Site icon Vistara News

Taliban Plan: ಆಫ್ಘನ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಏನು ಮಾಡಲಿದೆ ತಾಲಿಬಾನ್‌? ಉಗ್ರರ ಪ್ಲಾನ್‌ ಏನು?

Taliban plan to turn former foreign bases into special economic zones In Afghanistan

ತಾಲಿಬಾನ್

ಕಾಬೂಲ್‌: 2021ರ ಆಗಸ್ಟ್‌ನಲ್ಲಿ ಅಮೆರಿಕದ ಸೇನೆಯು ಸಂಪೂರ್ಣವಾಗಿ ಅಫಘಾನಿಸ್ತಾನದಿಂದ ನಿರ್ಗಮಿಸಿದ ಬಳಿಕ ಆಫ್ಘನ್‌ನಲ್ಲಿ ತಾಲಿಬಾನ್‌ ಉಗ್ರರದ್ದೇ ಆಡಳಿತವಿದೆ. ಈಗ ತಾಲಿಬಾನ್‌ ಆಡಳಿತವು ಅಮೆರಿಕ ಅಫಘಾನಿಸ್ತಾನದಲ್ಲಿ ನಿರ್ಮಿಸಿದ್ದ ಸೇನಾ ನೆಲೆಗಳನ್ನು ವಿಶೇಷ ಆರ್ಥಿಕ ವಲಯಗಳನ್ನಾಗಿ (SEZ) ಮಾರ್ಪಡಿಸಲು ಯೋಜನೆ (Taliban Plan) ರೂಪಿಸಿದೆ.

“ಅಫಘಾನಿಸ್ತಾನದಲ್ಲಿ ಅಮೆರಿಕ ನಿರ್ಮಿಸಿದ್ದ ಎಲ್ಲ ಸೇನಾ ನೆಲೆಗಳನ್ನು ವಿಶೇಷ ಆರ್ಥಿಕ ವಲಯಗಳನ್ನಾಗಿ ಮಾರ್ಪಡಿಸಲಾಗುತ್ತಿದೆ. ಇದರಿಂದ ಉದ್ಯಮ, ವ್ಯಾಪಾರ, ಉದ್ಯೋಗ ಸೇರಿ ಹಲವು ದಿಸೆಯಲ್ಲಿ ಆಫ್ಘನ್‌ಗೆ ಅನುಕೂಲವಾಗಲಿದೆ. ಇದರ ಕುರಿತು ವಾಣಿಜ್ಯ ಸಚಿವಾಲಯವು ಯೋಜನೆ ರೂಪಿಸುತ್ತಿದೆ” ಎಂದು ಹಂಗಾಮಿ ಉಪ ಪ್ರಧಾನಿ ಮುಲ್ಲಾ ಅಬ್ದುಲ್‌ ಘನಿ ಬರಾದಾರ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಅಫಘಾನಿಸ್ತಾನದಲ್ಲಿ ಅಮೆರಿಕ ಸೇನೆ ನಿರ್ಗಮನಕ್ಕೂ ಮುನ್ನ ತಾಲಿಬಾನಿಗಳು ಹಿಂಸಾಚಾರ ನಡೆಸಿದ್ದರು. ಈಗಿರುವ ಉಗ್ರರ ಆಡಳಿತದಲ್ಲಿಯೂ ಉಗ್ರ ಕೃತ್ಯಗಳು ಮುಂದುವರಿದಿವೆ. ಆದರೆ, ಜಾಗತಿಕವಾಗಿ ಹಣಕಾಸು ನೆರವು ಸಿಗದ ಕಾರಣ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಹಾಗಾಗಿ, ಉದ್ಯಮ, ಹೂಡಿಕೆಗಾಗಿ ತಾಲಿಬಾನಿಗಳು ಹಲವು ಯೋಜನೆ ರೂಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Taliban Rule | ದೇಶಿ ನಿರ್ಮಿತ ಸೂಪರ್​ ಕಾರು ಬಿಡುಗಡೆ ಮಾಡಿದ ತಾಲಿಬಾನ್​ ಆಡಳಿತದ ಅಫಘಾನಿಸ್ತಾನ!

Exit mobile version