Site icon Vistara News

Queen Elizabeth Death | ಒಟ್ಟಿಗೆ ಕಾಣಿಸಿಕೊಂಡ ವಿಲಿಯಂ-ಕೇಟ್, ಹ್ಯಾರಿ-ಮೇಘನ್ ಜೋಡಿ!

Royal Family

ಲಂಡನ್: ಎರಡನೇ ಕ್ವೀನ್ ಎಲಿಜಬೆತ್ ಸಾವು (Queen Elizabeth Death) ಬ್ರಿಟನ್ ರಾಜಮನೆತನದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಪ್ರಿನ್ಸ್ ಹ್ಯಾರಿ ಮತ್ತು ಪತ್ನಿ ಮೇಘನ್ ಅವರು ರಾಯಲ್‌ ಫ್ಯಾಮಿಲಿ ಜತೆ ಒಂದಾಗುವ ಸಾಧ್ಯತೆಗಳು ದಟ್ಟವಾಗಿವೆ. ಹಾಗೆಯೇ, ರಾಯಲ್ ಫ್ಯಾಮಿಲಿಯ ಇತರರ ನಡುವಿನ ಮನಸ್ತಾಪಗಳು ಕೊನೆಯಾಗಬಹುದು. ಸಂಬಂಧಗಳು ಹಳಸಿದ್ದರಿಂದ ಬಹಳಷ್ಟು ಜನರು ತಮ್ಮ ವಾಸ್ತವ್ಯವನ್ನು ಲಂಡನ್‌ನಿಂದ ಅಮೆರಿಕಕ್ಕೆ ಸ್ಥಳಾಂತರಿಸಿದ್ದರು. ಪ್ರಿನ್ಸ್ ವಿಲಿಯಂ-ಕೇಟ್ ಮತ್ತು ಪ್ರಿನ್ಸ್ ಹ್ಯಾರಿ-ಮೇಘನ್ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದೆ.

2020ರ ಬಳಿಕ ಇದೇ ಮೊದಲ ಬಾರಿಗೆ ಪ್ರಿನ್ಸ್ ಹ್ಯಾರಿಯ ಸಹೋದರ ವಿಲಿಯಮ್ ಮತ್ತು ಪತ್ನಿ ಕೇಟ್ ಅವರು ವಿಂಡ್ಸರ್ ಕ್ಯಾಸಲ್‌ನಲ್ಲಿ ಶನಿವಾರ ಒಟ್ಟಿಗೆ ಕಾಣಿಸಿಕೊಂಡರು. ಎಲ್ಲರೂ ಶೋಕಾಚರಣೆಯ ಕಪ್ಪು ವಸ್ತ್ರವನ್ನು ಧರಿಸಿದ್ದರು. ರಾಣಿಯ ಸ್ಮರಣಾರ್ಥ ಜನರು ನದಿಯ ದಡದಲ್ಲಿ ಬಿಟ್ಟು ಹೋಗುತ್ತಿರುವ ಹೂಗಳನ್ನು ಅವರು ಒಟ್ಟಿಗೆ ನೋಡಿದರು. ಈ ಮಧ್ಯೆ ತಮ್ಮ ನಡುವಿನ ಮನಸ್ತಾಪಗಳನ್ನು ದೂರ ಇಟ್ಟಿದ್ದರು ಎನ್ನಬಹುದು.

ಬ್ರಿಟನ್ ರಾಜಮನೆತನದ ಉತ್ತರಾಧಿಕಾರಿಯಾಗಲಿರುವ ವಿಲಿಯಮ್ ಅವರು ತಮ್ಮ ಕಿರಿಯ ಸಹೋದರ ಹ್ಯಾರಿ ಜತೆ ಕಾಣಿಸಿಕೊಂಡರು. ರಾಯಲ್ ಫ್ಯಾಮಿಲಿಯಿಂದ ದೂರ ಸರಿದಿರುವ ಪ್ರಿನ್ಸ್ ಹ್ಯಾರಿ, ಮೊದಲಿನಿಂದಲೂ ರಾಜಮನೆತನದ ಕಾರ್ಯವೈಖರಿಗಳನ್ನು ಪ್ರಶ್ನಿಸಿಕೊಂಡು ಬಂದಿದ್ದಾರೆ.

ಶನಿವಾರಕ್ಕಿಂತ ಎರಡು ದಿನ ಮುಂಚೆ, ಪರಿಸ್ಥಿತಿ ಹೀಗಿರಲಿಲ್ಲ. 37 ವರ್ಷದ ಹ್ಯಾರಿ ಏಕಾಂಗಿಯಾಗಿಯೇ ಕ್ವೀನ್ ಎಲಿಜಬೆತ್ ನಿಧನರಾದ ಬಾಲ್ಮೋರ್ ಎಸ್ಟೇಟ್‌ಗೆ ಆಗಮಿಸಿದ್ದರು. ವಿಲಿಯಮ್ ಮತ್ತು ರಾಯಲ್ ಫ್ಯಾಮಿಲಿಯ ಸದಸ್ಯರೊಂದಿಗೆ ಆಗಮಿಸಿದ್ದರು. ಆದರೆ, ಅವರ ಜತೆ ಪತ್ನಿ ಕೇಟ್ ಇರಲಿಲ್ಲ. ಸಹೋದರರು ಪ್ರತ್ಯೇಕವಾಗಿ ಬಂದಿರುವುದು ಇಬ್ಬರೂ ದೂರಾಗುತ್ತಿರುವುದುನ್ನು ತೋರಿಸುತ್ತಿದೆ ಎಂದು ಹಲವರು ಹೇಳಿಕೊಂಡಿದ್ದರು. ಆದರೆ, ಈಗ ಎಲ್ಲ ಬದಲಾಗಿದೆ. ಕ್ವೀನ್ ಎಲಿಜಬೆತ್ ಅವರು ಅಂತಿಮ ಕ್ರಿಯಾವಿಧಿ ಕಾರ್ಯಕ್ರಮಗಳು ಮುಂದುವರಿದಂತೆ, ರಾಯಲ್ ಫ್ಯಾಮಿಲಿಯ ಎಲ್ಲ ಸದಸ್ಯರು ಒಂದಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | Queen Elizabeth | ಪ್ರಗತಿಶೀಲ, ಪ್ರಯೋಗಶೀಲ ವ್ಯಕ್ತಿತ್ವದ ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್

Exit mobile version