Site icon Vistara News

Pakistan: ಟಾಪ್‌ ಕಂಪನಿಗಳಲ್ಲಿ ಭಾರತೀಯರೇ CEO; ಆದರೆ ನಮ್ಮ ಮಕ್ಕಳು? ಪಾಕ್‌ ಸಂಸದನ ವಿಡಿಯೊ ವೈರಲ್‌

Pakistan

ಪಾಕಿಸ್ತಾನ: ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ ಪಾಕಿಸ್ತಾನ ಮಾತ್ರ ಮಕ್ಕಳು ಚರಂಡಿ ಬೀಳುತ್ತಿರುವ ಬಗ್ಗೆ ವರದಿ ಮಾಡುತ್ತಿದ್ದೇವೆ ಎಂದು ಸಂಸತ್‌ನಲ್ಲೇ ಹೇಳಿಕೆ ನೀಡಿದ್ದ ಪಾಕಿಸ್ತಾನ(Pakistan)ದ ಸಂಸದ ಸಯ್ಯದ್‌ ಮುಸ್ತಾಫಾ ಕಮಲ್‌(Syed Mustafa Kamal) ಅವರ ಮತ್ತೊಂದು ವಿಡಿಯೋ ವೈರಲ್‌(Viral Video) ಆಗಿದೆ. ಸಂಸತ್‌ನಲ್ಲಿ ಪಾಕಿಸ್ತಾನದ ಪ್ರಸ್ತುತ ಸ್ಥಿತಿಗತಿ ಬಗ್ಗೆ ವಿವರಿಸುತ್ತಾ ಭಾರತದ ಜೊತೆ ಪಾಕಿಸ್ತಾನವನ್ನು ಹೋಲಿಕೆ ಮಾಡಿದ ಮುಸ್ತಾಫಾ ಕಮಲ್‌, ಭಾರತೀಯರು ಪ್ರಪಂಚ ಟಾಪ್‌ ಕಂಪನಿಗಳ ಸಿಇಒ ಸ್ಥಾನಗಳನ್ನು ಅಲಂಕರಿಸುತ್ತಿದ್ದಾರೆ. ಇಲ್ಲಿ ಮಕ್ಕಳು ಹೊಟ್ಟೆಗಿಲ್ಲದೇ, ಸರಿಯಾದ ಶಿಕ್ಷಣವಿಲ್ಲದೇ ಸಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಭಾರತ 30ವರ್ಷಗಳ ಹಿಂದೆಯೇ ಇಂದಿಗೆ ಏನು ಪ್ರಸ್ತುತವೋ ಅದನ್ನೇ ಮಕ್ಕಳಿಗೆ ಕಲಿಸಿದೆ. ಹೀಗಾಗಿಯೇ ಪ್ರಪಂಚದ 25ಕಂಪನಿಗಳ ಸಿಇಒಗಳು ಭಾರತೀಯರೇ ಆಗಿದ್ದಾರೆ. ಇಂದು ಭಾರತ ಇಡೀ ಪ್ರಪಂಚದಲ್ಲಿ ಪ್ರಕಾಶಿಸುತ್ತಿದೆ. ಅವರಿಗೆ ಗೊತ್ತಿದೆ ಮಕ್ಕಳಿಗೆ, ಜನರಿಗೆ ಏನು ಕಲಿಸಬೇಕು ಎನ್ನುವುದು. ನಮ್ಮ ಐಟಿ ರಫ್ತು ಕೇವಲ 7ಅರಬ್‌ ಡಾಲರ್‌, ಆದರೆ ಭಾರತದ ಐಟಿ ರಫ್ತಿನ ಮೌಲ್ಯ 270ಡಾಲರ್ಸ್‌. ಪ್ರಪಂಚಕ್ಕೆ ಇಂದು ಯಾವುದರ ಅಗತ್ಯ ಇದೆಯೋ ಅದನ್ನೇ ಭಾರತ ಹಲವು ವರ್ಷಗಳ ಹಿಂದೆಯೇ ಭಾರತೀಯರಿಗೆ ಕಲಿಸಿತ್ತು ಎಂದು ಹೇಳಿದ್ದಾರೆ. ಮುಸ್ತಾಫಾ ಕಮಲ್‌ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ.

ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಆದರೆ ಪಾಕಿಸ್ತಾನ ಮಾತ್ರ ಮಕ್ಕಳು ಚರಂಡಿ ಬೀಳುತ್ತಿರುವ ಬಗ್ಗೆ ವರದಿ ಮಾಡುತ್ತಿದ್ದೇವೆ. ಕರಾಚಿಯಲ್ಲಿ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ದೇಶದಲ್ಲಿ 2.6 ಕೋಟಿ ಮಕ್ಕಳಿದ್ದು, ಅವರಿಗೆ ಶಿಕ್ಷಣ ಸೌಲಭ್ಯವೂ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ

ಕರಾಚಿ ಪಾಕಿಸ್ತಾನದ ಆದಾಯದ ಮೂಲ. ಆದರೇ ಕಳೆದ 15ವರ್ಷಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸಲು ಕರಾಚಿಗೆ ಸಾಧ್ಯವಾಗುತ್ತಿಲ್ಲ. ನೀರು ಬಂದರೂ ಟ್ಯಾಂಕರ್‌ ಮಾಫಿಯಾ ಶುರುವಾಗುತ್ತದೆ. ಇನ್ನು ನಾವು 48,000 ಶಾಲೆಗಳಿವೆ. ಆದರೆ ವರದಿ ಪ್ರಕಾರ 11,000 ಶಾಲೆಗಳು ಮುಚ್ಚಿವೆ. ಸಿಂಧ್‌ ಪ್ರಾಂತ್ಯದಲ್ಲಿ 70 ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ದೇಶದಲ್ಲಿ ಒಟ್ಟು 2,62,00,000 ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಆದರೂ ಸರ್ಕಾರ ಮಾತ್ರ ನಿದ್ದೆಯಿಂದ ಏಳುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

ಪಾಕಿಸ್ತಾನ ತನ್ನನ್ನು ತಾನು ಅಫ್ಘಾನಿಸ್ತಾನ, ಬಾಂಗ್ಲಾದೇಶದ ಜೊತೆಗೆ ನಾವು ನಮ್ಮನ್ನು ಹೋಲಿಸಿಕೊಳ್ಳಬೇಕಿದೆ. ಭಾರತದ ಜೊತೆಗೆ ನಮ್ಮ ಹೋಲಿಕೆ ಸಾಧ್ಯವೇ ಇಲ್ಲ. ಭಾರತದ ಬಹಳ ಎತ್ತರದಲ್ಲಿದೆ. ಆಪಲ್‌ ಜೊತೆ ಆರೆಂಜ್‌ ಹೋಲಿಗೆ ಸಾಧ್ಯವೇ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ:Lok Sabha Election 2024: ಬಿಜೆಪಿಯ 400+ ಲೆಕ್ಕಾಚಾರ ಉಲ್ಟಾ? ಚುನಾವಣೆ ಹೊತ್ತಲ್ಲೇ ಪಕ್ಷಕ್ಕೆ ಬಿಗ್‌ ಶಾಕ್‌!

Exit mobile version