Site icon Vistara News

ಮಾಲ್ಡೀವ್ಸ್ ಅಧ್ಯಕ್ಷನಿಗೆ ಮುಖಭಂಗ; ಮಾಲೆ ಮೇಯರ್ ಎಲೆಕ್ಷನ್ ಗೆದ್ದ ಭಾರತದ ಪರ ಒಲವುಳ್ಳ ಪಕ್ಷ!

Pro india party won Male mayoral election of Maldives

ನವದೆಹಲಿ: ಭಾರತ ಮತ್ತು ಮಾಲ್ಡೀವ್ಸ್ (India and Maldives) ನಡುವೆ ರಾಜತಾಂತ್ರಿಕ ಬಿಕ್ಕುಟ್ಟು (Diplomatic Crisis) ಉದ್ಭವಿಸಿದ ಬೆನ್ನಲ್ಲೇ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರಿಗೆ ಭಾರೀ ಮುಖಭಂಗವಾಗಿದೆ(Maldives President Mohamed Muizzu). ಮಾಲ್ಡೀವ್ಸ್ ರಾಜಧಾನಿ ಮಾಲೆ ಮೇಯರ್ ಉಪ ಚುನಾವಣೆಯಲ್ಲಿ(Male mayoral election) ಭಾರತದ ಪರ ಒಲವುಳ್ಳ (pro-India party) ಪ್ರತಿಪಕ್ಷ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ(MDP) ಅಭೂತಪೂರ್ವ ಗೆಲುವು ಸಾಧಿಸಿದೆ. ಅಧ್ಯಕ್ಷ ಮುಯಿಜು ಅವರು ಚೀನಾ ಪರ ಒಲವುಳ್ಳ ನಾಯಕರಾಗಿದ್ದಾರೆ. ಇತ್ತೀಚೆಗಷ್ಟೇ ಚೀನಾ ಪ್ರವಾಸ ಕೈಗೊಂಡು ವಾಪಸ್ಸಾಗಿರುವ ಅವರಿಗೆ ಭಾರೀ ಮುಖಭಂಗವಾಗಿದೆ.

ಎಂಡಿಪಿಯ ಅಭ್ಯರ್ಥಿ ಆಡಮ್ ಅಜೀಮ್ ಮಾಲೆಯ ಹೊಸ ಮೇಯರ್ ಆಗಿ ಚುನಾಯಿತರಾಗಿದ್ದಾರೆ. ಮೊಹಮ್ಮದ್ ಮುಯಿಜು ಅವರು ಮಾಲ್ಡೀವ್ಸ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವರೆಗೂ ಮಾಲೆ ಮೇಯರ್ ಹುದ್ದೆಯನ್ನು ಅಲಂಕರಿಸಿದ್ದರು. ಅವರ ರಾಜೀನಾಮೆ ಹಿನ್ನೆಲೆಯಲ್ಲಿ ಮೇಯರ್ ಹುದ್ದೆಗೆ ಚುನಾವಣೆ ನಡೆದಿತ್ತು.

ಮಾಲೆ ಮೇಯರ್ ಚುನಾವಣೆಯಲ್ಲಿ ಗೆದ್ದಿರುವ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷದ ಮೊಹಮ್ಮದ್ ಸೊಲೀಹ್ ಅವರು ಭಾರತದ ಒಲವುಳ್ಳ ನಾಯಕರಾಗಿದ್ದಾರೆ. ಕಳೆದ ವರ್ಷ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮೊಹಮ್ಮದ್ ಮುಯಿಜು ಅವರ ವಿರುದ್ಧ ಸೋಲು ಅನುಭವಿಸಿದ್ದರು.

ಮಾಲ್ಡೀವ್ಸ್ ಸಾರಿಗೆ ಮತ್ತು ಗುತ್ತಿಗೆ ಕಂಪನಿಯ (ಎಂಟಿಸಿಸಿ) ಮಾಜಿ ಸಿಇಒ ಆಗಿರುವ ಆಡಮ್ ಅಜೀಮ್ ಮೇಯರ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಮಾಲ್ಡೀವ್ಸ್ ವರದಿ ಮಾಡಿದೆ. ಈವರೆಗೂ 41 ಮತ ಪೆಟ್ಟಿಗೆಗಳನ್ನು ತೆರೆದು ಮತ ಎಣಿಕೆ ಮಾಡಲಾಗಿದ್ದು, ಅವರ ಪರವಾಗಿ 5,303 ಮತಗಳು ಚಲಾವಣೆಯಾಗಿವೆ.

ಅಧ್ಯಕ್ಷ ಮೊಹಮ್ಮದ್ ಮುಯಿಜು ನೇತೃತ್ವದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಐಷಾತ್ ಅಜೀಮಾ ಶಕೂರ್ ಅವರು 3301 ಮತಗಳ ಪಡೆದು ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ಮೂರನೇ ಸ್ಥಾನದಲ್ಲಿ ಡೆಮಾಕ್ರಾಟ್ಸ್ ಪಕ್ಷದ ಮೊಹಮ್ಮದ್ ಸೈಫ್ ಫಥಿಹ್ ಅವರಿದ್ದು, 1634 ಮತಗಳನ್ನು ಪಡೆದುಕೊಂಡಿದ್ದಾರೆ.

ಮಾಲೆ ಮೇಯರ್ ಉಪಚುನಾವಣೆಯಲ್ಲಿ ಕಡಿಮೆ ಮತದಾನವಾಗಿದೆ. ಚುನಾವಣಾ ಆಯೋಗದ ಪ್ರಕಾರ 54,680 ಅರ್ಹ ಮತದಾರರಲ್ಲಿ ಕೇವಲ 17,500 ಮತದಾರರು ಚುನಾವಣೆಯಲ್ಲಿ ಭಾಗವಹಿಸಿದ್ದಾರೆ. ಮೇಯರ್ ಚುನಾವಣೆಯ ಗೆಲುವು ಸಂಸತ್ತಿನಲ್ಲಿ ಬಹುಮತವನ್ನು ಹೊಂದಿರುವ ಎಂಡಿಪಿಯ ರಾಜಕೀಯ ಅದೃಷ್ಟವನ್ನು ಪುನರುಜ್ಜೀವನಗೊಳಿಸುವ ನಿರೀಕ್ಷೆಯಿದೆ.

ಈ ಸುದ್ದಿಯನ್ನೂ ಓದಿ: ನಮ್ಮನ್ನು ಹೆದರಿಸುವ ತಾಕತ್ತು ಯಾರಿಗೂ ಇಲ್ಲ; ಭಾರತಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷ ಪರೋಕ್ಷ ಟಾಂಗ್

Exit mobile version