ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ(US Presidential Election) ಪ್ರಚಾರದಲ್ಲಿ ಭಾಗಿಯಾಗಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Trump Assassination Bid) ಮೇಲಿನ ಗುಂಡಿನ ದಾಳಿ(Shootout) ಬಗ್ಗೆ ಕೂಲಂಕುಷ ತನಿಖೆ ಕೈಗೆತ್ತಿಕೊಂಡಿರುವ ಅಮೆರಿಕದ ಗುಪ್ತಚರ ಇಲಾಖೆ FBI ಶೂಟರ್ ಗುರುತು ಪತ್ತೆ ಮಾಡಿತ್ತು. ಇದೀಗ ಆತನ ಫೊಟೋವನ್ನೂ ಬಿಡುಗಡೆ ಮಾಡಿದೆ. ಯುಎಸ್ ಮಾಧ್ಯಮ ವರದಿಗಳು ಶೂಟರ್ ಅನ್ನು 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಿವೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಪೆನ್ಸಿಲ್ವೇನಿಯಾದ ಬೆಥೆಲ್ ಪಾರ್ಕ್‌ನಿಂದ ಕ್ರೂಕ್ಸ್, ಬಟ್ಲರ್‌ನಲ್ಲಿ ಹೊರಾಂಗಣ ರ್ಯಾಲಿಯಲ್ಲಿ ಟ್ರಂಪ್ ಮೇಲೆ ಗುಂಡು ಹಾರಿಸಿದ್ದಾನೆ.
ಇದೀಗ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಬಗ್ಗೆ ಹಲವು ಸಂತಿಗಳು ಬಯಲಾಗಿವೆ. ಕ್ರೂಕ್ಸ್ ಬಗ್ಗೆ ಆತನ ಸಹಪಾಠಿ ಜೇಸನ್ ಖೆಹ್ಲರ್ ಮಾಹಿತಿ ನೀಡಿದ್ದು, ಕ್ರೂಕ್ ವಿದ್ಯಾರ್ಥಿಯಾಗಿದ್ದ ಅತ್ಯಂತ ಸೌಮ್ಯ ಸ್ವಭಾವದ ಹುಡುಗನಾಗಿದ್ದ. ಯಾವಾಗಲೂ ಒಬ್ಬಂಟಿಯಾಗಿಯೇ ಇರುತ್ತಿದ್ದ. ಆತನ ಯಾವತ್ತೂ ಟ್ರಂಪ್ ಬಗ್ಗೆಯಾಗಲೀ ರಾಜಕೀಯದ ಬಗ್ಗೆಯಾಗಲೀ ಚರ್ಚಿಸಿದ್ದನ್ನೇ ನಾವು ನೋಡಿಲ್ಲ.
ಶಾಲೆಯಲ್ಲಿ ಸದಾ ಆತನನ್ನು ಇತರೆ ವಿದ್ಯಾರ್ಥಿಗಳು ರೇಗಿಸುತ್ತಿದ್ದರು. ಆತನ ಧರಿಸುತ್ತಿದ್ದ ಬಟ್ಟೆಯ ಬಗ್ಗೆ ವಿದ್ಯಾರ್ಥಿಗಳು ತಮಾಶೆ ಮಾಡುತ್ತಿದ್ದರು. ಆದರೂ ಆತ ಸುಮ್ಮನೇ ಇರುತ್ತಿದ್ದ ಎಂದು ಹೇಳಿದ್ದಾರೆ. ಇನ್ನು ಆತನ ನೆರೆಮೆರೆಯವರೂ ಪ್ರತಿಕ್ರಿಯಿಸಿದ್ದು, ಕ್ರೂಕ್ ಅನುಕೂಲಸ್ಥ ಕುಟಂಬಸ್ಥದಲ್ಲಿ ಬೆಳೆದವನು. ಅವರು ಒಂದು ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದ ಎಂದಿದ್ದಾರೆ.
ಕಾರಿನಲ್ಲಿ ಅನುಮಾನಾಸ್ಪದ ಸಾಧನ ಪತ್ತೆ
ಇನ್ನು ಕ್ರೂಕ್‌ನ ಕಾರಿನಲ್ಲಿ ಅನುಮಾನಾಸ್ಪದ ಸಾಧನ ಪತ್ತೆಯಾಗಿದೆ. ಇದು ಮೇಲ್ನೋಟಕ್ಕೆ ಸ್ಫೋಟಕ ವಸ್ತುವಿನಂತೆ ಕಾಣುತ್ತಿದ್ದು, ಬಾಂಬ್ ನಿಷ್ಕ್ರೀಯ ದಳ ಅದನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದೆ. ಇನ್ನು ಆತನ ಫೋನ್ ಅನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಇನ್ನು ಟ್ರಂಪ್ ಮೇಲಿನ ದಾಳಿಗೆ ಕ್ರೂಕ್ ಬಳಸಿದ್ದ ಬಂದೂಕು AR ಸೆಮಿ ಅಟೋಮ್ಯಾಟಿಕ್ ಬಂದೂಕ್ ಆಗಿದ್ದು, ಇದನ್ನು ಕ್ರೂಕ್‌ನ ತಂದೆ ಕಾನೂನು ಪ್ರಕಾರ ಖರೀದಿಸಿದ್ದ ಎನ್ನಲಾಗಿದೆ.
ಪೆನ್ಸಿಲ್ವೇನಿಯಾದ ಬೆಥೆಲ್ ಪಾರ್ಕ್‌ನಿಂದ ಕ್ರೂಕ್ಸ್, ಬಟ್ಲರ್‌ನಲ್ಲಿ ಹೊರಾಂಗಣ ರ್ಯಾಲಿಯಲ್ಲಿ ಟ್ರಂಪ್ ಮೇಲೆ ಗುಂಡು ಹಾರಿಸಿದ್ದಾನೆ. ಅದರಲ್ಲಿ ಒಂದು ಬುಲೆಟ್ ಟ್ರಂಪ್ ಕಿವಿಗೆ ತಾಗಿತು. ಬಟ್ಲರ್ ಫಾರ್ಮ್ ಶೋ ಮೈದಾನದಲ್ಲಿ ವೇದಿಕೆಯಿಂದ 130 ಗಜಗಳಷ್ಟು ದೂರದಲ್ಲಿರುವ ಉತ್ಪಾದನಾ ಘಟಕದ ಛಾವಣಿಯ ಮೇಲೆ ಕ್ರೂಕ್ಸ್ ಗನ್ ಸಮೇತ ಇದ್ದ ಎನ್ನಲಾಗಿದೆ. ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಶನಿವಾರ ಸಂಜೆ ನಡೆದ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ಈ ಗುಂಡಿನ ದಾಳಿ ನಡೆದಿದ್ದು, ಟ್ರಂಪ್ ಅವರ ಕಿವಿ ಮತ್ತು ಮುಖದ ಮೇಲೆ ರಕ್ತ ಬಂದಿದ್ದು, ಕೂಡಲೇ ಅವರನ್ನು ವೇದಿಕೆಯಿಂದ ಸ್ಥಳಾಂತರಿಸಲಾಯಿತು. ಕ್ರೂಕ್‌ನನ್ನು ಸೀಕ್ರೆಟ್ ಸರ್ವಿಸ್ ಏಜೆಂಟ್ ಹೊಡೆದುರುಳಿಸಿತ್ತು.