Site icon Vistara News

NASA Artemis-1 | ನಾಸಾ ಚಂದ್ರಯಾನ ಸತತ 3ನೇ ಬಾರಿ ರದ್ದು, ಈ ಸಲ ಕಾರಣವೇನು?

Rocket

ವಾಷಿಂಗ್ಟನ್:‌ ಚಂದಿರನ ಅಂಗಳಕ್ಕೆ ಮನುಷ್ಯನನ್ನು ಕಳುಹಿಸುವ ಮೂಲಕ ಮತ್ತೆ ಇತಿಹಾಸ ಸೃಷ್ಟಿಸುವ ಅಮೆರಿಕದ ಕನಸು ನನಸಾಗುವ ಲಕ್ಷಣ ಕಾಣಿಸುತ್ತಿಲ್ಲ. ಇದುವರೆಗೆ ತಾಂತ್ರಿಕ ದೋಷಗಳಿಂದಾಗಿ ಎರಡು ಬಾರಿ ಉಡಾವಣೆಯನ್ನು ಮುಂದೂಡಿದ್ದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ)ಯು ಸೆ.೨೭ರಂದು ಮಾಡಬೇಕಿದ್ದ ಉಡಾವಣೆಯನ್ನು ಮತ್ತೆ ಮುಂದೂಡಿದೆ. ಆದರೆ, ಈ ಬಾರಿ ಉಷ್ಣವಲಯದ ಚಂಡಮಾರುತ ಬೀಸುವ ಸಾಧ್ಯತೆ ಇರುವುದರಿಂದ ಮುಂದೂಡಲಾಗಿದೆ. ಆರ್ಟೆಮಿಸ್‌ 1 (NASA Artemis-1) ಯೋಜನೆಯ ಭಾಗವಾಗಿ ರಾಕೆಟ್‌ ಉಡಾವಣೆ ಮಾಡಲು ಅಂತಿಮ ಸಿದ್ಧತೆ ನಡೆಸುತ್ತಿರುವಾಗಲೇ ರದ್ದುಗೊಳಿಸುವಂತಾಗಿದೆ.

ಆಗಸ್ಟ್‌ 29ರಂದು ತಾಂತ್ರಿಕ ದೋಷ ಹಾಗೂ ಇಂಧನ ಸೋರಿಕೆಯ ಕಾರಣದಿಂದಾಗಿ ಕೊನೆಯ ಕ್ಷಣದಲ್ಲಿ ರಾಕೆಟ್‌ ಉಡಾವಣೆಯನ್ನು ರದ್ದುಗೊಳಿಸಲಾಗಿತ್ತು. ಕೊನೆಗೆ ಸೆಪ್ಟೆಂಬರ್‌ 3ರಂದು ಉಡಾವಣೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಸತತ ಎರಡನೇ ಬಾರಿಗೂ ತಾಂತ್ರಿಕ ದೋಷ ಉಂಟಾಗಿತ್ತು. ಹಾಗಾಗಿ, ಸೆ.೨೭ರಂದು ಉಡಾವಣೆ ಮಾಡಲು ತೀರ್ಮಾನಿಸಲಾಗಿತ್ತು. ಈಗ ಉಷ್ಣವಲಯದ ಚಂಡಮಾರುತದ ಕಾರಣ ಮೂರನೇ ಬಾರಿಗೂ ಮುಂದೂಡಿದೆ.

ಈಗಾಗಲೇ ಅಪೋಲೊ ಯೋಜನೆ ಅಡಿ ಚಂದಿರನ ಅಂಗಳಕ್ಕೆ ಕಾಲಿಟ್ಟು ಇತಿಹಾಸ ಸೃಷ್ಟಿಸಿರುವ ನಾಸಾ, ಸುಮಾರು 50 ವರ್ಷಗಳ ಬಳಿಕ ಮತ್ತೆ ಚಂದಿರನ ಅಂಗಳಕ್ಕೆ ಕಾಲಿಡಲು ಸಜ್ಜಾಗಿದೆ. ಆದರೆ, ತಾಂತ್ರಿಕ ದೋಷ ಹಾಗೂ ಚಂಡಮಾರುತವು ಅಡ್ಡಿಯಾಗಿದೆ.

ಇದನ್ನೂ ಓದಿ | NASA Artemis-1 | ತಾಂತ್ರಿಕ ಅಡಚಣೆ, ರದ್ದಾದ ನಾಸಾ ಆರ್ಟೆಮಿಸ್ 1 ಮೂನ್ ಮಿಷನ್

Exit mobile version