ನವದೆಹಲಿ: 135 ವರ್ಷಗಳ ಇತಿಹಾಸವನ್ನು ಹೊಂದಿರುವ ನ್ಯಾಷನಲ್ ಜಿಯೋಗ್ರಾಫಿಕ್ (National Geographic) ಮ್ಯಾಗ್‌ಜಿನ್ (magazine) ತನ್ನ ಕೊನೆಯ ಎಲ್ಲ ಸ್ಟಾಫ್ ರೈಟರ್ಸ್‌ನ್ನು (Staff Writers ಕೆಲಸದಿಂದ ವಜಾ ಮಾಡಿದೆ(Lays Off). ತನ್ನ ಸಾಂಪ್ರದಾಯಿಕ ಹಳದಿ ಬಾರ್ಡರ್‌ನೊಂದಿಗೆ ಪ್ರತಿ ತಿಂಗಳು ಪ್ರಕಟವಾಗುತ್ತಿದ್ದ ನ್ಯಾಷನಲ್ ಜಿಯೋಗ್ರಾಫಿಕ್ ಮ್ಯಾಗಜಿನ್, ಅತ್ಯುತ್ತಮ ವಿಜ್ಞಾನ ಮತ್ತು ನೈಸರ್ಗಿಕ ಪ್ರಪಂಚವನ್ನು ಓದುಗರ ಮುಂದೆ ತರೆದಿಡುತ್ತಿತ್ತು. ಈ ಮ್ಯಾಗ್‌ಜಿನ್ ಮುಂದಿನ ವರ್ಷದಿಂದ ನ್ಯೂಸ್‌ಸ್ಟ್ಯಾಂಡ್‌ಗಳಿಂದ ಹೊರಗುಳಿಯಲಿದೆ. ಅಂದರೆ, ಪ್ರಕಟಣೆಯನ್ನು ನಿಲ್ಲಿಸಲಿದೆ ಎಂದು ಅಮೆರಿಕದ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಸಂಪಾದಕೀಯ ಬಳಗದ ಅನೇಕರು ಮಾಡಿರುವ ಟ್ವೀಟ್ ಹಾಗೂ ಕೆಲವು ವರದಿಗಳ ಪ್ರಕಾರ ಒಟ್ಟು 19 ಬರಹಗಾರರನ್ನು ಕೆಲಸದಿಂದ ಕಿತ್ತು ಹಾಕಲಾಗಿದೆ. “ನನ್ನ ಹೊಸ ಸಂಚಿಕೆ ನ್ಯಾಷನಲ್ ಜಿಯಾಗ್ರಫಿಕ್ ಈಗ ಬಂತು. ಈ ಸಂಚಿಕೆಯು ನನ್ನ 16ನೇ ಮತ್ತು ನನ್ನ ಕೊನೆಯ ಬರಹವನ್ನು ಒಳಗೊಂಡಿದೆ. ಪತ್ರಿಕೆಯು ತನ್ನ ಎಲ್ಲಾ ಸಿಬ್ಬಂದಿ ಬರಹಗಾರರನ್ನು ವಜಾಗೊಳಿಸುತ್ತಿದೆ. ನಾನು ತುಂಬಾ ಅದೃಷ್ಟಶಾಲಿ. ಯಾಕೆಂದರೆ, ಅದ್ಭುತ ಎನಿಸಬಹುದಾದ ಅನೇಕ ಪತ್ರಕರ್ತರೊಂದಿಗೆ ಕೆಲಸ ಮಾಡಿದ್ದೇನೆ,” ಎಂದು ನ್ಯಾಷನಲ್ ಜಿಯಾಗ್ರಫಿಕ್‌ನ ಹಿರಿಯ ಬರಹಗಾರ ಕ್ರೇಗ್ ಎ ವೆಲ್ಚ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಅದೇ ರೀತಿ, ಪತ್ರಿಕೆಯ ಬರಹಗಾರ್ತಿ ಹಾಗೂ ಸಂಪಾದಕಿ ಕೂಡ ಟ್ವೀಟ್ ಮಾಡಿ, “ನ್ಯಾಷನಲ್ ಜಿಯಾಗ್ರಫಿಕ್‌ನಲ್ಲಿ ನನ್ನದು ಅದ್ಭುತ ಪಯಣವಾಗಿತ್ತು. ನಾನು ಮತ್ತು ನನ್ನ ಸಹೋದ್ಯೋಗಿಗಳು ಈ ಪತ್ರಿಕೆಯ ಕೊನೆಯ ಸ್ಟಾಫ್ ರೈಟರ್ಸ್ ಆಗಿದ್ದಕ್ಕೆ ಲಕ್ಕಿ ಎಂದು ಭಾವಿಸುತ್ತೇನೆ. ಇದೊಂದು ಅದ್ಭುತ ಕೆಲಸವಾಗಿತ್ತು ಎಂದು ಹೇಳಿದ್ದಾರೆ. ಆ ಮೂಲಕ ಪತ್ರಿಕೆಯು ಸ್ಟಾಫ್ ರೈಟರ್ಸ್‌ನ್ನು ವಜಾ ಮಾಡಿರುವ ಸುದ್ದಿಯನ್ನು ಅವರು ಖಚಿತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Time’s 100 Most Influential List : ವಿಶ್ವದ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್ ಖಾನ್, ಎಸ್ ಎಸ್ ರಾಜಮೌಳಿ
ಈಗ ನಡೆದ ಉದ್ಯೋಗ ಕಡಿತವು ನ್ಯಾಷನಲ್ ಜಿಯೋಗ್ರಾಫಿಕ್‌ನ ಎರಡನೇ ಸುತ್ತಿನ ಉದ್ಯೋಗ ಕಡಿತಗಳಾಗಿವೆ. ಈ ನಿಯಕತಾಲಿಕದ ಮೂಲ ಕಂಪನಿ ಡಿಸ್ನಿ, ವೆಚ್ಚ ಕಡಿತಕ್ಕೆ ಮುಂದಾಗಿದ್ದು, ಬರಹಗಾರರನ್ನು ಕೆಲಸದಿಂದ ವಜಾ ಮಾಡಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಕಂಪನಿಯು ಪತ್ರಿಕೆಯ ಆರು ಪ್ರಮುಖ ಸಂಪಾದಕರನ್ನು ಕೆಲಸದಿಂದ ತೆಗೆದು ಹಾಕಿತ್ತು. 2015ರಲ್ಲಿ ಮಾಲೀಕತ್ವ ಬದಲಾವಣೆಯಾದ ಬಳಿಕ ಪತ್ರಿಕೆಯೂ ಕೂಡ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ ಎಂದು ಗಾರ್ಡಿಯನ್ ವರದಿ ಮಾಡಿದೆ.
ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.