Site icon Vistara News

Pakistan Financial Crisis : ಪಾಕಿಸ್ತಾನದಲ್ಲಿ ಪೆಟ್ರೋಲ್ ಖಾಲಿ! ಪ್ರಮುಖ ನಗರಗಳ ಪೆಟ್ರೋಲ್‌ ಬಂಕ್‌ಗಳೂ ಬಂದ್‌!

#image_title

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟ (Pakistan Financial Crisis) ಎದುರಾಗಿದೆ. ಊಟಕ್ಕೆ ಅಕ್ಕಿಯಿಂದ ಹಿಡಿದು, ವಾಹನಗಳಿಗೆ ಪೆಟ್ರೋಲ್‌ವರೆಗೆ ಎಲ್ಲದರಲ್ಲೂ ಕೊರತೆ ಉಂಟಾಗಿದ್ದು, ಎಲ್ಲ ಸಾಮಾಗ್ರಿಗಳ ಬೆಲೆ ಗಗನ ಮುಟ್ಟಿದೆ. ದೇಶದಲ್ಲಿ ಇಂಧನ ಆಮದು ಮಾಡಿಕೊಳ್ಳುವುದಕ್ಕೂ ಹಣವಿಲ್ಲದ ಹಿನ್ನೆಲೆ ಪೆಟ್ರೋಲ್‌ ಕೂಡ ಖಾಲಿಯಾಗುವ ಹಂತ ತಲುಪಿದೆ. ಹಲವು ಪ್ರಮುಖ ನಗರಗಳ ಪೆಟ್ರೋಲ್‌ ಬಂಕ್‌ಗಳಲ್ಲೇ ಪೆಟ್ರೋಲ್‌ ಖಾಲಿಯಾಗಿದ್ದು, ಬಂಕ್‌ ಅನ್ನು ಮುಚ್ಚಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Pakistani Brides: ಸಿಕ್ಕಿಬಿದ್ದ ಪಾಕ್‌ ಯುವತಿಯ ಗಡಿಪಾರು ಸಿದ್ಧತೆ ; ಭಟ್ಕಳದಲ್ಲಿರುವ ಪಾಕಿಸ್ತಾನಿ ವಧುಗಳ ಭವಿಷ್ಯ ಏನು?
ಪಾಕಿಸ್ತಾನದ ಪಂಜಾಬ್‌ನ ಲಾಹೋರ್‌, ಫೈಸಲಾಬಾದ್‌, ಗುಜ್ರಾನ್‌ವಾಲ ಸೇರಿ ಅನೇಕ ನಗರಗಳಲ್ಲಿ ಪೆಟ್ರೋಲ್‌ ಬಂಕ್‌ಗಳನ್ನು ಮುಚ್ಚಲಾಗಿದೆ. ಬಹುತೇಕ ಎಲ್ಲ ನಗರಗಳಲ್ಲಿ ಪೆಟ್ರೋಲ್‌ ಹಾಕಿಸಿಕೊಳ್ಳುವುದಕ್ಕೂ ಮಿತಿ ನಿಗದಿಪಡಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ 200 ರೂ.(ಪಾಕಿಸ್ತಾನಿ) ಬೆಲೆಯ ಪೆಟ್ರೋಲ್‌ ಹಾಗೂ ನಾಲ್ಕು ಚಕ್ರಗಳ ವಾಹನಗಳಿಗೆ ಗರಿಷ್ಠ 5000 ರೂ.(ಪಾಕಿಸ್ತಾನಿ) ಬೆಲೆಯ ಪೆಟ್ರೋಲ್‌ ಅನ್ನು ಮಾತ್ರವೇ ಹಾಕಲಾಗುತ್ತಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಕೆಲ ವಾರಗಳ ಹಿಂದೆಯೇ ಭಾರೀ ಏರಿಕೆ ಮಾಡಲಾಗಿದೆ. ಸದ್ಯ ಅಲ್ಲಿ ಒಂದು ಲೀಟರ್‌ ಪೆಟ್ರೋಲ್‌ ಬೆಲೆ 249.80 ರೂ.(ಪಾಕಿಸ್ತಾನಿ) ಇದ್ದರೆ, ಒಂದು ಲೀಟರ್‌ ಡೀಸೆಲ್‌ ಬೆಲೆ 262.80 ರೂ. (ಪಾಕಿಸ್ತಾನಿ) ಇದೆ. ಕಚ್ಚಾ ತೈಲ ಇಲ್ಲದ ಹಿನ್ನೆಲೆ ವಿದ್ಯುತ್‌ ಉತ್ಪಾದನೆಗೂ ತೊಂದರೆಯುಂಟಾಗಿದ್ದು, ಹಲವೆಡೆ ವಿದ್ಯುತ್‌ ಕಡಿತ ಉಂಟಾಗಿದೆ.

ಇದನ್ನೂ ಓದಿ: Kamaran Akmal : ಪಾಕಿಸ್ತಾನ ತಂಡದ ಮಾಜಿ ವಿಕೆಟ್​ಕೀಪರ್​ ಕಮ್ರಾನ್ ಅಕ್ಮಲ್​ ಎಲ್ಲ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ

Exit mobile version