ಪ್ಯಾರಿಸ್: ಫ್ರಾನ್ಸ್ (France) ರಾಜಧಾನಿ ಪ್ಯಾರಿಸ್ (Paris City) ತನ್ನ ಐಫೆಲ್ ಟವರ್, ಚಾಂಪ್ಸ್-ಎಲಿಸೀಸ್ ಮತ್ತು ಲೌವ್ರೆ ಮ್ಯೂಸಿಯಂ ಸೇರಿದಂತೆ ಇನ್ನ ಅನೇಕ ಐತಿಹಾಸಿಕ ಹೆಗ್ಗುರುತಗಳಿಗಾಗಿ ಪ್ರಸಿದ್ಧಿಯಾಗಿದೆ. ಆದರೆ, ಕಳೆದ ಕೆಲವು ದಿನಗಳಿಂದ ಪ್ಯಾರಿಸ್ ಬೇರೆ ಕಾರಣಕ್ಕೆ ಸುದ್ದಿಯಲ್ಲಿದೆ. ಈ ನಗರದಲ್ಲಿ ಎಲ್ಲೆಂದರಲ್ಲಿ ಕಂಡು ಬರುತ್ತಿರುವ ತಿಗಣೆಗಳಿಂದ (Bed Bugs) ಜನರು ಭಾರೀ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ, ತಿಗಣೆಗಳ ನಿರ್ಮೂಲನಕ್ಕಾಗಿ ಫ್ರಾನ್ಸ್ ಸರ್ಕಾರವು (France Government) ಸಮರವನ್ನೇ ಸಾರಿದೆ(Viral News).
ಹೈಸ್ಪೀಡ್ ರೈಲುಗಳು, ಬಸ್‌ಗಳು, ಸಿನಿಮಾ ಥಿಯೇಟರ್‌ಗಳು, ಚಾರ್ಲ್ಸ್ ಡೇ ಗೌಲ್ ವಿಮಾನ ನಿಲ್ದಾಣ ಸೇರಿದಂತೆ ನಗರದ ಬಹುತೇಕ ತಿಗಣೆ ಕಾಟದ ಫೋಟೋಗಳು ಮತ್ತು ವಿಡಿಯೋಗಳನ್ನು ಪ್ಯಾರಿಸ್ ಜನರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಫ್ರಾನ್ಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Bed bugs seen crawling over seats on Paris trains and buses as France battles a bed bug invasion. pic.twitter.com/XnwcrQgVax
— Project TABS (@ProjectTabs) October 2, 2023
ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಫ್ರಾನ್ಸ್ ಸರ್ಕಾರ ಈಗ ತಿಗಣೆ ಸಂಹಾರಕ್ಕೆ ಮುಂದಾಗಿದೆ. ಫ್ರಾನ್ಸ್ ಸಾರಿಗೆ ಸಚಿವ ಕ್ಲೆಮೆಂಟ್ ಬ್ಯೂನ್ ಅವರು, ಸಾರ್ವಜನಿಕ ಸಾರಿಗೆ ಕಂಪನಿಗಳ ಪ್ರತಿನಿಧಿಗಳ ಸಭೆ ನಡೆಸಲಿದ್ದೇನೆ. ಈ ವೇಳೆ, ತಿಗಣೆಗಳ ಸಮಸ್ಯೆಯನ್ನು ಬಗೆಹರಿಸುವ ಕುರಿತು ಚರ್ಚಿಸಲಾಗುವುದು. ಅಲ್ಲದೇ, ಪ್ರಯಾಣಿಕರಿಗೆ ತಿಗಣೆ ಕಾಟದಿಂದ ತಪ್ಪಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಫ್ರಾನ್ಸ್ ಸರ್ಕಾರ ಕೈಗೊಳ್ಳಲಿದೆ ಎಂಬ ಭರವಸೆ ನೀಡಿದ್ದಾರೆ ಎಂದು ಫ್ರಾನ್ಸ್ 24 ವರದಿ ಮಾಡಿದೆ.
ತಿಗಣೆ ಸಂವಹಾರ ಮಾಡುವುದಕ್ಕಾಗಿಯೇ ಮೀಸಲಾದ ಕಾರ್ಯಪಡೆಯನ್ನು ರಚಿಸುವ ಮೂಲಕ ಜನರ ನೆರವಿಗೆ ಧಾವಿಸಬೇಕು ಎಂದು ಪ್ಯಾರಿಸ್ ಸಿಟಿ ಹಾಲ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಒತ್ತಾಯಿಸಿದೆ. ಫ್ರೆಂಚ್ ಸಾರಿಗೆ ಪೂರೈಕೆದಾರರು ಇತ್ತೀಚೆಗೆ ಈ ತಿಗಣೆಗಳು ಕಂಡು ಬಂದಿಲ್ಲ ವಾಸ್ತವದ ನಡುವೆಯೂ ಅವುಗಳ ಬಗ್ಗೆ ಎಚ್ಚರಿಕೆ ವಹಿಸುವುದಾಗಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Viral News: 163 ಇಲಿ ಹಿಡಿಯಲು 69 ಲಕ್ಷ ರೂ. ವೆಚ್ಚ ಮಾಡಿದ ರೈಲ್ವೆ ಇಲಾಖೆ! ಭ್ರಷ್ಟಾಚಾರ ಎಂದು ಕಿಡಿಕಾರಿದ ಕಾಂಗ್ರೆಸ್
ಪ್ಯಾರಿಸ್ ಮೆಟ್ರೋ ಕಾರ್ಯನಿರ್ವಹಣೆ ಮಾಡುವ ಆರ್‌ಎಟಿಪಿ, ಪ್ರತಿಯೊಂದು ಅಂಶವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ, ಕಳೆದ ಕೆಲವು ದಿನಗಳಿಂದ ನಮ್ಮ ಉಪಕರಣಗಳಲ್ಲಿ ತಿಗಣೆಗಳ ಕುರಿತಾದ ಯಾವುದೇ ಸಾಬೀತಾದ ಪ್ರಕರಣಗಳು ದಾಖಲಾಗಿಲ್ಲ ಎಂದು ಸಿಎನ್ಎನ್‌ಗೆ ತಿಳಿಸಿದೆ.
ಮನೆಗಳಲ್ಲಿ ತಿಗಣೆ ಹೆಚ್ಚಾಗುವ ಸಂಭವಗಳಿವೆ. ತ್ವರಿತಗತಿಯಲ್ಲಿ ತಿಗಣೆಗಳು ಹೆಚ್ಚಾಗುತ್ತಿರುವ ಕುರಿತು ಅಗತ್ಯವಿರುವ ಎಲ್ಲ ಸಂಗತಿಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಪ್ರಯಾಣ, ಹಂಚಿಕೊಳ್ಳುವ ವಸತಿ ವ್ಯವಸ್ಥೆ ಸೇರಿದಂತೆ ಕೆಲವು ಸಂಗತಿಗಳು ತಿಗಣೆಗಳ ಸಮಸ್ಯೆ ಕಾರಣವಾಗಿರಬಹುದು ಎಂದು ANSESನ ಸಾಮಾಜಿಕ ವಿಜ್ಞಾನ, ಅರ್ಥಶಾಸ್ತ್ರ ಮತ್ತು ಸಮಾಜ ವಿಭಾಗದ ಉಪ ನಿರ್ದೇಶಕರಾದ ಕರೀನ್ ಫಿಯೋರ್ ಅವರು ತಿಳಿಸಿದ್ದಾರೆ.