Site icon Vistara News

PM Modi Austria Visit: ʼವಂದೇ ಮಾತರಂʼ ಗಾಯನದ ಮೂಲಕ ಪ್ರಧಾನಿ ಮೋದಿ ಮನಗೆದ್ದ ಆಸ್ಟ್ರಿಯನ್ನರು; Video ಇಲ್ಲಿದೆ

PM Modi Austria Visit

PM Modi Austria Visit

ವಿಯೆನ್ನಾ: ರಷ್ಯಾ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಎರಡು ದಿನಗಳ ಪ್ರವಾಸಕ್ಕಾಗಿ ಆಸ್ಟ್ರಿಯಾಗೆ ತೆರಳಿದ್ದಾರೆ (PM Modi Austria Visit). ಅವರು ರಷ್ಯಾ ರಾಜಧಾನಿ ಮಾಸ್ಕೋದಿಂದ ಆಸ್ಟ್ರಿಯಾದ ನಗರ ವಿಯೆನ್ನಾ ತಲುಪಿದರು. ಆಸ್ಟ್ರಿಯಾದ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಶಾಲೆನ್ಬರ್ಗ್ ಸೇರಿದಂತೆ ಹಲವು ಗಣ್ಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಆಸ್ಟ್ರಿಯಾ ಪ್ರಜೆಗಳು ‘ವಂದೇ ಮಾತರಂ’ ಗಾಯನ ಪ್ರಸ್ತುತ ಪಡಿಸಿದ್ದು ಗಮನ ಸೆಳೆಯಿತು. ಈ ವಿಡಿಯೊ ತುಣುಕನ್ನು ನರೇಂದ್ರ ಮೋದಿ ಅವರು ತಮ್ಮಸಾಮಾಜಿಕ ಜಾಲತಾಣತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ʼʼಆಸ್ಟ್ರಿಯಾ ವೈವಿಧ್ಯಮಯ ಸಂಗೀತಕ್ಕೆ ಹೆಸರುವಾಸಿ. ನನ್ನೆದುರು ‘ವಂದೇ ಮಾತರಂ’ ಗಾಯನ ಪ್ರಸ್ತುತಪಡಿಸಿದ್ದಕ್ಕೆ ಧನ್ಯವಾದಗಳುʼʼ ಎಂದು ಮೋದಿ ಬರೆದುಕೊಂಡಿದ್ದಾರೆ.

4೦ ವರ್ಷಗಳ ಬಳಿಕ ಪ್ರಧಾನಿ ಭೇಟಿ

ಆಸ್ಟ್ರಿಯಾಕ್ಕೆ ಬರೋಬ್ಬರಿ ಸುಮಾರು 40 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿದ್ದಾರೆ ಎನ್ನುವುದು ವಿಶೇಷ. ಈ ಹಿಂದೆ ಇಂದಿರಾ ಗಾಂಧಿ ಅವರು ಆಸ್ಟ್ರಿಯಾಕ್ಕೆ ತೆರಳಿದ್ದರು. ಅದಾದ ಬಳಿಕ ಯಾರೂ ಹೋಗಿರಲಿಲ್ಲ.

ಹಲವು ಒಪ್ಪಂದಕ್ಕೆ ಸಹಿ ಸಾಧ್ಯತೆ

ರಷ್ಯಾ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿರುವ ಮೋದಿ ಅವರು ಆಸ್ಟ್ರಿಯಾ ಪ್ರವಾಸದ ವೇಳೆ ಹಲವು ಮಹತ್ವಾಕಾಂಕ್ಷೆಯ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಈ ಪ್ರವಾಸದಿಂದ ಉಭಯ ದೇಶಗಳ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇಂದು ಅಲ್ಲಿನ ಭಾರತ ಮೂಲದ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಲಿರುವ ಮೋದಿ ಅವರು ಬಳಿಕ ಅಧ್ಯಕ್ಷ ಅಲೆಗ್ಸಾಂಡರ್‌ ವ್ಯಾನ್‌ ಅವರನ್ನು ಭೇಟಿಯಗಲಿದ್ದಾರೆ.

 ಅಲೆಕ್ಸಾಂಡರ್ ಶಾಲೆನ್ಬರ್ಗ್ ಹೇಳಿದ್ದೇನು?

ಆಸ್ಟ್ರಿಯಾದ ವಿದೇಶಾಂಗ ಸಚಿವ ಅಲೆಕ್ಸಾಂಡರ್ ಶಾಲೆನ್ಬರ್ಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದರು. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 75ನೇ ವಾರ್ಷಿಕೋತ್ಸವವನ್ನು ಈ ವೇಳೆ ಸ್ಮರಿಸಿದ್ದರು. “ರಾಜತಾಂತ್ರಿಕ ಸಂಬಂಧಗಳ 75ನೇ ವರ್ಷಾಚರಣೆಯ ಅಂಗವಾಗಿ ಆಸ್ಟ್ರಿಯಾಕ್ಕೆ ಐತಿಹಾಸಿಕ ಭೇಟಿ ನೀಡಿದ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆತ್ಮೀಯ ಸ್ವಾಗತ. ನಮ್ಮ ದೇಶಗಳ ನಡುವಿನ ಸಹಭಾಗಿತ್ವವು ಜಾಗತಿಕ ಭದ್ರತೆ, ಸ್ಥಿರತೆ ಮತ್ತು ಸಮೃದ್ಧಿಗೆ ಬದ್ಧವಾಗಿದೆ ” ಎಂದು ಅಲೆಕ್ಸಾಂಡರ್ ಶಾಲೆನ್ಬರ್ಗ್ ಬುಧವಾರ ಪ್ರಧಾನಿ ಮೋದಿ ಅವರ ಆಗಮನದ ನಂತರ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಆಸ್ಟ್ರಿಯಾದ ಚಾನ್ಸಲರ್ ಕಾರ್ಲ್ ನೆಹಮ್ಮರ್ ಅವರು ಕೂಡ ಮೋದಿ ಅವರನ್ನು ಸ್ವಾಗತಿಸಿದರು. ಭಾರತವನ್ನು ಸ್ನೇಹಿತ ಮತ್ತು ಪಾಲುದಾರ ಎಂದು ಅವರು ಕರೆದಿದ್ದಾರೆ. ಭೇಟಿಯ ಸಮಯದಲ್ಲಿ ರಾಜಕೀಯ ಮತ್ತು ಆರ್ಥಿಕತೆ ಬಗ್ಗೆ ಚರ್ಚಿಸಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ಆತ್ಮೀಯ ಸ್ವಾಗತಕ್ಕೆ ಪ್ರತಿಕ್ರಿಯಿಸಿದ ಪಿಎಂ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಭಾರತ ಮತ್ತು ಆಸ್ಟ್ರಿಯಾ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: PM Modi Austria Visit : ಆಸ್ಟ್ರೀಯಾ ತಲುಪಿದ ಪ್ರಧಾನಿ ಮೋದಿ; 41 ವರ್ಷಗಳ ಬಳಿಕ ಮೊದಲ ಸಲ ಭಾರತದ ಪ್ರಧಾನಿ ಭೇಟಿ

Exit mobile version