Site icon Vistara News

Twin Blast: ಇರಾನ್‌ ನಾಯಕ ಸುಲೈಮಾನಿ ಸಮಾಧಿ ಬಳಿ ಸ್ಫೋಟ, 73 ಮಂದಿ ಸಾವು

Twin Blast near city of Kerman Top General Qassem Soleimani tomb kills 73

ಕೆರ್ಮನ್, ಇರಾನ್: ಕೆರ್ಮನ್‌ನಲ್ಲಿರುವ (city of Kerman) ಸುಪ್ರೀಂ ಲೀಡರ್ ಖಾಸೀಮ್ ಸೊಲೈಮಾನಿ (General Qassem Soleimani) ಸಮಾಧಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಉಗ್ರರು ಎರಡು ಬಾಂಬ್ ಸ್ಫೋಟಿಸಿದ್ದು(Twin Blast), 73 ಜನರು ಮೃತಪಟ್ಟಿದ್ದಾರೆ. 170ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ. 2020ರಲ್ಲಿ ಅಮೆರಿಕದ ಡ್ರೋನ್ ದಾಳಿ (Drone Attack) ವೇಳೆ ಜನರಲ್ ಕಮಾಂಡರ್ ಖಾಸೀಮ್ ಸೂಲೈಮಾನಿ ಅವರು ಮೃತಪಟ್ಟಿದ್ದಾರೆ.

ಇರಾನ್‌ನ ಆಗ್ನೇಯ ನಗರವಾದ ಕೆರ್ಮನ್‌ನಲ್ಲಿ ಸುಲೈಮಾನಿಯನ್ನು ಸಮಾಧಿ ಮಾಡಿರುವ ಜಾಗದಲ್ಲಿ ವಾರ್ಷಿಕೋತ್ಸವದ ಕಾರ್ಯಕ್ರಮದ ಸಂದರ್ಭದಲ್ಲಿ ಎರಡು ಸ್ಫೋಟಗಳು ಸಂಭವಿಸಿವೆ ಎಂದು ಇರಾನ್ ಸರ್ಕಾರಿ ಟೆಲಿವಿಷನ್ ವರದಿ ಮಾಡಿದೆ.

ಎರಡೂ ಸ್ಫೋಟಗಳು ಭಯೋತ್ಪಾದನಾ ಕೃತ್ಯಗಳಾಗಿವೆ ಎಂದು ಕೆರ್ಮನ್ ಪ್ರಾಂತ್ಯದ ಸ್ಥಳೀಯ ಅಧಿಕಾರಿಯನ್ನು ಉಲ್ಲೇಖಿಸಿ ಸರ್ಕಾರಿ ಟೆಲಿವಿಷನ್ ವರದಿ ಮಾಡಿದೆ. ಇರಾನ್‌ನ ತುರ್ತು ಸೇವೆಗಳ ವಕ್ತಾರ ಬಾಬಕ್ ಯೆಕ್ತಪರಸ್ಟ್ ಅವರು, ಭಯೋತ್ಪಾದಕ ಕೃತ್ಯದಲ್ಲಿ 73 ಜನರು ಸಾವನ್ನಪ್ಪಿದ್ದಾರೆ ಮತ್ತು 170 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸ್ಮಶಾನಕ್ಕೆ ಹೋಗುವ ರಸ್ತೆಯಲ್ಲಿ ಹಲವಾರು ಗ್ಯಾಸ್ ಕ್ಯಾನಿಸ್ಟರ್‌ಗಳು ಸ್ಫೋಟಗೊಂಡವು ಎಂದು ವರದಿ ಮಾಡಲಾಗಿದೆ.

ಸುಲೈಮಾನಿ ನಿಧನದ ವಾರ್ಷಿಕೋತ್ಸವ ಆಚರಣೆಗಾಗಿ ನೂರಾರು ಇರಾನಿಯನ್ನರು ಸೇರಿದ್ದರು. ಈ ವೇಳೆ, ಬಾಂಬ್ ಸ್ಫೋಟಗಳಾಗಿವೆ. ಸ್ಫೋಟದ ವೇಳೆ ಗಾಯಗೊಂಡವರನ್ನು ರೆಡ್ ಕ್ರೆಸೆಂಟ್ ಕಾರ್ಯಕರ್ತರು ಆರೈಕೆ ಮಾಡುತ್ತಿರುವ ದೃಶ್ಯಗಳನ್ನು ಟಿವಿ ಬಿತ್ತರಿಸಿದೆ. ಗಾಯಗೊಂಡವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಈ ಸುದ್ದಿಯನ್ನೂ ಓದಿ: Threat e mail: ಆರ್‌ಬಿಐ ಗವರ್ನರ್, ವಿತ್ತ ಸಚಿವೆಯಿಂದ ಭಾರೀ ಹಗರಣ! ರಾಜೀನಾಮೆ ನೀಡಬೇಕು, ಇಲ್ಲದಿದ್ರೆ ಬಾಂಬ್ ಸ್ಫೋಟ

Exit mobile version