Site icon Vistara News

FATF Grey List | ಗ್ರೇ ಲಿಸ್ಟ್‌ನಿಂದ ಹೊರ ಬಿದ್ದ ಪಾಕಿಸ್ತಾನ, ಏನೆಲ್ಲ ಲಾಭ?

FATF

ನವ ದೆಹಲಿ: ಜಾಗತಿಕ ಅಕ್ರಮ ಹಣ ವರ್ಗಾವಣೆ ಹಾಗೂ ಭಯೋತ್ಪಾದನೆಗೆ ಆರ್ಥಿಕ ನೆರವು ಒದಗಿಸವ ಚಟುವಟಿಕೆಗಳ ಮೇಲೆ ಸದಾ ನಿಗಾವಹಿಸುವ ದಿ ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್(FATF) ಪಾಕಿಸ್ತಾನವನ್ನು ಗ್ರೇ ಲಿಸ್ಟ್‌(FATF Grey List)ನಿಂದ ಕೈ ಬಿಟ್ಟಿದೆ. ಉಗ್ರ ಕೃತ್ಯಗಳಿಗೆ ಆರ್ಥಿಕ ನೆರವು ಒದಗಿಸುವ ರಾಷ್ಟ್ರಗಳನ್ನು ಈ ಪಟ್ಟಿಯು ಇದು ಒಳಗೊಂಡಿರುತ್ತದೆ.

ಪ್ಯಾರಿಸ್ ಮೂಲದ ಎಫ್ಎಟಿಎಫ್‌ ನಿಗಾವಹಿಸಬೇಕಾದ ರಾಷ್ಟ್ರಗಳ ಪಟ್ಟಿಯಲ್ಲಿ ಪಾಕಿಸ್ತಾನ ಉಳಿಯಬೇಕಾಗಿಲ್ಲ ಎಂದು ತಿಳಿಸಿದೆ. ಗ್ರೇ ಲಿಸ್ಟ್‌ನಿಂದ ಪಾಕಿಸ್ತಾನವು ಹೊರ ಬಿದ್ದಿದ್ದರಿಂದ ಆರ್ಥಿಕ ದೃಷ್ಟಿಯಿಂದ ಪಾಕಿಸ್ತಾನಕ್ಕೆ ಅನುಕೂಲವಾಗಲಿದೆ. ಆ ರಾಷ್ಟ್ರವು ಈಗ ವಿದೇಶಗಳಿಂದ ನಿಧಿ ಸ್ವೀಕರಿಸಬಹುದು. ಈಗಾಗಲೇ ಆರ್ಥಿಕವಾಗಿ ಜರ್ಜರಿತವಾಗಿರುವ ಪಾಕಿಸ್ತಾನಕ್ಕೆ ಇದರಿಂದ ಭಾರಿ ಉಪಯೋಗವಾಗಲಿದೆ.

ಪರಸ್ಪರ ಅಭಿವೃದ್ಧಿ ರಿಪೋರ್ಟ್(ಎಂಇಆರ್)ನಲ್ಲಿ ಗುರುತಿಸಲಾದ ತಾಂತ್ರಿಕ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಪಾಕಿಸ್ತಾನವು ಒಟ್ಟಾರೆ ಉತ್ತಮ ಪ್ರಗತಿಯನ್ನು ಪ್ರದರ್ಶಿಸಿದೆ ಎಂದು ಎಫ್ಎಟಿಎಫ್ ತನ್ನ ವರದಿಯಲ್ಲಿ ತಿಳಿಸಿದೆ. 2018ರಿಂದಲೂ ಪಾಕಿಸ್ತಾನವು ಎಫ್ಎಟಿಎಫ್‌‌ನ ಗ್ರೇ ಲಿಸ್ಟ್‌ನಲ್ಲಿತ್ತು. ಈ ಪಟ್ಟಿಯಿಂದ ಹೊರ ಬರಲು ಪಾಕಿಸ್ತಾನವು ಸಾಕಷ್ಟು ಪ್ರಯತ್ನ ಮಾಡಿತ್ತು. ಅಂತಿಮವಾಗಿ ಅದರಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನವು ಈಗ ಎಫ್‌ಎಟಿಎಫ್‌ನೊಂದಿಗೆ ಜತೆಗೂಡಿ ಕೆಲಸ ಮಾಡಬೇಕಾಗುತ್ತದೆ.

ಇದನ್ನೂ ಓದಿ | ಭಾರತವೂ ಪಾಕಿಸ್ತಾನ ಆಗಬಾರದು ಎಂದರೆ ಈಗಿನ ಪ್ರಭುತ್ವವನ್ನು ಉಳಿಸಬೇಕು: ಡಾ. ಪ್ರೇಮಶೇಖರ್‌ ಅಭಿಮತ

Exit mobile version