Site icon Vistara News

Sex Change Ban: ಲಿಂಗ-ಪರಿವರ್ತನೆ ಸಂಪೂರ್ಣ ಬ್ಯಾನ್! ಹೊಸ ಕಾಯಿದೆ ಜಾರಿ

Sex Change Ban

ನವದೆಹಲಿ: ರಷ್ಯಾ ಸರ್ಕಾರವು (Russia) ಲಿಂಗ-ಪರಿವರ್ತನೆಯನ್ನು ನಿಷೇಧಿಸಿದೆ(Sex Change Ban). ಈ ಕುರಿತು ವಿಧೇಯಕವನ್ನು ರಷ್ಯಾ ಸಂಸತ್ತಿನ ಎರಡೂ ಮನೆಯಲ್ಲಿ ಮಂಡಿಸಲಾಗಿದ್ದು, ಒಪ್ಪಿಗೆ ಪಡೆದುಕೊಳ್ಳಲಾಗಿದೆ. ಅಲ್ಲದೇ ಈ ವಿಧೇಯಕಕ್ಕೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Russian President Vladimir Putin) ಅವರೂ ತಮ್ಮ ಅಂಕಿತ ಹಾಕಿದ್ದಾರೆ. ವ್ಯಕ್ತಿಯ ಲಿಂಗವನ್ನು ಬದಲಿಸುವ ಯಾವುದೇ ವೈದ್ಯಕೀಯ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ರಷ್ಯಾದಲ್ಲಿ ನಿಷೇಧ ಮಾಡಲಾಗಿದೆ(LGBTQ Community).

ಈ ವಿಧೇಯಕಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಸೋಮವಾರ ತಮ್ಮ ಅಂಕಿತವನ್ನು ಹಾಕಿದ್ದಾರೆ. ರಷ್ಯಾದಲ್ಲಿ ಈಗಾಗಲೇ ಎಲ್‌ಜಿಪಿಟಿಕ್ಯೂ ಸಮುದಾಯವು ತೊಂದರೆಯನ್ನು ಎದುರಿಸುತ್ತಿದ್ದು, ಈಗ ಲಿಂಗ ಬದಲಾವಣೆ ಕಾನೂನು ಜಾರಿ ಮಾಡಿದ್ದರಿಂದ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.

ಸಂಸತ್ತಿನ ಎರಡೂ ಸದನಗಳಿಂದ ಸರ್ವಾನುಮತದಿಂದ ಅಂಗೀಕರಿಸಲಾಗಿರುವ ವಿಧೇಯಕವು ಯಾವುದೇ ವ್ಯಕ್ತಿಯ ಲಿಂಗವನ್ನು ಬದಲಾಯಿಸುವ ಗುರಿಯನ್ನು ಹೊಂದಿರುವ ವೈದ್ಯಕೀಯ ಮಧ್ಯಸ್ಥಿಕೆಗಳನ್ನು ನಿಷೇಧಿಸುತ್ತದೆ. ಜತೆಗೆ ಅಧಿಕೃತ ದಾಖಲೆಗಳು ಮತ್ತು ಸಾರ್ವಜನಿಕ ದಾಖಲೆಗಳಲ್ಲಿ ಒಬ್ಬರ ಲಿಂಗವನ್ನು ಬದಲಾಯಿಸುವುದನ್ನು ನಿರ್ಬಂಧಿಸಲಾಗಿದೆ. ಜನ್ಮಜಾತ ವೈಪರೀತ್ಯಗಳಿಗೆ ಚಿಕಿತ್ಸೆ ನೀಡಲು ವೈದ್ಯಕೀಯ ಮಧ್ಯಸ್ಥಿಕೆಗೆ ಮಾತ್ರ ವಿನಾಯ್ತಿ ನೀಡಲಾಗಿದೆ.

ಲಿಂಗ ಬದಲಿಸಿಕೊಂಡ ಆಗುವ ವಿವಾಹಗಳನ್ನೂ ಈ ಕಾನೂನು ರದ್ದು ಮಾಡುತ್ತದೆ. ಹಾಗೆಯೇ, ಈ ಸಮುದಾಯದ ಜನರು ಮಕ್ಕಳನ್ನು ದತ್ತು ಪಡೆದುಕೊಂಡು ಪೋಷಕರಾಗುವುದನ್ನು ತಡೆಯುತ್ತದೆ. ರಷ್ಯಾ ಜಾರಿಗೆ ತಂದಿರುವ ಈ ಕಾಯಿದೆ ಸಂಪೂರ್ಣವಾಗಿ ಎಲ್‌ಜಿಬಿಟಿಕ್ಯೂ ಸಮುದಾಯದ ಹಿತಾಸಕ್ತಿಗಳ ವಿರುದ್ಧವಾಗಿದೆ.

ಈ ಸುದ್ದಿಯನ್ನೂ ಓದಿ: ಅವಳಲ್ಲ… ಅವನು..! ಲಿಂಗ ಪರಿವರ್ತನೆಗೆ ಮುಂದಾದ ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿಯ ಪುತ್ರಿ!

ಪಾಶ್ಚಿಮಾತ್ಯ ಕುಟುಂಬ ವಿರೋಧಿ ಸಿದ್ಧಾಂತದಿಂದ ರಷ್ಯಾದ ಸಾಂಪ್ರದಾಯಿಕ ಮೌಲ್ಯಗಳ ರಕ್ಷಣೆಗಾಗಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ರಷ್ಯಾದ ಕೆಲವರು ಲಿಂಗ ಪರಿವರ್ತನೆಯು ಶುದ್ಧ ಪೈಶಾಚಿಕ ಕೃತ್ಯವಾಗಿದೆ ಎಂದು ಬಣ್ಣಿಸಿದ್ದಾರೆ. ರಷ್ಯಾ ತನ್ನ ಕೌಟುಂಬಿಕ ಮೌಲ್ಯಗಳನ್ನು ಉಳಿಸುವುದಕ್ಕಾಗಿ ಈ ರೀತಿಯ ದಮನಕಾರಿ ಕಾಯ್ದೆಯನ್ನು ಜಾರಿಗೆ ತಂದಿರುವುದನ್ನು ಹಲವು ದೇಶಗಳು ಟೀಕೆ ಮಾಡಿವೆ. ಎಲ್‌ಜಿಬಿಟಿಕ್ಯೂ ಸಮುದಾಯದ ವಿರುದ್ಧ ಪುಟಿನ್ ಅವರು ಹತ್ತು ವರ್ಷಗಳ ಹಿಂದಿನಿಂದಲೇ ಯುದ್ಧ ಸಾರಿದ್ದಾರೆ. ಸಾಂಪ್ರದಾಯಿಕ ಕುಟುಂಬದ ಮೌಲ್ಯಗಳ ಉಳಿವಿಗೆ ಇದು ಅಗತ್ಯ ಎಂದು ಅವರು ಭಾವಿಸಿದ್ದಾರೆ.

ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version