ಮೆಕ್ಸಿಕೋ : ಹೊಸ ತೂಗು ಸೇತುವೆಯನ್ನು ಉದ್ಘಾಟನೆ ಮಾಡಿ ಅದೇ ಸೇತುವೆ ಮೇಲೆ ಮೇಯರ್ ಹಾಗೂ ಅಧಿಕಾರಿಗಳು ನಡೆದು ಬರುತ್ತಿದ್ದಾಗ ದಿಢೀರ್ ಸೇತುವೆ ಕುಸಿದು ಬಿದ್ದ ಘಟನೆ (Bridge collapse) ಮೆಕ್ಸಿಕೋದಲ್ಲಿ ನಡೆದಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿಗೆ ಸೇತುವೆಯಿಂದ ಕೆಳಗೆ ಬಿದ್ದಿದ್ದು, ಎಂಟು ಮಂದಿಗೆ ಮೂಳೆ ಮುರಿತವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇಂದು (ಜೂನ್ 9) ಮೇಯರ್ ಜೋಸ್ ಲೂಯಿಸ್ ಉರಿಯೊಸ್ಟೆಗುಯ್ ರವರು ಮರು ಸ್ಥಾಪಿಸಲಾಗಿದ್ದ ತೂಗು ಸೇತುವೆಯ ಉದ್ಘಾಟನೆ ಮಾಡಿದ್ದರು. ಇದಾದ ಬಳಿಕ ತಮ್ಮ ಪತ್ನಿ ಜೊತೆ ಇದೇ ತೂಗು ಸೇತುವೆ ಮೇಲೆ ಅಧಿಕಾರಿಗಳ ಜೊತೆ ನಡೆದುಕೊಂಡು ಬಂದಿದ್ದಾರೆ. ಈ ವೇಳೆ ಸೇತುವೆ ಭಾರ ತಡೆಯಲಾಗದೇ ಕುಸಿದು ಬಿದ್ದಿದ್ದು, ಮೇಯರ್ ಹಾಗೂ ಅವರ ಪತ್ನಿ, ಜೊತೆಗೆ ನಾಲ್ವರು ಸಿಟಿ ಕೌನ್ಸಿಲ್ ಸದಸ್ಯರು. ಇಬ್ಬರು ನಗರ ಅಧಿಕಾರಿಗಳು ಮತ್ತು ಸ್ಥಳೀಯ ವರದಿಗಾರರು ಸೇರಿದಂತೆ 20 ಮಂದಿ 10 ಅಡಿ ಆಳಕ್ಕೆ ಬಿದ್ದಿದ್ದಾರೆ. ಕೂಡಲೇ ಅವರನ್ನೆಲ್ಲಾ ಮೇಲಕ್ಕೆ ಎತ್ತಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೆಕ್ಸಿಕೋ ಹಾಗೂ ಕ್ಯುರ್ನಾವಾಕಾ ನಗರಕ್ಕೆ ಈ ತೂಗು ಸೇತುವೆ ಸಂಪರ್ಕ ಹಾದಿಯಾಗಿತ್ತು. ಹೀಗಾಗಿ ಈ ಸೇತುವೆಯನ್ನ ಮತ್ತೆ ಮರು ನಿರ್ಮಾಣ ಮಾಡಲಾಗಿತ್ತು. ಆದರೆ, ಕಳಪೆ ಕಾಮಗಾರಿಯಿಂದಾಗಿ ಸೇತುವೆ ಉದ್ಘಾಟನಾ ನಡಿಗೆ ದಿನವೇ ಕುಸಿದು ಬಿದ್ದಿದೆ. ಸದ್ಯ ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
Floating bridge: ಉದ್ಘಾಟನೆಗೊಂಡ ಮೂರನೇ ದಿನಕ್ಕೇ ಮುರಿದು ಬಿತ್ತು ಮಲ್ಪೆ ತೇಲು ಸೇತುವೆ