Site icon Vistara News

Pakistan : ಆರ್ಥಿಕ ಸಂಕಷ್ಟದಲ್ಲಿ ಪಾಕಿಸ್ತಾನ, ಈ ತಿಂಗಳಿನಿಂದ ವಿದ್ಯುತ್‌ ಕೂಡ ಸ್ಥಗಿತ?

#image_title

ಇಸ್ಲಾಮಾಬಾದ್‌: ಪಾಕಿಸ್ತಾನವು (Pakistan) ಶ್ರೀಲಂಕಾದಂತೆಯೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ತಿನ್ನುವ ಅನ್ನದಿಂದ ಹಿಡಿದು ವಾಹನಗಳ ಇಂಧನದ ಬೆಲೆವರೆಗೂ ಎಲ್ಲವೂ ಗಗನ ಮುಟ್ಟಿವೆ. ಈ ರೀತಿ ಇರುವಾಗ ದೇಶದಲ್ಲಿ ಕಚ್ಚಾ ತೈಲ ಖರೀದಿಸಲೂ ಹಣ ಇಲ್ಲದಾಗಿದ್ದು, ಈ ತಿಂಗಳಿನಲ್ಲಿ ದೇಶಾದ್ಯಂತ ವಿದ್ಯುತ್‌ ಕಡಿತಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: IND VS NZ: ಪಾಕಿಸ್ತಾನದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ

ಒಂದೆಡೆ ಪಾಕಿಸ್ತಾನದಲ್ಲಿ ಹಣದ ಕೊರತೆಯಾಗಿದೆ, ಇನ್ನೊಂದೆಡೆ ಅಮೆರಿಕನ್‌ ಡಾಲರ್‌ ಎದುರು ಪಾಕಿಸ್ತಾನ ರೂಪಾಯಿ ಮೌಲ್ಯ ಗಣನೀಯವಾಗಿ ಕುಸಿದಿದೆ. ಸದ್ಯ ಒಂದು ಡಾಲರ್‌ ಮೌಲ್ಯ ಬರೋಬ್ಬರಿ 265 ರೂ.ಗೂ ಹೆಚ್ಚಾಗಿದೆ. ಹೀಗಿರುವಾಗ ಬೇರೆ ದೇಶಗಳಿಂದ ಕಚ್ಚಾ ತೈಲವನ್ನು ಖರೀದಿಸುವುದಕ್ಕೂ ಬ್ಯಾಂಕ್‌ಗಳು ಹಣ ಬಿಡುಗಡೆ ಮಾಡುತ್ತಿಲ್ಲ ಎನ್ನಲಾಗಿದೆ. ಇದರಿಂದಾಗಿ ವಿದ್ಯುತ್‌ ಉತ್ಪಾದನೆಗೆ ಹೊಡೆತ ಬೀಳಲಿದ್ದು, ದೇಶ ಕತ್ತಲಲ್ಲಿ ಕಾಲ ಕಳೆಯಬೇಕಾಗುತ್ತದೆ ಎನ್ನಲಾಗಿದೆ.

ವರದಿಗಳ ಪ್ರಕಾರ ದೇಶದಲ್ಲಿ ಇನ್ನು ಹದಿನೈದು ದಿನಗಳಿಗೆ ಬೇಕಾಗುವ ವಿದ್ಯುತ್‌ ತಯಾರಿಸುವುದಕ್ಕೆ ಕಚ್ಚಾ ತೈಲವಿದೆ. ಅದರ ನಂತರ ದೇಶದಲ್ಲಿ ಕತ್ತಲು ಆವರಿಸುವ ಸಾಧ್ಯತೆಯಿದೆ. ಕಳೆದ ವಾರದಲ್ಲಿ ಹಲವು ಪ್ರಮುಖ ನಗರಗಳಲ್ಲಿ ವಿದ್ಯುತ್‌ ಕೊರತೆ ಎದುರಾಗಿ ಗಂಟೆಗಟ್ಟಲೆ ಕಾಲ ಜನರು ಕತ್ತಲಿನಲ್ಲಿ ಕಾಲ ಕಳೆಯುವಂತಾಗಿತ್ತು.

ಇದನ್ನೂ ಓದಿ: Peshawar Blast: ನಾವೇ ಉಗ್ರರನ್ನು ಸೃಷ್ಟಿಸಿದವರು, ಅವರೀಗ ನಮಗೇ ಮುಳುವಾಗಿದ್ದಾರೆ: ಪೇಚಾಡಿದ ಪಾಕ್‌ ಸಚಿವ

ಸರ್ಕಾರ ಬೊಕ್ಕಸ ಖಾಲಿ ಆಗುತ್ತಿರುವ ಹಿನ್ನೆಲೆ ಸರ್ಕಾರ ಸಮಸ್ಯೆಯನ್ನು ಸರಿದೂಗಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ದೇಶದಲ್ಲಿ ಈಗಾಗಲೇ ಡೀಸೆಲ್‌ ದರ ಲೀಟರ್‌ಗೆ 262.80 ರೂ., ಪೆಟ್ರೋಲ್‌ ದರ ಲೀಟರ್‌ಗೆ 249.80 ರೂ., ಹಾಗೂ ಸೀಮೇಎಣ್ಣೆ ದರ ಲೀಟರ್‌ಗೆ 189.83 ರೂ. ಆಗಿದೆ.

Exit mobile version