Site icon Vistara News

Pakistan Economy Crisis: ಪಾಕ್‌ನಲ್ಲಿ ಲೀಟರ್‌ ಹಾಲಿಗೆ 210 ರೂ., ಕೆ.ಜಿ ಚಿಕನ್‌ಗೆ 900 ರೂ., ಆರ್ಥಿಕ ದಿವಾಳಿಯತ್ತ ನೆರೆ ರಾಷ್ಟ್ರ

Pakistan Economy Crisis

#image_title

ಇಸ್ಲಾಮಾಬಾದ್: ಭಯೋತ್ಪಾದನೆಗೆ ಬೆಂಬಲ, ಅಸಮರ್ಥ ನಾಯಕತ್ವ, ದೂರದೃಷ್ಟಿ ಇಲ್ಲದ ನಾಯಕ, ಸೇನೆಯ ಅತಿಯಾದ ಮೂಗು ತೂರಿಸುವಿಕೆ ಇದ್ದರೆ, ಒಂದು ದೇಶದ ಎಂತಹ ಹೀನ ಸ್ಥಿತಿಗೆ ತಲುಪುತ್ತದೆ ಎಂಬುದಕ್ಕೆ ಪಾಕಿಸ್ತಾನವೇ ಸಾಕ್ಷಿಯಾಗಿದೆ. ದಿನೇದಿನೆ ಆರ್ಥಿಕ ಬಿಕ್ಕಟ್ಟು (Pakistan Economy Crisis) ಜಾಸ್ತಿಯಾಗುತ್ತಿದ್ದು, ಅಗತ್ಯ ವಸ್ತುಗಳ ಬೆಲೆಯು ಗಗನಕ್ಕೇರಿದೆ. ಅದರಲ್ಲೂ, ಹಾಲಿನ ದರ ೨೧೦ ರೂ. ಆಗಿದ್ದರೆ, ಮಾಂಸದ ಬೆಲೆಯು ೯೦೦ ರೂ. ದಾಟಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದೇ ಹೇಳಲಾಗುತ್ತಿದೆ.

ಪಾಕಿಸ್ತಾನವು ೧೯೭೫ರ ಬಳಿಕ ಇದೇ ಮೊದಲ ಬಾರಿಗೆ ಕಂಡು ಕೇಳರಿಯದ ಆರ್ಥಿಕ ಹಿಂಜರಿತ ಅನುಭವಿಸುತ್ತಿದೆ. ಎರಡೇ ದಿನದಲ್ಲಿ ೧೮೦ ರೂ. ಇದ್ದ ಲೀಟರ್‌ ಹಾಲಿನ ಬೆಲೆಯು ೨೧೦ ರೂ. ದಾಟಿದೆ. ೬೮೦-೭೦೦ ರೂ. ಇದ್ದ ಕೋಳಿಯ ಮಾಂಸವು ೯೦೦ ರೂ. ಆಗಿದೆ. ಒಂದು ಡಜನ್‌ ಮೊಟ್ಟೆಗೆ ೧೮೦ ರೂ. ಕೊಡಬೇಕಾದ ಅನಿವಾರ್ಯತೆ ಜನರಿಗೆ ಎದುರಾಗಿದೆ. ಹೀಗೆ, ಅಗತ್ಯ ವಸ್ತುಗಳ ಬೆಲೆಯು ದಿನೇದಿನೆ ಜಾಸ್ತಿಯಾಗುತ್ತಿದ್ದರೆ ಭವಿಷ್ಯದ ಗತಿ ಏನು ಎಂಬ ಚಿಂತೆ ನಾಗರಿಕರನ್ನು ಬಾಧಿಸುತ್ತಿದೆ.

ಮಾರ್ಚ್‌ ವೇಳೆಗೆ ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಲಿದೆ ಎಂದು ಜಾಗತಿಕ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದರೂ, ಯಾವುದೇ ಕ್ರಮ ತೆಗೆದುಕೊಳ್ಳದ ನೆರೆ ರಾಷ್ಟ್ರದ ಸರ್ಕಾರವು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ, ವಿಶ್ವಸಂಸ್ಥೆ ಸೇರಿ ಜಗತ್ತಿನ ಎದುರು ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಸದ್ಯದ ಮಟ್ಟಿಗಂತೂ ಪಾಕಿಸ್ತಾನದ ಪರಿಸ್ಥಿತಿ ಬದಲಾಗುವ ಸಾಧ್ಯತೆ ಕಡಿಮೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: Pakistan economic crisis : ಪಾಕಿಸ್ತಾನ 2024ರ ಮಾರ್ಚ್‌ ವೇಳೆಗೆ ದಿವಾಳಿ ಸಂಭವ : ವರದಿ

Exit mobile version