ಕೀವ್: ವಿದೇಶ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ (ಆಗಸ್ಟ್ 23) ಯುದ್ಧಪೀಡಿತ ಉಕ್ರೇನ್‌ಗೆ ಭೇಟಿ ನೀಡಿದರು. ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಅವರ ಆಹ್ವಾನದ ಮೇರೆಗೆ ಮೋದಿ ಉಕ್ರೇನ್‌ಗೆ ತೆರಳಿದರು. ದ್ವಿಪಕ್ಷೀಯ ಸಹಕಾರ ಸಂಬಂಧವನ್ನು ಬಲಪಡಿಸುವ ಬಗ್ಗೆ ಮತ್ತು ರಷ್ಯಾ-ಉಕ್ರೇನ್ ಸಂಘರ್ಷ (Russia-Ukraine War)ಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಬಗ್ಗೆ ಮೋದಿ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿ ಮಾತುಕತೆ ನಡೆಸುವ ನಿರೀಕ್ಷೆ ಇದೆ.
ರಷ್ಯಾದ ಮಾಸ್ಕೋಗೆ ಉನ್ನತ ಮಟ್ಟದ ಪ್ರವಾಸ ಕೈಗೊಂಡ ಸುಮಾರು ಆರು ವಾರಗಳ ನಂತರ ಪ್ರಧಾನಿ ಮೋದಿ ಅವರು ಉಕ್ರೇನ್‌ಗೆ ಭೇಟಿ ನೀಡಿದರು. ಮೋದಿ ಅವರ ಮಾಸ್ಕೋ ಪ್ರವಾಸ ಅಮೆರಿಕ ಮತ್ತು ಅದರ ಕೆಲವು ಮಿತ್ರರಾಷ್ಟ್ರಗಳ ಟೀಕೆಗೆ ಕಾರಣವಾಗಿತ್ತು. 1991ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಭಾರತದ ಪ್ರಧಾನಿಯೊಬ್ಬರು ಉಕ್ರೇನ್‌ಗೆ ನೀಡುತ್ತಿರುವ ಮೊದಲ ಭೇಟಿ ಇದು ಎನ್ನುವುದು ಕೂಡ ವಿಶೇಷ.
PM Narendra Modi arrives in Ukraine, marking the 1st visit by an Indian PM in 30 yrs. Greeted by "Bharat Mata Ki Jai. Vande Matram" slogans.
— Megh Updates 🚨™ (@MeghUpdates) August 23, 2024
Key bilateral talks with President Zelenskyy ahead. As per reports No sirens, No new attack from Russia during Indian PM's visit pic.twitter.com/qzanjHRtwy
“ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಬಗ್ಗೆ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಲು ಮತ್ತು ರಷ್ಯಾ-ಉಕ್ರೇನ್ ಸಂಘರ್ಷವನ್ನು ಕೊನೆಗಾಣಿಸಲು ಅಗತ್ಯವಾದ ಶಾಂತಿಯುತ ಪರಿಹಾರದ ದೃಷ್ಟಿಕೋನಗಳನ್ನು ಹಂಚಿಕೊಳ್ಳುವ ಅವಕಾಶವನ್ನು ನಾನು ಎದುರು ನೋಡುತ್ತಿದ್ದೇನೆ” ಎಂದು ಮೋದಿ ದಿಲ್ಲಿಯಿಂದ ಹೊರಡುವ ಮೊದಲು ತಿಳಿಸಿದ್ದರು.
ಉಕ್ರೇನ್ ಮೇಲಿನ ರಷ್ಯಾದ ದಾಳಿಯನ್ನು ಭಾರತ ಇದುವರೆಗೆ ಖಂಡಿಸಿಲ್ಲ. ಅದಾಗ್ಯೂ ಮಾತುಕತೆ ಮತ್ತು ರಾಜತಾಂತ್ರಿಕಯ ಮೂಲಕ ಯುದ್ಧವನ್ನು ನಿಲ್ಲಿಸಬೇಕು ಎಂದು ಆಗ್ರಹಿಸುತ್ತಲೇ ಬಂದಿದೆ. ಹೀಗಾಗಿ ಮೋದಿ ಅವರ ಭೇಟಿ ವಿಶ್ವದ ಗಮನ ಸೆಳೆದಿದೆ.
ಯುದ್ಧಭೂಮಿಯಲ್ಲಿ ಯಾವ ಸಮಸ್ಯೆಯೂ ಬಗೆಹರಿಯಲ್ಲ: ಮೋದಿ
ಇದಕ್ಕೂ ಮುನ್ನ ಪೋಲೆಂಡ್ ಪ್ರವಾಸ ಕೈಗೊಂಡ ಮೋದಿ ಪ್ರಸ್ತುತ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಪ್ರತಿಕ್ರಿಯಿಸಿದ್ದು, ಯುದ್ಧ ಭೂಮಿಯಲ್ಲಿ ಯಾವುದೇ ಸಮಸ್ಯೆ ಬಗೆಹರಿಯಲು ಸಾಧ್ಯವೇ ಇಲ್ಲ ಎಂದು ಪುನರುಚ್ಛರಿಸಿದ್ದಾರೆ. ಇದೇ ವೇಳೆ ಅವರು 2022ರಲ್ಲಿ ಉಕ್ರೇನ್-ರಷ್ಯಾ ಯುದ್ಧದ ಸಂದರ್ಭದಲ್ಲಿ ಅಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಸಹಾಯ ಮಾಡಿದ ಪೋಲೆಂಡ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಘರ್ಷಣೆಗಳ ಕುರಿತು, ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದು, ನಿಜಕ್ಕೂ ಆತಂಕಕಾರಿ ವಿಚಾರ ಎಂದು ಹೇಳಿದ್ದಾರೆ. ʼʼಯುದ್ಧಭೂಮಿಯಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ ಎಂದು ಭಾರತ ದೃಢವಾಗಿ ನಂಬುತ್ತದೆ. ಯಾವುದೇ ಬಿಕ್ಕಟ್ಟಿನಲ್ಲಿ ಅಮಾಯಕರ ಜೀವಗಳನ್ನು ಕಳೆದುಕೊಳ್ಳುವುದು ಇಡೀ ಮಾನವಕುಲಕ್ಕೆ ದೊಡ್ಡ ಸವಾಲಾಗಿದೆ. ಶಾಂತಿ ಮತ್ತು ಸ್ಥಿರತೆಯ ಆರಂಭಿಕ ಮರುಸ್ಥಾಪನೆಗಾಗಿ ನಾವು ಸಂಭಾಷಣೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆʼʼ ಎಂದು ಅವರು ಹೇಳಿದ್ದಾರೆ. ಬುಧವಾರ ಪೋಲೆಂಡ್‌ಗೆ ಬಂದಿಳಿದಿರುವ ಪ್ರಧಾನಿ ಮೋದಿ ಇಂದು ಉಕ್ರೇನ್‌ನ ಕೈವ್‌ಗೆ ಬಂದಿಳಿದರು. ಕಳೆದ 45 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್‌ಗೆ ಭೇಟಿ ನೀಡಿದ ಮೊದಲ ಪ್ರವಾಸ ಇದು.
ಇದನ್ನೂ ಓದಿ: PM Modi Poland Visit: ಪೋಲೆಂಡ್‌ಗೆ ಬಂದಿಳಿದ ಪ್ರಧಾನಿ ಮೋದಿ- ಗುಜರಾತಿ ನೃತ್ಯದ ಮೂಲಕ ಭರ್ಜರಿ ಸ್ವಾಗತ