ನವದೆಹಲಿ: ಇರಾನ್ ಪಾಕಿಸ್ತಾನದ (Iran-Pakistan) ಗಡಿಯಲ್ಲಿ ಕ್ಷಿಪಣಿ ದಾಳಿ (Iran Attack) ನಡೆಸಿದ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಘರ್ಷ ಉಲ್ಪಣಗೊಂಡಿದೆ(Diplomatic Crisis). ಪಾಕಿಸ್ತಾನವು ಇರಾನ್ ರಾಷ್ಟ್ರದ ಪ್ರತಿನಿಧಿಯನ್ನು ದೇಶದಿಂದ ಹೊರ ಹಾಕಿದ ಬೆನ್ನಲ್ಲೇ, ಇರಾನ್‌ನಿಂದ ತನ್ನ ರಾಯಭಾರಿಯನ್ನು ವಾಪಸ್ ಕರೆಯಿಸಿಕೊಂಡಿದೆ(Ambassador Recalls).
ಪಾಕಿಸ್ತಾನವು ತನ್ನ ರಾಯಭಾರಿಯನ್ನು ಇರಾನ್‌ನಿಂದ ವಾಪಸ್ ಕರೆಯಿಸಿಕೊಂಡಿರುವ ಮಾಹಿತಿಯನ್ನು ವಿದೇಶಾಂಗ ಸಚಿವಾಲಯವು ಖಚಿತಪಡಿಸಿದೆ. ಅಲ್ಲದೇ, ಪಾಕಿಸ್ತಾನದಿಂದ ಹೊರಗೆ ಹಾಕಲಾಗಿರುವ ಇರಾನ್ ರಾಯಭಾರಿ ಸದ್ಯಕ್ಕೆ ಪಾಕಿಸ್ತಾನಕ್ಕೆ ಹಿಂದಿರುಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪಾಕಿಸ್ತಾನವು ಇರಾನ್‌ನಿಂದ ತನ್ನ ರಾಯಭಾರಿಯನ್ನು ಹಿಂಪಡೆಯಲು ನಿರ್ಧರಿಸಿದೆ ಮತ್ತು ಪ್ರಸ್ತುತ ಇರಾನ್‌ಗೆ ಹೋಗುತ್ತಿರುವ ಪಾಕಿಸ್ತಾನದಲ್ಲಿರುವ ಇರಾನ್ ರಾಯಭಾರಿ ಸದ್ಯಕ್ಕೆ ಹಿಂತಿರುಗುವುದಿಲ್ಲ ಪಾಕಿಸ್ತಾನ ವಿದೇಶಾಂಗ ಇಲಾಖೆಯ ವಕ್ತಾರೆ ಮುಮ್ತಾಜ್ ಜಹ್ರಾ ಬಲೋಚ್ ಹೇಳಿದ್ದಾರೆ.
ಇರಾನ್ ಜೈಶ್ ಅಲ್-ಅದ್ಲ್ ಭಯೋತ್ಪಾದಕ ಗುಂಪನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿಯನ್ನು ಪಾಕಿಸ್ತಾನ ಸರ್ಕಾರವು ತೀವ್ರವಾಗಿ ಖಂಡಿಸಿದೆ. ಇರಾನ್ ಮತ್ತು ಪಾಕಿಸ್ತಾನವು ಸುಮಾರು ಸಾವಿರ ಕಿ.ಮೀ ಗಡಿಯನ್ನು ಹಂಚಿಕೊಳ್ಳುತ್ತವೆ. ಈ ಗಡಿಯಲ್ಲಿ ಇರಾನ್ ಕ್ಷಿಪಣಿ ದಾಳಿ ನಡೆಸಿದೆ.
ಬಲೂಚಿಸ್ತಾನದ ಪಂಜ್‌ಗುರ್ ಪ್ರದೇಶದಲ್ಲಿ ಇರಾನ್ ನಡೆಸಿದ ದಾಳಿಯನ್ನು ಪಾಕಿಸ್ತಾನವು ತನ್ನ ವಾಯು ಪ್ರದೇಶ ಉಲ್ಲಂಘನೆ ಮತ್ತು ಪ್ರಚೋದನೆ ಇಲ್ಲದ ನಡೆಸಿದ ದಾಳಿಯಾಗಿದೆ. ಈ ಸಂಪೂರ್ಣ ಅಸ್ವೀಕಾರಾರ್ಹ ಘಟನೆಯಾಗಿದೆ. ಇದರಿಂದಾಗಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ. ಇರಾನ್ ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಈ ದಾಳಿಗೆ ಪ್ರತಿಕ್ರಿಯಿಸುವ ಹಕ್ಕು ತನಗಿದೆ ಎಂದು ಪಾಕಿಸ್ತಾನವು ಎಚ್ಚರಿಸಿದೆ.
ಆದರೆ, ಪಾಕಿಸ್ತಾನದ ಗಡಿಯಲ್ಲಿನ ದಾಳಿ ಅಥವಾ ಇಬ್ಬರು ಮಕ್ಕಳ ಸಾವಿನ ಕುರಿತು ಇರಾನ್ ವಿದೇಶಾಂಗ ಸಚಿವಾಲಯವು ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇರಾನ್ ಸರ್ಕಾರಿ ಸ್ವಾಮ್ಯದ ಸುದ್ದಿ ಮಾಧ್ಯಮಗಳು ಮಾತ್ರವೇ ಪಾಕಿಸ್ತಾನದ ಗಡಿಯಲ್ಲಿರುವ ಉಗ್ರಗಾಮಿ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ ಎಂದು ವರದಿ ಮಾಡಿವೆ.
ಈ ಸುದ್ದಿಯನ್ನೂ ಓದಿ: Iran Attack: ಪಾಕ್ ಮೇಲೆ ಇರಾನ್ ದಾಳಿ ಮಾಡಿದ್ದೇಕೆ? ದಾಳಿಯ ಪರಿಣಾಮ ಏನು?