Site icon Vistara News

Shooting : ಸಾಕಿದ್ದ ಮಾಲೀಕನಿಗೇ ಗುಂಡು ಹಾರಿಸಿ ಕೊಂದ ನಾಯಿ! ಅಮೆರಿಕದಲ್ಲೊಂದು ವಿಚಿತ್ರ ಘಟನೆ

ಕ್ಯಾಲಿಫೋರ್ನಿಯಾ: ಆತ 30 ವರ್ಷದ ವ್ಯಕ್ತಿ. ಅಮೆರಿಕದ ಕನ್ಸಾಸ್‌ನ ನಿವಾಸಿಯಾಗಿರುವ ಆತ ಇತ್ತೀಚೆಗೆ ತನ್ನ ನಾಯಿಯೊಂದಿಗೆ ಭೇಟೆ ಆಡುವುದಕ್ಕೆ ಹೊರಟಿದ್ದ. ಜೀಪೊಂದರಲ್ಲಿ ಹೊರಟಿದ್ದ ಆತನನ್ನು ಆತನ ಸಾಕು ನಾಯಿಯೇ ಗುಂಡಿಟ್ಟು (Shooting) ಕೊಂದಿದೆ!

ಇದನ್ನೂ ಓದಿ: Viral News: ಅಜ್ಜಿ ಒಪ್ಪಿದ ಕಾಫಿ ಬೆಲೆ 290 ರೂ.! ಸ್ಟಾರ್‌ಬಕ್ಸ್‌ನ ಈ ದುಬಾರಿ ಕಾಫಿಗೆ ಸೋಷಿಯಲ್ ಮೀಡಿಯಾ ಶಾಕ್!

ಹೌದು. ಆ ವ್ಯಕ್ತಿ ಜೀಪಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ. ಆತನ ನಾಯಿ ಜೀಪಿನ ಹಿಂಭಾಗದ ಸೀಟಿನಲ್ಲಿ ಕುಳಿತಿದೆ. ಅದೇ ಸೀಟಿನಲ್ಲಿ ನಾಯಿಯ ಮಾಲೀಕನಿಗೆ ಸಂಬಂಧಿಸಿದ ಬಂದೂಕು ಕೂಡ ಇತ್ತು. ನಾಯಿ ಸೀಟಿನ ತುಂಬೆಲ್ಲ ಓಡಾಡಿದ್ದು, ಬಂದೂಕಿನ ಮೇಲೂ ಕಾಲಿಟ್ಟಿದೆ. ಇದ್ದಕ್ಕಿದ್ದಂತೆ ಬಂದೂಕಿನಿಂದ ಗುಂಡು ಹಾರಿದೆ. ಹಲವು ಬಾರಿ ಗುಂಡು ಹಾರಿದ್ದು, ಅದು ನೇರವಾಗಿ ಮುಂಬದಿಯ ಸೀಟಿನಲ್ಲಿ ಕೂತಿದ್ದ ಮಾಲೀಕನಿಗೆ ತಗುಲಿದೆ. ಗಂಭೀರ ಗಾಯಾಳುವಾದ ಆತ ಅಲ್ಲಿಯೇ ಸಾವನ್ನಪ್ಪಿದ್ದಾನೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ಬಂದೂಕು ಎನ್ನುವುದು ಅತ್ಯಂತ ಸಾಮಾನ್ಯ ವಸ್ತುವಂತಾಗಿದೆ. ಅಮೆರಿಕದಲ್ಲಿರುವ ಜನರಿಗಿಂತ ಹೆಚ್ಚು ಬಂದೂಕುಗಳು ಅಲ್ಲಿವೆ ಎಂದು ವರದಿಗಳು ಹೇಳಿವೆ. ಇತ್ತೀಚಿನ ದಿನಗಳಲ್ಲಂತೂ ದೇಶದಲ್ಲಿ ಅತಿ ಹೆಚ್ಚು ಗುಂಡಿನ ದಾಳಿ ಪ್ರಕರಣಗಳು ವರದಿಯಾಗುತ್ತಿವೆ.

ಇದನ್ನೂ ಓದಿ: Viral Video: ಮಾರ್ಗಮಧ್ಯೆಯಲ್ಲಿ ಒಮ್ಮೆ ವಿಮಾನದ ಕಿಟಕಿ ತೆರೆಯುತ್ತೀರಾ?; ಗುಟ್ಕಾಪ್ರಿಯನ ಮಾತಿಗೆ ಗಗನಸಖಿ ಪ್ರತಿಕ್ರಿಯೆ ಹೇಗಿತ್ತು?

Exit mobile version