ಲಂಡನ್: ತನ್ನ ಪ್ರೇಯಸಿಗೆ ಒಂಬತ್ತು ಬಾರಿ ಚುಚ್ಚಿ ಬಳಿಕ ಕತ್ತು ಕೊಯ್ದು ಬರ್ಬರವಾಗಿ ಕೊಲೆ (Stab wound) ಮಾಡಿದ್ದ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬ ಹೈದರಾಬಾದ್ ಮೂಲದ ವ್ಯಕ್ತಿ ಕೃತ್ಯಕ್ಕೂ ಮುನ್ನ ಚಾಕುವಿನಿಂದ ತಕ್ಷಣ ಕೊಲೆ ಮಾಡುವುದು ಹೇಗೆ ಎಂಬುದನ್ನು ಗೂಗಲ್‌ನಲ್ಲಿ ಸರ್ಚ್(Google Search) ಮಾಡಿದ್ದ. 2022ರಲ್ಲಿ ಲಂಡನ್ ರೆಸ್ಟೋರೆಂಟ್(London restaurant)ನಲ್ಲಿ ಹೈದರಾಬಾದ್ ಮೂಲದ 25 ವರ್ಷದ ಶ್ರೀರಾಮ್ ಎಂಬಾತ ತನ್ನ 23ವರ್ಷದ ಪ್ರೇಯಸಿ ಸೋನಾ ಬಿಜು ಎಂಬಾಕೆಯನ್ನು ಮದುವೆಗೆ ನಿರಾಕರಿಸಿದಳೆಂಬ ಕೋಪದಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದ.
ಸೋನಾ ರೆಸ್ಟೋರೆಂಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯನ್ನು ಮದುವೆ ಆಗುವಂತೆ ಶ್ರೀರಾಮ್ ಅಗಾಗ ಪೀಡಿಸುತ್ತಿದ್ದನಂತೆ. ಮದುವೆಗೆ ಒಪ್ಪದೇ ಇದ್ದಲ್ಲಿ ಕೊಲೆ ಮಾಡುವುದಾಗಿ ಆಕೆಗೆ ಬೆದರಿಕೆಯನ್ನೂ ಹಾಕಿದ್ದ. ಆದರೆ ಶ್ರೀರಾಮ್‌ನ ವರ್ತನೆಯಿಂದ ಬೇಸತ್ತಿದ್ದ ಆಕೆ ಮದುವೆಗೆ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡಿದ್ದ ಶ್ರೀರಾಮ್, ಆಕೆಯನ್ನು ರೆಸ್ಟೋರೆಂಟ್‌ನಿಂದ ಕತ್ತು ಹಿಡಿದು ಹೊರಗೆಳೆದು ತಂದು ಚಾಕುವಿನಿಂದ ಚುಚ್ಚಲು ಶುರು ಮಾಡಿದ್ದ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೋನಾಗೆ, ಒಂದು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಕೊನೆಯುಸಿರೆಳೆದಿದ್ದಳು. ಪ್ರಕರಣದಲ್ಲಿ ಶ್ರೀರಾಮ್‌ಗೆ ಲಂಡನ್ ಕೋರ್ಟ್ 16ವರ್ಷ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇನ್ನು ಕೋರ್ಟ್ ವಿಚಾರಣೆ ವೇಳೆ ಕೊಲೆ ಮಾಡುವ ಮುನ್ನ ಚಾಕುವಿನಿಂದ ಕೊಲೆ ಮಾಡುವುದು ಹೇಗೆ? ಲಂಡನ್‌ನಲ್ಲಿ ವಿದೇಶಿಗರು ಕೊಲೆ ಮಾಡಿದರೆ ಯಾವ ರೀತಿಯ ಶಿಕ್ಷೆ ಆಗುತ್ತದೆ ಎಂಬುದನ್ನು ಸರ್ಚ್ ಮಾಡಿದ್ದಾಗಿ ಹೇಳಿದ್ದ.
2017ರಿಂದ ಹೈದರಾಬಾದ್ ಕಾಲೇಜಿನಲ್ಲಿ ಪರಿಚಯಸ್ಥರಾಗಿದ್ದ ಸೋನಾ ಮತ್ತು ಶ್ರೀರಾಮ್ ಪರಸ್ಪರ ಡೇಟ್ ಮಾಡುತ್ತಿದ್ದರು. 2022ರಲ್ಲಿ ಇವರಿಬ್ಬರೂ ಲಂಡನ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣಕ್ಕೆಂದು ತೆರಳಿದ್ದರು. ಅಲ್ಲಿ ರೆಸ್ಟೋರೆಂಟ್‌ವೊಂದರಲ್ಲಿ ಪಾರ್ಟ್‌ಟೈಂ ಕೆಲಸ ಮಾಡುತ್ತಿದ್ದ ಸೋನಾಳನ್ನು ಭೇಟಿಯಾಗಲು ಆಗಾಗ ಶ್ರೀರಾಮ್ ಹೋಗುತ್ತಿದ್ದ. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಈ ಜೋಡಿ ನಡುವೆ ಬಳಿಕ ಮನಸ್ತಾಪ ಉಂಟಾಗಿತ್ತು. ಶ್ರೀರಾಮ್ ಸೋನಾಳ ಮೇಲೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಲು ಶುರು ಮಾಡಿದ್ದ. ಇದರಿಂದ ಬೇಸತ್ತ ಸೋನಾ ಆತನಿಂದ ದೂರ ಉಳಿಯಲು ನಿರ್ಧರಿಸಿದ್ದಳು.
ಇದನ್ನೂ ಓದಿ: Actress Haripriya: ಐಷಾರಾಮಿ ಕಾರು ಖರೀದಿಸಿದ ʻಸಿಂಹಪ್ರಿಯಾʼ! ಬೆಲೆ ಎಷ್ಟು?
ಕೆಲವು ದಿನಗಳ ಹಿಂದೆ ರಾಜ್ಯದಲ್ಲೂ ಇಂತಹದ್ದೇ ಒಂದು ಘಟನೆ ಬೆಳಕಿಗೆ ಬಂದಿತ್ತು. ಪ್ರೀತಿಸಲು ನಿರಾಕರಿಸಿದಳು ಎಂಬ ಕಾರಣಕ್ಕಾಗಿ ಪಾಗಲ್ ಪ್ರೇಮಿ ಫಯಾಜ್ ಎಂಬಾತ ಕಾರ್ಪೋರೇಟರ್ ಮಗಳು ನೇಹಾ ಎಂಬ ವಿದ್ಯಾರ್ಥಿನಿಯನ್ನು ಭೀಕರವಾಗಿ ಕೊಲೆ ಮಾಡಿದ್ದ. ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಬಹಳ ಚರ್ಚೆ ಆಗಿತ್ತು. ಕಾಲೇಜು ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಪ್ರತಿಭಟನೆಗಳೂ ಕೂಡ ನಡೆದವು. ನೇಹಾಳನ್ನು ಕೊಂದ ಆರೋಪಿ ಫಯಾಜ್ ವಿರುದ್ಧ ಶೂಟೌಟ್ ಆರ್ಡರ್ ಮಾಡಿ, ಎನ್‌ಕೌಂಟರ್ ಮಾಡಿ ಬಿಸಾಕಿ ಎಂಬ ಆಗ್ರಹ ಕೇಳಿಬಂದಿತ್ತು.