ಲಂಡನ್: ಕೆಲವರು ಸುಮ್ಮನೆ ಕುಳಿತಲ್ಲೇ ನಿದ್ದೆಗೆ ಜಾರುತ್ತಾರೆ. ಇನ್ನೂ ಕೆಲವರು ನಿತ್ಯ 8-10 ತಾಸು ಗಡದ್ದಾಗಿ ನಿದ್ದೆ ಮಾಡುತ್ತಾರೆ. ಅವರನ್ನೇ ನಾವು ಕುಂಭಕರ್ಣನ ನಿದ್ದೆ ಮಾಡುವವರು ಕಾಲೆಳೆಯುತ್ತೇವೆ. ಆದರೆ, ಬ್ರಿಟನ್‌ನಲ್ಲಿ ಮಹಿಳೆಯೊಬ್ಬರು ಒಂದು ದಿನದ 24 ಗಂಟೆಗಳಲ್ಲಿ 22 ತಾಸು (Real Life Sleeping Beauty) ಮಲಗಿಕೊಂಡೇ ಇರುತ್ತಾರೆ. ನಿದ್ದೆ ಮಾಡುವುದೇ ಇವರ ಕೆಲಸವಾಗಿದ್ದು, ನಿದ್ದೆಯಿಂದ ಬಿಡುವಿದ್ದಾಗ ಮಾತ್ರ ಉಳಿದ ಚಟುವಟಿಕೆ ಕೈಗೊಳ್ಳುತ್ತಾರೆ.
ಹೌದು, ಜೋಆನಾ ಕಾಕ್ಸ್ (Joanna Cox) ಎಂಬ ಮಹಿಳೆಯು ಈಡಿಯೋಪ್ಯಾಥಿಕ್ ಹೈಪರ್‌ಸೋಮ್ನಿಯಾ ಎಂಬ ವಿರಳ ಕಾಯಿಲೆಯಿಂದ ಬಳಲುತ್ತಿದ್ದು, ಇವರಿಗೆ ಎಷ್ಟು ಮಲಗಿದರೂ ಸಾಕಾಗುವುದಿಲ್ಲ. ಈ ಕಾಯಿಲೆಯಿಂದ ಬಳಲುವವರಿಗೆ ನಿದ್ದೆ ಮಾಡುವುದೇ ಕೆಲಸವಾಗಿರುತ್ತದೆ. ಕಣ್ಣು ಮುಚ್ಚಿದರೆ ಸಾಕು, ಗಂಟೆಗಳ ಲೆಕ್ಕದಲ್ಲಿ ನಿದ್ದೆಯೇ ಮಾಡುತ್ತಾರೆ. ಕಾಕ್ಸ್‌ಗೀಗ ಇದೇ ಕಾಯಿಲೆ ಆವರಿಸಿದೆ.
ಇದನ್ನೂ ಓದಿ: Naga Shaurya: ಗೆಳತಿಗೆ ಕಪಾಳಮೋಕ್ಷ ಮಾಡಿದ ಯುವಕನಿಗೆ ಸಖತ್ ಕ್ಲಾಸ್ ತೆಗೆದುಕೊಂಡ ನಟ ನಾಗ ಶೌರ್ಯ: ವಿಡಿಯೊ ವೈರಲ್!
“ನಿದ್ದೆ ಮಾಡುವ ಕಾಯಿಲೆಯು ನನ್ನ ಜೀವನವನ್ನು ಹಾಳು ಮಾಡುತ್ತಿದೆ. ದಿನಕ್ಕೆ 22 ಗಂಟೆ ಮಲಗಿಕೊಂಡೇ ಇರುತ್ತೇನೆ. ಎಚ್ಚರ ಆದಾಗ ಒಂದಷ್ಟು ತಿನ್ನುತ್ತೇನೆ ಹಾಗೂ ಮತ್ತೆ ಮಲಗುತ್ತೇನೆ. ಒಮ್ಮೆ ನಾನು ನಾಲ್ಕು ದಿನ ಸತತವಾಗಿ ನಿದ್ದೆ ಮಾಡಿದ್ದೆ. ನಾನು ಕಾರು ಚಲಾಯಿಸಲು, ಹೊರಗೆ ಹೋಗಲು, ಪ್ರವಾಸಕ್ಕೆ ತೆರಳಲು ಆಗುತ್ತಿಲ್ಲ. ನಿದ್ದೆಯೇ ನನ್ನ ದಿನಚರಿಯಾಗಿದೆ. ವೈದ್ಯರ ಬಳಿ ತೆರಳಿದರೂ ಪ್ರಯೋಜನವಾಗಿಲ್ಲ. ನಾನೊಂದು ರೀತಿ ರಿಯಲ್ ಲೈಫ್ ಸ್ಲೀಪಿಂಗ್ ಬ್ಯೂಟಿ ಆಗಿದ್ದೇನೆ” ಎಂದು ಕಾಕ್ಸ್ ಅಳಲು ತೋಡಿಕೊಂಡಿದ್ದಾರೆ.