‘ಸೂರ್ಯ ಮುಳುಗದ ನಾಡು’ ಎಂಬ ಬಿರುದನ್ನು ಪಡೆದಿದ್ದ ಬ್ರಿಟನ್ ರಾಜಮನೆತನ ನೋವಿನಲ್ಲಿ ಮುಳುಗಿದೆ. ಬ್ರಿಟನ್ ರಾಜ ಮನೆತನದ ರಾಣಿಯಾಗಿ 7 ದಶಕಗಳ ಕಾಲ ಮೆರೆದಿದ್ದ ಎಲಿಜಬೆತ್-II (Queen Elizabeth Death) ನಿಧನರಾಗಿದ್ದಾರೆ. ಈ ನೋವಿನ ಸುದ್ದಿ ನಡುವೆ ಕ್ವೀನ್ ಎಲಿಜಬೆತ್-II ಬಗ್ಗೆ ಹಲವು ವಿಶೇಷ ವಿಚಾರಗಳು ಸದ್ದು ಮಾಡುತ್ತಿವೆ. ಈ ಪೈಕಿ ಅವರ ಕುರಿತಾಗಿ ಮೂಡಿಬಂದ ಸಿನಿಮಾಗಳು ಪ್ರಮುಖ.
ಕ್ವೀನ್ ಎಲಿಜಬೆತ್ ಕುರಿತಾಗಿ ಹಲವಾರು ಸಿನಿಮಾಗಳು ಬಂದಿವೆ. ಏಕೆಂದರೆ ಕ್ವೀನ್ ಎಲಿಜಬೆತ್ ಸಬ್ಜೆಕ್ಟ್ ಜಗತ್ತನ್ನೇ ಸೆಳೆಯುತ್ತದೆ. ಇದೇ ಕಾರಣಕ್ಕೆ ಎಲಿಜಬೆತ್-II ಕುರಿತು ಸಾಲು ಸಾಲು ಸಿನಿಮಾಗಳು ಬಂದು ಬೆಳ್ಳಿತೆರೆ ಮೇಲೆ ಅಬ್ಬರಿಸಿವೆ. ಆ ಪೈಕಿ ಹಾಲಿವುಡ್ನಲ್ಲೇ ಅತಿಹೆಚ್ಚಾಗಿ ಸಿನಿಮಾಗಳನ್ನು ತೆಗೆಯಲಾಗಿದೆ. ಪ್ರಮುಖ ಸಿನಿಮಾಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತಿದೆ ‘ವಿಸ್ತಾರ ನ್ಯೂಸ್’.
ಇದನ್ನೂ ಓದಿ: Queen Elizabeth’s Death | ಶ್ವಾನ ಪ್ರಿಯೆ ಕ್ವೀನ್ ಎಲಿಜಬೆತ್; ಹನಿಮೂನ್ಗೂ ಹೋಗಿತ್ತು ಒಂದು ನಾಯಿ!
ಯಾವೆಲ್ಲಾ ಸಿನಿಮಾ?
1951ರಲ್ಲಿ ರಿಲೀಸ್ ಆಗಿದ್ದ ‘ರಾಯಲ್ ಜರ್ನಿ’ ಹಾಲಿವುಡ್ನಲ್ಲಿ ಸದ್ದು ಮಾಡಿತ್ತು. 1953ರಲ್ಲಿ ‘ಎ ಕ್ವೀನ್ ಈಸ್ ಕ್ರೌನ್ಡ್’ ರಿಲೀಸ್. 1966ರಲ್ಲಿ ‘ದಿ ರಾಯಲ್ ಟೂರ್ ಆಫ್ ದಿ ಕೆರಿಬಿಯನ್’ ಚಿತ್ರ. 1969ರಲ್ಲಿ ‘ರಾಯಲ್ ಫ್ಯಾಮಿಲಿ’, 1976ರಲ್ಲಿ ‘ಎ ಕ್ವೀನ್ಸ್ ರ್‍ಯಾನ್ಸಮ್’, 1988ರಲ್ಲಿ ‘ದಿ ನೆಕೆಡ್ ಗನ್: ಫ್ರಮ್ ದಿ ಫೈಲ್ಸ್ ಆಫ್ ಪೊಲೀಸ್ ಗನ್’, 1992ರಲ್ಲಿ ‘ಎಲಿಜಬೆತ್ ಆರ್: ಎ ಇಯರ್ ಇನ್ ದಿ ಲೈಫ್ ಆಫ್ ಕ್ವೀನ್’ ರಿಲೀಸ್ ಆಗಿತ್ತು.
ಮತ್ತೊಂದೆಡೆ 1996ರಲ್ಲಿ ‘ವಿಲ್ಲಿ & ಡೈ ವಿಂಡ್ಜೋರ್ಸ್’ ರಿಲೀಸ್ ಆಗಿ ಸದ್ದು ಮಾಡಿತ್ತು. 2005ರಲ್ಲಿ ‘ಹರ್ ಮೆಜೆಸ್ಟಿ’, 2006ರಲ್ಲಿ ‘ದಿ ಕ್ವೀನ್’, 2015ರಲ್ಲಿ ‘ಎ ರಾಯಲ್ ನೈಟ್ ಔಟ್’, 2016ರಲ್ಲಿ ‘ಎಲಿಜಬೆತ್ @90: ಎ ಫ್ಯಾಮಿಲಿ ಟ್ರಿಬ್ಯೂಟ್’, 2018ರಲ್ಲಿ ಒಟ್ಟು 2 ಸಿನಿಮಾಗಳು ರಿಲೀಸ್ ಆಗಿದ್ದವು. ‘ದಿ ಕೊರೊನೇಷನ್’ ಹಾಗೂ ‘ದಿ ಕ್ವೀನ್ & ಐ’ ಸಿನಿ ಪ್ರಿಯರ ಗಮನ ಸೆಳೆದಿದ್ದವು. ಇನ್ನು 2019ರಲ್ಲಿ ‘ದಿ ಕ್ವೀನ್ಸ್ ಕಾರ್ಗಿ’ ಸೇರಿದಂತೆ ಇತ್ತೀಚೆಗೆ ಅಂದರೆ 2022ರಲ್ಲಿ ‘ಎಲಿಜಬೆತ್: ದಿ ಅನ್ ಸೀನ್ ಕ್ವೀನ್’ ಸಿನಿಮಾ ಕ್ವೀನ್ ಎಲಿಜಬೆತ್-II ಕುರಿತಾಗಿ ನಿರ್ಮಾಣವಾಗಿತ್ತು.
ಇದಿಷ್ಟೇ ಅಲ್ಲದೆ ಯುರೋಪಿಯನ್ ಖಂಡದ ಹಲವಾರು ಭಾಷೆಗಳು ಸೇರಿದಂತೆ ಜಗತ್ತಿನ ನಾನಾ ಅವತರಣಿಕೆಯಲ್ಲಿ ರಾಣಿ ಎಲಿಜಬೆಥ್-II ಕುರಿತಾದ ಚಿತ್ರಗಳು ಸಖತ್ ಸದ್ದು ಮಾಡಿವೆ. ಈ ಚಿತ್ರಗಳು ಪ್ರೇಕ್ಷಕರಿಗೆ ಇಷ್ಟವಾಗುವ ಜೊತೆಗೆ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಲಾಭ ಗಳಿಸಿದ್ದವು. ಆದರೆ 96 ವರ್ಷದ ರಾಣಿ ಎಲಿಜಬೆತ್-II ಈಗ ಇಹಲೋಕ ತ್ಯಜಿಸಿದ್ದು, ಜಗತ್ತಿನಾದ್ಯಂತ ಗಣ್ಯರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: Queen Elizabeth | ಬಂದಷ್ಟೇ ವೇಗವಾಗಿ ಖರ್ಚಾಗಿದ್ದ ರಾಣಿ ಎಲಿಜಬೆತ್ ಬಾರ್ಬಿ ಡಾಲ್!