Site icon Vistara News

Mikhail Gorbachev | ಆಧುನಿಕ ರಷ್ಯದ ನಿರ್ಮಾತೃ ಮಿಖಾಯಿಲ್‌ ಗೊರ್ಬಚೆವ್ ನಿಧನ

Mikhail Gorbachev

ಮಾಸ್ಕೋ: ಆಧುನಿಕ ರಷ್ಯದ ರೂವಾರಿ, ದೇಶದ ಆರ್ಥಿಕ ಮುನ್ನಡೆಯ ಸ್ಫೂರ್ತಿಶಕ್ತಿಯಾಗಿದ್ದ ಮಾಜಿ ಅಧ್ಯಕ್ಷ ಮಿಖಾಯಿಲ್‌ ಗೊರ್ಬಚೆವ್ ಅವರು ತೀರಿಕೊಂಡಿದ್ದಾರೆ.

ಮಿಖಾಯಿಲ್‌ ಗೊರ್ಬಚೆವ್ ಅವರಿಗೆ 91 ವರ್ಷ ವಯಸ್ಸಾಗಿತ್ತು. ಮಾಸ್ಕೋದ ಆಸ್ಪತ್ರೆಯಲ್ಲಿ ಸುದೀರ್ಘಕಾಲದ ಗಂಭೀರ ಅನಾರೋಗ್ಯದಿಂದ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.

1985- 1991ರ ನಡುವೆ ಅಧಿಕಾರದಲ್ಲಿದ್ದ ಗೊರ್ಬಚೆವ್, 20ನೇ ಶತಮಾನದ ಪ್ರಭಾವಿ ಜಾಗತಿಕ ಮಹಾ ನಾಯಕರಲ್ಲಿ ಒಬ್ಬರೆನಿಸಿದ್ದಾರೆ. ಸೋವಿಯತ್‌ ರಷ್ಯಾ ಒಕ್ಕೂಟ ಪತನಗೊಂಡು, ಹಲವಾರು ಸ್ವಾಯತ್ತ ದೇಶಗಳು ರೂಪುಗೊಳ್ಳಲು ಅವರು ಕಾರಣರಾಗಿದ್ದರು. ಅಮೆರಿಕ ಜೊತೆಗಿನ ದಶಕಗಳ ಶೀತಲ ಸಮರಕ್ಕೆ ಅಂತ್ಯ ಹಾಡಿದ್ದು, ಗ್ಲಾಸನೋಸ್ತ್-‌ ಪೆರೆಸ್ತ್ರೋಯ್ಕಾ ಹೆಸರಿನ ನೂತನ ಆರ್ಥಿಕ ನೀತಿಗಳ ಆಗಮನ- ಮುಂತಾದ ಕ್ರಾಂತಿಕಾರಿ ಘಟನೆಗಳ ರೂವಾರಿ ಎನಿಸಿದ್ದಾರೆ. ಅವರಿಗೆ 1990ರ ನೊಬೆಲ್‌ ಶಾಂತಿ ಪುರಸ್ಕಾರ ಸಹ ಸಂದಿದೆ.

ಇತ್ತೀಚೆಗೆ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರಿಗೆ ಅಪ್ರಿಯವೆನಿಸುವ ರೀತಿಯಲ್ಲಿ ಅವರು ಮಾತನಾಡುತ್ತಿದ್ದರೂ, ಗೊರ್ಬಚೆವ್ ನಿಧನಕ್ಕೆ ಪುಟಿನ್‌ ಸಂತಾಪ ವ್ಯಕ್ತಪಡಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಫ್ಯಾನ್ಸ್‌ ಅಧ್ಯಕ್ಷ ಇಮಾನ್ಯುಯೆಲ್‌ ಮ್ಯಾಕ್ರಾನ್‌, ವಿಶ್ವಸಂಸ್ಥೆ ಕಾರ್ಯದರ್ಶಿ ಗುಟೆರ್ರಸ್‌, ಬ್ರಿಟನ್‌ ಅಧ್ಯಕ್ಷ ಬೋರಿಸ್‌ ಜಾನ್ಸನ್‌ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | ಹೆಚ್ಚೆಂದರೆ 3 ವರ್ಷ ಬದುಕಲಿದ್ದಾರೆ ರಷ್ಯಾ ಅಧ್ಯಕ್ಷ ಪುಟಿನ್‌, ದೃಷ್ಟಿಯೂ ಹೋಗಿದೆ: ಗುಪ್ತಚರ ದಳದ ವರದಿ

Exit mobile version