ಇಸ್ಲಾಮಾಬಾದ್: ಇರಾನ್ ಜತೆಗಿನ ಬಿಕ್ಕಟ್ಟನ್ನು ಅಂತ್ಯಗೊಳಿಸಲು ಪಾಕಿಸ್ತಾನವು ನಿರ್ಧರಿಸಿದೆ. ಈ ಸಂಬಂಧ ನಡೆದ ಸಂಪುಟ ಸಭೆಯಲ್ಲಿ (Pakistan Cabinet Meeting) ತೀರ್ಮಾನ ಕೈಗೊಳ್ಳಲಾಗಿದೆ. ಉಗ್ರಗಾಮಿ ಸಂಘಟನೆಯ ನೆಲೆಯನ್ನು ಗುರಿಯಾಗಿಸಿಕೊಂಡು ಇರಾನ್ ಪಾಕಿಸ್ತಾನದ ಗಡಿಯಲ್ಲಿ ಕ್ಷಿಪಣಿ ದಾಳಿ ನಡೆಸಿತ್ತು(Iran attacks on Pakistan). ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಇರಾನ್ ಗಡಿಯಲ್ಲಿ ಕ್ಷಿಪಣಿ ದಾಳಿ ನಡೆಸಿತ್ತು. ಪರಿಣಾಮ ಉಭಯ ರಾಷ್ಟ್ರಗಳ ಮಧ್ಯೆ ಸಂಘರ್ಷ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಉಸ್ತುವಾರಿ ಪ್ರಧಾನಿ ನೇತೃತ್ವದ ಸಂಪುಟವು ಇರಾನ್‌ನೊಂದಿಗೆ ಸಂಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಮರುಸ್ಥಾಪಿಸುವ ಕ್ರಮವನ್ನು ಅನುಮೋದಿಸಿದೆ ಎಂದು ಜಿಯೋ ಟಿವಿ ವರದಿ ಮಾಡಿದೆ(Iran vs Pakistan).
ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವಾರ್ ಉಲ್ ಹಕ್ ಕಾಕರ್ ಅವರು ಮಿಲಿಟರಿ ಸೇವೆಗಳ ಮುಖ್ಯಸ್ಥರನ್ನು ಭೇಟಿಯಾದ ಕ್ಯಾಬಿನೆಟ್ ಸಭೆಯ ಮೊದಲು ಇರಾನ್‌ನೊಂದಿಗೆ ಬಿಕ್ಕಟ್ಟನ್ನು ಹೆಚ್ಚಿಸಲು ಇಸ್ಲಾಮಾಬಾದ್ ಬಯಸುವುದಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಜಲೀಲ್ ಅಬ್ಬಾಸ್ ಜಿಲಾನಿ ಅವರು ಹೇಳಿದ್ದರು.
ಪಾಕಿಸ್ತಾನದ ದಾಳಿಯಿಂದ ತನ್ನ ಗಡಿಯ ಹಳ್ಳಿಯಲ್ಲಿ ನಾಲ್ವರು ಮಕ್ಕಳ ಮೃತಪಟ್ಟಿದ್ದಾರೆಂದು ಇರಾನ್ ಹೇಳಿದರೆ, ಇರಾನ್ ದಾಳಿಯಿಂದ ತನ್ನ ಗಡಿಯಲ್ಲಿ ಇಬ್ಬರು ಮಕ್ಕಳ ಮೃತರಾಗಿದ್ದಾರಿಂದು ಪಾಕಿಸ್ತಾನವು ಹೇಳಿಕೊಂಡಿದೆ.
ಸಂಪುಟ ಸಭೆಯ ಸಮಯದಲ್ಲಿ ಜಲೀಲ್ ಅಬ್ಬಾಸ್ ಜಿಲಾನಿ ಅವರು ತಮ್ಮ ಇರಾನಿನ ಸಹವರ್ತಿ ಹುಸೇನ್ ಅಮೀರ್-ಅಬ್ದುಲ್ಲಾಹಿಯಾನ್ ಅವರೊಂದಿಗೆ ಫೋನ್ ಮೂಲಕ ಮಾತನಾಡಿದರು. “ಪರಸ್ಪರ ನಂಬಿಕೆ ಮತ್ತು ಸಹಕಾರದ ಮನೋಭಾವದ ಆಧಾರದ ಮೇಲೆ ಎಲ್ಲಾ ವಿಷಯಗಳಲ್ಲಿ ಇರಾನ್‌ನೊಂದಿಗೆ ಕೆಲಸ ಮಾಡಲು ಪಾಕಿಸ್ತಾನದ ಸಿದ್ಧವಾಗಿದೆ ಎಂದು ಇರಾನ್‌ಗೆ ತಿಳಿಸಿದರು. ಬಳಿಕ ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ, ಭದ್ರತಾ ವಿಷಯಗಳಲ್ಲಿ ನಿಕಟ ಸಹಕಾರದ ಅಗತ್ಯವನ್ನು ಒತ್ತಿಹೇಳಿದ್ದಾರೆ ಪಾಕಿಸ್ತಾನದ ಪ್ರಧಾನಿ ಒತ್ತಿ ಹೇಳಿದ್ದಾರೆಂದು ತಿಳಿಸಲಾಗಿದೆ.
ಪಾಕಿಸ್ತಾನದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯು ನಮಗೆ ಹೆಚ್ಚಿನ ಕಾಳಜಿ ಇದೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ನಿಷ್ಕ್ರಿಯಗೊಳಿಸಲು ಮತ್ತು ನಾಶಮಾಡಲು ಉಭಯ ದೇಶಗಳ ಸಹಕಾರ ಅತ್ಯಗತ್ಯ ಎಂದು ಇರಾನ್‌ನ ಅಮೀರ್-ಅಬ್ದುಲ್ಲಾಹಿಯಾನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Pakistan Airstrike: ಮುಯ್ಯಿಗೆ ಮುಯ್ಯಿ ಎಂದ ಪಾಕ್; ಇರಾನ್ ಮೇಲೆ ಪ್ರತಿದಾಳಿ