Site icon Vistara News

ಬೈಡೆನ್ ಉಕ್ರೇನ್ ಭೇಟಿ ಎಫೆಕ್ಟ್! ಅಮೆರಿಕ ಜತೆ ಪರಮಾಣು ಒಪ್ಪಂದ ಮಾತುಕತೆ ಇಲ್ಲ ಎಂದ ರಷ್ಯಾ ಅಧ್ಯಕ್ಷ ಪುಟಿನ್

Russia suspends participation nuclear treaty with U.S

ಮಾಸ್ಕೋ, ರಷ್ಯಾ: ಉಭಯ ರಾಷ್ಟ್ರಗಳ ನಡುವಿನ ಪರಮಾಣು ಶಸ್ತ್ರಾಸ್ತ್ರಗಳನ್ನು ಸೀಮಿತಗೊಳಿಸುವ ಅಮೆರಿಕದ (America) ಪರಮಾಣು ಒಪ್ಪಂದ ಸ್ಟಾರ್ಟ್‌ನ(START) ಕೊನೆಯ ಸಭೆಯಲ್ಲಿ ರಷ್ಯಾ ಭಾಗವಹಿಸುವುದಿಲ್ಲ ಎಂದು ರಷ್ಯಾ (Russia) ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರು ಘೋಷಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಅವರು ಯುದ್ಧನಿರತ ಉಕ್ರೇನ್‌ಗೆ ಭೇಟಿ ನೀಡಿರುವುದರಿಂದ, ರಷ್ಯಾ ಅಧ್ಯಕ್ಷ ಪುಟಿನ್ ತೀವ್ರ ಅಸಮಾಧಾನಗೊಂಡಿದ್ದು, ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ರಷ್ಯಾ ಒಪ್ಪಂದಿಂದ ಹಿಂದೆ ಸರಿಯುತ್ತಿಲ್ಲ. ಆದರೆ, ಸಭೆಯಲ್ಲಿ ಭಾಗವಹಿಸದ್ದರಿಂದ ಅಮೆರಿಕ ಮತ್ತು ರಷ್ಯಾ ನಡುವಿನ ಶಸ್ತ್ರಾಸ್ತ್ರ ನಿಯಂತ್ರಣದ ಕೊನೆಯ ಪ್ರಯತ್ನವನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ ಎಂದು ಪುಟಿನ್ ಹೇಳಿದ್ದಾರೆಂದು ರಾಯಿಟರ್ಸ್ ವರದಿ ಉಲ್ಲೇಖಿಸಿ ಮಾಧ್ಯಮಗಳು ಸುದ್ದಿ ಮಾಡಿವೆ. ಅಮೆರಿಕ ಮತ್ತು ರಷ್ಯಾ ಬಳಿ ಜಗತ್ತಿನ ಶೇ.90ರಷ್ಟು ಪರಮಾಣು ಸಿಡಿತಲೆಗಳಿವೆ. ಈ ಅಸ್ತ್ರಗಳನ್ನು ಬಳಸಿದರೆ ಇಡೀ ಭೂಮಿಯನ್ನು ಹಲವು ಬಾರಿ ನಾಶ ಮಾಡಬಹುದು!

ಇದನ್ನೂ ಓದಿ: Joe Biden Visits Kyiv: ಸಮರಪೀಡಿತ ಉಕ್ರೇನ್‌ಗೆ ಜೋ ಬೈಡೆನ್‌ ಅಚ್ಚರಿಯ ಭೇಟಿ, ಹೆಚ್ಚಿನ ಶಸ್ತ್ರಾಸ್ತ್ರ ನೆರವಿನ ಭರವಸೆ

ರಷ್ಯಾವು ಅಮೆರಿಕದೊಂದಿಗಿನ ಆಕ್ರಮಣಕಾರಿ ಶಸ್ತ್ರಾಸ್ತ್ರ ಒಪ್ಪಂದದಲ್ಲಿ ತನ್ನ ಭಾಗವಹಿಸುವಿಕೆಯನ್ನು ಸ್ಥಗಿತಗೊಳಿಸುತ್ತಿದೆ ಎಂದು ನಾನು ಇಂದು ಘೋಷಿಸಬೇಕಾದ ಒತ್ತಡ ಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ ಎಂದು ರಷ್ಯಾದ ಸಂಸತ್ತಿನಲ್ಲಿ ಪುಟಿನ್ ತಮ್ಮ ಭಾಷಣದ ಕೊನೆಯಲ್ಲಿ ಹೇಳಿದರು. ನ್ಯಾಟೋ ಸೇರ್ಪಡೆಗೆ ಮುಂದಾಗಿದ್ದ ಉಕ್ರೇನ್ ಜತೆಗೆ ರಷ್ಯಾ ಯುದ್ಧವನ್ನು ಶುರು ಮಾಡಿ ಈಗ ಒಂದು ವರ್ಷವಾಯಿತು.

Exit mobile version