ಲಂಡನ್: ನಾನು ದೇಶವನ್ನು ಒಂದಾಗಿಸುತ್ತೇನೆ. ಇದು ಕೇವಲ ಪದಗಳಿಂದ ಅಲ್ಲ, ಕ್ರಿಯೆಯ ಮೂಲಕ ಮಾಡುತ್ತೇನೆ. ಉತ್ತಮ ಫಲಿತಾಂಶಕ್ಕಾಗಿ ನಾನು ರಾತ್ರಿ ಹಗಲು ಕೆಲಸ ಮಾಡುವೆ. ನಂಬಿಕೆಯನ್ನು ಗಳಿಸಬೇಕಾಗುತ್ತದೆ. ನಾನು ಈ ಕಾರ್ಯದಲ್ಲಿ ಯಶಸ್ವಿಯಾಗುವೆ. ಇದು ನಮ್ಮೆಲ್ಲರಿಗೂ ಸೇರಿರುವ ಮತ್ತು ಒಂದುಗೂಡಿಸುವ ಜನಾದೇಶವಾಗಿದೆ. ಜನಾದೇಶದ ಹೃದಯಭಾಗದಲ್ಲಿ ನಮ್ಮ ಪ್ರಣಾಳಿಕೆ ಇದೆ ಎಂದು ಬ್ರಿಟನ್‌ನ ನೂತನ ಪ್ರಧಾನಿ ಸುನಕ್ ಅವರು ಹೇಳಿದರು.
ಮೂರನೇ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ರಿಷಿ ಸುನಕ್ ಅವರು, ಸದ್ಯಕ್ಕೆ ನಮ್ಮ ದೇಶವು ಗಂಭೀರವಾದ ಬಿಕ್ಕಟ್ಟು ಎದುರಿಸುತ್ತಿದೆ. ಉಕ್ರೇನ್ ಮೇಲೆ ಪುಟಿನ್ ಯುದ್ಧ ಮಾಡುತ್ತಿರುವುದರಿಂದ ಜಾಗತಿಕವಾಗಿ ಮಾರುಕಟ್ಟೆಗಳು ಅಸ್ಥಿರಗೊಂಡಿವೆ. ಈ ದೇಶದ ಆರ್ಥಿಕ ಗುರಿಗಳ ಈಡೇರಿಕೆಗಾಗಿ ಉದ್ದೇಶರಹಿತ ನೀತಿಗಳನ್ನೇನೂ ಲಿಜ್ ಟ್ರಸ್ (ಮಾಜಿ ಪ್ರಧಾನಿ) ಕೈಗೊಂಡಿರಲಿಲ್ಲ. ಆದರೆ, ಕೆಲವು ತಪ್ಪುಗಳಾಗಿವೆ. ಅವುಗಳ ಹಿಂದೆ ದುರುದ್ದೇಶವೇನೂ ಇರಲಿಲ್ಲ. ಅಸಲಿಗೆ ಅವು ವಿರುದ್ಧ ದಿಕ್ಕಿನಲ್ಲಿದ್ದವು. ಹಾಗಿದ್ದೂ ತಪ್ಪುಗಳು ಎಂಬುದರಲ್ಲಿ ಯಾವುದೇ ವಿವಾದವಿಲ್ಲ ಎಂದು ಸುನಕ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಅಧಿಕಾರ ಸ್ವೀಕರಿಸುವ ಮುಂಚೆ ಡೌನಿಂಗ್ ಸ್ಟ್ರೀಟ್‌ನಲ್ಲಿ ರಿಷಿ ಸುನಕ್ ಅವರನ್ನು ಸ್ವಾಗತಿಸಿ ಮಾಜಿ ಪ್ರಧಾನಿ ಲಿಜ್ ಟ್ರಸ್ ಅವರು, ಶುಭ ಹಾರೈಸಿದರು. ಬಳಿಕ ರಿಷಿ ಸುನಕ್ ಅವರು ಮೂರನೇ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿ ಮಾಡಿದರು. ಆ ನಂತರ ಕಿಂಗ್, ಸುನಕ್ ಅವರನ್ನು ಬ್ರಿಟನ್ ಪ್ರಧಾನಿಯನ್ನಾಗಿ ಅಧಿಕೃತವಾಗಿ ನೇಮಕ ಮಾಡಿದರು. ಇದರೊಂದಿಗೆ ಬ್ರಿಟನ್ ಪ್ರಧಾನಿ ನೇಮಕಾತಿ ಪ್ರಕ್ರಿಯೆಗಳು ಪೂರ್ಣಗೊಂಡವು.
ಇದನ್ನೂ ಓದಿ | Rishi Sunak | ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ರಿಷಿ ಸುನಕ್! 3ನೇ ಕಿಂಗ್ ಚಾರ್ಲ್ಸ್‌ರಿಂದ ನೇಮಕ