Real Life Sleeping Beauty: ಈ ಮಹಿಳೆಗೆ ಬೇಕು ದಿನಕ್ಕೆ 22 ಗಂಟೆ ನಿದ್ದೆ, ಮಲಗೋದೆ ಇವಳ ಬ್ಯುಸಿನೆಸ್ಸು! - Vistara News

ವಿದೇಶ

Real Life Sleeping Beauty: ಈ ಮಹಿಳೆಗೆ ಬೇಕು ದಿನಕ್ಕೆ 22 ಗಂಟೆ ನಿದ್ದೆ, ಮಲಗೋದೆ ಇವಳ ಬ್ಯುಸಿನೆಸ್ಸು!

Real Life Sleeping Beauty: ಬ್ರಿಟನ್‌ನ ಜೋಆನಾ ಕಾಕ್ಸ್‌ಗೆ ನಿದ್ದೆ ಮಾಡುವುದೇ ಕೆಲಸ. ಅವರು ಎಚ್ಚರಗೊಂಡರೆ ಸ್ವಲ್ಪ ಊಟ ಮಾಡುತ್ತಾರೆ. ಬಳಿಕ ಮತ್ತೆ ಮಲಗುತ್ತಾರೆ. ಇದಕ್ಕೆ ಕಾರಣ ಎಂದರೆ, ಅವರು ಯಾವಾಗಲೂ ನಿದ್ದೆ ಮಾಡುವ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ.

VISTARANEWS.COM


on

Real-life Sleeping Beauty sleeps for 22 hours a day, she once slept for 4 days straight
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಂಡನ್‌: ಕೆಲವರು ಸುಮ್ಮನೆ ಕುಳಿತಲ್ಲೇ ನಿದ್ದೆಗೆ ಜಾರುತ್ತಾರೆ. ಇನ್ನೂ ಕೆಲವರು ನಿತ್ಯ 8-10 ತಾಸು ಗಡದ್ದಾಗಿ ನಿದ್ದೆ ಮಾಡುತ್ತಾರೆ. ಅವರನ್ನೇ ನಾವು ಕುಂಭಕರ್ಣನ ನಿದ್ದೆ ಮಾಡುವವರು ಕಾಲೆಳೆಯುತ್ತೇವೆ. ಆದರೆ, ಬ್ರಿಟನ್‌ನಲ್ಲಿ ಮಹಿಳೆಯೊಬ್ಬರು ಒಂದು ದಿನದ 24 ಗಂಟೆಗಳಲ್ಲಿ 22 ತಾಸು (Real Life Sleeping Beauty) ಮಲಗಿಕೊಂಡೇ ಇರುತ್ತಾರೆ. ನಿದ್ದೆ ಮಾಡುವುದೇ ಇವರ ಕೆಲಸವಾಗಿದ್ದು, ನಿದ್ದೆಯಿಂದ ಬಿಡುವಿದ್ದಾಗ ಮಾತ್ರ ಉಳಿದ ಚಟುವಟಿಕೆ ಕೈಗೊಳ್ಳುತ್ತಾರೆ.

ಹೌದು, ಜೋಆನಾ ಕಾಕ್ಸ್‌ (Joanna Cox) ಎಂಬ ಮಹಿಳೆಯು ಈಡಿಯೋಪ್ಯಾಥಿಕ್‌ ಹೈಪರ್‌ಸೋಮ್ನಿಯಾ ಎಂಬ ವಿರಳ ಕಾಯಿಲೆಯಿಂದ ಬಳಲುತ್ತಿದ್ದು, ಇವರಿಗೆ ಎಷ್ಟು ಮಲಗಿದರೂ ಸಾಕಾಗುವುದಿಲ್ಲ. ಈ ಕಾಯಿಲೆಯಿಂದ ಬಳಲುವವರಿಗೆ ನಿದ್ದೆ ಮಾಡುವುದೇ ಕೆಲಸವಾಗಿರುತ್ತದೆ. ಕಣ್ಣು ಮುಚ್ಚಿದರೆ ಸಾಕು, ಗಂಟೆಗಳ ಲೆಕ್ಕದಲ್ಲಿ ನಿದ್ದೆಯೇ ಮಾಡುತ್ತಾರೆ. ಕಾಕ್ಸ್‌ಗೀಗ ಇದೇ ಕಾಯಿಲೆ ಆವರಿಸಿದೆ.

ಇದನ್ನೂ ಓದಿ: Naga Shaurya: ಗೆಳತಿಗೆ ಕಪಾಳಮೋಕ್ಷ ಮಾಡಿದ ಯುವಕನಿಗೆ ಸಖತ್‌ ಕ್ಲಾಸ್‌ ತೆಗೆದುಕೊಂಡ ನಟ ನಾಗ ಶೌರ್ಯ: ವಿಡಿಯೊ ವೈರಲ್‌!

“ನಿದ್ದೆ ಮಾಡುವ ಕಾಯಿಲೆಯು ನನ್ನ ಜೀವನವನ್ನು ಹಾಳು ಮಾಡುತ್ತಿದೆ. ದಿನಕ್ಕೆ 22 ಗಂಟೆ ಮಲಗಿಕೊಂಡೇ ಇರುತ್ತೇನೆ. ಎಚ್ಚರ ಆದಾಗ ಒಂದಷ್ಟು ತಿನ್ನುತ್ತೇನೆ ಹಾಗೂ ಮತ್ತೆ ಮಲಗುತ್ತೇನೆ. ಒಮ್ಮೆ ನಾನು ನಾಲ್ಕು ದಿನ ಸತತವಾಗಿ ನಿದ್ದೆ ಮಾಡಿದ್ದೆ. ನಾನು ಕಾರು ಚಲಾಯಿಸಲು, ಹೊರಗೆ ಹೋಗಲು, ಪ್ರವಾಸಕ್ಕೆ ತೆರಳಲು ಆಗುತ್ತಿಲ್ಲ. ನಿದ್ದೆಯೇ ನನ್ನ ದಿನಚರಿಯಾಗಿದೆ. ವೈದ್ಯರ ಬಳಿ ತೆರಳಿದರೂ ಪ್ರಯೋಜನವಾಗಿಲ್ಲ. ನಾನೊಂದು ರೀತಿ ರಿಯಲ್‌ ಲೈಫ್‌ ಸ್ಲೀಪಿಂಗ್‌ ಬ್ಯೂಟಿ ಆಗಿದ್ದೇನೆ” ಎಂದು ಕಾಕ್ಸ್‌ ಅಳಲು ತೋಡಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

China Road: ಕಾಶ್ಮೀರ ಗಡಿಯಲ್ಲಿ ರಸ್ತೆ ನಿರ್ಮಿಸಿ ಚೀನಾ ಮತ್ತೆ ಉದ್ಧಟತನ; ಇಲ್ಲಿವೆ ಸ್ಯಾಟಲೈಟ್‌ ಚಿತ್ರಗಳು

China Road: ವಿಶ್ವದಲ್ಲೇ ಅತಿ ಎತ್ತರದ ಯುದ್ಧಭೂಮಿ ಎನಿಸಿರುವ ಸಿಯಾಚಿನ್‌ ಹಿಮಪ್ರದೇಶದ ಬಳಿಯೇ ಚೀನಾ ರಸ್ತೆ ನಿರ್ಮಿಸಿರುವ ಸ್ಯಾಟಲೈಟ್‌ ಫೋಟೊಗಳು ಲಭ್ಯವಾಗಿವೆ. ಕಳೆದ ವರ್ಷದ ಜೂನ್‌ ಹಾಗೂ ಆಗಸ್ಟ್‌ ಅವಧಿಯಲ್ಲಿ ಚೀನಾ ರಸ್ತೆ ನಿರ್ಮಾಣ ಆರಂಭಿಸಿದ್ದು, ಇದರ ಚಿತ್ರಗಳನ್ನು ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ ಬಿಡುಗಡೆ ಮಾಡಿದೆ. ಚೀನಾ ರಸ್ತೆ ನಿರ್ಮಿಸಿದ ಚಿತ್ರಗಳು ಸ್ಪಷ್ಟವಾಗಿ ಕಾಣುತ್ತಿವೆ.

VISTARANEWS.COM


on

China Road
Koo

ನವದೆಹಲಿ: ಕಾಶ್ಮೀರದ ಲಡಾಕ್‌ ಬಳಿಯ ವಾಸ್ತವ ನಿಯಂತ್ರಣ ರೇಖೆ (LoC) ಬಳಿ ಹೆಚ್ಚುವರಿಯಾಗಿ ಸೈನಿಕರನ್ನು ನಿಯೋಜಿಸಿ ಬಿಕ್ಕಟ್ಟು ಸೃಷ್ಟಿಸಿದ್ದ ಚೀನಾ ಈಗ ಮತ್ತೊಂದು ಉದ್ಧಟತನ ತೋರಿದೆ. ಹೌದು, ಪಾಕ್‌ ಆಕ್ರಮಿತ ಕಾಶ್ಮೀರದ (Pak Occupied Kashmir) ಬಳಿ ನೂತನವಾಗಿ ರಸ್ತೆ ನಿರ್ಮಿಸುವ (China Road) ಮೂಲಕ ಚೀನಾ ಗಡಿ ನಿಯಮಗಳನ್ನು ಗಾಳಿಗೆ ತೂರಿದೆ. ಇದು ಭಾರತದ ಜತೆ ಮತ್ತೊಂದು ಬಿಕ್ಕಟ್ಟು ಸೃಷ್ಟಿಸುವ ಹುನ್ನಾರ ಎಂದು ಹೇಳಲಾಗುತ್ತಿದೆ. ಕಳೆದ ವರ್ಷದ ಜೂನ್‌ ಹಾಗೂ ಆಗಸ್ಟ್‌ ಅವಧಿಯಲ್ಲಿ ಚೀನಾ ರಸ್ತೆ ನಿರ್ಮಾಣ ಆರಂಭಿಸಿದ್ದು, ಇದರ ಚಿತ್ರಗಳನ್ನು ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ ಬಿಡುಗಡೆ ಮಾಡಿದೆ. ಚೀನಾ ರಸ್ತೆ ನಿರ್ಮಿಸಿದ ಚಿತ್ರಗಳು ಸ್ಪಷ್ಟವಾಗಿ ಕಾಣುತ್ತಿವೆ.

ವಿಶ್ವದಲ್ಲೇ ಅತಿ ಎತ್ತರದ ಯುದ್ಧಭೂಮಿ ಎನಿಸಿರುವ ಸಿಯಾಚಿನ್‌ ಹಿಮಪ್ರದೇಶದ ಬಳಿಯೇ ಚೀನಾ ರಸ್ತೆ ನಿರ್ಮಿಸಿರುವ ಸ್ಯಾಟಲೈಟ್‌ ಫೋಟೊಗಳು ಲಭ್ಯವಾಗಿವೆ. 1963ರಲ್ಲಿ ಚೀನಾಗೆ ಬಿಟ್ಟುಕೊಟ್ಟಿರುವ, ಪಾಕ್‌ ಆಕ್ರಮಿತ ಕಾಶ್ಮೀರದ ಭಾಗವಾಗಿದ್ದ ಶಾಕ್ಸ್‌ಗಾಮ್‌ ಕಣಿವೆಯಲ್ಲಿ ಚೀನಾ ರಸ್ತೆ ನಿರ್ಮಿಸಿದೆ. ಇದು ಭಾರತದ ಇಂದಿರಾ ಕೋಲ್ ಪ್ರದೇಶದಿಂದ ಕೇವಲ 50 ಕಿಲೋ ಮೀಟರ್‌ ದೂರದಲ್ಲಿರುವುದರಿಂದ ಆತಂಕ ಹೆಚ್ಚಾಗಿದೆ.

ಇಂದಿರಾ ಕೋಲ್‌ ಪ್ರದೇಶಕ್ಕೆ ಕಳೆದ ಮಾರ್ಚ್‌ನಿಂದ ಇದುವರೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಎರಡು ಬಾರಿ ಭೇಟಿ ನೀಡಿದ್ದರು. ಇದರಿಂದ ಕೇವಲ 50 ಕಿಲೋಮೀಟರ್‌ ದೂರದಲ್ಲಿ ಚೀನಾ ರಸ್ತೆ ನಿರ್ಮಿಸಿದ ಕಾರಣ ಮುಂದಿನ ದಿನಗಳಲ್ಲಿ ಭಾರತದ ಜತೆಗಿನ ಬಿಕ್ಕಟ್ಟನ್ನು ಉಲ್ಬಣಿಸುವ ಸಾಧ್ಯತೆ ಇದೆ. ಇದೇ ಸಂಚಿನಿಂದಾಗಿಯೇ ಚೀನಾ ರಸ್ತೆ ನಿರ್ಮಾಣ ಮಾಡಿದೆ ಎಂದು ಹೇಳಲಾಗುತ್ತಿದೆ.

ಭಾರತಕ್ಕೆ ಏಕೆ ಆತಂಕಕಾರಿ?

ಸಿಯಾಚಿನ್‌ ಹಿಮಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಿಸಿರುವುದು ಭಾರತಕ್ಕೆ ಹಲವು ರೀತಿಯಲ್ಲಿ ಆತಂಕ ಎನಿಸಿದೆ. ಗಡಿಯಲ್ಲಿ ರಸ್ತೆ ನಿರ್ಮಿಸಿದರೆ ಚೀನಾ ಸುಲಭವಾಗಿ ಮಿಲಿಟರಿ ಸಲಕರಣೆಗಳನ್ನು, ಸೈನಿಕರನ್ನು ಗಡಿಗೆ ನಿಯೋಜಿಸಬಹುದು. ಇದಾದ ಬಳಿಕ ಭಾರತದ ಜತೆ ತಗಾದೆ ತೆಗೆಯಲು ಚೀನಾಗೆ ಅನುಕೂಲವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಆದರೆ, ಇದಕ್ಕೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: Indian Economy : ಭಾರತದ ಆರ್ಥಿಕತೆ ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂದ ಐಎಮ್​ಎಫ್​

Continue Reading

ದೇಶ

Narendra Modi: ಪ್ರಧಾನಿ ಮೋದಿಗೆ ಜಿ 7 ಶೃಂಗಸಭೆಯ ಆಹ್ವಾನ ನೀಡಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ

Narendra Modi: ಜೂನ್‌ನಲ್ಲಿ ಇಟಲಿಯ ಪುಗ್ಲಿಯಾದಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯ ಔಟ್ರೀಚ್ ಅಧಿವೇಶನಗಳಲ್ಲಿ ಭಾಗವಹಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಗುರುವಾರ ಆಹ್ವಾನ ನೀಡಿದ್ದಾರೆ. ಇಟಲಿಯ ವಿಮೋಚನಾ ದಿನದ 79ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ದೂರವಾಣಿ ಸಂಭಾಷಣೆಯ ವೇಳೆ ಮೋದಿ ಈ ಆಹ್ವಾನ ಸ್ವೀಕರಿಸಿದ್ದಾರೆ. ಮಾತುಕತೆ ವೇಳೆ ಪ್ರಧಾನಮಂತ್ರಿ ಮೋದಿ ಅವರು ಮೆಲೋನಿ ಮತ್ತು ಇಟಲಿಯ ಜನತೆಗೆ ಶುಭಾಶಯಗಳನ್ನು ತಿಳಿಸಿದರು.

VISTARANEWS.COM


on

Narendra Modi
Koo

ನವದೆಹಲಿ: ಜೂನ್‌ನಲ್ಲಿ ಇಟಲಿಯ ಪುಗ್ಲಿಯಾದಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯ ಔಟ್ರೀಚ್ ಅಧಿವೇಶನ (G7 Summit Outreach Sessions)ಗಳಲ್ಲಿ ಭಾಗವಹಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಗುರುವಾರ ಆಹ್ವಾನ ನೀಡಿದ್ದಾರೆ.

ಇಟಲಿಯ ವಿಮೋಚನಾ ದಿನದ 79ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ದೂರವಾಣಿ ಸಂಭಾಷಣೆಯ ವೇಳೆ ಮೋದಿ ಈ ಆಹ್ವಾನ ಸ್ವೀಕರಿಸಿದರು. ಮಾತುಕತೆ ವೇಳೆ ಪ್ರಧಾನಮಂತ್ರಿ ಮೋದಿ ಅವರು ಮೆಲೋನಿ ಮತ್ತು ಇಟಲಿಯ ಜನತೆಗೆ ಶುಭಾಶಯಗಳನ್ನು ತಿಳಿಸಿದರು. ಜತೆಗೆ ಜಿ 7 ಆಹ್ವಾನವನ್ನು ನೀಡಿದ್ದಕ್ಕಾಗಿ ಅವರು ಮೆಲೋನಿಗೆ ಕೃತಜ್ಞತೆ ಸಲ್ಲಿಸಿದರು.

“ಇಟಲಿ ಇಂದು ತನ್ನ ವಿಮೋಚನಾ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಮಾತನಾಡಿದೆ. ಜತೆಗೆ ಶುಭಾಶಯಗಳನ್ನು ಕೋರಿದ್ದೇನೆ. ಜೂನ್‌ನಲ್ಲಿ ನಡೆಯಲಿರುವ ಜಿ 7 ಶೃಂಗಸಭೆಗೆ ಆಹ್ವಾನಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳು. ಜಿ 7ನಲ್ಲಿ G20India ವಿಚಾರದ ಬಗ್ಗೆ ಚರ್ಚಿಸಲಾಯಿತು. ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ವಿಸ್ತರಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ” ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮೋದಿ ಬರೆದುಕೊಂಡಿದ್ದಾರೆ.

ಭಾರತದ ಜಿ 20 ಅಧ್ಯಕ್ಷತೆಯ ಅವಧಿಯಲ್ಲಿ ಸಾಧಿಸಿದ ಗಮನಾರ್ಹ ಫಲಿತಾಂಶಗಳನ್ನು, ವಿಶೇಷವಾಗಿ ಇಟಲಿಯ ಅಧ್ಯಕ್ಷತೆಯಲ್ಲಿ ಜರಗಲಿರುವ ಮುಂಬರುವ ಜಿ 7 ಶೃಂಗಸಭೆಯ ಬಗ್ಗೆ ಇಬ್ಬರು ನಾಯಕರು ಚರ್ಚಿಸಿದರು. ಇಬ್ಬರೂ ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೆಚ್ಚಿಸುವ ಬದ್ಧತೆಯನ್ನು ಪುನರುಚ್ಚರಿಸಿದರು ಮತ್ತು ಪರಸ್ಪರ ಹಿತಾಸಕ್ತಿಯ ವಿವಿಧ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆ ದೃಷ್ಟಿಕೋನಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು ಎಂದು ಮೂಲಗಳು ತಿಳಿಸಿವೆ.

ಗ್ರೂಪ್ ಆಫ್ ಸೆವೆನ್ (ಜಿ 7) ಏಳು ಪ್ರಮುಖ ದೇಶಗಳನ್ನು ಒಳಗೊಂಡಿರುವ ಅಂತರ್ ಸರ್ಕಾರಿ ಸಂಸ್ಥೆಯಾಗಿದೆ. ಆರ್ಥಿಕ ನೀತಿ, ಜಾಗತಿಕ ಭದ್ರತೆ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಮತ್ತು ಸಮನ್ವಯಗೊಳಿಸಲು ಈ ದೇಶಗಳು ವಾರ್ಷಿಕವಾಗಿ ಸಭೆ ಸೇರುತ್ತವೆ. ಕಳೆದ ವರ್ಷ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಜಪಾನ್ ಅಧ್ಯಕ್ಷತರಯಲ್ಲಿ ನಡೆದ ಜಿ 7 ಶೃಂಗಸಭೆಯಲ್ಲಿ ಭಾಗವಹಿಸಲು ಪಿಎಂ ಮೋದಿ ಜಪಾನ್‌ನ ಹಿರೋಷಿಮಾಗೆ ಭೇಟಿ ನೀಡಿದ್ದರು. ಭೇಟಿಯ ಸಮಯದಲ್ಲಿ ಕೆಲವು ನಾಯಕರೊಂದಿಗೆ ಮೋದಿ ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದರು.

ಇದನ್ನೂ ಓದಿ: Giorgia Meloni: ಯುರೋಪ್‌ನಲ್ಲಿ ಇಸ್ಲಾಮ್‌ಗೆ ಜಾಗವಿಲ್ಲ: ಇಟಲಿ ಪ್ರಧಾನಿ ಬೋಲ್ಡ್‌ ಮಾತು

ಮೋದಿಯನ್ನು ಹಾಡಿ ಹೊಗಳಿದ್ದ ಮೆಲೋನಿ

ರೈಸಿನಾ ಶೃಂಗಸಭೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿದ್ದ ಜಾರ್ಜಿಯಾ ಮೆಲೋನಿ, “ನರೇಂದ್ರ ಮೋದಿ ಅವರು ವಿಶ್ವದ ನಾಯಕರಲ್ಲಿಯೇ ಹೆಚ್ಚು ಪ್ರೀತಿಗೆ ಪಾತ್ರರಾಗಿದ್ದಾರೆ. ಅವರು ಧೀಮಂತ ನಾಯಕರು ಎಂಬುದು ಸಾಬೀತಾಗಿದೆ. ಇದಕ್ಕಾಗಿ ಮೋದಿ ಅವರಿಗೆ ಅಭಿನಂದನೆಗಳು” ಎಂದಿದ್ದರು. “ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಾಗೂ ಇಟಲಿ ಸಂಬಂಧ ಮತ್ತಷ್ಟು ವೃದ್ಧಿಯಾಗುತ್ತಿದೆ. ಉಭಯ ದೇಶಗಳ ಸಂಬಂಧವನ್ನು ವ್ಯೂಹಾತ್ಮಕ ಸಂಬಂಧವಾಗಿ ಮಾರ್ಪಡಿಸಲು ನಾವು ಉತ್ಸುಕರಾಗಿದ್ದೇವೆ. ಇದರಿಂದ ಎರಡೂ ದೇಶಗಳ ಸಂಬಂಧ ಇನ್ನಷ್ಟು ವೃದ್ಧಿಯಾಗಲಿದೆ” ಎಂದು ತಿಳಿಸಿದ್ದರು.

Continue Reading

ಪ್ರಮುಖ ಸುದ್ದಿ

khalistan Movement : ಲಂಡನ್​ ಭಾರತ ಹೈಕಮಿಷನ್​ ಮೇಲೆ ದಾಳಿ ಮಾಡಿದ್ದ ಖಲಿಸ್ತಾನಿ ಉಗ್ರ ಎನ್​ಐಎ ವಶಕ್ಕೆ

khalistan movement: ಕಳೆದ ವರ್ಷ ಮಾರ್ಚ್ 19 ಮತ್ತು ಮಾರ್ಚ್ 22 ರಂದು ಲಂಡನ್​ನಲ್ಲಿ ನಡೆದ ಘಟನೆಗಳು ಭಾರತೀಯ ಹೈ ಕಮಿಷನ್​​ ಮತ್ತು ಅದರ ಅಧಿಕಾರಿಗಳ ಮೇಲೆ ದಾಳಿಗಳನ್ನು ನಡೆಸುವ ದೊಡ್ಡ ಪಿತೂರಿಯ ಭಾಗವಾಗಿದೆ ಎಂದು ಈ ಪ್ರಕರಣದಲ್ಲಿ ಇಲ್ಲಿಯವರೆಗಿನ ತನಿಖೆಯಿಂದ ತಿಳಿದುಬಂದಿದೆ” ಎಂದು ಎನ್ಐಎ ಹೇಳಿಕೆಯಲ್ಲಿ ತಿಳಿಸಿದೆ.

VISTARANEWS.COM


on

khalistan movement
Koo

ನವದೆಹಲಿ: ಕಳೆದ ವರ್ಷ ಲಂಡನ್​ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ನಡೆದ ದಾಳಿ ಮತ್ತು ಅದರ ನಂತರದ ಪ್ರತಿಭಟನೆಗಳ ರೂವಾರಿಯಾಗರುವ ಖಲಿಸ್ತಾನ್​ ಉಗ್ರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರುವಾರ ಬಂಧಿಸಿದೆ. ಯುನೈಟೆಡ್ ಕಿಂಗ್​ಡಮ್​​ನ ಹೆನ್ಸ್ಲೋ ನಿವಾಸಿ ಇಂದರ್ಪಾಲ್ ಸಿಂಗ್ ಗಾಬಾ ಬಂಧಿತ ಖಲಿಸ್ತಾನಿ. ಆತ ಮಾರ್ಚ್ 22, 2023 ರ ಪ್ರತಿಭಟನೆಯ ಸಮಯದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.

ಆ ವರ್ಷದ ಮಾರ್ಚ್ 18 ರಂದು ಖಲಿಸ್ತಾನಿ ಪರ ಪ್ರತ್ಯೇಕತಾವಾದಿ ಅಮೃರ್​ಪಾಲ್​ ಸಿಂಗ್ ವಿರುದ್ಧ ಪಂಜಾಬ್ ಪೊಲೀಸರು ಕೈಗೊಂಡ ಕ್ರಮಕ್ಕೆ ಪ್ರತೀಕಾರವಾಗಿ ಹೈಕಮಿಷನ್ ಮೇಲಿನ ದಾಳಿ ನಡೆಸಿತ್ತು ಎಂದು ಎನ್​ಐಎ ಹೇಳಿದೆ.

ಕಳೆದ ವರ್ಷ ಮಾರ್ಚ್ 19 ಮತ್ತು ಮಾರ್ಚ್ 22 ರಂದು ಲಂಡನ್​ನಲ್ಲಿ ನಡೆದ ಘಟನೆಗಳು ಭಾರತೀಯ ಹೈ ಕಮಿಷನ್​​ ಮತ್ತು ಅದರ ಅಧಿಕಾರಿಗಳ ಮೇಲೆ ದಾಳಿಗಳನ್ನು ನಡೆಸುವ ದೊಡ್ಡ ಪಿತೂರಿಯ ಭಾಗವಾಗಿದೆ ಎಂದು ಈ ಪ್ರಕರಣದಲ್ಲಿ ಇಲ್ಲಿಯವರೆಗಿನ ತನಿಖೆಯಿಂದ ತಿಳಿದುಬಂದಿದೆ” ಎಂದು ಎನ್ಐಎ ಹೇಳಿಕೆಯಲ್ಲಿ ತಿಳಿಸಿದೆ.

ಅಮೃತ್​ಪಾಲ್​ ಸಿಂಗ್ ಮೇಲಿನ ದಬ್ಬಾಳಿಕೆಯನ್ನು ವಿರೋಧಿಸಿ ಖಲಿಸ್ತಾನ್ ಬೆಂಬಲಿಗರು ಲಂಡನ್​​ನಲ್ಲಿರುವ ಭಾರತೀಯ ಹೈಕಮಿಷನ್ ಮುಂದೆ ಪ್ರತಿಭಟನೆ ನಡೆಸಿದ್ದರು. ಅವರು ಕಟ್ಟಡದ ಮೊದಲ ಮಹಡಿಯ ಬಾಲ್ಕನಿಯಿಂದ ಭಾರತೀಯ ಧ್ವಜವನ್ನು ಕೆಳಗಿಳಿಸಿದ್ದರು. ಹೀಗಾಗಿ ಭಾರತೀಯ ಅಧಿಕಾರಿಗಳು ಇನ್ನೂ ದೊಡ್ಡ ಧ್ವಜವನ್ನು ಹಾಕಿದ್ದರು.

ಇದನ್ನೂ ಓದಿ: Salman Khan : ಸಲ್ಮಾನ್​ ಮನೆ ಬಳಿ ಗುಂಡಿನ ದಾಳಿ; ಪಂಜಾಬ್​​ನಲ್ಲಿ ಗನ್​ ಕೊಟ್ಟವರಿಬ್ಬರ ಬಂಧನ

ಭಾರತೀಯ ಧ್ವಜವನ್ನು ಅಪವಿತ್ರಗೊಳಿಸುವುದರ ವಿರುದ್ಧ ಯುಕೆಯಲ್ಲಿರುವ ಭಾರತೀಯ ಸಮುದಾಯವು ಭಾರತೀಯ ಹೈಕಮಿಷನ್ ಮುಂದೆ ದೊಡ್ಡ ಸಭೆ ಆಯೋಜಿಸಿತ್ತು. ಈ ಘಟನೆಗೆ ಕಾರಣರಾದವರ ವಿರುದ್ಧ ಲಂಡನ್ ಮೇಯರ್ ಮತ್ತು ಬ್ರಿಟಿಷ್ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿತ್ತು.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೆಹಲಿಯಲ್ಲಿರುವ ಯುಕೆಯ ಹಿರಿಯ ರಾಜತಾಂತ್ರಿಕರನ್ನು ಕರೆಸಿತ್ತು. ಹೈಕಮಿಷನ್​ನಲ್ಲಿರುವ “ಭದ್ರತೆಯ ಕಾಳಜಿ ಬಗ್ಗೆ ವಿವರಣೆ ಕೋರಿತ್ತು. ಭಾರತೀಯ ರಾಜತಾಂತ್ರಿಕರು ಮತ್ತು ಸಿಬ್ಬಂದಿಯ ಬಗ್ಗೆ ಯುಕೆ ಸರ್ಕಾರದ “ಉದಾಸೀನತೆ” ಸ್ವೀಕಾರಾರ್ಹವಲ್ಲ ಎಂದು ಅದು ಹೇಳಿತ್ತು.

Continue Reading

Latest

Deadly Murder: ಬರ್ಗರ್‌ ತಿಂದನೆಂದು ಸ್ನೇಹಿತನನ್ನೇ ಗುಂಡಿಟ್ಟು ಕೊಂದ!

Deadly murder: ಪಾಕಿಸ್ತಾನದ ಕರಾಚಿಯಲ್ಲಿ ಈ ಭೀಕರ ಘಟನೆ ನಡೆದಿದ್ದು, ಸೆಶನ್ಸ್‌ ಕೋರ್ಟ್‌ ಜಡ್ಜ್‌ (Sessions court judge) ನ ಮಗ ಅಲಿ ಕೀರಿಯೋ ಕೊಲೆಯಾದ ದುರ್ದೈವಿ. ಕರಾಚಿಯ ಡಿಫೆನ್ಸ್‌ 5 ನೇ ಏರಿಯಾ(Defence Phase 5 area) ದಲ್ಲಿ ಫೆಬ್ರುವರಿ 8 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಡ್ಯಾನಿಯಲ್‌ ಎಂಬಾತ ಈ ದುಷ್ಕೃತ್ಯ ಎಸಗಿದ ಪಾಪಿ.

VISTARANEWS.COM


on

By

deadly murder
Koo

ಕರಾಚಿ: ಕೆಲವೊಮ್ಮೆ ಕ್ಷುಲ್ಲಕ ಕಾರಣಕ್ಕೆ ಅದೆಂಥಾ ಅನಾಹುತ ನಡೆಯುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಇಲ್ಲೊಬ್ಬ ಪ್ರೀತಿಯಿಂದ ತನ್ನ ಪ್ರೇಯಸಿಗಾಗಿ ಇಟ್ಟಿದ್ದ ಬರ್ಗರ್‌ (Burger)ನ್ನು ತಿಂದನೆಂದು ಸ್ನೇಹಿತನನ್ನೇ ಬರ್ಬರವಾಗಿ ಕೊಲೆ (Deadly Murder) ಮಾಡಿದ್ದಾನೆ. ಪಾಕಿಸ್ತಾನದ ಕರಾಚಿಯಲ್ಲಿ ಈ ಭೀಕರ ಘಟನೆ ನಡೆದಿದ್ದು, ಸೆಶನ್ಸ್‌ ಕೋರ್ಟ್‌ ಜಡ್ಜ್‌ (Sessions court judge) ನ ಮಗ ಅಲಿ ಕೀರಿಯೋ ಕೊಲೆಯಾದ ದುರ್ದೈವಿ. ಕರಾಚಿಯ ಡಿಫೆನ್ಸ್‌ 5 ನೇ ಏರಿಯಾ (Defence Phase 5 area) ದಲ್ಲಿ ಫೆಬ್ರುವರಿ 8 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಡ್ಯಾನಿಯಲ್‌ ಎಂಬಾತ ಈ ದುಷ್ಕೃತ್ಯ ಎಸಗಿದ ಪಾಪಿ.

ಘಟನೆ ಕುರಿತು ಎಆರ್‌ವೈ ನ್ಯೂಸ್‌ ವರದಿ ಮಾಡಿದ್ದು, ಹಿರಿಯ ಪೊಲೀಸ್‌ ಅಧಿಕಾರಿ ನಜೀರ್‌ ಅಹ್ಮದ್‌ ಪುತ್ರ ಡ್ಯಾನಿಯಲ್‌ನ ತನ್ನ ಪ್ರೇಯಸಿ ಶಾಜಿಯಾಳನ್ನು ತನ್ನ ಮನೆಗೆ ಆಹ್ವಾನಿಸಿದ್ದ. ಈ ವೇಳೆ ಆತನ ಮನೆಯಲ್ಲಿ ಸ್ನೇಹಿತ ಅಲಿ ಕೀರಿಯೋ ಮತ್ತು ಸಹೋದರ ಅಹ್ಮೇರ್‌ ಕೂಡ ಇದ್ರು. ಪ್ರೇಯಸಿ ಜೊತೆ ಸುಮಧುರ ಕ್ಷಣಗಳನ್ನು ಕಳೆಯಬೇಕೆಂದು ಪ್ಲ್ಯಾನ್‌ ಮಾಡಿಕೊಂಡಿದ್ದ ಡ್ಯಾನಿಯಲ್‌ ಆಕೆಗಾಗಿ ಇಷ್ಟವಾದ ಬರ್ಗರನ್ನೂ ಆರ್ಡರ್‌ ಮಾಡಿದ್ದ. ಆದ್ರೆ ಕೀರಿಯೋ ಒಂದು ಬರ್ಗರ್‌ ಒಂದು ಭಾಗವನ್ನು ತಿಂದಿದ್ದ. ಇದನ್ನು ಕಂಡ ಡ್ಯಾನಿಯಲ್‌ ಕೀರಿಯೋ ಮೇಲೆ ಕೆಂಡವಾಗಿದ್ದ.

ಕೀರಿಯೋ ಮೇಲೆ ತೀವ್ರ ಕೋಪಗೊಂಡ ಡ್ಯಾನಿಯಲ್‌ ಆತನ ವಿರುದ್ಧ ಕೂಗಾಡಲು ಶುರು ಮಾಡಿದ್ದ. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಮಾರಾಮಾರಿ ನಡೆದಿತ್ತು. ಜಗಳ ತಾರಕಕ್ಕೇರುತ್ತಿದ್ದಂತೆ ಡ್ಯಾನಿಯಲ್‌ ಅಲ್ಲೇ ಇದ್ದ ಗಾರ್ಡ್‌ನ ಬಂದೂಕು ಕಿತ್ತು ಕೀರಿಯೋ ಮೇಲೆ ಏಕಾಏಕಿ ಗುಂಡು ಹಾರಿದ್ದಾನೆ. ಗಂಭೀರವಾಗಿ ಗಾಯಗೊಂಡ ಕೀರಿಯೋ ಆಸ್ಪತ್ರೆಗೆ ತಲುಪುವ ಮುನ್ನವೇ ಕೊನೆಯುಸಿರೆಳೆದಿದ್ದಾನೆ ಎಂದು ವರದಿಯಾಗಿದೆ.

ಇದನ್ನೂ ಓದಿ: Fire Tragedy: ಹೋಟೆಲ್‌ನಲ್ಲಿ ಭೀಕರ ಅಗ್ನಿ ದುರಂತ; 6 ಮಂದಿ ಸಾವು

ಇನ್ನು ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ತನಿಖಾಧಿಕಾರಿ ತಮ್ಮ ತನಿಖಾ ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿದ್ದು, ಡ್ಯಾನಿಯಲ್‌ ನಜೀರ್‌ನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಇಂಥ ಘೋರ ಕೃತ್ಯ ಎಸಗಿರೋ ಡ್ಯಾನಿಯಲ್‌ಗೆಎ ಕೋರ್ಟ್‌ ಯಾವ ಶಿಕ್ಷೆ ವಿಧಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ವರ್ಷ ಕರಾಚಿಯಲ್ಲಿ ಬರೋಬ್ಬರಿ 56 ದರೋಡೆ ಪ್ರಕರಣಗಳು ದಾಖಲಾಗಿದ್ದು, ಸುಮಾರು 200ಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ವರ್ಷ 25 ಪ್ರಕರಣಗಳಲ್ಲಿ 110ಕ್ಕೂ ಅಧಿಕ ಜನ ಬಲಿಯಾದ್ದರು ಎಂದು ವರದಿಯಾಗಿದೆ.

Continue Reading
Advertisement
China Road
ದೇಶ8 mins ago

China Road: ಕಾಶ್ಮೀರ ಗಡಿಯಲ್ಲಿ ರಸ್ತೆ ನಿರ್ಮಿಸಿ ಚೀನಾ ಮತ್ತೆ ಉದ್ಧಟತನ; ಇಲ್ಲಿವೆ ಸ್ಯಾಟಲೈಟ್‌ ಚಿತ್ರಗಳು

Lok sabha election 2024
ದೇಶ36 mins ago

Lok Sabha Election 2024: 12 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾನ ಶುರು

Crime Scene
ಕ್ರೈಂ38 mins ago

UDR Case: ಚುನಾವಣೆ ಗಲಾಟೆ, ವಾಟರ್ ಮ್ಯಾನ್ ಅನುಮಾನಾಸ್ಪದ ಸಾವು

lok sabha election 2024 sudha murthy voting
Live News1 hour ago

Lok Sabha Election 2024: ಲೋಕಸಭೆ ಚುನಾವಣೆ 2024 ಮತದಾನ Live News

ಅಂಕಣ2 hours ago

ರಾಜಮಾರ್ಗ ಅಂಕಣ: ವಾಲ್ಮೀಕಿ ರಾಮಾಯಣ vs ಹನುಮಾನ್ ರಾಮಾಯಣ

Eating Bread
ಆಹಾರ/ಅಡುಗೆ2 hours ago

Eating Bread: ನಿತ್ಯವೂ ಬ್ರೆಡ್‌ ತಿನ್ನುತ್ತೀರಾ? ಹಾಗಿದ್ದರೆ ಖರೀದಿಸುವ ಮುನ್ನ ಇವಿಷ್ಟು ತಿಳಿದಿರಲಿ

Lok Sabha Election
ಪ್ರಮುಖ ಸುದ್ದಿ2 hours ago

Lok Sabha Election 2024: ಇಂದು ರಾಜ್ಯದ 14 ಲೋಕಸಭೆ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

Karnataka Weather Forecast
ಮಳೆ2 hours ago

Karnataka Weather : ಮಳೆಯಾಟ ಬಂದ್‌; 12 ಜಿಲ್ಲೆಗಳಿಗೆ ಹೀಟ್‌ ವೇವ್‌ ಅಟ್ಯಾಕ್‌, ಯೆಲ್ಲೋ ಅಲರ್ಟ್‌

drinking ors
ಆರೋಗ್ಯ3 hours ago

ORS: ಒಆರ್‌ಎಸ್‌ ಜೀವಜಲ; ಯಾರು, ಎಷ್ಟು ಪ್ರಮಾಣದಲ್ಲಿ ಸೇವಿಸಬಹುದು?

Dina bhavishya
ಭವಿಷ್ಯ4 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ4 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ16 hours ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ16 hours ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ20 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 202421 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು4 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ4 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು4 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

ಟ್ರೆಂಡಿಂಗ್‌