ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕಿಡಿಗೇಡಿ ಲೆಕ್ಚರರ್ ಒಬ್ಬ ವಿದ್ಯಾರ್ಥಿಗಳಿಗೆ ಪ್ರಬಂಧ ಬರೆಯಲು ನೀಡಿದ ವಿಷಯವೀಗ ಆತನ ಉದ್ಯೋಗಕ್ಕೇ ಕುತ್ತು ತಂದಿದೆ. “ಸಹೋದರ-ಸಹೋದರಿಯು ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದೇ” ಎಂಬ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಬರೆಯಿರಿ ಎಂದು ಸೂಚಿಸಿದ ಲೆಕ್ಚರರ್‌ನನ್ನು ವಿಶ್ವವಿದ್ಯಾಲಯವು ವಜಾಗೊಳಿಸಿದೆ.
ಇಸ್ಲಾಮಾಬಾದ್‌ನಲ್ಲಿರುವ COMSATS ವಿಶ್ವವಿದ್ಯಾಲಯದ ಲೆಕ್ಚರರ್ ಒಬ್ಬ ಬಿಇಇ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಟೆಸ್ಟ್ ತೆಗೆದುಕೊಂಡಿದ್ದು, ಇದರಲ್ಲಿ ಇಂತಹ ಪ್ರಶ್ನೆ ಕೇಳಿದ್ದಾನೆ. ಸಹೋದರ-ಸಹೋದರಿಯು ಪ್ರೀತಿ ಮಾಡಬಹುದೇ? ಅವರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಹುದೆ ಎಂಬ ಕುರಿತು ನಿಮ್ಮ ವೈಯಕ್ತಿಕ ಅಭಿಪ್ರಾಯ ಸೇರಿಸಿ ೩೦೦ ಪದಗಳಿಗೆ ಮೀರದಂತೆ ಪ್ರಬಂದ ಬರೆಯಿರಿ ಎಂಬುದಾಗಿ ಪ್ರಶ್ನೆ ಪತ್ರಿಕೆಯಲ್ಲಿ ಉಲ್ಲೇಖಿಸಿದ್ದಾನೆ. ಪ್ರಶ್ನೆ ಪತ್ರಿಕೆಯು ವೈರಲ್ ಆಗುತ್ತಲೇ ವಿಶ್ವವಿದ್ಯಾಲಯವು ಆತನನ್ನು ವಜಾಗೊಳಿಸಿದೆ.
ಲೆಕ್ಚರರ್ ಪ್ರಶ್ನೆಪತ್ರಿಕೆ ಹಾಗೂ ವಜಾ ಆದೇಶ
ಪ್ರಶ್ನೆ ಪತ್ರಿಕೆ ವೈರಲ್ ಆಗುತ್ತಲೇ ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ವಿವಿ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಸಮಗ್ರ ತನಿಖೆ ನಡೆಸಿ ಲೆಕ್ಚರರ್‌ನನ್ನು ಫೆಬ್ರವರಿ ೨ರಂದು ಕೆಲಸದಿಂದ ವಜಾಗೊಳಿಸಿದೆ.
ಇದನ್ನೂ ಓದಿ: Pakistan bankrupt : ಪಾಕಿಸ್ತಾನ ಈಗ ದಿವಾಳಿಯಾಗಿದೆ ಎಂದ ರಕ್ಷಣಾ ಸಚಿವ ಕ್ವಾಜಾ ಆಸಿಫ್