Site icon Vistara News

Pavel Durov: ಮದುವೆಯಾಗದೆ 100 ಮಕ್ಕಳಿಗೆ ತಂದೆಯಾದ ಟೆಲಿಗ್ರಾಂ ಸಿಇಒ ಪಾವೆಲ್‌ ದುರೋವ್! ಈತ ರಿಯಲ್‌ ಲೈಫ್‌ ‘ವಿಕ್ಕಿ ಡೋನರ್’

Pavel Durov

Telegram CEO Pavel Durov Says He Has Over 100 Biological Kids

ಮಾಸ್ಕೋ: ವಾಟ್ಸ್‌ಆ್ಯಪ್‌ ರೀತಿಯ ಮೆಸೆಂಜರ್‌ ಆ್ಯಪ್‌ ಆಗಿರುವ ಟೆಲಿಗ್ರಾಂ ಸಿಇಒ ಪಾವೆಲ್‌ ದುರೋವ್‌ (Pavel Durov) ಅವರು ಸ್ಫೋಟಕ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. “ನಾನು ಮದುವೆಯನ್ನೇ ಆಗದೆ 100 ಮಕ್ಕಳ ತಂದೆಯಾಗಿದ್ದೇನೆ” ಎಂದು ಟೆಲಿಗ್ರಾಂ ಆ್ಯಪ್‌ನಲ್ಲಿಯೇ (Telegram App) ಹಂಚಿಕೊಂಡಿದ್ದಾರೆ. ಹೌದು, ವೀರ್ಯ ದಾನದ ಮೂಲಕ ಪಾವೆಲ್‌ ದುರೋವ್‌ ಅವರು 100 ಮಕ್ಕಳ ಜನನಕ್ಕೆ ಕಾರಣರಾಗಿದ್ದಾರೆ. ಆ ಮೂಲಕ ಬಾಲಿವುಡ್‌ ನಟ ಆಯುಷ್ಮಾನ್‌ ಖುರಾನ ನಟನೆಯ ವಿಕ್ಕಿ ಡೋನರ್‌ ಸಿನಿಮಾದಂತೆ 39 ವರ್ಷದ ಪಾವೆಲ್‌ ದುರೋವ್‌ ಕೂಡ ನಿಜ ಜೀವನದ ವಿಕ್ಕಿ ಡೋನರ್‌ ಎನಿಸಿದ್ದಾರೆ.

“ನಾನು 100 ಮಕ್ಕಳ ತಂದೆ ಎಂಬುದಾಗಿ ತಿಳಿಸಿದ್ದಾರೆ. ಒಮ್ಮೆಯೂ ಮದುವೆಯಾಗದ, ಏಕಾಂಗಿಯಾಗಿಯೇ ಬದುಕಲು ಇಚ್ಛಿಸಿರುವ ನನಗೆ ಇದು ಹೇಗೆ ಸಾಧ್ಯ” ಎಂದು ಅವರು ಪ್ರಶ್ನೆ ಹಾಕಿದ್ದಾರೆ. ಬಳಿಕ ಇದು ಹೇಗೆ ಸಾಧ್ಯ ಎಂಬುದನ್ನು ವಿವರಿಸಿದ್ದಾರೆ. “15 ವರ್ಷದ ಹಿಂದೆ ನನ್ನ ಗೆಳೆಯನೊಬ್ಬ ವಿಚಿತ್ರ ಮನವಿಯೊಂದಿಗೆ ನನ್ನ ಬಳಿ ಬಂದ. ಫಲವತ್ತತೆ (Fertility) ಸಮಸ್ಯೆಯಿಂದ ಬಳಲುತ್ತಿದ್ದು, ನಾನು ನನ್ನ ಹೆಂಡತಿ ಮಕ್ಕಳನ್ನು ಹೊಂದಲು ನೀನು ವೀರ್ಯ ದಾನ ಮಾಡಬೇಕು” ಎಂದ. “ಇದೆಲ್ಲ ತಮಾಷೆ ಎಂಬುದಾಗಿ ನಾನು ನಕ್ಕೆ. ಆದರೆ, ಆತ ಸೀರಿಯಸ್‌ ಆಗಿದ್ದ” ಎಂಬುದಾಗಿ ಪಾವೆಲ್‌ ದುರೋವ್‌ ತಿಳಿಸಿದ್ದಾರೆ.

“ಮಕ್ಕಳ ಜನನಕ್ಕೆ ಕಾರಣವಾಗುವ ಸಾಮರ್ಥ್ಯ ಇರುವ ವ್ಯಕ್ತಿಯಿಂದ ವೀರ್ಯ ಪಡೆಯಬೇಕು ಎಂಬುದಾಗಿ ವೈದ್ಯರು ಹೇಳಿದ್ದಾರೆ” ಎಂದು ಗೆಳೆಯ ಮನವರಿಕೆ ಮಾಡಿದ. “ವೈದ್ಯರು ಕೂಡ ವೀರ್ಯ ದಾನ ಮಾಡುವುದು ನಾಗರಿಕ ಕರ್ತವ್ಯವಾಗಿದೆ” ಎಂಬುದಾಗಿ ನನ್ನನ್ನು ಒಪ್ಪಿಸಿದರು. “ವೈದ್ಯರು ಮನವರಿಕೆ ಮಾಡಿದ ಬಳಿಕ ನಾನು ವೀರ್ಯ ದಾನ ಮಾಡುತ್ತಲೇ ಬಂದೆ. ಈಗ ನಾನು 100 ಮಕ್ಕಳ ಜನನಕ್ಕೆ ಕಾರಣನಾಗಿದ್ದೇನೆ” ಎಂಬುದಾಗಿ ಟೆಲಿಗ್ರಾಂನಲ್ಲಿ ಪಾವೆಲ್‌ ದುರೋವ್‌ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

“ನಿಯಮಿತವಾಗಿ ನಾನು ವೀರ್ಯವನ್ನು ದಾನ ಮಾಡುತ್ತಲೇ ಬಂದೆ. ಸುಮಾರು 12 ದೇಶಗಳಲ್ಲಿ 100ಕ್ಕೂ ಅಧಿಕ ಮಕ್ಕಳು ನನ್ನಿಂದಾಗಿ ಜನಿಸಿದ್ದಾರೆ ಎಂಬ ಸಂಗತಿ ಗೊತ್ತಾಯಿತು. ಕೆಲ ವರ್ಷಗಳ ಹಿಂದೆ ನಾನು ವೀರ್ಯವನ್ನು ದಾನ ಮಾಡುವುದನ್ನು ನಿಲ್ಲಿಸಿದೆ. ಆದರೆ, ಐವಿಎಫ್‌ ಕ್ಲಿನಿಕ್‌ಗಳಲ್ಲಿ ಈಗಲೂ ನನ್ನ ವೀರ್ಯವನ್ನು ಸಂಗ್ರಹಿಸಿ ಇಟ್ಟಿದ್ದಾರೆ. ನನ್ನ ವೀರ್ಯದಿಂದ ಮಕ್ಕಳು ಜನಿಸುವ ಚಟುವಟಿಕೆಯು ನಡೆಯುತ್ತಲೇ ಇದೆ. ನಾನು ಮಾಡಿದ ಕೆಲಸಕ್ಕೆ ನನಗೆ ಹೆಮ್ಮೆ ಇದೆ. ಬೇರೆಯವರು ಕೂಡ ಇದನ್ನು ಮಾಡಬೇಕು ಎಂಬುದಾಗಿ ವಿನಂತಿಸುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Rajendra Nagar Tragedy: ನೆಲಮಾಳಿಗೆ ಗೇಟ್‌ಗೆ SUV ಕಾರು ಡಿಕ್ಕಿ ಹೊಡೆದಿದ್ದ ಚಾಲಕ ಅರೆಸ್ಟ್‌- ವಿಡಿಯೋ ವೈರಲ್‌

Exit mobile version