Site icon Vistara News

Rishi Sunak: ಬ್ರಿಟನ್‌ಗೆ ವೀಸಾ ಬಯಸಿದವರಿಗೆ ವೇತನ ಮಿತಿ ಹೆಚ್ಚಿಸಿ ಶಾಕ್‌ ನೀಡಿದ ಸುನಕ್‌, ಎಷ್ಟಿರಬೇಕು?

UK Election

ನವದೆಹಲಿ: ದೇಶದೊಳಗೆ ವಲಸೆ (Immigration) ಪ್ರಮಾಣವನ್ನು ಕಡಿತಗೊಳಿಸುವುದಕ್ಕಾಗಿ, ಬ್ರಿಟನ್‌ನ (United Kingdom) ರಿಷಿ ಸುನಕ್‌ (Rishi Sunak) ಸರ್ಕಾರ ವೀಸಾ (UK visa) ಆಕಾಂಕ್ಷಿತರ ಆದಾಯದ ಕನಿಷ್ಠ ಮಿತಿಯನ್ನು ಶೇ.55ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಸಿದೆ. ಅಂದರೆ ಇನ್ನು ಮುಂದೆ, ನಿಮ್ಮ ಕುಟುಂಬ ಸದಸ್ಯರ ವೀಸಾವನ್ನು ಪ್ರಾಯೋಜಿಸಲು ನೀವು 29,000 ಪೌಂಡ್‌ (30,25,825 ರೂ.) ಸಂಬಳ ಹೊಂದಿರಬೇಕಾಗುತ್ತದೆ. ಈ ಮೊದಲು ಅದು 18,600 ಪೌಂಡ್‌ (19,40,527 ರೂ.) ಇತ್ತು.

ಈ ಬದಲಾವಣೆ ತಕ್ಷಣವೇ ಜಾರಿಗೆ ಬರಲಿದೆ. ಮುಂದಿನ ವರ್ಷದ ಆರಂಭದಲ್ಲಿ ಇದು ಇನ್ನಷ್ಟು ಹೆಚ್ಚಲಿದೆ. 38,700 ಪೌಂಡ್‌ಗೆ (40,37,549 ರೂ.) ಏರಬಹುದು ಎಂಬ ಅಂದಾಜು. “ವಲಸೆ ವ್ಯವಸ್ಥೆಗೆ ತನ್ನ ಪ್ರಮುಖ ಪ್ಯಾಕೇಜ್ ಸುಧಾರಣೆಗಳನ್ನು ಘೋಷಿಸಿದ ವಾರಗಳಲ್ಲಿ ಇಂದಿನ ಬದಲಾವಣೆಯು ಬಂದಿದೆ. ಮೇ 2023ರಲ್ಲಿ ವಿದ್ಯಾರ್ಥಿ ವೀಸಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು” ಎಂದು ಯುಕೆ ಸರ್ಕಾರ ಹೇಳಿದೆ.

ಈ ವರ್ಷ ಯುಕೆಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳ ಮುನ್ನವೇ ವಲಸೆಯು ಪ್ರಮುಖ ಚುನಾವಣಾ ವಿಷಯಗಳಲ್ಲಿ ಒಂದಾಗಿದೆ. ಸುನಕ್ ಅವರ ಪಕ್ಷವಾದ ಕನ್ಸರ್ವೇಟಿವ್‌ಗಳು ಭಾರೀ ಸೋಲಿನತ್ತ ಸಾಗುತ್ತಿದ್ದಾರೆ ಎಂದು ಸಮೀಕ್ಷೆಗಳು ಸೂಚಿಸುತ್ತವೆ. ಹೊಸ ನಿಯಮಗಳು, ಸುನಕ್ ಅವರ “ಅಸಮರ್ಥನೀಯ ವಲಸೆಯ ಮಟ್ಟವನ್ನು ಕಡಿತಗೊಳಿಸುವುದು ಮತ್ತು ಇಲ್ಲಿಗೆ ಬರುವವರು ತೆರಿಗೆದಾರರಿಗೆ ಹೊರೆಯಾಗದಂತೆ ನೋಡಿಕೊಳ್ಳುವ” ಯೋಜನೆಯ ಭಾಗವಾಗಿದೆ.

UKಯ ಆಂತರಿಕ ಸಚಿವ ಜೇಮ್ಸ್ ಕ್ಲೆವರ್ಲಿ, ಇತ್ತೀಚಿನ ನೀತಿ ಬದಲಾವಣೆಯ ಹಿಂದಿನ ತಾರ್ಕಿಕತೆಯನ್ನು ವಿವರಿಸಿದ್ದು, “ಸಾಮೂಹಿಕ ವಲಸೆಯಿಂದ ಉಂಟಾಗುವ ಒತ್ತಡವನ್ನು ತಗ್ಗಿಸುವುದು ಮುಖ್ಯವಾಗಿದೆ” ಎಂದು ಹೇಳಿದ್ದಾರೆ. “ಸಾಮೂಹಿಕ ವಲಸೆಯ ಅಂಚನ್ನು ನಾವು ತಲುಪಿದ್ದೇವೆ. ಬ್ರಿಟಿಷ್ ಜನರಿಗೆ ಸ್ವೀಕಾರಾರ್ಹವಾದ ಮಟ್ಟಕ್ಕೆ ಸಂಖ್ಯೆಯನ್ನು ಕಡಿತಗೊಳಿಸಬೇಕಿದೆ” ಎಂದಿದ್ದಾರೆ.

ಬ್ರಿಟನ್‌ನಲ್ಲಿ ಇರಬಯಸುವ ಹೊರಗಿನ ದೇಶಗಳ ಕುಟುಂಬಗಳು ಸ್ವಾವಲಂಬಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಈ ಹೊಸ ಕ್ರಮ ಪ್ರಯತ್ನಿಸುತ್ತದೆ. ಉಳಿತಾಯ ಮತ್ತು ಉದ್ಯೋಗದಿಂದ ಬರುವ ಆದಾಯ ಸೇರಿದಂತೆ ಇದು ವಿವಿಧ ವಿಧಾನಗಳಿಗೆ ಅವಕಾಶ ನೀಡುತ್ತದೆ.

ಆದಾಯದ ಮಿತಿಗಳಲ್ಲಿನ ಬದಲಾವಣೆಗಳ ಜೊತೆಗೆ, UK ಸರ್ಕಾರವು ವಿದ್ಯಾರ್ಥಿ ವೀಸಾಗಳ ಮೇಲೆ ಕಟ್ಟುನಿಟ್ಟಾದ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಜೊತೆಗೆ ರಾಷ್ಟ್ರೀಯ ಆರೋಗ್ಯ ಸೇವೆ (NHS) ಅನ್ನು ಹೊಂದುವ ವಿದೇಶಿ ಪ್ರಜೆಗಳಿಗೆ ಆರೋಗ್ಯದ ಹೆಚ್ಚುವರಿ ಶುಲ್ಕದಲ್ಲಿ ಗಣನೀಯ ಪ್ರಮಾಣದ, ಅಂದರೆ ಶೇ.66 ಹೆಚ್ಚಳ ಮಾಡಿದೆ. ಪ್ರಸ್ತುತ ವಲಸೆ ಅಂಕಿಅಂಶಗಳು 7,45,000ರಷ್ಟಿದ್ದು, UK ಸರ್ಕಾರ ಅದನ್ನು 3,00,000ಕ್ಕೆ ಇಳಿಸುವ ಗುರಿ ಹೊಂದಿದೆ.

ಇದನ್ನೂ ಓದಿ: Sudha Murty: ಮಾತಾಡೋರು ಮಾತಾಡ್ಲಿ; ಅಳಿಯ ರಿಷಿ ಸುನಕ್‌ಗೆ ಸುಧಾಮೂರ್ತಿ ಹೀಗೆ ಹೇಳಿದ್ದೇಕೆ?

Exit mobile version