Site icon Vistara News

Russia Ukraine war | ತಿರುಗೇಟು ಕೊಟ್ಟ ಉಕ್ರೇನ್‌, ಒಂದೇ ದಿನ ರಷ್ಯಾದ 800 ಯೋಧರ ಹತ್ಯೆ ಎಂದು ಸೇನೆ ಘೋಷಣೆ

ಖಾರ್ಕಿವ್: ಡೊನೆಟ್‌ಸ್ಕ್‌ ಪ್ರಾಂತ್ಯದಲ್ಲಿ ಬೀಡುಬಿಟ್ಟಿರುವ ರಷ್ಯಾದ ಯೋಧರ ವಿರುದ್ಧ ಉಕ್ರೇನ್‌ ಸಮರ್ಥವಾಗಿಯೇ ಸಮರ (Russia Ukraine war) ನಡೆಸುತ್ತಿದೆ. ಬುಧವಾರ ರಷ್ಯಾ ಪಡೆಯ ಮೇಲೆ ದಾಳಿ ನಡೆಸಿ, ಸುಮಾರು 800 ಯೋಧರನ್ನು ಹತ್ಯೆ ಮಾಡಿದ್ದೇವೆ ಎಂದು ಉಕ್ರೇನ್‌ ಸೇನೆ ಹೇಳಿದೆ.

ಡೊನೆಟ್‌ಸ್ಕ್‌ ಪ್ರಾಂತ್ಯದ ಬಖ್ಮುತ್ ಪ್ರದೇಶದಲ್ಲಿದ್ದ ರಷ್ಯಾ ಪಡೆ ಮೇಲೆ ದಾಳಿ ನಡೆಸಿದ್ದಾಗಿ ಉಕ್ರೇನ್ ಹೇಳಿಕೊಂಡಿದೆ. ಅಲ್ಲಿನ ಸುತ್ತಮುತ್ತಲಿನ ಸ್ಥಳಗಳಲ್ಲಿ ರಷ್ಯಾ ಪಡೆ ದಾಳಿ ಮಾಡಿ ನೂರಾರು ಉಕ್ರೇನ್ ನಾಗರಿಕರನ್ನು ಕೊಂದಿದ್ದಾರೆ ಮತ್ತು ಹಲ್ಲೆ ಮಾಡಿದ್ದಾರೆ ಎಂದೂ ಉಕ್ರೇನ್ ದೂರಿದೆ.

ಇದನ್ನೂ ಓದಿ: Russia-Ukraine War | ಯೋಧರು ಮೊಬೈಲ್‌ ಬಳಸಿದ್ದರಿಂದ ಸಾಯುವಂತಾಯಿತು ಎಂದ ರಷ್ಯಾ

ಆದರೆ ಈ ಹೇಳಿಕೆಯನ್ನು ರಷ್ಯಾ ತಳ್ಳಿ ಹಾಕಿದೆ. ಬಖ್ಮುತ್ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನಮ್ಮ ಪಡೆ ಹಿಡಿತ ಸಾಧಿಸಿಕೊಳ್ಳುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ರಷ್ಯಾ ೨೦೧೪ರಿಂದಲೇ ಉಕ್ರೇನ್‌ ವಿರುದ್ಧ ನಿರಂತರ ಹುನ್ನಾರ ನಡೆಸುತ್ತಿದೆ. ಉಕ್ರೇನ್‌ಗೆ ಸೇರಿದ ಕೆಲವು ಪ್ರಾಂತ್ಯಗಳಿಗೆ ತಾನೇ ಸ್ವಾಯತ್ತ ಎಂದು ಘೋಷಣೆ ಮಾಡಿ ಪ್ರತ್ಯೇಕವಾಗಿ ವ್ಯವಹಾರ ಶುರು ಮಾಡಿತ್ತು. ಇದರಿಂದ ಕೆರಳಿದ ಉಕ್ರೇನ್‌ ರಕ್ಷಣಾ ಕ್ರಮವಾಗಿ ನ್ಯಾಟೋವನ್ನು ಸೇರಲು ಮುಂದಾದದ್ದು ರಷ್ಯಾ ಕುಪಿತಗೊಳ್ಳಲು ಕಾರಣವಾಗಿದೆ. ಇದರ ಭಾಗವಾಗಿಯೇ 2021ರ ಫೆಬ್ರವರಿಯಿಂದ ಉಕ್ರೇನ್‌ ಮೇಲೆ ಆಕ್ರಮಣ ಮಾಡುತ್ತಿದೆ.

ಇದನ್ನೂ ಓದಿ: Russia-Ukrain War | ತನ್ನದೇ ಭೂಭಾಗದ ಮೇಲೆ ರಾಕೆಟ್​ ದಾಳಿ ನಡೆಸಿ, ರಷ್ಯಾದ 63 ಯೋಧರನ್ನು ಕೊಂದ ಉಕ್ರೇನ್​!

ಹೀಗಾಗಿ ಕಳೆದ 2022ರ ಫೆಬ್ರವರಿ ತಿಂಗಳಿನಿಂದ ತನ್ನ ದಾಳಿಯನ್ನು ರಷ್ಯಾ ತೀವ್ರಗೊಳಿಸಿದೆ. ಅದಕ್ಕೆ ಪ್ರತಿಯಾಗಿ ಉಕ್ರೇನ್ ಕೂಡ ರಷ್ಯಾದ ಮೇಲೆ ಹಲವು ದಾಳಿಗಳನ್ನು ನಡೆಸಿದೆ. ಈ ಯುದ್ಧದಲ್ಲಿ (Russia-Ukraine war) ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Exit mobile version