವೊಂದು ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಹೆದರಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ತಂಡ ವ್ಯಕ್ತಿ ಸತ್ತಿದ್ದಾನೆ ಎಂದು ಎತ್ತಲು ಹೋದಾಗ ಶಾಕ್‌ ಆಗಿದ್ದಾರೆ. ತೆಲಂಗಾಣದಲ್ಲಿ ಈ ಘಟನೆ ನಡೆದಿದೆ. ಈ ಕುರಿತ ವಿಡಿಯೊ ಇಲ್ಲಿದೆ ನೋಡಿ.

VISTARANEWS.COM


on

Viral News
Koo

ತೆಲಂಗಾಣ: ಕೊಳದಲ್ಲಿ, ನದಿಯಲ್ಲಿ ಹೆಣಗಳು ತೇಲುತ್ತಿರುವ ಘಟನೆಯನ್ನು ನಾವು ಹಲವು ಬಾರಿ ನೋಡಿರುತ್ತೇವೆ ಹಾಗೂ ಈ ತರಹದ ಘಟನೆಯ ಬಗ್ಗೆ ಕೇಳಿರುತ್ತೇವೆ. ವ್ಯಕ್ತಿಯನ್ನು ಯಾರಾದರೂ ಕೊಂದು ನದಿಗೆ ಎಸೆದಿರುತ್ತಾರೆ ಅಥವಾ ವ್ಯಕ್ತಿಯೇ ಜೀವನದ ಕಷ್ಟಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಆಗ ಅವರ ಹೆಣ ನೀರಿನ ಮೇಲೆ ಬಂದು ತೇಲುತ್ತಿರುತ್ತದೆ. ಇಂತಹದ್ದೇ ಒಂದು ಘಟನೆ ಹನಮಕೊಂಡನಗರದಲ್ಲಿ ನಡೆದಿದೆ. ಹೆಣ ತೇಲುತ್ತಿದೆ ಎಂದು ಎತ್ತಲು ಹೋದ ಪೊಲೀಸ್‌ ತಂಡ ಬೇಸ್ತು ಬಿದ್ದಿದ್ದಾರೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್‌ (Viral News) ಆಗಿದೆ.

ವ್ಯಕ್ತಿಯ ದೇಹವೊಂದು ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ತಂಡ ವ್ಯಕ್ತಿಯ ದೇಹವನ್ನು ಎತ್ತಲು ಹೋದಾಗ ಆ ವ್ಯಕ್ತಿ ಎದ್ದು ನಿಂತಿದ್ದಾನೆ. ಸತ್ತಿದ್ದಾನೆ ಎಂದುಕೊಂಡ ವ್ಯಕ್ತಿ ಎದ್ದು ನಿಂತು ಮಾತನಾಡಿದರೆ ಯಾರಿಗೆ ತಾನೆ ಭಯವಾಗುವುದಿಲ್ಲ? ಅದೇ ರೀತಿ ಪೊಲೀಸರು ಈ ಘಟನೆಯಿಂದ ದಿಗ್ಭ್ರಮೆಗೊಂಡಿದ್ದಾರೆ.

ಹೆಣ ಎತ್ತಲು ಹೋದಾಗ ಎದ್ದು ನಿಂತ ವ್ಯಕ್ತಿ!

ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ವ್ಯಕ್ತಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ನಿವಾಸಿಯಾಗಿದ್ದು, ಕಾಜಿಪೇಟೆಯ ಡೀಸೆಲ್ ಕಾಲೋನಿಯಲ್ಲಿ ವಾಸವಾಗಿದ್ದ. ಅವನು ಗ್ರಾನೈಟ್ ಗಣಿಯಲ್ಲಿ ಕೆಲಸ ಮಾಡುತ್ತಿದ್ದು, ಬಿಸಿಲಿನ ತಾಪದಲ್ಲಿ ಸುಮಾರು ಹನ್ನೆರಡು ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡಿ ಸುಸ್ತಾದ ಕಾರಣ ಸ್ವಲ್ಪ ವಿಶ್ರಾಂತಿ ಪಡೆಯಲು ಕೊಳಕ್ಕೆ ಇಳಿದಿರುವುದಾಗಿ ತಿಳಿಸಿದ್ದಾನೆ. ಹಾಗೇ ವಿಶ್ರಾಂತಿ ಪಡೆಯುತ್ತಿದ್ದ ಆತ ಅಲ್ಲೇ ನಿದ್ರೆಗೆ ಜಾರಿದ. ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆತನ ದೇಹ ಕೊಳದಲ್ಲಿ ತೇಲುತ್ತಿರುವುದನ್ನು ಕಂಡು ಸ್ಥಳೀಯರು ಆತಂಕಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಬಂದು ವ್ಯಕ್ತಿಯ ದೇಹವನ್ನು ಎತ್ತಲು ಹೋದಾಗ ಆತ ಎದ್ದು ನಿಂತಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪ ಎಷ್ಟಿದೆ ಎಂದರೆ ಜನರು ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬಿಸಿಲಿನ ತಾಪವನ್ನು ಸಹಿಸಲಾಗದೆ ಹೆಚ್ಚಿನ ಜನರು ನದಿ, ಕೊಳದಲ್ಲೇ ಮುಳುಗಿಕೊಂಡು ಹೆಚ್ಚು ಸಮಯ ಕಳೆಯುತ್ತಿದ್ದರು. ಇದಕ್ಕೆ ಈಗ ಈ ಘಟನೆಯು ಒಂದು ಸಾಕ್ಷಿಯಾಗಿದೆ.

ಇದನ್ನೂ ಓದಿ: salaries of prime minister: ರಾಷ್ಟ್ರಪತಿ, ಪ್ರಧಾನಿಗೆ ಸಂಬಳ, ಸೌಲಭ್ಯ ಎಷ್ಟಿರುತ್ತವೆ ಗೊತ್ತೆ?

ಅಲ್ಲದೇ ಕಳೆದವಾರ ರಾಜ್ಯದ ನಲ್ಗೊಂಡ ನಗರದ ನೀರಿನ ತೊಟ್ಟಿಯಲ್ಲಿ ವ್ಯಕ್ತಿಯ ಶವವೊಂದು ಪತ್ತೆಯಾಗಿತ್ತು. ಈ ವಿಚಾರ ತಿಳಿಯದೇ ಜನರು ಅದೇ ನೀರನ್ನು ಸೇವಿಸುತ್ತಿದ್ದರು. ಈ ಬಗ್ಗೆ ಪೊಲೀಸ್ ತನಿಖೆ ನಡೆದಿದ್ದು, ಸತ್ತ ವ್ಯಕ್ತಿ ಅವುಲಾ ವಂಶಿ ಎಂದು ತಿಳಿದುಬಂದಿದ್ದು, ಮೇ 24ರಿಂದ ಕಾಣೆಯಾಗಿದ್ದ. ನಂತರ ಕುಟುಂಬದವರು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಆತ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

Continue Reading

ಪ್ರಮುಖ ಸುದ್ದಿ

University Grants Commission : ಇನ್ನು ಮುಂದೆ ವಿಶ್ವವಿದ್ಯಾಲಯಗಳಲ್ಲಿ ವರ್ಷಕ್ಕೆ ಎರಡು ಬಾರಿ ಅಡ್ಮಿಷನ್​

University Grants Commission : ಈ ಹಿಂದೆ, ಯುಜಿಸಿ ಮುಕ್ತ ಮತ್ತು ದೂರಶಿಕ್ಷಣ (ಒಡಿಎಲ್) ಮತ್ತು ಆನ್​ಲೈನ್​ ವಿಧಾನಗಳಿಗೆ ವರ್ಷಕ್ಕೆ ಪ್ರವೇಶಕ್ಕೆ ಅನುಮತಿ ನೀಡಿತ್ತು. ಇದರ ಪರಿಣಾಮವಾಗಿ ಸುಮಾರು 5 ಲಕ್ಷ ಹೆಚ್ಚುವರಿ ವಿದ್ಯಾರ್ಥಿಗಳು ಅವಕಾಶ ಪಡೆದಿದ್ದರು. ಈ ಯಶಸ್ಸಿನಿಂದ ಉತ್ತೇಜಿತರಾದ ಯುಜಿಸಿ ಈ ನೀತಿಯನ್ನು ನಿಯಮಿತ ಕೋರ್ಸ್​ಗಳಿಗೆ ವಿಸ್ತರಿಸಿತ್ತು.

VISTARANEWS.COM


on

University Grants Commission
Koo

ನವದೆಹಲಿ: ಭಾರತೀಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯೊಂದನ್ನು ಪ್ರಕಟಿಸಲಾಗಿದ್ದು. ಮುಂದಿನ ಶೈಕ್ಷಣಿಕ ವರ್ಷದಿಂದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವರ್ಷಕ್ಕೆ ಎರಡು ಬಾರಿ ವಿದ್ಯಾರ್ಥಿಗಳಿಗೆ ಅಡ್ಮಿಷನ್​ (ಪ್ರವೇಶ ಕಲ್ಪಿಸಲು) ವಿಶ್ವವಿದ್ಯಾಲಯ ಧನಸಹಾಯ ಆಯೋಗ (University Grants Commission) ನಿರ್ಧರಿಸಿದೆ, ಪ್ರವೇಶಗಳು ಈಗ ಜನವರಿ / ಫೆಬ್ರವರಿ ಮತ್ತು ಜುಲೈ / ಆಗಸ್ಟ್​​ನಲ್ಲಿ ನಡೆಯಲಿವೆ. ಬೋರ್ಡ್ ಫಲಿತಾಂಶಗಳಲ್ಲಿನ ವಿಳಂಬ, ಆರೋಗ್ಯ ಸಮಸ್ಯೆಗಳು ಅಥವಾ ವೈಯಕ್ತಿಕ ಕಾರಣಗಳಿಂದಾಗಿ ಆರಂಭಿಕ ಪ್ರವೇಶ ಪ್ರಕ್ರಿಯೆಯನ್ನು ತಪ್ಪಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡಲು ಈ ಕ್ರಮ ಕೈಗೊಳ್ಳಲಾಗಿದೆ.

ಯುಜಿಸಿ ಅಧ್ಯಕ್ಷ ಪ್ರೊಫೆಸರ್ ಮಾಮಿಡಾಲ ಜಗದೀಶ್ ಕುಮಾರ್ ಈ ಕುರಿತು ಮಾಹಿತಿ ಪ್ರಕಟಿಸಿದ್ದಾರೆ. ಎರಡು ಬಾರಿ ಪ್ರವೇಶ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳು ಶೈಕ್ಷಣಿಕ ದಾಖಲಿಗಾಗಿ ಕಾಯುವ ಸಮಯವನ್ನು ಕಡಿಮೆ ಮಾಡಲಾಗುವುದು. ಆ ಮೂಲಕ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ಕಲ್ಪಿಸಲಾಗುವುದು ಎಂದು ವಿವರಿಸಿದ್ದಾರೆ. ಇದು ಕೈಗಾರಿಕೆಗಳಿಗೆ ವರ್ಷಕ್ಕೆ ಎರಡು ಬಾರಿ ಕ್ಯಾಂಪಸ್ ನೇಮಕ ಮಾಡಲು ಅನುವು ಮಾಡಿಕೊಡುತ್ತದೆ, ಪದವೀಧರರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

ಈ ಹಿಂದೆ, ಯುಜಿಸಿ ಮುಕ್ತ ಮತ್ತು ದೂರಶಿಕ್ಷಣ (ಒಡಿಎಲ್) ಮತ್ತು ಆನ್​ಲೈನ್​ ವಿಧಾನಗಳಿಗೆ ವರ್ಷಕ್ಕೆ ಪ್ರವೇಶಕ್ಕೆ ಅನುಮತಿ ನೀಡಿತ್ತು. ಇದರ ಪರಿಣಾಮವಾಗಿ ಸುಮಾರು 5 ಲಕ್ಷ ಹೆಚ್ಚುವರಿ ವಿದ್ಯಾರ್ಥಿಗಳು ಅವಕಾಶ ಪಡೆದಿದ್ದರು. ಈ ಯಶಸ್ಸಿನಿಂದ ಉತ್ತೇಜಿತರಾದ ಯುಜಿಸಿ ಈ ನೀತಿಯನ್ನು ನಿಯಮಿತ ಕಾರ್ಯಕ್ರಮಗಳಿಗೆ ವಿಸ್ತರಿಸಿತ್ತು.

ಇದನ್ನೂ ಓದಿ: Odisha chief minister : ಬಿಜೆಪಿಯ ಮೋಹನ್ ಚರಣ್ ಮಾಝಿ ಒಡಿಶಾದ ನೂತನ ಮುಖ್ಯಮಂತ್ರಿ; ಇಬ್ಬರು ಉಪಮುಖ್ಯಮಂತ್ರಿಗಳ ಆಯ್ಕೆ

ಈ ಬದಲಾವಣೆಯು ಭಾರತೀಯ ವಿಶ್ವವಿದ್ಯಾಲಯಗಳನ್ನು ಜಾಗತಿಕವಾಗಿ ಚಾಲ್ತಿಯಲ್ಲಿರುವ ವ್ಯವಸ್ಥೆಗೆ ಪೂರಕವಾಗಿದೆ. ಅಂತಾರಾಷ್ಟ್ರೀಯ ಸಹಯೋಗ ಮತ್ತು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೂ ಪ್ರೇರಣೆ ನೀಡುತ್ತದೆ. ಆದಾಗ್ಯೂ, ಎರಡು ಬಾರಿ ಪ್ರವೇಶ ಕಲ್ಪಿಸುವುದು ಕಡ್ಡಾಯವಲ್ಲ.

ವರ್ಷಕ್ಕೆ ಎರಡು ಪ್ರವೇಶವು ಒಟ್ಟು ದಾಖಲಾತಿ ಅನುಪಾತ ಹೆಚ್ಚಿಸುತ್ತದೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020 ರಲ್ಲಿ ಕಲ್ಪಿಸಿದಂತೆ ಭಾರತವನ್ನು ‘ಜಾಗತಿಕ ಅಧ್ಯಯನ ತಾಣ’ ವನ್ನಾಗಿ ಮಾಡುತ್ತದೆ.

Continue Reading

ಪ್ರಮುಖ ಸುದ್ದಿ

Actor Darshan: ದರ್ಶನ್ ಸೇರಿ ಎಲ್ಲ ಆರೋಪಿಗಳಿಗೆ 6 ದಿನ ಪೊಲೀಸ್ ಕಸ್ಟಡಿ; ಕಟಕಟೆಯಲ್ಲಿ ಕಣ್ಣೀರಿಟ್ಟ ನಟ!

Actor Darshan: ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಬಳಿಕ ನಟ ದರ್ಶನ್‌ ಸೇರಿ 13 ಆರೋಪಿಗಳನ್ನು ಕೋರಮಂಗಲದ 24ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ನಿವಾಸಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ಬಳಿಕ ಆರೋಪಿಗಳನ್ನು 6 ದಿನ ಪೊಲೀಸ್‌ ಕಸ್ಟಡಿಗೆ ನೀಡಲು ಸೂಚಿಸಲಾಗಿದೆ.

VISTARANEWS.COM


on

Actor Darshan
Koo

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy murder case) ಬಂಧನವಾಗಿರುವ ನಟ ದರ್ಶನ್‌ (Actor Darshan), ಪವಿತ್ರಾ ಗೌಡ ಸೇರಿ 13 ಆರೋಪಿಗಳನ್ನು 6 ದಿನ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಬಳಿಕ ಆರೋಪಿಗಳನ್ನು ಮಂಗಳವಾರ ಸಂಜೆ ಕೋರಮಂಗಲದ 24ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಅವರ ಮುಂದೆ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡಲು ನ್ಯಾಯಾಧೀಶರು ಆದೇಶ ನೀಡಿದ್ದಾರೆ.

ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಕಸ್ಟಡಿಗೆ ಕೇಳಲು ರಿಮ್ಯಾಂಡ್ ಅರ್ಜಿಯನ್ನು ಪೊಲೀಸರು ಸಲ್ಲಿಸಿದ್ದರು. ಪೊಲೀಸರ ಪರ ಸರ್ಕಾರಿ ಅಭಿಯೋಜಕ ವಾದ ಮಂಡಿಸಿ, ಸಾಕ್ಷ್ಯಗಳ ನಾಶ ಆಗಿರುವುದರಿಂದ ಎ2 ದರ್ಶನ್‌ ಅವರನ್ನು 14 ದಿನ ಕಸ್ಟಡಿಗೆ ನೀಡುವಂತೆ ಕೋರಿದರು. ಆದರೆ, ದರ್ಶನ್‌ ಪರ ವಕೀಲ 14 ದಿನ ಯಾಕೆ ಎಂದು ಪ್ರಶ್ನಿಸಿದರು. ಈಗಾಗಲೇ ದರ್ಶನ್‌ ಮೊಬೈಲ್‌ ಸೀಜ್‌ ಆಗಿದೆ, ದರ್ಶನ್‌ ಅವರ ತೇಜೋವಧೆ ಮಾಡಲು ಈ ರೀತಿ ಮಾಡಲಾಗುತ್ತಿದೆ ಹೇಳಿದರು.

ಆರೋಪಿಗಳನ್ನು ಕಸ್ಟಡಿಗೆ ನೀಡಲು ಸರ್ಕಾರಿ ಅಭಿಯೋಜಕ ಕೋರಿದರೆ, ದರ್ಶನ್‌ ಪರ ವಕೀಲ ಅವರಿಗೆ ಕಿರುಕುಳ ನೀಡಬಾರದು, ನ್ಯಾಯಾಂಗ ಬಂಧನಕ್ಕೆ ನೀಡಬೇಕು ಎಂದು ಮನವಿ ಮಾಡಿದರು. ವಾದ- ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ಪೊಲೀಸ್‌ ಕಸ್ಟಡಿಗೆ ನೀಡಲು ಸೂಚಿಸಿದರು. ನ್ಯಾಯಾಧೀಶರು ಪೊಲೀಸ್‌ ಕಸ್ಟಡಿಗೆ ಎಂದು ಹೇಳಿದ ಕೂಡಲೇ ನಟ ದರ್ಶನ್‌ ಕಣ್ಣೀರಿಟ್ಟಿದ್ದು ಕಂಡುಬಂತು.

ಹೀಗಾಗಿ ದರ್ಶನ್‌ ಅವರನ್ನು ಕಸ್ಟಡಿಗೆ ನೀಡಲಾಗಿದೆ. ಇದಕ್ಕೂ ಮುನ್ನಾ ಆರೋಪಿಗಳಿಗೆ ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ನಟ ದರ್ಶನ್‌, ಪವಿತ್ರಾ ಗೌಡ ಸೇರಿ ಇತರ ಆರೋಪಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇಸಿಜಿ, ಬಿ.ಪಿ., ಶುಗರ್‌ ಇನ್ನಿತರ ಟೆಸ್ಟ್‌ ಮಾಡಲಾಗಿದ್ದು, ಯಾರಿಗೂ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಬೌರಿಂಗ್‌ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಮತ್ತೊಂದೆಡೆ ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳಕ್ಕೆ ಪೊಲೀಸರು, ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಈ ವೇಳೆ ಕೆಲ ವಸ್ತುಗಳನ್ನು ಎಫ್ಎಸ್ಎಲ್ ತಂಡ ಸಂಗ್ರಹಿಸಿದೆ. ವಸ್ತುಗಳನ್ನು ಸೀಜ್ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಕೊಲೆ ಪ್ರಕರಣದಲ್ಲಿ ಬಂಧನವಾದ ಆರೋಪಿಗಳು

1.ನಟ ದರ್ಶನ್‌
2.ಪವಿತ್ರಾ ಗೌಡ
3.ಕೆ. ಪವನ್-ದರ್ಶನ್ ಮನೆಯಲ್ಲಿ ಇರುವ ದರ್ಶನ್ ಅಪ್ತ, ಕಿಡ್ನ್ಯಾಪ್ ಮಾಡಲು ಹೇಳಿದ್ದವನು, ಪವಿತ್ರಗೂ ಆಪ್ತ
4.ಪ್ರದೋಶ್- ಹೋಟೆಲ್ ಉದ್ಯಮಿ
5.ನಂದೀಶ್- ಹಲ್ಲೆ ಮಾಡಿದ ಮುಖ್ಯ ವ್ಯಕ್ತಿ, ಕಿಡ್ನ್ಯಾಪ್ ಮಾಡಿಕೊಂಡು ಕರೆತಂದವನು
6.ಕೇಶವಮೂರ್ತಿ, ಪ್ರದೂಶ್ ಗೆಳೆಯ ಹಾಗೂ ಉದ್ಯಮಿ
7.ರಾಘವೇಂದ್ರ- ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ
8.ಎಂ.ಲಕ್ಷ್ಮಣ್
9. ದೀಪಕ್ ಕುಮಾರ್
10.ಕಾರ್ತಿಕ್
11.ಆರ್.ನಾಗರಾಜ್, ದರ್ಶನ್ ಆಪ್ತ
12.ವಿ.ವಿನಯ್‌
13. ನಿಖಿಲ್‌ ನಾಯಕ್‌

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ಚಿತ್ರದುರ್ಗದಲ್ಲಿ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ | Actor Darshan: ಕಳೆದ ವರ್ಷ ಮದುವೆಯಾಗಿದ್ದ ರೇಣುಕಾಸ್ವಾಮಿ ಪತ್ನಿ ಗರ್ಭಿಣಿ; ಸಾವಿನ ವಿಚಾರ ಆಕೆಗೆ ಗೊತ್ತೇ ಇಲ್ಲ!

ಏನಿದು ಪ್ರಕರಣ?

ನಟ ದರ್ಶನ್‌ ಅವರ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಮಾಡಿದ ಹಿನ್ನೆಲೆಯಲ್ಲಿ ದರ್ಶನ್‌ ಆಪ್ತರು ಜೂನ್‌ 8ರಂದು ರೇಣುಕಾಸ್ವಾಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ನಂತರ ಜೂನ್‌ 9ರಂದು ಸುಮನಹಳ್ಳಿಯ ರಾಜಕಾಲುವೆ ಬಳಿ ಅಪರಿಚಿತ ಶವ ಪತ್ತೆಯಾಗಿತ್ತು. ಬೀದಿ ನಾಯಿಗಳು ಕಸ ಎಳೆದಾಡುವಾಗ ಶವ ಪತ್ತೆಯಾಗಿತ್ತು. ಇದಾದ ಬಳಿಕ ಅದೇ ದಿನ ರಾಮ್‌ ದೋರ್‌ ಎಂಬ ಸೆಕ್ಯುರಿಟಿ ಗಾರ್ಡ್‌ ಪೊಲೀಸರಿಗೆ ದೂರು ನೀಡಿದ್ದರು. ಇದಾದ ನಂತರ ಪೊಲೀಸರು ತನಿಖೆ ನಡೆಸಿದ್ದರು.

ಅಪರಿಚಿತ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ತನಿಖೆ ಆರಂಭಿಸಿದ್ದರು. ಇದರ ಮಧ್ಯೆಯೇ, ಗಿರಿನಗರದ ಮೂವರು ಆರೋಪಿಗಳು ತಾವೇ ಕೊಲೆ ಮಾಡಿದ್ದಾಗಿ ಪೊಲೀಸರಿಗೆ ಶರಣಾಗಿದ್ದರು. ಹಣಕಾಸು ವಿಚಾರವಾಗಿ ಕೊಲೆ ಮಾಡಿರುವುದಾಗಿ ಅವರು ಒಪ್ಪಿಕೊಂಡಿದ್ದರು. ಅನುಮಾನಗೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ, ನಟ ದರ್ಶನ್‌ ಕೈವಾಡ ಇರುವುದು ಬಯಲಾಗಿದೆ. ಆರೋಪಿಗಳೇ ದರ್ಶನ್‌ ಹೆಸರು ಹೇಳಿದ ಕಾರಣ ನಟ ದರ್ಶನ್‌ ಸೇರಿ 13 ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಪವಿತ್ರಾ ಗೌಡ ಎ1, ದರ್ಶನ್‌ ಎ2 ಆಗಿದ್ದಾರೆ.

ಇದನ್ನೂ ಓದಿ | Actor Darshan: ಕೊಲೆ ಕೇಸ್‌ನಲ್ಲಿ ದರ್ಶನ್‌ ಬಂಧನ; ನಟಿ ಸಂಜನಾಗೆ ಶಾಕ್‌, ರಕ್ಷಿತಾ ಹಾರ್ಟ್‌ಬ್ರೇಕ್, ದೇವರಲ್ಲಿ ಪ್ರಾರ್ಥನೆ!

ರೇಣುಕಾಸ್ವಾಮಿ ಯಾರು?

ಚಿತ್ರದುರ್ಗ ಮೂಲದವನಾದ ರೇಣುಕಾಸ್ವಾಮಿ ಎಂಬ 33 ವರ್ಷದ ಯುವಕ ಮೆಡಿಕಲ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಈತನು ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಕಳುಹಿಸಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ದರ್ಶನ್‌ ಹಾಗೂ ಅವರ ಆಪ್ತರು ಹಲ್ಲೆ ನಡೆಸಿದ್ದರು ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿಗೆ ಕಳೆದ ವರ್ಷವೇ ಸಹನಾ ಎಂಬ ಯುವತಿ ಜತೆ ಮದುವೆಯಾಗಿದೆ ಎಂದು ಹೇಳಲಾಗುತ್ತಿದೆ.

Continue Reading
Advertisement
Aishwarya Arjun
ಪ್ರಮುಖ ಸುದ್ದಿ19 mins ago

Aishwarya Arjun : ಚೆನ್ನೈನಲ್ಲಿ ವಿವಾಹವಾದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್​; ಇಲ್ಲಿವೆ ಚಿತ್ರಗಳು

Chellagurki Shri Yerrithathanavara Maharathotsava On 12th June
ಧಾರ್ಮಿಕ26 mins ago

Ballari News: ಜೂ.12ರಂದು ಚೇಳ್ಳಗುರ್ಕಿ ಶ್ರೀ ಎರ‍್ರಿತಾತನವರ ಮಹಾರಥೋತ್ಸವ

Fortis hospital Doctors Perform Successful Dual Cochlear Implant Surgery on Nigerian Young Woman
ಕರ್ನಾಟಕ27 mins ago

Fortis Hospital: ನೈಜೀರಿಯನ್ ಯುವತಿಗೆ ಯಶಸ್ವಿ ‘ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ’

Viral News
ವೈರಲ್ ನ್ಯೂಸ್31 mins ago

Viral News: ಕೊಳದಲ್ಲಿ ತೇಲುತ್ತಿದ್ದ ದೇಹ ಮೇಲೆತ್ತಲು ಹೋದ ಪೊಲೀಸರು! ಹೆಣ ನಡೆಯತೊಡಗಿತು!

YouTuber Dhruv Rathee
ವೈರಲ್ ನ್ಯೂಸ್47 mins ago

YouTuber Dhruv Rathee: ಧ್ರುವ ರಾಥಿಯ ಮೋದಿ ವಿರೋಧಿ ವಿಡಿಯೊ ಗೊತ್ತು; ಅವರ ಲವ್‌ ಸ್ಟೋರಿ ಗೊತ್ತಾ?

University Grants Commission
ಪ್ರಮುಖ ಸುದ್ದಿ1 hour ago

University Grants Commission : ಇನ್ನು ಮುಂದೆ ವಿಶ್ವವಿದ್ಯಾಲಯಗಳಲ್ಲಿ ವರ್ಷಕ್ಕೆ ಎರಡು ಬಾರಿ ಅಡ್ಮಿಷನ್​

Actor Darshan
ಪ್ರಮುಖ ಸುದ್ದಿ1 hour ago

Actor Darshan: ದರ್ಶನ್ ಸೇರಿ ಎಲ್ಲ ಆರೋಪಿಗಳಿಗೆ 6 ದಿನ ಪೊಲೀಸ್ ಕಸ್ಟಡಿ; ಕಟಕಟೆಯಲ್ಲಿ ಕಣ್ಣೀರಿಟ್ಟ ನಟ!

Wedding Jewel Fashion
ಫ್ಯಾಷನ್2 hours ago

Wedding Jewel Fashion: ವೆಡ್ಡಿಂಗ್‌ ಜ್ಯುವೆಲ್‌ ಫ್ಯಾಷನ್‌ನಲ್ಲಿ ಮಹಿಳೆಯರನ್ನು ಸೆಳೆಯುತ್ತಿವೆ ಈ 3 ಟ್ರೆಡಿಷನಲ್‌ ಮಾಟಿಗಳು

EPF Account Rules
ಮನಿ-ಗೈಡ್2 hours ago

EPF Account Rules: ಕ್ಲೈಮ್ ಇತ್ಯರ್ಥ ಇನ್ನು ಸುಲಭ; ಇಪಿಎಫ್‌ಒ ಮಾಡಿದೆ ಹಲವು ಹೊಸ ಬದಲಾವಣೆ

Renu Desai Second Marriage
ಸಿನಿಮಾ2 hours ago

Pawan Kalyan: ಪವನ್‌ ಕಲ್ಯಾಣ್‌ ಮಾಜಿ ಪತ್ನಿ ಮರು ಮದುವೆಗೆ ರೆಡಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ4 hours ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 hours ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ7 hours ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ9 hours ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ4 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ4 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌