Site icon Vistara News

Sex Toys: ಸೆಕ್ಸ್ ಟಾಯ್ಸ್ ನಿಷೇಧಿಸಿದ ಸರ್ಕಾರವನ್ನೇ ಕೋರ್ಟ್‌ ಕಟಕಟೆಗೆ ಎಳೆದು ತಂದ ಮಹಿಳೆ!

Sitabile Dewa

ನವದೆಹಲಿ: ಜಿಂಬಾಬ್ವೆ ಸರ್ಕಾರವು (Zimbabwe government) ಕಳೆದ ವರ್ಷ ಜಾರಿಗೆ ತಂದ ಸೆಕ್ಸ್ ಟಾಯ್ಸ್ (ಲೈಂಗಿಕ ಆಟಿಕೆಗಳು – Sex Toys) ನಿಷೇಧ ಪ್ರಶ್ನಿಸಿ ಮಹಿಳೆಯೊಬ್ಬರು (Women) ಕೋರ್ಟ್‌ಗೆ (Court) ಮೊರೆ ಹೋಗಿದ್ದು, ಆಕೆಯ ಮನವಿಯನ್ನು ವಿಚಾರಣೆಗೆ ನ್ಯಾಯಾಲಯವು ಒಪ್ಪಿಕೊಂಡಿದೆ. 35 ವರ್ಷದ ಸಿಟಾಬೈಲ್ ದೇವಾ ಅವರು ಜಿಂಬಾಬ್ವೆ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಈಕೆ ಮದುವೆಯಾಗಿದ್ದಾಗ ಲೈಂಗಿಕ ಜೀವನದ (Sex Life) ಸಮಸ್ಯೆ ಇರಲಿಲ್ಲ. ಆದರೆ, ಡಿವೋರ್ಸ್ ಆದ ಬಳಿಕ ಈ ಬಗ್ಗೆ ಸಮಸ್ಯೆ ಉಂಟಾದಾಗ, ಸೆಕ್ಸ್ ಟಾಯ್ಸ್ ಮೊರೆ ಹೋಗಿದ್ದಳು. ಈಕೆ ಮಹಿಳಾ ಕಾರ್ಯಕರ್ತೆಯೂ ಹೌದು(Viral News).

ಸಂಪ್ರದಾಯ ಸಮಾಜವನ್ನು ಹೊಂದಿರುವ ಜಿಂಬಾಬ್ವೆಯಲ್ಲಿ ಸಾಮಾನ್ಯವಾಗ ವಿಚ್ಛೇದಿತ ಮಹಿಳೆಯರು ಮತ್ತು ಒಂಟಿ ತಾಯಂದಿರನ್ನು ಪುರುಷರಿಗೆ ಅನಪೇಕ್ಷಿತ ಸಂಗಾತಿಗಳೆಂದು ಭಾವಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿಟಾಬೈಲ್ ಅವರು ತಮ್ಮ ಲೈಂಗಿಕ ವಾಂಛೆಯನ್ನು ಈಡೇರಿಸಿಕೊಳ್ಳಲು ಸೆಕ್ಸ್ ಟಾಯ್ಸ್ ಮೊರೆ ಹೋಗಿದ್ದರು.

ಜಿಂಬಾಬ್ವೆಯ ಸೆನ್ಸಾರ್‌ಶಿಪ್ ಮತ್ತು ಮನರಂಜನಾ ನಿಯಂತ್ರಣ ಕಾನೂನಿನ ಭಾಗವು ಲೈಂಗಿಕ ಆಟಿಕೆಗಳ ಆಮದು ಅಥವಾ ಮಾರಾಟವನ್ನು ಕಾನೂನುಬಾಹಿರ ಎಂದುಹೇಳುತ್ತದೆ. ಈ ಲೈಂಗಿಕ ಆಟಿಕೆಗಳು ಅಸಭ್ಯ ಅಥವಾ ಅಶ್ಲೀಲ ಮತ್ತು ಸಾರ್ವಜನಿಕ ನೈತಿಕತೆಗೆ ಹಾನಿಕಾರಕವೆಂದು ಜಿಂಬಾಬ್ವೆಯಲ್ಲಿ ಪರಿಗಣಿಸಲಾಗುತ್ತದೆ. ಹಾಗಾಗಿ, ಸೆಕ್ಸ್ ಟಾಯ್ಸ್ ಹೊಂದಿದ್ದವರನ್ನು ಜೈಲಿಗೆ ಹಾಕಲು ಕಾನೂನಿನಲ್ಲಿ ಅವಕಾಶವಿದೆ.

ಕಾನೂನು ಹಳೆಯದ್ದಾಗಿದೆ, ದಮನಕಾರಿಯಾಗದಿದೆ. ಅಲ್ಲದೇ ಮಹಿಳಾ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ. ಈ ಆಧಾರದ ಮೇಲೆಯೇ ನಾನು ಕಾನೂನಿ ಕೆಲವು ಭಾಗಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಿದ್ದೇನೆ ಎಂದು ದೇವಾ ಹೇಳಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಜಿಂಬಾಬ್ವೆ ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಕಾನೂನಿನ ಕೆಲವು ಭಾಗಗಳನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದಾರೆ. ಕೋರ್ಟ್, ಈಕೆ ಅರ್ಜಿಯ ವಿಚಾರಣೆಗೆ ಸಮ್ಮತಿಸಿದೆ. ಆದರೆ, ಹಸ್ತುಮೈಥುನ ಮತ್ತು ಮಹಿಳಾ ಲೈಂಗಿಕತೆಯ ಬಗ್ಗೆ ಆಕೆಯ ಬಹಿರಂಗ ಹೋರಾಟವು ಅನೇಕ ಮಂದಿಗೆ ಇರಿಸುಮುರಿಸು ತಂದಿದೆ. ಹಾಗಿದ್ದೂ, ಹಲವು ಮಹಿಳಾ ಕಾರ್ಯಕರ್ತೆಯ ದೇವಾ ಅವರ ಹೋರಾಟವನ್ನು ಬೆಂಬಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral News : ನಾಯಿ ನೋಡಿಕೊಂಡು ಇರೋದಕ್ಕೆ 1 ಕೋಟಿ ರೂ. ಸಂಬಳ!

ಸೆಕ್ಸ್ ಟಾಯ್ಸ್ ನಿಷೇಧ ಕಾನೂನು ಹಳೆಯದೇ ಆಗಿದ್ದರೂ ಕಳೆದ ವರ್ಷದಿಂದ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಈ ಕಾನೂನು ಪ್ರಕಾರ, ಕಳೆದ ವರ್ಷ ಇಬ್ಬರ ಮಹಿಳೆಯರಿಗೆ ಶಿಕ್ಷೆಯನ್ನು ವಿಧಿಸಲಾಗಿದೆ. ಈ ಇಬ್ಬರ ಪೈಕಿ ಒಬ್ಬಳು ಸೆಕ್ಸ್ ಟಾಯ್ಸ್ ಮಾರಾಟ ವ್ಯವಾಹಾರವನ್ನು ಆನ್‌ಲೈನ್ ಮೂಲಕ ನಡೆಸುತ್ತಿದ್ದರು. ಆಕೆಯನ್ನು ಬಂಧಿಸಿ ಡೆಟೇನ್ಷನ್ ಸೆಂಟರ್‌ನಲ್ಲಿ ಇಡಲಾಗಿತ್ತು. ಬಳಿಕ ಆಕೆಗೆ 6 ವರ್ಷ ಜೈಲು ಅಥವಾ 640 ವೇತನ ರಹಿತ ಕಮ್ಯೂನಿಟಿ ವರ್ಕ್ ಮಾಡುವ ಶಿಕ್ಷೆಯನ್ನು ವಿಧಿಸಲಾಗಿತ್ತು. ಮತ್ತೊಬ್ಬ ಮಹಿಳೆಗೂ ಜೈಲು ಶಿಕ್ಷೆ ವಿಧಿಸಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version