Site icon Vistara News

PM Modi Russia Visit: ದೇಶ, ಜನರಿಗಾಗಿ ನಿಮ್ಮ ಜೀವನವೇ ಮುಡಿಪು ಎಂದು ಮೋದಿಯನ್ನು ಹೊಗಳಿದ ಪುಟಿನ್

PM Modi Russia Visit

Russia Set To Discharge Indian Recruits Fighting In Ukraine After Modi-Putin Talks

ಮಾಸ್ಕೋ: ಎರಡು ದಿನಗಳ ರಷ್ಯಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (PM Modi Russia Visit) ಅವರು ಮಾಸ್ಕೋ ತಲುಪುತ್ತಲೇ ಅದ್ಧೂರಿ ಸ್ವಾಗತ ಸಿಕ್ಕಿದೆ. ಅನಿವಾಸಿ ಭಾರತೀಯರು, ರಷ್ಯಾ ಕಲಾವಿದರು ಹಿಂದಿಗೆ ಹಾಡಿಗೆ ನೃತ್ಯ ಮಾಡಿ, ಭಜನೆ, ಹಾಡುಗಳ ಮೂಲಕ ನರೇಂದ್ರ ಮೋದಿ (Narendra Modi) ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲ, ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಅವರನ್ನೂ ಭೇಟಿಯಾಗಿದ್ದು, ಪುಟಿನ್‌ ಮನೆಯಲ್ಲೇ ಚಾಯ್‌ ಪೆ ಚರ್ಚಾ, ಔತಣ ಕೂಡ ನಡೆದಿದೆ.

ಮಾಸ್ಕೋದಲ್ಲಿರುವ ವ್ಲಾಡಿಮಿರ್‌ ಪುಟಿನ್‌ ಅವರ ನಿವಾಸಕ್ಕೆ (ನೋವೊ-ಒಗಾರ್ಯೊವೊ) ನರೇಂದ್ರ ಮೋದಿ ಅವರನ್ನು ರಷ್ಯಾ ಅಧ್ಯಕ್ಷ ಕೈ ಕುಲುಕಿ, ತಬ್ಬಿಕೊಂಡು ಸ್ವಾಗತಿಸಿದರು. ತಮ್ಮ ನಿವಾಸದಲ್ಲಿಯೇ ಮೋದಿ ಅವರಿಗೆ ಪುಟಿನ್‌ ಅವರು ಚಹಾ, ಭೋಜನಕೂಟದ ಉಸ್ತುವಾರಿ ನೋಡಿಕೊಂಡರು. ಇದೇ ವೇಳೆ ಉಭಯ ನಾಯಕರು ಔಪಚಾರಿಕವಾಗಿ ಮಾತುಕತೆ ನಡೆಸಿದ್ದಾರೆ.

ಮೋದಿಯನ್ನು ಹೊಗಳಿದ ಪುಟಿನ್‌

ನರೇಂದ್ರ ಮೋದಿ ಅವರನ್ನು ವ್ಲಾಡಿಮಿರ್‌ ಪುಟಿನ್‌ ಅವರು ಹಾಡಿ ಹೊಗಳಿದ್ದಾರೆ. “ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೆ ಪ್ರಧಾನಿಯಾಗಿದ್ದಕ್ಕೆ ಅಭಿನಂದನೆಗಳು. ನೀವು ಹೊಂದಿರುವ ಸಾಮರ್ಥ್ಯ, ಉತ್ಸಾಹವು ಅಮೋಘವಾದುದು. ನೀವು ದೇಶ ಹಾಗೂ ಸಾರ್ವಜನಿಕರ ಸೇವೆಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದೀರಿ. ನೀವು ನಮ್ಮ ದೇಶಕ್ಕೆ ಆಗಮಿಸಿರುವುದು ಖುಷಿಯಾಗಿದೆ. ಇನ್ನು, ಬಾರತದಲ್ಲಿ 2.3 ಕೋಟಿ ಮಕ್ಕಳಿದ್ದು, ಅವರು ಭವಿಷ್ಯದ ಬಗ್ಗೆ ಯೋಚಿಸುತ್ತಾರೆ, ಕನಸು ಕಾಣುತ್ತಾರೆ. ಅಲ್ಲದೆ, ಇದು ಭದ್ರ, ಸ್ಥಿರ ಭಾರತದ ಸಂಕೇತವಾಗಿದೆ” ಎಂದು ವ್ಲಾಡಿಮಿರ್‌ ಪುಟಿನ್‌ ಅವರು ಖಾಸಗಿ ಭೇಟಿ ವೇಳೆ ಹೊಗಳಿದ್ದಾರೆ.

ಭಾರತ ಮತ್ತು ರಷ್ಯಾ ವಾರ್ಷಿಕ ಶೃಂಗಸಭೆಯು ಮೋದಿಯವರ ರಷ್ಯಾ ಭೇಟಿಯ ಪ್ರಮುಖ ಅಜೆಂಡಾವಾಗಿದ್ದು, ರಷ್ಯಾ-ಉಕ್ರೇನ್‌ ಯುದ್ಧದ ಬಳಿಕ ಮೊದಲ ಭೇಟಿಯಲ್ಲಿ ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ಈ ಕುರಿತು ಮಾತುಕತೆ ನಡೆಸಿದ್ದಾರೆ. ರಷ್ಯಾ ಅಧ್ಯಕ್ಷರಾದ ವ್ಲಾಡಿಮಿರ್‌ ಪುಟಿನ್‌ ಅವರು ಸೋಮವಾರ ನರೇಂದ್ರ ಮೋದಿ ಅವರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಮಂಗಳವಾರ (ಜುಲೈ 9) ಶೃಂಗಸಭೆ ನಡೆಯಲಿದ್ದು, ಉಭಯ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಭಾರತ-ರಷ್ಯಾ ನಡುವಿನ 22ನೇ ವಾರ್ಷಿಕ ಸಭೆಯು ದ್ವಿಪಕ್ಷೀಯ ಸಂಬಂಧದ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿದೆ.

ಇದನ್ನೂ ಓದಿ: PM Modi Russia Visit: ರಷ್ಯಾ ತಲುಪಿದ ಮೋದಿಗೆ ಭಾರತದ ಸಂಪ್ರದಾಯದಂತೆ ಅದ್ಧೂರಿ ಸ್ವಾಗತ; Video ಇದೆ

Exit mobile version