Site icon Vistara News

ಶ್ರೀಲಂಕಾದ ರಾಷ್ಟ್ರಾಧ್ಯಕ್ಷನ ಬೆಡ್‌ ಮೇಲೆ WWE ಫೈಟ್‌

gotabaya

ಕೊಲಂಬೊ: ಶ್ರೀಲಂಕಾ ರಾಷ್ಟ್ರಾಧ್ಯಕ್ಷ ಗೊಟಬಯ ರಾಜಪಕ್ಸ ಅವರ ನಿವಾಸದಲ್ಲಿ ಅಲ್ಲಿನ ನಿವಾಸಿಗಳು ಅಧ್ವಾನ ಸೃಷ್ಟಿಸುತ್ತಿದ್ದಾರೆ. ಅವರ ಮನೆಯ ಐಷಾರಾಮಿ ಸವಲತ್ತುಗಳೆಲ್ಲವೂ ರೊಚ್ಚಿಗೆದ್ದಿರುವ ಪ್ರಜೆಗಳ ಕೈಯಲ್ಲಿ ನುಚ್ಚುನೂರಾಗುತ್ತಿವೆ.

ಅಂತೆಯೇ ಪ್ರತಿಭಟನಾಕಾರರು ಗೊಟಬಯ ಅವರ ಶಯನ ಗೃಹಕ್ಕೆ ನುಗ್ಗಿ ಅವರ ಬೆಡ್‌ ಮೇಲೆ ಕುಣಿದು ಕುಪ್ಪಳಿಸುತ್ತಿರುವ ವಿಡಿಯೊವೊಂದು ವೈರಲ್‌ ಆಗಿದೆ. ಅದಕ್ಕೆ ಯಾರೋ WWE ಸ್ಪರ್ಧೆಯ ಹಿನ್ನೆಲೆ ಧ್ವನಿಗಳನ್ನೂ ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ.

ವಿಡಿಯೊದಲ್ಲಿ ಏನಿದೆ?

ಪ್ರತಿಭಟನಾಕಾರರಲ್ಲಿ ಇಬ್ಬರು ಗೊಟಬಯ ಅವರ ಬೆಡ್‌ ಮೇಲೆ ಕುಸ್ತಿ ಮಾಡುತ್ತಿದ್ದರೆ, ಇನ್ನೊಬ್ಬ ವ್ಯಕ್ತಿ WWE ರೆಫರಿಗಳ ಮಾದರಿಯಲ್ಲಿ ಬೆಡ್‌ ಮೇಲೆ ಜೋರಾಗಿ ಬಡಿಯುತ್ತಿದ್ದಾರೆ. ಸುತ್ತುವರಿದ ಹಲವರು ಪ್ರತಿಭಟನಾಕಾರರು ಅದರ ವಿಡಿಯೊ ಮಾಡುತ್ತಿದ್ದಾರೆ.

ಅಧ್ಯಕ್ಷರ ಮನೆಯಲ್ಲಿ ಊಟ

ವಿಡಿಯೊವೊಂದರಲ್ಲಿ ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ ವ್ಯಕ್ತಿಯೊಬ್ಬರು ಅಲ್ಲಿನ ಹುಲ್ಲಿನ ಲಾನ್‌ ಮೇಲೆ ಇಟ್ಟಿರುವ ಟೇಬಲ್‌ನಲ್ಲಿ ಊಟ ಕೂಡ ಮಾಡಿದ್ದಾರೆ.

ಜಿಮ್‌ನಲ್ಲಿ ಕಸರತ್ತು

ಅಧ್ಯಕ್ಷರ ಮನೆಗೆ ನುಗ್ಗುವಾಗ ರೋಷಾವೇಷದಿಂದ ಇದ್ದವರು ಅಲ್ಲಿನ ಸೌಕರ್ಯಗಳನ್ನು ಕಂಡು ತಮ್ಮ ಉದ್ದೇಶವನ್ನೇ ಮರೆತಂತಿದ್ದರು. ಯಾಕೆಂದರೆ ನಿವಾಸದ ಟೆಂಪಲ್‌ ಟ್ರಿ ಎಂಬ ಪ್ರದೇಶದಲ್ಲಿರುವ ಜಿಮ್‌ಗೆ ನುಗ್ಗಿದ ಪ್ರತಿಭಟನಾಕಾರರು ಟ್ರೆಡ್‌ಮಿಲ್‌ನಲ್ಲಿ ಕಸರತ್ತು ಮಾಡಿದ್ದಾರೆ.

ಇದನ್ನೂ ಓದಿ: Lank on fire: ಶ್ರೀಲಂಕಾ ಅಧ್ಯಕ್ಷರ ಮನೆ ಈಗ ಪ್ರವಾಸಿ ತಾಣ, ಹೋರಾಟ ಸೇರಿಕೊಂಡ ಸಿಂಹಳಿ ಕ್ರಿಕೆಟಿಗರು

Exit mobile version