Site icon Vistara News

Israel Palestine War: ಸೇರಿಗೆ ಸವ್ವಾಸೇರು; ಗಾಜಾದಲ್ಲಿ 200 ಜನರನ್ನು ಕೊಂದ ಇಸ್ರೇಲ್‌ ಸೇನೆ

Hamas Attack On Israel

Hamas Attack On Israel

ಜೆರುಸಲೇಂ: ಇಸ್ಲಾಮಿಕ್‌ ದೇಶಗಳೇ ಸುತ್ತಲೂ ತುಂಬಿದ್ದರೂ, ಯಹೂದಿಗಳನ್ನು ಇಸ್ಲಾಮಿಕ್‌ ದೇಶಗಳು ಗುರಿಯಾಗಿಸಿ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದರೂ, ಕ್ಷಣಕ್ಷಣಕ್ಕೂ ವೈರಿಗಳ ದಾಳಿಯ ಭೀತಿ ಎದುರಿಸುತ್ತಿದ್ದರೂ ಇಸ್ರೇಲ್‌ ಮಾತ್ರ ಯಾವ ಶತ್ರುವಿಗೂ ಹೆದರಿಲ್ಲ. ಹೆದರಿದ ಮರುಕ್ಷಣವೇ ದೇಶವೇ ಇರುವುದಿಲ್ಲ ಎಂಬುದು ಗೊತ್ತಿರುವ ಕಾರಣ ಯಾರ ದಾಳಿಗೂ ಬಗ್ಗದೆ ಎದೆ ಸೆಟೆದು ನಿಂತಿದೆ. ಇದಕ್ಕೆ ನಿದರ್ಶನ ಎಂಬಂತೆ, ಪ್ಯಾಲೆಸ್ತೀನ್‌ನ ಗಾಜಾದಲ್ಲಿರುವ ಹಮಾಸ್‌ ಉಗ್ರರ ದಾಳಿಗೆ ಪ್ರತಿಯಾಗಿ, ಗಾಜಾ ಮೇಲೆ ವಾಯುದಾಳಿ ನಡೆಸಿದ ಇಸ್ರೇಲ್‌ ಈಗಾಗಲೇ 200 ಜನರನ್ನು ಕೊಂದಿದೆ ಎಂದು ತಿಳಿದುಬಂದಿದೆ.

ಉಗ್ರ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಯುದ್ಧ ಘೋಷಣೆ ಮಾಡಿದೆ. ಗಾಜಾಪಟ್ಟಿಯಲ್ಲಿರುವ ಹಮಾಸ್‌ ಉಗ್ರರ ಕಟ್ಟಡಗಳ ಮೇಲೆ ಇಸ್ರೇಲ್‌ನ ರಾಕೆಟ್‌ಗಳು ದಾಳಿ ನಡೆಸಿವೆ. ಸುಮಾರು 12ಕ್ಕೂ ಅಧಿಕ ರಾಕೆಟ್‌ಗಳ ಮೂಲಕ ಹಮಾಸ್‌ ಉಗ್ರರಿಗೆ ಇಸ್ರೇಲ್‌ ತಕ್ಕ ಪಾಠ ಕಲಿಸಿದೆ. ಹಮಾಸ್‌ ಉಗ್ರರ ಕಟ್ಟಡಗಳ ಮೇಲೆ ರಾಕೆಟ್‌ಗಳು ದಾಳಿ ನಡೆಸುವ, ಅವುಗಳನ್ನು ಉಡಾಯಿಸುವ ವಿಡಿಯೊಗಳು ಲಭ್ಯವಾಗಿವೆ. ಅಷ್ಟೇ ಅಲ್ಲ, ಇಸ್ರೇಲ್‌ ಹೇಗೆ ಭೀಕರವಾಗಿ ತಿರುಗೇಟು ನೀಡುತ್ತಿದೆ ಎಂಬುದಕ್ಕೆ ಈ ದೃಶ್ಯಗಳು ಸಾಕ್ಷಿಯಾಗಿವೆ. ಹಮಾಸ್‌ ಉಗ್ರರ ಮೇಲೆ ಇಸ್ರೇಲ್‌ ಸಾರಿರುವ ಸಮರಕ್ಕೆ ಆಪರೇಷನ್‌ ಸ್ವೊರ್ಡ್ಸ್‌ ಆಫ್‌ ಐರನ್‌ (Operation Swords Of Iron) ಎಂದು ಹೆಸರಿಟ್ಟಿದೆ.

ಇಸ್ರೇಲ್‌ ವಾಯುದಾಳಿಯ ವಿಡಿಯೊ

ಇಸ್ರೇಲ್‌ ನಡೆಸಿದ ವಾಯುದಾಳಿಯಲ್ಲಿ 200ಕ್ಕೂ ಅಧಿಕ ಪ್ಯಾಲೆಸ್ತೀನಿಯರು ಮೃತಪಟ್ಟರೆ, 1,600ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, ಇಸ್ರೇಲ್‌ ದಾಳಿಗೆ ಹಮಾಸ್‌ ಉಗ್ರರ ಮೂರು ನೆಲೆಗಳು ಧ್ವಂಸಗೊಂಡಿವೆ. ಅವರ ಬೃಹತ್‌ ಕಟ್ಟಡಗಳು ಧರೆಗುರುಳಿವೆ. ಪ್ಯಾಲೆಸ್ತೀನ್‌ ಉಗ್ರರ ಮೇಲೆ ಯುದ್ಧ ಸಾರಿರುವ ಇಸ್ರೇಲ್‌, ಇನ್ನೂ ಭೀಕರ ದಾಳಿಯ ಮೂಲಕ ವೈರಿಗಳಿಗೆ ತಕ್ಕ ಪಾಠ ಕಲಿಸಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Israel Palestine War: ತಂಟೆಗೆ ಬಂದವರಿಗೆ ತಟ್ಟದೆ ಬಿಡಲ್ಲ ಇಸ್ರೇಲ್‌; ಗಾಜಾ ಪಟ್ಟಿ ಮೇಲೆ ವಾಯುದಾಳಿ!

ಇಸ್ರೇಲ್‌ನಲ್ಲಿ ಮೃತರ ಸಂಖ್ಯೆ 100ಕ್ಕೆ ಏರಿಕೆ

ಇಸ್ರೇಲ್‌ ಮೇಲೆ ಪ್ಯಾಲೆಸ್ತೀನ್‌ನಲ್ಲಿರುವ ಗಾಜಾಪಟ್ಟಿಯ ಹಮಾಸ್‌ ಉಗ್ರರು ಮುಗಿಬಿದ್ದಿದ್ದಾರೆ. ಸುಮಾರು 5 ಸಾವಿರ ರಾಕೆಟ್‌ಗಳಿಂದ ಇಸ್ರೇಲ್‌ ಮೇಲೆ ದಾಳಿ ನಡೆಸಲಾಗಿದೆ. ಹಮಾಸ್‌ ಉಗ್ರರು ಇಸ್ರೇಲ್‌ನ ಬೀದಿ ಬೀದಿಗಳಲ್ಲಿ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನ 100 ಜನ ಮೃತಪಟ್ಟಿದ್ದು, ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇಸ್ರೇಲ್‌ ಮೇಲೆ ಉಗ್ರರು ದಾಳಿ ನಡೆಸಿದ ಕಾರಣ, ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ ಪೋಸ್ಟ್‌ ಮೂಲಕ ಸಾಂತ್ವನ ಹೇಳಿದ್ದಾರೆ. ಇಸ್ರೇಲ್‌ ಜತೆ ನಾವಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ.

Exit mobile version