Taliban Plan: ಆಫ್ಘನ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಏನು ಮಾಡಲಿದೆ ತಾಲಿಬಾನ್‌? ಉಗ್ರರ ಪ್ಲಾನ್‌ ಏನು? - Vistara News

ಪ್ರಮುಖ ಸುದ್ದಿ

Taliban Plan: ಆಫ್ಘನ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಏನು ಮಾಡಲಿದೆ ತಾಲಿಬಾನ್‌? ಉಗ್ರರ ಪ್ಲಾನ್‌ ಏನು?

Taliban Plan:‌ ಅಫಘಾನಿಸ್ತಾನದಲ್ಲಿ ಉಗ್ರರಿಗೆ ಆಡಳಿತ ನಡೆಸಲು ಹಣಕಾಸು ಕೊರತೆ ಉಂಟಾಗಿದೆ. ಇದಕ್ಕಾಗಿ ಅವರು ಉದ್ಯಮ ಸ್ಥಾಪನೆ, ಹೂಡಿಕೆ ಸೇರಿ ಹಲವು ದಿಸೆಯಲ್ಲಿ ಯೋಜನೆ ರೂಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Taliban plan to turn former foreign bases into special economic zones In Afghanistan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಾಬೂಲ್‌: 2021ರ ಆಗಸ್ಟ್‌ನಲ್ಲಿ ಅಮೆರಿಕದ ಸೇನೆಯು ಸಂಪೂರ್ಣವಾಗಿ ಅಫಘಾನಿಸ್ತಾನದಿಂದ ನಿರ್ಗಮಿಸಿದ ಬಳಿಕ ಆಫ್ಘನ್‌ನಲ್ಲಿ ತಾಲಿಬಾನ್‌ ಉಗ್ರರದ್ದೇ ಆಡಳಿತವಿದೆ. ಈಗ ತಾಲಿಬಾನ್‌ ಆಡಳಿತವು ಅಮೆರಿಕ ಅಫಘಾನಿಸ್ತಾನದಲ್ಲಿ ನಿರ್ಮಿಸಿದ್ದ ಸೇನಾ ನೆಲೆಗಳನ್ನು ವಿಶೇಷ ಆರ್ಥಿಕ ವಲಯಗಳನ್ನಾಗಿ (SEZ) ಮಾರ್ಪಡಿಸಲು ಯೋಜನೆ (Taliban Plan) ರೂಪಿಸಿದೆ.

“ಅಫಘಾನಿಸ್ತಾನದಲ್ಲಿ ಅಮೆರಿಕ ನಿರ್ಮಿಸಿದ್ದ ಎಲ್ಲ ಸೇನಾ ನೆಲೆಗಳನ್ನು ವಿಶೇಷ ಆರ್ಥಿಕ ವಲಯಗಳನ್ನಾಗಿ ಮಾರ್ಪಡಿಸಲಾಗುತ್ತಿದೆ. ಇದರಿಂದ ಉದ್ಯಮ, ವ್ಯಾಪಾರ, ಉದ್ಯೋಗ ಸೇರಿ ಹಲವು ದಿಸೆಯಲ್ಲಿ ಆಫ್ಘನ್‌ಗೆ ಅನುಕೂಲವಾಗಲಿದೆ. ಇದರ ಕುರಿತು ವಾಣಿಜ್ಯ ಸಚಿವಾಲಯವು ಯೋಜನೆ ರೂಪಿಸುತ್ತಿದೆ” ಎಂದು ಹಂಗಾಮಿ ಉಪ ಪ್ರಧಾನಿ ಮುಲ್ಲಾ ಅಬ್ದುಲ್‌ ಘನಿ ಬರಾದಾರ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

ಅಫಘಾನಿಸ್ತಾನದಲ್ಲಿ ಅಮೆರಿಕ ಸೇನೆ ನಿರ್ಗಮನಕ್ಕೂ ಮುನ್ನ ತಾಲಿಬಾನಿಗಳು ಹಿಂಸಾಚಾರ ನಡೆಸಿದ್ದರು. ಈಗಿರುವ ಉಗ್ರರ ಆಡಳಿತದಲ್ಲಿಯೂ ಉಗ್ರ ಕೃತ್ಯಗಳು ಮುಂದುವರಿದಿವೆ. ಆದರೆ, ಜಾಗತಿಕವಾಗಿ ಹಣಕಾಸು ನೆರವು ಸಿಗದ ಕಾರಣ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಹಾಗಾಗಿ, ಉದ್ಯಮ, ಹೂಡಿಕೆಗಾಗಿ ತಾಲಿಬಾನಿಗಳು ಹಲವು ಯೋಜನೆ ರೂಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Taliban Rule | ದೇಶಿ ನಿರ್ಮಿತ ಸೂಪರ್​ ಕಾರು ಬಿಡುಗಡೆ ಮಾಡಿದ ತಾಲಿಬಾನ್​ ಆಡಳಿತದ ಅಫಘಾನಿಸ್ತಾನ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Terror Attack: ಕಂದಮ್ಮನನ್ನೂ ಕೊಂದ ಉಗ್ರರು; ಎದೆಗೆ ಗುಂಡು ಬಿದ್ದರೂ ಪ್ರಯಾಣಿಕರನ್ನು ಉಳಿಸಲು ಯತ್ನಿಸಿದ್ದ ಚಾಲಕ

Terror Attack: ಪೋನಿ ಪ್ರದೇಶದ ತೇರ್ಯತ್ ಗ್ರಾಮದ ಮೂಲಕ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ ಚಾಲಕ ದಾಸನೂ ರಾಜ್‌ಬಾಗ್, ಭಯೋತ್ಪಾದಕರು ತನ್ನ ಮೇಲೆ ಬುಲೆಟ್‌ಗಳನ್ನು ಹಾರಿಸಿದಾಗ ಅಪಾರ ಧೈರ್ಯ ತಂದುಕೊಂಡು ಬಸ್ಸನ್ನು ವೇಗವಾಗಿ ಚಲಾಯಿಸಿ ಅಲ್ಲಿಂದ ಪಾರಾಗಲು ಯತ್ನಿಸಿದ.

VISTARANEWS.COM


on

reasi terror attack
Koo

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu & Kashmir) ರಿಯಾಸಿ ಜಿಲ್ಲೆಯಲ್ಲಿ ಭಾನುವಾರ ನಡೆದ ಭಯೋತ್ಪಾದಕರ ಗುಂಡಿನ ದಾಳಿಯ (Reasi terror Attack) ಸಂದರ್ಭದಲ್ಲಿ, ಪುಟ್ಟ ಕಂದಮ್ಮನೂ ಸೇರಿ 10 ಮಂದಿ ಸತ್ತಿದ್ದಾರೆ. ಕ್ರೂರಿ ಭಯೋತ್ಪಾದಕರು (Terrorists) ಪುಟ್ಟ ಮಗುವೆಂದೂ ನೋಡದೆ ಗುಂಡು ಹಾರಿಸಿ ಕೊಂದಿದ್ದಾರೆ. ಈ ನಡುವೆ, ಉಗ್ರರು ಮೈಕೈ ತುಂಬೆಲ್ಲಾ ಗುಂಡು (bullets) ಜಡಿದರೂ ಪ್ರಯಾಣಿಕರನ್ನು (tourists) ಉಳಿಸಲು ಚಾಲಕ (Bus driver) ಯತ್ನಿಸಿದ್ದಾನೆ ಎಂದು ಗೊತ್ತಾಗಿದೆ.

ಪೋನಿ ಪ್ರದೇಶದ ತೇರ್ಯತ್ ಗ್ರಾಮದ ಮೂಲಕ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ ಚಾಲಕ ದಾಸನೂ ರಾಜ್‌ಬಾಗ್, ಭಯೋತ್ಪಾದಕರು ತನ್ನ ಮೇಲೆ ಬುಲೆಟ್‌ಗಳನ್ನು ಹಾರಿಸಿದಾಗ ಅಪಾರ ಧೈರ್ಯ ತಂದುಕೊಂಡು ಬಸ್ಸನ್ನು ವೇಗವಾಗಿ ಚಲಾಯಿಸಿ ಅಲ್ಲಿಂದ ಪಾರಾಗಲು ಯತ್ನಿಸಿದ. ಆದರೆ ಮೈಗೆ ಗುಂಡು ಬಿದ್ದ ಪರಿಣಾಮ ಬಸ್ ನಿಯಂತ್ರಣ ತಪ್ಪಿ ರಸ್ತೆಯಿಂದ ಆಳವಾದ ಕಮರಿಗೆ ಬಿತ್ತು. ಘಟನೆಯಲ್ಲಿ ಚಾಲಕನೂ ಮೃತಪಟ್ಟಿದ್ದಾನೆ.

ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ ಹತ್ತು ಮಂದಿ ಈ ದಾಳಿಯಲ್ಲಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡವು ಸ್ಥಳಕ್ಕೆ ತಲುಪಿ ಪೊಲೀಸರಿಗೆ ಸಹಾಯ ಮಾಡುತ್ತಿದೆ. ಭಾನುವಾರದ ದಾಳಿಯ ನಂತರ ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಭಯೋತ್ಪಾದಕರನ್ನು ಹುಡುಕಲು ಭದ್ರತಾ ಪಡೆಗಳು ಡ್ರೋನ್‌ಗಳನ್ನು ಬಳಸುತ್ತಿವೆ.

ರಿಯಾಸಿ ದಾಳಿಯ ನಂತರ, ಭಾರತೀಯ ಸೇನೆಯ ಹತ್ತಿರದ ನೆಲೆಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಯಿತು. ಭದ್ರತಾ ಕ್ರಮಗಳನ್ನು ಬಲಪಡಿಸಲು ವಿವಿಧ ಸ್ಥಳಗಳಿಂದ ಪಡೆಗಳನ್ನು ಕಳುಹಿಸಲಾಗಿದೆ. ಸದ್ಯ ಉಗ್ರರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಭಾನುವಾರವೇ ತ್ವರಿತ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ವೈದ್ಯಕೀಯ ಸೌಲಭ್ಯಗಳಿಗೆ ತ್ವರಿತವಾಗಿ ಸಾಗಿಸಲಾಯಿತು. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳು ಸೇರಿದಂತೆ ಸ್ಥಳೀಯ ಅಧಿಕಾರಿಗಳು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದರು. ಪ್ರದೇಶವನ್ನು ಸುತ್ತುವರೆದು ತನಿಖೆ ಪ್ರಾರಂಭಿಸಿದರು.

“ಶಿವ್ ಖೋರಿಯಿಂದ ಕತ್ರಾಗೆ ಹೋಗುತ್ತಿದ್ದ ಪ್ರಯಾಣಿಕರ ಬಸ್‌ನ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಿಂದಾಗಿ ಬಸ್ ಚಾಲಕನ ಸಮತೋಲನ ತಪ್ಪಿ ಬಸ್ ಕಂದಕಕ್ಕೆ ಬಿದ್ದಿದೆ. ಘಟನೆಯಲ್ಲಿ 33 ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಪ್ರಯಾಣಿಕರ ಗುರುತು ಇನ್ನೂ ದೃಢಪಟ್ಟಿಲ್ಲ. ಅವರು ಸ್ಥಳೀಯರಲ್ಲ. ಶಿವ ಖೋರಿ ದೇವಾಲಯವನ್ನು ಭದ್ರಪಡಿಸಲಾಗಿದೆ” ಎಂದು ರಿಯಾಸಿಯ ಎಸ್‌ಎಸ್‌ಪಿ ಮೋಹಿತಾ ಶರ್ಮಾ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ಅವಲೋಕಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಅವರನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ಕೇಳಿಕೊಂಡಿದ್ದಾರೆ. “ರಿಯಾಸಿಯಲ್ಲಿ ಯಾತ್ರಾರ್ಥಿಗಳ ಮೇಲೆ ನಡೆದ ದಾಳಿಯ ಘಟನೆಯಿಂದ ಆಳವಾದ ನೋವಾಗಿದೆ. ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮತ್ತು ಡಿಜಿಪಿ ಜೊತೆ ಘಟನೆಯ ಬಗ್ಗೆ ವಿಚಾರಿಸಿದ್ದೇನೆ. ಈ ಭೀಕರ ದಾಳಿಯ ಅಪರಾಧಿಗಳನ್ನು ಬಿಡಲಾಗುವುದಿಲ್ಲ. ದಾಳಿಕೋರರು ಕಾನೂನಿನ ಕ್ರಮವನ್ನು ಎದುರಿಸಬೇಕಾಗುತ್ತದೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಕ್ಸ್‌ನಲ್ಲಿ ಹೇಳಿದ್ದಾರೆ.

“ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ನಡೆದ ದಾಳಿ ಅತ್ಯಂತ ಖಂಡನೀಯ” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎಲ್ಲಾ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಘಟನೆಯನ್ನು ‘ಹೇಡಿತನ’ ಎಂದು ಕರೆದಿರುವ ಅವರು, ಜಮ್ಮು ಮತ್ತು ಕಾಶ್ಮೀರದ ಆತಂಕಕಾರಿ ಭದ್ರತಾ ಪರಿಸ್ಥಿತಿಯ ನೈಜ ಚಿತ್ರಣವನ್ನು ಈ ಘಟನೆ ತೆರೆದಿಡುತ್ತದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ.

ಇದನ್ನೂ ಓದಿ: Terror Attack: ಕಾಶ್ಮೀರದಲ್ಲಿ ಹಿಂದೂ ಯಾತ್ರಿಗಳಿದ್ದ ಬಸ್‌ ಮೇಲೆ ಉಗ್ರರ ದಾಳಿ; 10 ಸಾವು

Continue Reading

Latest

T20 World Cup : ಪಾಕಿಸ್ತಾನಕ್ಕೆ ಸಂಕಷ್ಟ ತಂದಿಟ್ಟ ಭಾರತ; ಸೂಪರ್ 8 ಹಂತ ಪ್ರವೇಶವೂ ಕಷ್ಟ!

T20 World Cup : ಸದ್ಯದ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಆಡಿರುವ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ನಾಲ್ಕು ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಇದು ಅವರ ನೆಟ್ ರನ್ ರೇಟ್ (ಎನ್ಆರ್ಆರ್) ಅನ್ನು +1.455 ಕ್ಕೆ ಹೆಚ್ಚಿಸಿದೆ. ಭಾರತದಷ್ಟೇ ಅಂಕ ಹೊಂದಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ನಂತರದ ಸ್ಥಾನದಲ್ಲಿದೆ.

VISTARANEWS.COM


on

T20 World Cup
Koo

ನ್ಯೂಯಾರ್ಕ್​: ಇಲ್ಲಿ ಭಾನುವಾರ ರಾತ್ರಿ ನಡೆದ ಟಿ 20 ವಿಶ್ವಕಪ್ 2024ರ (T20 World Cup) 19 ನೇ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಪಾಕಿಸ್ತಾನ (Pakistan Cricket Team) ಮುಖಾಮುಖಿಯಾದಾಗ ಟೂರ್ನಿಯ ಕೇಂದ್ರ ಬಿಂದು ಎಂದು ಹೇಳಲಾಯಿತು. ಅದು ಸಾಕ್ಷಿ ಸಮೇತ ಸಾಬೀತು ಕೂಡ ಆಗಿದೆ. ಟಾಸ್ ಗೆದ್ದ ನಂತರ ನಾಯಕ ಬಾಬರ್ ಅಜಮ್ ಭಾರತ ತಂಡಕ್ಕೆ ಬ್ಯಾಟ್ ಮಾಡಲು ಆಹ್ವಾನ ಕೊಟ್ಟರು. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬೇಗ ಔಟಾದಾಗ ಇದು ಸರಿ ಎನಿಸಿತು. ಆದರೆ, ಸಿಕ್ಕ ಅವಕಾಶವನ್ನು ಕಳೆದುಕೊಂಡ ಪಾಕಿಸ್ತಾನ ತಂಡ ಕೊನೆಯಲ್ಲಿ 6 ರನ್​ಗಳಿಂದ ಸೋತಿತು. ಈ ಮೂಲಕ ಪರಿತಪಿಸಲು ಆರಂಭಿಸಿದೆ. ಭಾರತ ತಂಡದ ಪಾಕಿಸ್ತಾನದ ಸೂಪರ್-8 ಹಂತದ ಪ್ರವೇಶಕ್ಕೆ ಮುಳ್ಳಾಗಿದೆ.

ಪಂದ್ಯದಲ್ಲಿ ಭಾರತ ಪರ ಯುವ ಬ್ಯಾಟರ್​ ರಿಷಭ್ ಪಂತ್ 41 ರನ್ ಬಾರಿಸಿದರು. ಅವರ ರನ್​ ಭಾರತ ಪರ ಗರಿಷ್ಠ ಸ್ಕೋರ್. ಆದರೆ ನಸೀಮ್ ಶಾ ಮತ್ತು ಮೊಹಮ್ಮದ್ ಅಮೀರ್ ಅವರ ಬೌಲಿಂಗ್ ಸ್ಪೆಲ್​ಗಳು ಭಾರತದ ಬ್ಯಾಟಿಂಗ್ ಘಟಕವನ್ನು ಧೂಳಿಪಟ ಮಾಡಿದರು. ಒಂದು ಬಾರಿ ಕುಸಿದ ಭಾರತ ಚೇತರಿಸಿಕೊಳ್ಳಲೇ ಇಲ್ಲ. ಅಂತಿಮವಾಗಿ 18.3 ಓವರ್​ಗಳಲ್ಲಿ 119 ರನ್​ಗಳಿಗೆ ಆಲ್​ಔಟ್ ಆಯಿತು.

ಉತ್ತರವಾಗಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಎಚ್ಚರಿಕೆಯಿಂದ ಇನಿಂಗ್ಸ್​​ ಪ್ರಾರಂಭಿಸಿದರು. ಆದರೆ ಶೀಘ್ರದಲ್ಲೇ ಜಸ್ಪ್ರೀತ್ ಬುಮ್ರಾ ಭಾರತಕ್ಕೆ ಪ್ರಗತಿ ತಂದುಕೊಟ್ಟರು. ಆದಾಗ್ಯೂ, ರಿಜ್ವಾನ್ ತಳವೂರಿ ಆಡಿ ಸ್ಕೋರ್ ಬೋರ್ಡ್ ಹಿಗ್ಗಿಸಲು ಯತ್ನಿಸಿದರು. ಆದರೆ ಮೊಹಮ್ಮದ್ ಸಿರಾಜ್ ಮತ್ತು ನಂತರ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಅವರ ಕೆಲವು ಬಿಗಿಯಾದ ಸ್ಪೆಲ್​ಗಳು ಪಾಕಿಸ್ತಾನಕ್ಕೆ ರನ್​ ಗಳಿಸಲು ಕೊಂಚವೂ ಅವಕಾಶ ಕೊಡಲಿಲ್ಲ. ನಂತರ, ಬುಮ್ರಾ 19 ನೇ ಓವರ್​ನಲ್ಲಿ ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ಭಾರತ ತಂಡ ಪರ ತಿರುಗಿಸಿದರು. ಅಲ್ಲದೆ ಮತ್ತೊಮ್ಮೆ ತಾವು ಮ್ಯಾಚ್ ವಿನ್ನರ್ ಎಂಬುದನ್ನು ಸಾಬೀತುಪಡಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಆಡಿರುವ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ನಾಲ್ಕು ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಇದು ಅವರ ನೆಟ್ ರನ್ ರೇಟ್ (ಎನ್ಆರ್ಆರ್) ಅನ್ನು +1.455 ಕ್ಕೆ ಹೆಚ್ಚಿಸಿದೆ. ಭಾರತದಷ್ಟೇ ಅಂಕ ಹೊಂದಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ನಂತರದ ಸ್ಥಾನದಲ್ಲಿದೆ. ಅವರ ನೆಟ್ ರನ್ ರೇಟ್ ಪ್ರಸ್ತುತ +0.626 ಆಗಿದೆ. ಇದಲ್ಲದೆ, ಆರಂಭಿಕ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಸೋತ ನಂತರ ಐರ್ಲೆಂಡ್ ಅನ್ನು ಸೋಲಿಸಿದ ಕೆನಡಾ ಮೂರನೇ ಸ್ಥಾನದಲ್ಲಿದೆ. ಪಾಕಿಸ್ತಾನ ಮತ್ತು ಐರ್ಲೆಂಡ್ ಪ್ರಸ್ತುತ ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿವೆ. ಪಾಕ್​ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಇನ್ನೂ ಖಾತೆ ತೆರೆದಿಲ್ಲ. ಹೀಗಾಗಿ ಸೂಪರ್ 8 ರೌಂಡ್ ಅರ್ಹತೆಯ ಬೇಟೆಯಲ್ಲಿ ಆ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ.

ಪಾಕಿಸ್ತಾನದ ಪರಿಸ್ಥಿತಿ ಏನು?

ಮುಂದಿನ ಪಂದ್ಯಗಳಲ್ಲಿ ನೆಟ್ ರನ್ ರೇಟ್ (ಎನ್ಆರ್​ಆರ್​) ವಿಷಯದಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ ಪಾಕಿಸ್ತಾನ ತಂಡವು ಈಗ ಇತರ ತಂಡಗಳನ್ನು ಅವಲಂಬಿಸಬೇಕಾಗಿದೆ. ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಲು ಪಾಕ್​ ಮೊದಲು ಗ್ರೂಪ್ ಹಂತದ ಉಳಿದ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಇದೇ ವೇಳೆ ಅಮೆರಿಕ ಮತ್ತು ಐರ್ಲೆಂಡ್​​ ಭಾರತ ವಿರುದ್ಧ ಸೋಲಲೇಬೇಕು. ಹಾಗಾದರೆ ಮಾತ್ರ ಯುಎಸ್ಎ ತಂಡ ಆರು ಅಂಕಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ:IND vs PAK : ಪಾಕಿಸ್ತಾನದ ಬೌಲರ್​ ವಿರುದ್ಧ ವಿಶೇಷ ದಾಖಲೆ ಮಾಡಿದ ರೋಹಿತ್ ಶರ್ಮಾ

ಕುತೂಹಲಕಾರಿ ಸಂಗತಿಯೆಂದರೆ, ಐರ್ಲೆಂಡ್ ಯುಎಸ್ಎ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ, ಇದು ಪಾಕಿಸ್ತಾನಕ್ಕೆ ಅವಕಾಶ ಕೊಡಲಿದೆ. ತಮ್ಮ ಉಳಿದ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದು ಮತ್ತು ಭಾರತ ಅಥವಾ ಯುಎಸ್ಎಗಿಂತ ಉತ್ತಮ ರನ್ ರೇಟ್ ಹೊಂದಿದರೆ ಟಿ 20 ವಿಶ್ವಕಪ್ 2024 ರ ಸೂಪರ್ 8 ಸುತ್ತಿಗೆ ಪ್ರವೇಶಿಸಬಹುದು. ಇಲ್ಲದಿದ್ದರೆ ಪಾಕಿಸ್ತಾನ ಗುಂಪು ಹಂತದಿಂದಲೇ ಹೊರಕ್ಕೆ ಹೋಗುವುದು ಖಚಿತ.

ಟೀಮ್ ಇಂಡಿಯಾದ ಹೇಳುವುದಾದರೆ ಈಗಾಗಲೇ ಮುಂಚೂಣಿ ಸ್ಥಾನ ಪಡೆದುಕೊಂಡಿದೆ. ಗುಂಪಿನ ಅಗ್ರಸ್ಥಾನಿಗಳಾಗಿ ಉಳಿಯಲು ಇನ್ನೂ ಒಂದು ಪಂದ್ಯ ಗೆಲ್ಲಬೇಕು. ಆದ್ದರಿಂದ ಜೂನ್ 12 ರಂದು ಯುಎಸ್ಎ ವಿರುದ್ಧ ಗೆದ್ದರೆ ಸಾಕು. ಭಾರತಕ್ಕೆ ಕೆನಡಾ ವಿರುದ್ಧ ಇನ್ನೊಂದು ಪಂದ್ಯವಿದೆ. ಆದಾಗ್ಯೂ ಅಮೆರಿಕ ಮಣಿಸಿದರೆ ಸೂಪರ್8 ಸ್ಥಾನ ಖಾತರಿ.

Continue Reading

ಪ್ರಮುಖ ಸುದ್ದಿ

IND vs PAK : ಪಾಕಿಸ್ತಾನದ ಬೌಲರ್​ ವಿರುದ್ಧ ವಿಶೇಷ ದಾಖಲೆ ಮಾಡಿದ ರೋಹಿತ್ ಶರ್ಮಾ

IND vs PAK : ರೋಹಿತ್ ಶರ್ಮಾ ಓವರ್​ನ ಮೊದಲ ಎಸೆತದಲ್ಲಿ 2 ರನ್ ಗಳಿಸಿದರು ಮತ್ತು ನಂತರ ಅವರು ಹಿಂತಿರುಗಿ ನೋಡಲಿಲ್ಲ. ಓವರ್​ನ ಮೂರನೇ ಎಸೆತದಲ್ಲಿ ಎಡಗೈ ವೇಗಿ ಅಫ್ರಿದಿಗೆ ಅದ್ಭುತ ಸಿಕ್ಸರ್ ಬಾರಿಸಿದರು. ಇದು ಈ ಪಂದ್ಯದ ಅದ್ಭುತ ಸಿಕ್ಸರ್​. ಶಾಹಿನ್ ಅಫ್ರಿದಿ ಫುಲ್ ಲೆಂತ್ ಎಸೆತವನ್ನು ಎಸೆದಿದ್ದರು. ಅದು ರೋಹಿತ್​ ಪ್ಯಾಡ್​ಗಳಿಗೆ ಬಡಿಯಬೇಕಿತ್ತು. ಆದರೆ ಫ್ಲಿಕ್ ಮಾಡಿದ ರೋಹಿತ್ ಸಿಕ್ಸರ್ ಬಾರಿಸಿದರು.

VISTARANEWS.COM


on

IND vs PAK
Koo

ಬೆಂಗಳೂರು: ಪಾಕಿಸ್ತಾನ ವಿರುದ್ಧ ಪಂದ್ಯವನ್ನು (IND vs PAK) ಗೆದ್ದ ನಂತರ ಭಾರತ ಕ್ರಿಕೆಟ್​ ತಂಡದ ಅಭಿಮಾನಿಗಳು ತುಂಬಾ ಖುಷಿಯಲ್ಲಿದ್ದಾರೆ. ಯಾಕೆಂದರೆ ಟಿ20 ವಿಶ್ವ ಕಪ್​ನಲ್ಲಿ(T20 World Cup) ಭಾರತ ತಂಡದ ಪಾರಮ್ಯ 8-1 ಕ್ಕೆ ಮುನ್ನಡೆದಿದೆ. ಆದಾಗ್ಯೂ ಭಾರತ ತಂಡದ ಬ್ಯಾಟಿಂಗ್ ಪ್ರದರ್ಶನದ ಮೇಲೆ ಕಟ್ಟರ್ ಅಭಿಮಾನಿಗಳಿಗೆ ಕೋಪವಿದೆ. ಆದರೆ, ಬೌಲರ್​ಗಳು ತಂಡವನ್ನು ರಕ್ಷಿಸಿರುವ ಪರಿಗೆ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ನಾಯಕ ರೋಹಿತ್ ಶರ್ಮಾ(Rohit Sharma) , ವಿರಾಟ್ ಕೊಹ್ಲಿಯಂಥ ವಿಶ್ವ ದರ್ಜೆಯ ಬ್ಯಾಟರ್​ಗಳ ಬಗ್ಗೆ ಪ್ರಶ್ನಿಸಲು ಆರಂಭಿಸಿದ್ದಾರೆ. ಇವೆಲ್ಲದರ ನಡುವೆಯೂ ನಾಯಕ ರೋಹಿತ್​ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ.

ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ನಾಯಕ ಬಾಬರ್​ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಭಾರತ ಉತ್ತಮ ಆರಂಭವನ್ನು ಪಡೆಯಿತು. ನಾಯಕ ರೋಹಿತ್ ಶರ್ಮಾ ಎಡಗೈ ವೇಗಿ ಶಾಹೀನ್ ಅಫ್ರಿದಿ ವಿರುದ್ಧ ಅಬ್ಬರಿಸಿದರು. ಆದರೆ 13 ರನ್ ಗೆ ಸೀಮಿತಗೊಂಡರು. ಅದಕ್ಕಿಂತ ಮೊದಲು ಅವರು ಇನಿಂಗ್ಸ್​​ನ ಮೊದಲ ಓವರ್​ನಲ್ಲಿಯೇ ಅದ್ಭುತ ಸಿಕ್ಸರ್ ಒಂದನ್ನು ಬಾರಿಸಿದ್ದರು. ಇದು ಅಲ್ಲಿನ ಅಭಿಮಾನಿಗಳ ಕಣ್ಮನ ಸೆಳೆಯಿತು.

ರೋಹಿತ್ ಶರ್ಮಾ ಓವರ್​ನ ಮೊದಲ ಎಸೆತದಲ್ಲಿ 2 ರನ್ ಗಳಿಸಿದರು ಮತ್ತು ನಂತರ ಅವರು ಹಿಂತಿರುಗಿ ನೋಡಲಿಲ್ಲ. ಓವರ್​ನ ಮೂರನೇ ಎಸೆತದಲ್ಲಿ ಎಡಗೈ ವೇಗಿ ಅಫ್ರಿದಿಗೆ ಅದ್ಭುತ ಸಿಕ್ಸರ್ ಬಾರಿಸಿದರು. ಇದು ಈ ಪಂದ್ಯದ ಅದ್ಭುತ ಸಿಕ್ಸರ್​. ಶಾಹಿನ್ ಅಫ್ರಿದಿ ಫುಲ್ ಲೆಂತ್ ಎಸೆತವನ್ನು ಎಸೆದಿದ್ದರು. ಅದು ರೋಹಿತ್​ ಪ್ಯಾಡ್​ಗಳಿಗೆ ಬಡಿಯಬೇಕಿತ್ತು. ಆದರೆ ಫ್ಲಿಕ್ ಮಾಡಿದ ರೋಹಿತ್ ಸಿಕ್ಸರ್ ಬಾರಿಸಿದರು.

ಶಾಹೀನ್ ಅಫ್ರಿದಿ ವಿರುದ್ಧದ ಮೊದಲ ಓವರ್​ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ರೋಹಿತ್ ಶರ್ಮಾ ಇತ್ತಂಡಗಳ ಮುಖಾಮುಖಿ ಇತಿಹಾಸದಲ್ಲಿ ಪಾಕಿಸ್ತಾನದ ಎಡಗೈ ವೇಗಿ ಶಾಹೀನ್ ಅಫ್ರಿದಿ ವಿರುದ್ಧ ವಿಶೇಷ ದಾಖಲೆ ಬರೆದರು. ಎಡಗೈ ವೇಗಿ ವಿರುದ್ಧ ಇನ್ನಿಂಗ್ಸ್​​ನ ಮೊದಲ ಓವರ್​ನಲ್ಲಿ ಎರಡು ಸಿಕ್ಸರ್​ ಬಾರಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರೋಹಿತ್​ ಏಕದಿನ ಮಾದರಿಯಲ್ಲೂ ಅದೇ ದಾಖಲೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ: IND vs PAK : ಭಾರತ ಪರ ಬೆಟ್ಟಿಂಗ್ ಕಟ್ಟಿ 5.4 ಕೋಟಿ ರೂಪಾಯಿ ಗೆದ್ದ ಕೆನಡಾದ ರ್ಯಾಪರ್ ಡ್ರೇಕ್!

ಶ್ರೀಲಂಕಾದಲ್ಲಿ ನಡೆದ ಏಷ್ಯಾ ಕಪ್ 2023 ರ ಸೂಪರ್ ಫೋರ್ ಪಂದ್ಯದಲ್ಲಿ ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ರೋಹಿತ್ ಅಲ್ಲಿಯೂ ಇದೇ ರೀತಿಯ ಸಿಕ್ಸರ್ ಅನ್ನು ಹೊಡೆದಿದ್ದರು.

ಗೆಲುವು ತಂದುಕೊಟ್ಟ ಬೌಲರ್​ಗಳು

ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತೀಯ ಬೌಲಿಂಗ್ ವಿಭಾಗ ಬ್ಯಾಟರ್​ಗಳು ಪೇರಿಸಿದ್ದ 119 ರನ್​ಗಳ ಸಾಧಾರಣ ಮೊತ್ತವನ್ನು ಯಶಸ್ವಿಯಾಗಿ ರಕ್ಷಿಸಿತು ಈ ಭಾರೀ ಜಿದ್ದಾಜಿದ್ದಿನ ಹೋರಾಟಕ್ಕೆ 34,000 ಕ್ಕೂ ಹೆಚ್ಚು ಅಭಿಮಾನಿಗಳು ಸಾಕ್ಷಿಯಾಗಿದ್ದರು. ಬುಮ್ರಾ ಅವರ ಅಸಾಧಾರಣ ಪ್ರದರ್ಶನವು ಪಾಕಿಸ್ತಾನ ವಿರುದ್ಧದ ಭಾರತದ ಗೆಲುವಿನಲ್ಲಿ ನಿರ್ಣಾಯಕ ಅಂಶವೆಂದು ಸಾಬೀತಾಗಿದೆ. ಯಾಕೆಂದರೆ ಈ ಹಂತದಲ್ಲಿ ಪಾಕಿಸ್ತಾನದ ಗೆಲುವಿನ ನಿರೀಕ್ಷೆ ಶೇಕಡಾ 92 ರಷ್ಟು ಇದ್ದರೆ, ಭಾರತದ್ದು ಕೇವಲ 8% ಇತ್ತು. ಆದರೆ, ಫಲಿತಾಂಶ ಮಾತ್ರ ಉಲ್ಟಾ ಆಯಿತು. ವಿಶ್ವ ವೇದಿಕೆಯಲ್ಲಿ ನಾವೇ ಬಾಸ್​ ಎಂಬುದನ್ನು ಭಾರತ ಮತ್ತೊಂದು ಬಾರಿ ಸಾಕ್ಷಿ ಸಮೇತ ತೋರಿಸಿತು.

ಭಾರತವು 119 ರನ್​ಗಳ ಸಾಧಾರಣ ಮೊತ್ತವನ್ನು ರಕ್ಷಿಸಿದಾಗ, ಅವರ ಪ್ರತಿಭೆ ಅನಾವರಣಗೊಂಡಿತು. 3 ವಿಕೆಟ್​ಗೆ 80 ರನ್ ಗಳಿಸಿದ್ದ ಪಾಕಿಸ್ತಾನವು ಅಂತಿಮವಾಗಿ 113 ರನ್​ಗೆ ಸೀಮಿತಗೊಂಡಿದ್ದು ಭಾರತ ತಂಡದ ಸಾಮರ್ಥ್ಯಕ್ಕೆ ಸಾಕ್ಷಿ. ಈ ಪ್ರದರ್ಶನವು ಬುಮ್ರಾ ಅವರ ಶ್ರೇಷ್ಠ ವೃತ್ತಿಜೀವನದಲ್ಲಿ ಸ್ಮರಣೀಯ ಎನಿಸಿಕೊಳ್ಳಲಿದೆ. ಪಾಕ್​ ತಂಡದ ರನ್​ ಎಚ್ಚರಿಕೆಯಿಂದ ಪ್ರಾರಂಭವಾಗಿತ್ತು. ಮೊಹಮ್ಮದ್ ರಿಜ್ವಾನ್ 31 ರನ್ ಗಳಿಸಿ ಇನ್ನಿಂಗ್ಸ್ ಗೆ ಭದ್ರ ಬುನಾದಿ ಹಾಕಿದ್ದರು. ಆದಾಗ್ಯೂ, ನಿಯಮಿತವಾಗಿ ವಿಕೆಟ್​ಗಳು ಕಳೆದುಕೊಂಡ ಕಾರಣ ಪಾಕಿಸ್ತಾನದ ವೇಗಕ್ಕೆ ಅಡ್ಡಿಯಾಯಿತು.

Continue Reading

ಕ್ರೀಡೆ

IND vs PAK : ಭಾರತಕ್ಕೆ ಗೆಲುವಿನ ಚಾನ್ಸ್ ಕೇವಲ ಶೇ. 8, ಪಾಕ್ ಗೆ ಶೇ.92 ಇತ್ತು; ಆದರೆ…

IND vs PAK: ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ವೇಗದ ಬೌಲಿಂಗ್​ನಲ್ಲಿ ಮಾಸ್ಟರ್ ಕ್ಲಾಸ್ ಪ್ರದರ್ಶನ ನೀಡಿದ್ದರು. ನಿರ್ಣಾಯಕ ವಿಕೆಟ್​ಗಳನ್ನು ಅವರು ಪಡೆದರು. 14 ರನ್​ ವೆಚ್ಚದಲ್ಲಿ 3 ವಿಕೆಟ್​ ಪಡೆದ ಅಸಾಧಾರಣ ಅಂಕಿಅಂಶಗಳೊಂದಿಗೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಸ್ಪೆಲ್​ನಲ್ಲಿ 15 ಡಾಟ್ ಬಾಲ್ ಇದ್ದವು. ಇದರಿಂದಲೇ ಪಾಕ್​ ತಂಡಕ್ಕೆ ಒತ್ತಡ ಎದುರಾಯಿತು.

VISTARANEWS.COM


on

IND vs PAK
Koo

ಬೆಂಗಳೂರು : ನ್ಯೂಯಾರ್ಕ್​ನ ನಸ್ಸೌ ಕೌಂಟಿ ಇಂಟರ್​​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗು ಬಡಿದಿದೆ. ಈ ಮೂಲಕ ಟಿ20 ವಿಶ್ವ ಕಪ್​ ಇತಿಹಾಸದ ಮುಖಾಮುಖಿಯಲ್ಲಿ 8-1 ರ ಮುನ್ನಡೆ ಪಡೆದುಕೊಂಡಿದೆ. ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತೀಯ ಬೌಲಿಂಗ್ ವಿಭಾಗ ಬ್ಯಾಟರ್​ಗಳು ಪೇರಿಸಿದ್ದ 119 ರನ್​ಗಳ ಸಾಧಾರಣ ಮೊತ್ತವನ್ನು ಯಶಸ್ವಿಯಾಗಿ ರಕ್ಷಿಸಿದೆ. ಈ ಭಾರೀ ಜಿದ್ದಾಜಿದ್ದಿನ ಹೋರಾಟಕ್ಕೆ 34,000 ಕ್ಕೂ ಹೆಚ್ಚು ಅಭಿಮಾನಿಗಳು ಸಾಕ್ಷಿಯಾಗಿದ್ದರು. ಬುಮ್ರಾ ಅವರ ಅಸಾಧಾರಣ ಪ್ರದರ್ಶನವು ಪಾಕಿಸ್ತಾನ ವಿರುದ್ಧದ ಭಾರತದ ಗೆಲುವಿನಲ್ಲಿ ನಿರ್ಣಾಯಕ ಅಂಶವೆಂದು ಸಾಬೀತಾಗಿದೆ. ಯಾಕೆಂದರೆ ಈ ಹಂತದಲ್ಲಿ ಪಾಕಿಸ್ತಾನದ ಗೆಲುವಿನ ನಿರೀಕ್ಷೆ ಶೇಕಡಾ 92 ರಷ್ಟು ಇದ್ದರೆ, ಭಾರತದ್ದು ಕೇವಲ 8% ಇತ್ತು. ಆದರೆ, ಫಲಿತಾಂಶ ಮಾತ್ರ ಉಲ್ಟಾ ಆಯಿತು. ವಿಶ್ವ ವೇದಿಕೆಯಲ್ಲಿ ನಾವೇ ಬಾಸ್​ ಎಂಬುದನ್ನು ಭಾರತ ಮತ್ತೊಂದು ಬಾರಿ ಸಾಕ್ಷಿ ಸಮೇತ ತೋರಿಸಿತು.

ಭಾರತವು 119 ರನ್​ಗಳ ಸಾಧಾರಣ ಮೊತ್ತವನ್ನು ರಕ್ಷಿಸಿದಾಗ, ಅವರ ಪ್ರತಿಭೆ ಅನಾವರಣಗೊಂಡಿತು. 3 ವಿಕೆಟ್​ಗೆ 80 ರನ್ ಗಳಿಸಿದ್ದ ಪಾಕಿಸ್ತಾನವು ಅಂತಿಮವಾಗಿ 113 ರನ್​ಗೆ ಸೀಮಿತಗೊಂಡಿದ್ದು ಭಾರತ ತಂಡದ ಸಾಮರ್ಥ್ಯಕ್ಕೆ ಸಾಕ್ಷಿ. ಈ ಪ್ರದರ್ಶನವು ಬುಮ್ರಾ ಅವರ ಶ್ರೇಷ್ಠ ವೃತ್ತಿಜೀವನದಲ್ಲಿ ಸ್ಮರಣೀಯ ಎನಿಸಿಕೊಳ್ಳಲಿದೆ. ಪಾಕ್​ ತಂಡದ ರನ್​ ಎಚ್ಚರಿಕೆಯಿಂದ ಪ್ರಾರಂಭವಾಗಿತ್ತು. ಮೊಹಮ್ಮದ್ ರಿಜ್ವಾನ್ 31 ರನ್ ಗಳಿಸಿ ಇನ್ನಿಂಗ್ಸ್ ಗೆ ಭದ್ರ ಬುನಾದಿ ಹಾಕಿದ್ದರು. ಆದಾಗ್ಯೂ, ನಿಯಮಿತವಾಗಿ ವಿಕೆಟ್​ಗಳು ಕಳೆದುಕೊಂಡ ಕಾರಣ ಪಾಕಿಸ್ತಾನದ ವೇಗಕ್ಕೆ ಅಡ್ಡಿಯಾಯಿತು.

ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ವೇಗದ ಬೌಲಿಂಗ್​ನಲ್ಲಿ ಮಾಸ್ಟರ್ ಕ್ಲಾಸ್ ಪ್ರದರ್ಶನ ನೀಡಿದ್ದರು. ನಿರ್ಣಾಯಕ ವಿಕೆಟ್​ಗಳನ್ನು ಅವರು ಪಡೆದರು. 14 ರನ್​ ವೆಚ್ಚದಲ್ಲಿ 3 ವಿಕೆಟ್​ ಪಡೆದ ಅಸಾಧಾರಣ ಅಂಕಿಅಂಶಗಳೊಂದಿಗೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಸ್ಪೆಲ್​ನಲ್ಲಿ 15 ಡಾಟ್ ಬಾಲ್ ಇದ್ದವು. ಇದರಿಂದಲೇ ಪಾಕ್​ ತಂಡಕ್ಕೆ ಒತ್ತಡ ಎದುರಾಯಿತು.

ಒಂದು ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿದ್ದ ಪಾಕಿಸ್ತಾನ ಗೆಲುವಿನ ಕಡೆಗೆ ಸಾಗಿತ್ತ. ಮುಹಮ್ಮದ್ ರಿಜ್ವಾನ್, ಬಾಬರ್ ಅಜಮ್ ಮತ್ತು ಉಸ್ಮಾನ್ ಖಾನ್ ನಡುವಿನ ಅಗ್ರ ಮೂರು ಜೊತೆಯಾಟಗಳು ಮೆನ್ ಇನ್ ಗ್ರೀನ್​ಗೆ ಆರಂಭಿಕ ಮುನ್ನಡೆ ತಂದುಕೊಟ್ಟಿತ್ತು. ಆದರೆ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರ ಮಾರಕ ದಾಳಿಗೆ ಪಾಕಿಸ್ತಾನದ ಅವನತಿ ಶುರುವಾಯಿತು. ಪಾಕಿಸ್ತಾನ 11.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದ್ದಾಗ ಆ ತಂಡದ ಗೆಲುವಿನ ನಿರೀಕ್ಷೆ ಶೇ.92ರಷ್ಟಿತ್ತು. ಭಾರತದ ಅಭಿಮಾನಿಗಳೆಲ್ಲರೂ ಸೋಲು ನಿರೀಕ್ಷಿತ ಎಂದು ಅಂದುಕೊಂಡಿದ್ದರು. ಇನ್ನು ಮ್ಯಾಚ್ ನೋಡುವುದು ಬೇಡ ಎಂದು ಮಲಗಿದ್ದರು. ಆದರೆ, ಬೆಳಗ್ಗೆದ್ದು ನೋಡುವಾಗ ಭಾರತ ಗೆದ್ದಿತ್ತು. ಇದು ಭಾರತದ ಬೌಲರ್​ಗಳ ಸಾಮರ್ಥ್ಯದಿಂದ ಎಂಬುದು ಅರ್ಥವಾಯಿತು. ಗೆದ್ದೇ ಗೆಲ್ಲುತ್ತೇವೆ ಎಂದು ಅಂದುಕೊಂಡಿದ್ದ ಪಾಕಿಸ್ತಾನದ ಅಭಿಮಾನಿಗಳ ಒಣ ಜಂಭ ಠುಸ್ ಎಂದಿತು.

ಸತತ ಎರಡು ಅವಮಾನ

ಪಾಕಿಸ್ತಾನ 12.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿ ಗೆಲುವಿನ ಹಾದಿಯಲ್ಲಿತ್ತು. ಆದರೆ 20 ಓವರ್ ಗಳಲ್ಲಿ ಆ ತಂಡ 7 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿ ಸೋತಿತು. ಅಲ್ಲದೆ ಗ್ರೂಪ್ ಹಂತದಲ್ಲಿ ಸತತ ಎರಡನೇ ಪಂದ್ಯವನ್ನು ಕಳೆದುಕೊಂಡಿತು. ಈ ಹಿಂದೆ ಕ್ರಿಕೆಟ್​ ಶಿಶು ಅಮೆರಿಕ ವಿರುದ್ಧ ಹೀನಾಯವಾಗಿ ಸೂಪರ್ ಓವರ್​ನಲ್ಲಿ ಸೋತಿತ್ತು. ನಮ್ಮದು ಬೆಸ್ಟ್ ಬೌಲಿಂಗ್ ಘಟಕ ಎಂದು ಹೇಳಿಕೊಳ್ಳುವ ಪಾಕ್​ ಮತ್ತೊಮ್ಮೆ ಅವಮಾನಕ್ಕೆ ಒಳಗಾಯಿತು.

ಇದನ್ನೂ ಓದಿ:IND vs PAK : ಭಾರತ ಪರ ಬೆಟ್ಟಿಂಗ್ ಕಟ್ಟಿ 5.4 ಕೋಟಿ ರೂಪಾಯಿ ಗೆದ್ದ ಕೆನಡಾದ ರ್ಯಾಪರ್ ಡ್ರೇಕ್!

ಶೇ.8ರಷ್ಟು ಗೆಲುವಿನ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಭಾರತ ಸತತ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಟಿ20ಐನಲ್ಲಿ ಭಾರತ ಸಾಧಿಸಿದ ಅತ್ಯಂತ ಕಡಿಮೆ ಗುರಿ

120 ರನ್ – ಪಾಕ್ ವಿರುದ್ಧ , ನ್ಯೂಯಾರ್ಕ್ 2024 *

139 ರನ್​, ಜಿಂಬಾಬ್ವೆ ವಿರುದ್ಧ ಹರಾರೆ 2016

145 – ಇಂಗ್ಲೆಂಡ್ ವಿರುದ್ಧ ನಾಗಪುರ- 2017

147 ರನ್​​- ಬಾಂಗ್ಲಾದೇಶ ವಿರುದ್ಧ- ಬೆಂಗಳೂರು 2016

ಟಿ20 ವಿಶ್ವಕಪ್​ನಲ್ಲಿ ರಕ್ಷಿಸಿದ ಸಣ್ಣ ಮೊತ್ತಗಳು

120 ರನ್​, ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ, ಚಟ್ಟೋಗ್ರಾಮ್ 2014

120 ರನ್- ಪಾಕಿಸ್ತಾನ ವಿರುದ್ಧ​ ಭಾರತ, ನ್ಯೂಯಾರ್ಕ್ 2024 *

124 ವೆಸ್ಟ್ ಇಂಡೀಸ್ ವಿರುದ್ಧ ಅಫಘಾನಿಸ್ತಾನ- ನಾಗ್ಪುರ 2016

Continue Reading
Advertisement
reasi terror attack
ಪ್ರಮುಖ ಸುದ್ದಿ24 mins ago

Terror Attack: ಕಂದಮ್ಮನನ್ನೂ ಕೊಂದ ಉಗ್ರರು; ಎದೆಗೆ ಗುಂಡು ಬಿದ್ದರೂ ಪ್ರಯಾಣಿಕರನ್ನು ಉಳಿಸಲು ಯತ್ನಿಸಿದ್ದ ಚಾಲಕ

T20 World Cup
Latest39 mins ago

T20 World Cup : ಪಾಕಿಸ್ತಾನಕ್ಕೆ ಸಂಕಷ್ಟ ತಂದಿಟ್ಟ ಭಾರತ; ಸೂಪರ್ 8 ಹಂತ ಪ್ರವೇಶವೂ ಕಷ್ಟ!

Kangana Ranaut Looks Gorgeous In A White Saree
ಬಾಲಿವುಡ್40 mins ago

Kangana Ranaut: ಪ್ರಮಾಣ ವಚನ ಸಮಾರಂಭದಲ್ಲಿ ಬಿಳಿ ಸೀರೆಯಲ್ಲಿ ಮಿಂಚಿದ ಕಂಗನಾ!

IND vs PAK
ಪ್ರಮುಖ ಸುದ್ದಿ1 hour ago

IND vs PAK : ಪಾಕಿಸ್ತಾನದ ಬೌಲರ್​ ವಿರುದ್ಧ ವಿಶೇಷ ದಾಖಲೆ ಮಾಡಿದ ರೋಹಿತ್ ಶರ್ಮಾ

IND vs PAK
ಕ್ರೀಡೆ2 hours ago

IND vs PAK : ಭಾರತಕ್ಕೆ ಗೆಲುವಿನ ಚಾನ್ಸ್ ಕೇವಲ ಶೇ. 8, ಪಾಕ್ ಗೆ ಶೇ.92 ಇತ್ತು; ಆದರೆ…

Poonam Pandey making cake with ice cream with hot look
ಬಾಲಿವುಡ್2 hours ago

Poonam Pandey: ಪೂನಂ ಪಾಂಡೆಯ ರೆಸಿಪಿಗಿಂತ ಏಪ್ರನ್ ಮೇಲೆ ನೆಟ್ಟಿಗರ ಕಣ್ಣು; ರಸಿಕರ ಕಣ್ಣರಳಿಸಿದ ಹಾಟ್‌ ಬೆಡಗಿ!

Vastu Tips
ಧಾರ್ಮಿಕ2 hours ago

Vastu Tips: ನೆಮ್ಮದಿಯಿಂದ ನಿದ್ದೆ ಮಾಡಬೇಕೆ? ಈ ವಾಸ್ತು ನಿಯಮ ಪಾಲಿಸಿ

pm narendra Modi Cabinet
ಪ್ರಮುಖ ಸುದ್ದಿ2 hours ago

PM Narendra Modi: ಇಂದು ಸಂಜೆ ನರೇಂದ್ರ ಮೋದಿ ಸಂಪುಟ ಮೊದಲ ಸಭೆ; ಏನು ಅಜೆಂಡಾ?

Narendra Modi Oath Ceremony Celebs Congratulate PM Modi
ಸಿನಿಮಾ2 hours ago

Narendra Modi: ಪ್ರಧಾನಿ ಮೋದಿಗೆ ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಮಹಾಪೂರ !

IND vs PAK
ಪ್ರಮುಖ ಸುದ್ದಿ2 hours ago

IND vs PAK : ಭಾರತ ಪರ ಬೆಟ್ಟಿಂಗ್ ಕಟ್ಟಿ 5.4 ಕೋಟಿ ರೂಪಾಯಿ ಗೆದ್ದ ಕೆನಡಾದ ರ್ಯಾಪರ್ ಡ್ರೇಕ್!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ7 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌