ನವ ದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಮುದ್ದಾದ ವಿಡಿಯೊಗಳು ಹೆಚ್ಚು ಹೆಚ್ಚು ವೈರಲ್ ಆಗುತ್ತಲೇ ಇರುತ್ತವೆ. ಇವುಗಳಲ್ಲಿನ ಬಹಳಷ್ಟು ವಿಡಿಯೊಗಳು ಮನರಂಜನೆಗೆ ಮಾತ್ರ ಸೀಮಿತವಲ್ಲ, ವಿಶೇಷ ಸಂದೇಶಗಳನ್ನೂ ನೀಡುತ್ತವೆ. ಟ್ಯಾಪ್‌ನಿಂದ ನೀರು ಕುಡಿಯಲು ಪ್ರಯತ್ನಿಸುತ್ತಿರುವ ನಾಯಿಯ ವಿಡಿಯೊವೊಂದು ಈಗ ವೈರಲ್ ಆಗಿದೆ. ಈ ವಿಡಿಯೊ ನೋಡಿದಾಗ ನೀವು ನಗಬಹುದು. ಆದರೆ, ನೀರನ್ನು ಮಿತವಾಗಿ ಬಳಸಿ ಎಂಬ ಸಂದೇಶವನ್ನು ಈ ನಾಯಿಯಿಂದ ನಾವು ಕಲಿಯಬಹುದು.
ಈ ವಿಡಿಯೊವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ನಾಯಿಯೊಂದು ನೀರು ಕುಡಿಯಲು ತನ್ನ ಪಂಜದಿಂದ ಟ್ಯಾಪ್ ತೆರೆಯುವುದನ್ನು ತೋರಿಸುತ್ತದೆ. ತನ್ನ ಬಾಯಾರಿಕೆ ತಣಿದ ನಂತರ ಅದು ನಳದ ಟ್ಯಾಪ್ ಅನ್ನು ಚುರುಕಾಗಿ ಆಫ್ ಮಾಡುತ್ತದೆ!
“ಪ್ರತಿ ಹನಿಯೂ ಎಷ್ಟು ಅಮೂಲ್ಯ ಎಂಬುದು ನಾಯಿಗೂ ಅರ್ಥವಾಯಿತು. ಇನ್ನು ಮನುಷ್ಯರಾದ ನಮಗೆ ಯಾವಾಗ ಅರ್ಥವಾಗುತ್ತದೆ?” ಎಂಬ ಶೀರ್ಷಿಕೆ ನೆಟ್ಟಿಗರನ್ನು ಸಖತ್ ನಾಟುತ್ತದೆ.
ಈ ವಿಡಿಯೊ ನೋಡಿ ನೂರಾರು ಮಂದಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಮಕ್ಕಳ ಕಥೆ: ನಾಯಿಗಳಿಗೆ ನಮ್ಮೊಂದಿಗೆ ಸ್ನೇಹವೇಕೆ?