ಕಾಬೂಲ್: ಅಫಘಾನಿಸ್ತಾನದ ಹಿಡಿತ ಸಾಧಿಸಿಕೊಂಡಿರುವ ತಾಲಿಬಾನಿಗಳು ಇದೀಗ ಪಾಕಿಸ್ತಾನದ ವಿರುದ್ಧ ತಿರುಗಿ ಬೀಳಲಾರಂಭಿಸಿದ್ದಾರೆ. 1971ರ ಯುದ್ಧದಲ್ಲಿ ಭಾರತದೆದುರು ನಾಚಿಕೆ ಬಿಟ್ಟು ತಲೆ ಬಾಗಿ ಒಪ್ಪಂದ ಮಾಡಿಕೊಂಡ ರೀತಿಯಲ್ಲೇ ಇದೀಗ ಮತ್ತೆ ನಿಮ್ಮನ್ನು ತಲೆ ಬಾಗುವಂತೆ ಮಾಡಿಬಿಡುತ್ತೇವೆ (Taliban shames Pakistan) ಎಂದು ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Taliban firing | ಶಾಲೆಗೆ ಬಂದ ಬಾಲಕಿಯರ ಮೇಲೆ ಗುಂಡು ಹಾರಿಸಿದ ತಾಲಿಬಾನ್ ಉಗ್ರರು
ಅಫಘಾನಿಸ್ತಾನವನ್ನು ಅಮೆರಿಕ ಸೇನೆ ಬಿಟ್ಟು ಹೋದ ನಂತರ ತಾಲಿಬಾನಿಯರು ಅದನ್ನು ಆಕ್ರಮಿಸಿಕೊಂಡಾಗ ಅವರಿಗೆ ಬೆಂಬಲಿಸಿದ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಪಾಕಿಸ್ತಾನ ಕೂಡ ಒಂದಾಗಿತ್ತು. ಆದರೆ 2021ರ ಆಗಸ್ಟ್ ತಿಂಗಳಿಂದಲೇ ಈ ಎರಡೂ ರಾಷ್ಟ್ರಗಳ ನಡುವೆ ಗಡಿ ವಿಚಾರದಲ್ಲಿ ಗುದ್ದಾಟ ಆರಂಭವಾಗಿದೆ. ಪಾಕಿಸ್ತಾನವು ಆಫ್ಘನ್ ಗಡಿ ಭಾಗದಲ್ಲಿ ಸೇನೆ ನಿಯೋಜನೆ ಮಾಡುತ್ತಿದೆ. ಹಾಗಾಗಿ, ಪಾಕಿಸ್ತಾನಕ್ಕೆ ಆಫಘಾನಿಸ್ತಾನ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Pakistan Economy Collapse | ಪ್ಲಾಸ್ಟಿಕ್‌ನಲ್ಲಿ ಅಡುಗೆ ಅನಿಲ ತುಂಬಿಸಿ ಹೊತ್ತೊಯ್ಯುವ ದುಸ್ಥಿತಿ, ದಿವಾಳಿಯತ್ತ ಪಾಕಿಸ್ತಾನ
ಈ ಬಗ್ಗೆ ಟ್ವೀಟ್ ಮಾಡಿರುವ ತಾಲಿಬಾನಿ ನಾಯಕ ಅಹಮದ್ ಯಾಸಿರ್, ಪಾಕಿಸ್ತಾನದ ಆಂತರಿಕ ಮಂತ್ರಿಗಳೇ, ಇದು ನಮ್ಮ ಅಫಘಾನಿಸ್ತಾನ. ಇದು ಹೆಮ್ಮೆಯ ಸಾಮ್ರಾಟರ ವೀರಭೂಮಿ. ನಮ್ಮ ಮೇಲೆ ಸೇನಾ ದಾಳಿ ನಡೆಸುವ ಬಗ್ಗೆ ಯೋಚನೆಯೂ ಮಾಡಬೇಡಿ. ಹಾಗೊಂದು ವೇಳೆ ಮಾಡಿದರೆ ಈ ಹಿಂದೆ ನೀವು ಭಾರತದ ಎದುರು ನಾಚಿಕೆಯಿಂದ ತಲೆ ತಗ್ಗಿಸಿ ಒಪ್ಪಂದ ಮಾಡಿಕೊಂಡಂತೆಯೇ ಮಾಡಿಕೊಳ್ಳಬೇಕಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಹಾಗೆಯೇ 1971ರ ಒಪ್ಪಂದದಲ್ಲಿ ಪಾಕಿಸ್ತಾನದ ಸೇನಾ ನಾಯಕರು ಸಹಿ ಹಾಕುತ್ತಿರುವ ಫೋಟೋವನ್ನೂ ಹಂಚಿಕೊಂಡಿದ್ದಾರೆ.