Site icon Vistara News

ಲೇಡಿ ರಿಪೋರ್ಟರ್ ಕಂಡು ಟಚ್‌ ಮಾಡಿದ ಪುರುಷ ರೋಬೊ; Men Will Be Men ವಿಡಿಯೊ ಇದು

Male Robot

Saudi Arabia’s First Male Robot Draws Controversy Over Harassing TV Reporter

ರಿಯಾದ್:‌ ತರುಣರಿಂದ ಹಿಡಿದು ಮುದುಕರವರೆಗೆ ಯಾವುದೇ ಸುಂದರವಾದ ಯುವತಿ, ಮಹಿಳೆಯನ್ನು ಕಂಡರೂ ಅವರ ಅಂದವನ್ನು ಅನುಭವಿಸುತ್ತಾರೆ. ಮನಸ್ಸಲ್ಲೇ ಮಂಡಿಗೆ ತಿಂದರೂ ಸಭ್ಯರಂತೆ ವರ್ತಿಸುತ್ತಾರೆ. ಆದರೆ, ಸೌದಿ ಅರೇಬಿಯಾದಲ್ಲಿ (Saudi Arabia) ಅಭಿವೃದ್ಧಿಪಡಿಸಿದ ಮೊದಲ ಪುರುಷ ರೋಬೊ (Male Robot) ಕೂಡ ಸುಂದರವಾದ ವರದಿಗಾರ್ತಿಯನ್ನು ಕಂಡ ಕೂಡಲೇ ಮೆಲ್ಲಗೆ ಸ್ಪರ್ಶಿಸಿದೆ. ಈ ವಿಡಿಯೊ ವೈರಲ್‌ (Viral Video) ಆಗಿ, ಮೆನ್‌ ವಿಲ್‌ ಬಿ ಮೆನ್‌ (Men Will Be Men) ಎಂಬ ಜಾಹೀರಾತನ್ನು ನೆನಪಿಸುವ ಜತೆಗೆ ವಿವಾದಕ್ಕೂ ಕಾರಣವಾಗಿದೆ.

ಹೌದು, ಸೌದಿ ಅರೇಬಿಯಾದಲ್ಲಿ ಮೊದಲ ಪುರುಷ ರೋಬೊವನ್ನು ತಯಾರಿಸಲಾಗಿದೆ. ಇದಕ್ಕೆ ಆ್ಯಂಡ್ರಾಯ್ಡ್‌ ಮೊಹಮ್ಮದ್‌ ಎಂದು ಕೂಡ ಹೆಸರಿಡಲಾಗಿದೆ. ದೇಶದ ಮೊದಲ ರೋಬೊ ಆದ ಕಾರಣ ಜನರ ಗಮನ ಸೆಳೆದಿದ್ದು, ಮಾಧ್ಯಮಗಳು ಕೂಡ ವರದಿ ಮಾಡಿವೆ. ಇದೇ ರೀತಿ, ಅಲ್‌ ಅರೇಬಿಯಾ ನ್ಯೂಸ್‌ ಚಾನೆಲ್‌ನ ವರದಿಗಾರ್ತಿಯಾದ ರಾವಿಯಾ ಅಲ್‌ ಖಸಾಮಿ ಅವರು ರೋಬೊದ ಬಳಿ ನಿಂತು, ಅದರ ಮಹತ್ವ, ಕಾರ್ಯನಿರ್ವಹಣೆ ಸೇರಿ ಹಲವು ವಿಷಯಗಳನ್ನು ವೀಕ್ಷಕರಿಗೆ ವಿವರಿಸುತ್ತಿದ್ದರು. ಇದೇ ವೇಳೆ, ರೋಬೊ ಸುಮ್ಮನಿರದೆ ರಾವಿಯಾ ಅಲ್‌ ಖಸಾಮಿ ಅವರನ್ನು ಅಸಭ್ಯವಾಗಿ ಮುಟ್ಟಿದೆ.

ಪುರುಷ ರೋಬೊ ದುರ್ವರ್ತನೆ ನೋಡಿ

ಪುರುಷ ರೋಬೊ ತಮ್ಮನ್ನು ಮುಟ್ಟುತ್ತಲೇ ರಾವಿಯಾ ಅಲ್‌ ಖಸಾಮಿ ಅವರು ಸ್ವಲ್ಪ ವಿಚಲಿತರಾಗಿದ್ದಾರೆ. ಅಷ್ಟಾದ ಬಳಿಕವೂ ಅವರು ಲೈವ್‌ ಕವರೇಜ್‌ ಮುಂದುವರಿಸಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದ್ದು, ಒಂದಷ್ಟು ಜನ ಟೀಕಿಸಿದ್ದಾರೆ. ಇನ್ನೂ ಒಂದಷ್ಟು ಜನ ಟ್ರೋಲ್‌ ಮಾಡಿದ್ದಾರೆ. “ಸೌದಿ ಅರೇಬಿಯಾದ ರೋಬೊ ಕೂಡ ಸ್ತ್ರೀಲೋಲನಾಗಿದೆ” ಎಂದು ಒಬ್ಬರು ಕಮೆಂಟ್‌ ಮಾಡಿದರೆ, “ಸೌದಿ ಅರೇಬಿಯಾದಲ್ಲಿ ರೋಬೊಗಳು ಕೂಡ ಹೆಣ್ಣುಮಕ್ಕಳಿಗೆ ಗೌರವ ಕೊಡುವುದಿಲ್ಲ” ಎಂದು ಇನ್ನೊಬ್ಬರು ಟೀಕಿಸಿದ್ದಾರೆ.

ಇದನ್ನೂ ಓದಿ: Shah Rukh Khan: ಪತ್ನಿ ಜತೆ ಸ್ಟೆಪ್‌ ಹಾಕಿದ ಶಾರುಖ್ ಖಾನ್‌: ವಿಡಿಯೊ ವೈರಲ್‌!

ತಾಂತ್ರಿಕ ದೋಷ ಕಾರಣ?

ಲೇಡಿ ರಿಪೋರ್ಟರ್‌ ಜತೆ ರೋಬೊ ಹೀಗೆ ವರ್ತಿಸಲು ನಿಜವಾದ ಕಾರಣ ಏನು ಎಂಬುದು ಇದುವರೆಗೆ ಖಚಿತವಾಗಿಲ್ಲ. ತಾಂತ್ರಿಕ ದೋಷದಿಂದಾಗಿ ರೋಬೊ ಹೀಗೆ ವರ್ತಿಸಿದೆ ಎಂದು ಒಂದಷ್ಟು ಜನ ವಾದಿಸಿದ್ದಾರೆ. “ಲೇಡಿ ರಿಪೋರ್ಟರ್‌ ರೋಬೊ ಬಳಿ ನಿಂತು ವರದಿ ಮಾಡುತ್ತಿದ್ದರು. ಆಗ ರೋಬೊ ತನ್ನ ಬಳಿ ಯಾರೋ ಬಂದರು ಎಂದು ಕೈ ಕುಲುಕಲು ಮುಂದಾಗಿದೆ. ಇದೇ ಅಸಭ್ಯ ರೀತಿಯ ವರ್ತನೆಯಂತೆ ಕಾಣುತ್ತಿದೆ. ಇದರಲ್ಲಿ ಯಾವುದೇ ತಾಂತ್ರಿಕ ಲೋಪ ಇಲ್ಲ” ಎಂದು ಮತ್ತೊಂದಿಷ್ಟು ಜನ ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version