ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಅವರ ತಂದೆ ಎರೋಲ್ ಮಸ್ಕ್ (Errol Musk) ಅವರು ತಮ್ಮ ಮಲಮಗಳ ಮೂಲಕ ಎರಡನೇ ಮಗು ಪಡೆದಿದ್ದಾರೆ.
ಎರೋಲ್ ಮಸ್ಕ್‌ಗೆ ಈಗ 76 ವರ್ಷ. ಆದರೆ ಪ್ರಜೋತ್ಪತ್ತಿ ಇಂದ್ರಿಯಗಳು ಜೀವಂತವಾಗಿವೆ ಎಂದು ಸಾಬೀತುಪಡಿಸಿದ್ದಾರೆ. ಮಾತ್ರವಲ್ಲ, ʻʻನಾವು ಭೂಮಿಯ ಮೇಲೆ ಇರೋದೇ ಮಕ್ಕಳನ್ನು ಪಡೆಯೋಕೆʼʼ ಎಂದಿದ್ದಾರೆ ಈ ಭೂಪತಿ ರಂಗ.
ಎರೋಲ್ ಮಸ್ಕ್ ದಕ್ಷಿಣ ಆಫ್ರಿಕಾದಲ್ಲಿ ಎಂಜಿನಿಯರ್ ಆಗಿದ್ದಾರೆ. ಎರಡನೇ ಮಗು ಪಡೆಯುವ ಉದ್ದೇಶವೇ ಅವರಿಗೆ ಇರಲಿಲ್ಲವಂತೆ. ಹೇಗೋ ಆಗಿಬಿಟ್ಟಿತಂತೆ. ಅಂದಹಾಗೆ ಮಲಮಗಳು ಜನಾಗೆ 35 ವರ್ಷ. ಇಬ್ಬರ ನಡುವೆ 41 ವರ್ಷದ ಅಂತರವಿದೆ.
ಅವರ ಮಲಮಗಳು ಜನಾ ಬೆಜೈಡೆನ್‌ಹೌಟ್ (Jana Bezuidenhout) ಅವರೇ ಈ ಮಗುವಿನ ತಾಯಿ. ಈ ಜೋಡಿಗೆ ಐದು ವರ್ಷದ ಎಲಿಯಟ್ ರಷ್ ಎಂಬ ಹೆಸರಿನ ಒಬ್ಬ ಮಗನೂ ಇದ್ದಾನೆ. ಎರಡನೇ ಮಗು ಯಾವುದೆಂದು ತಿಳಿದಿಲ್ಲ. ಇವರು ಹಾಗೂ ಎಲಾನ್ ಮಸ್ಕ್ ಸೇರಿದಂತೆ ಎರೋಲ್ ಮಸ್ಕ್‌ಗೆ ಒಟ್ಟು ಏಳು ಮಂದಿ ಮಕ್ಕಳು.
ಜನಾ ಬೆಜೈಡೆನ್‌ಹೌಟ್ ಅವರು ಎರೋಲ್ ಮಸ್ಕ್‌ನ ಎರಡನೇ ಪತ್ನಿ ಹೈಡ್ ಬೆಜೈಡೆನ್‌ಹೌಟ್ ಅವರ ಮಗಳು. ಎರೋಲ್ ಮಸ್ಕ್ ಅವರ ಮೊದಲ ಪತ್ನಿ ಮಾಯೆ ಹಲ್ಡೆಮನ್ ಮಸ್ಕ್‌ರಲ್ಲಿ ಜನಿಸಿದವರು ಮೂವರು- ಎಲಾನ್, ಕಿಂಬಲ್ ಹಾಗೂ ಟೋಸಾ. ಎರಡನೇ ಪತ್ನಿ ಹೈಡ್ ಅವರಲ್ಲಿ ಎರೋಲ್‌ಗೆ ಇಬ್ಬರು ಮಕ್ಕಳು. 18 ವರ್ಷ ಜತೆಗಿದ್ದ ಬಳಿಕ ಎರೋಲ್- ಹೈಡ್ ಬೇರೆಯಾಗಿದ್ದರು.
ನಂತರ ಮಲಮಗಳು ಜನಾ ಜತೆಗೆ ಎರೋಲ್ ಪ್ರೇಮಪ್ರಸಂಗ ಶುರುವಾಗಿತ್ತು.
ಇದನ್ನೂ ಓದಿ: ಎಲಾನ್ ಮಸ್ಕ್ ವಿರುದ್ಧ ಕೇಸ್ ದಾಖಲಿಸಿದ ಟ್ವಿಟರ್, ಕಾನೂನು ಸಂಘರ್ಷ ಆರಂಭ