Twin Blast: ಇರಾನ್‌ ನಾಯಕ ಸುಲೈಮಾನಿ ಸಮಾಧಿ ಬಳಿ ಸ್ಫೋಟ, 73 ಮಂದಿ ಸಾವು - Vistara News

ಪ್ರಮುಖ ಸುದ್ದಿ

Twin Blast: ಇರಾನ್‌ ನಾಯಕ ಸುಲೈಮಾನಿ ಸಮಾಧಿ ಬಳಿ ಸ್ಫೋಟ, 73 ಮಂದಿ ಸಾವು

Twin Blast: ಇರಾನ್‌ನಲ್ಲಿ ಬುಧವಾರ ಸಂಭವಿಸಿದ ಅವಳಿ ಸ್ಫೋಟದಲ್ಲಿ 73 ಜನರು ಮೃತಪಟ್ಟು, 170ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

VISTARANEWS.COM


on

Twin Blast near city of Kerman Top General Qassem Soleimani tomb kills 73
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೆರ್ಮನ್, ಇರಾನ್: ಕೆರ್ಮನ್‌ನಲ್ಲಿರುವ (city of Kerman) ಸುಪ್ರೀಂ ಲೀಡರ್ ಖಾಸೀಮ್ ಸೊಲೈಮಾನಿ (General Qassem Soleimani) ಸಮಾಧಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಉಗ್ರರು ಎರಡು ಬಾಂಬ್ ಸ್ಫೋಟಿಸಿದ್ದು(Twin Blast), 73 ಜನರು ಮೃತಪಟ್ಟಿದ್ದಾರೆ. 170ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ. 2020ರಲ್ಲಿ ಅಮೆರಿಕದ ಡ್ರೋನ್ ದಾಳಿ (Drone Attack) ವೇಳೆ ಜನರಲ್ ಕಮಾಂಡರ್ ಖಾಸೀಮ್ ಸೂಲೈಮಾನಿ ಅವರು ಮೃತಪಟ್ಟಿದ್ದಾರೆ.

ಇರಾನ್‌ನ ಆಗ್ನೇಯ ನಗರವಾದ ಕೆರ್ಮನ್‌ನಲ್ಲಿ ಸುಲೈಮಾನಿಯನ್ನು ಸಮಾಧಿ ಮಾಡಿರುವ ಜಾಗದಲ್ಲಿ ವಾರ್ಷಿಕೋತ್ಸವದ ಕಾರ್ಯಕ್ರಮದ ಸಂದರ್ಭದಲ್ಲಿ ಎರಡು ಸ್ಫೋಟಗಳು ಸಂಭವಿಸಿವೆ ಎಂದು ಇರಾನ್ ಸರ್ಕಾರಿ ಟೆಲಿವಿಷನ್ ವರದಿ ಮಾಡಿದೆ.

ಎರಡೂ ಸ್ಫೋಟಗಳು ಭಯೋತ್ಪಾದನಾ ಕೃತ್ಯಗಳಾಗಿವೆ ಎಂದು ಕೆರ್ಮನ್ ಪ್ರಾಂತ್ಯದ ಸ್ಥಳೀಯ ಅಧಿಕಾರಿಯನ್ನು ಉಲ್ಲೇಖಿಸಿ ಸರ್ಕಾರಿ ಟೆಲಿವಿಷನ್ ವರದಿ ಮಾಡಿದೆ. ಇರಾನ್‌ನ ತುರ್ತು ಸೇವೆಗಳ ವಕ್ತಾರ ಬಾಬಕ್ ಯೆಕ್ತಪರಸ್ಟ್ ಅವರು, ಭಯೋತ್ಪಾದಕ ಕೃತ್ಯದಲ್ಲಿ 73 ಜನರು ಸಾವನ್ನಪ್ಪಿದ್ದಾರೆ ಮತ್ತು 170 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸ್ಮಶಾನಕ್ಕೆ ಹೋಗುವ ರಸ್ತೆಯಲ್ಲಿ ಹಲವಾರು ಗ್ಯಾಸ್ ಕ್ಯಾನಿಸ್ಟರ್‌ಗಳು ಸ್ಫೋಟಗೊಂಡವು ಎಂದು ವರದಿ ಮಾಡಲಾಗಿದೆ.

ಸುಲೈಮಾನಿ ನಿಧನದ ವಾರ್ಷಿಕೋತ್ಸವ ಆಚರಣೆಗಾಗಿ ನೂರಾರು ಇರಾನಿಯನ್ನರು ಸೇರಿದ್ದರು. ಈ ವೇಳೆ, ಬಾಂಬ್ ಸ್ಫೋಟಗಳಾಗಿವೆ. ಸ್ಫೋಟದ ವೇಳೆ ಗಾಯಗೊಂಡವರನ್ನು ರೆಡ್ ಕ್ರೆಸೆಂಟ್ ಕಾರ್ಯಕರ್ತರು ಆರೈಕೆ ಮಾಡುತ್ತಿರುವ ದೃಶ್ಯಗಳನ್ನು ಟಿವಿ ಬಿತ್ತರಿಸಿದೆ. ಗಾಯಗೊಂಡವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಈ ಸುದ್ದಿಯನ್ನೂ ಓದಿ: Threat e mail: ಆರ್‌ಬಿಐ ಗವರ್ನರ್, ವಿತ್ತ ಸಚಿವೆಯಿಂದ ಭಾರೀ ಹಗರಣ! ರಾಜೀನಾಮೆ ನೀಡಬೇಕು, ಇಲ್ಲದಿದ್ರೆ ಬಾಂಬ್ ಸ್ಫೋಟ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

T20 World Cup 2024: ಟಿ20 ವಿಶ್ವಕಪ್​ ಪಂದ್ಯ ನಡೆಯುವ ತಾಣ,ಭಾರತದ ಪಂದ್ಯಗಳ ಪ್ರಸಾರದ ಮಾಹಿತಿ ಹೀಗಿದೆ

T20 World Cup 2024: ಟೀಮ್​ ಇಂಡಿಯಾದ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8ಗಂಟೆಗೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಹಾಗೂ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನೇರ ಪ್ರಸಾರದ ಹಕ್ಕನ್ನು ಹೊಂದಿದೆ. ಭಾರತದಲ್ಲಿನ ಸ್ಮಾರ್ಟ್‌ಫೋನ್ ಬಳಕೆದಾರರು OTT ಪ್ಲಾಟ್‌ಫಾರ್ಮ್‌ನಲ್ಲಿ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು.

VISTARANEWS.COM


on

T20 World Cup 2024
Koo

ನ್ಯೂಯಾರ್ಕ್​: ಒಂಬತ್ತನೇ ಆವೃತ್ತಿಯ ಟಿ20 ವಿಶ್ವಕಪ್‌ ಟೂರ್ನಿ(T20 World Cup 2024) ಆರಂಭಕ್ಕೆ ಅಮೆರಿಕ ಮತ್ತು ವೆಸ್ಟ್ ಸಜ್ಜಾಗಿದೆ. ಉಭಯ ದೇಶಗಳು ಟೂರ್ನಿಯ ಜಂಟಿ ಆತಿಥ್ಯವಹಿಸಿಕೊಂಡಿದೆ. ನಾಳೆ(ಜೂನ್​ 1) ನಡೆಯುವ ಉದ್ಘಾಟನ ಪಂದ್ಯದಲ್ಲಿ ಅಮೆರಿಕ ತಂಡ ಕೆನಡಾ ತಂಡದ ಸವಾಲು ಎದುರಿಸಲಿದೆ. ಅಮೆರಿಕ ಇದೇ ಮೊದಲ ಬಾರಿಗೆ ಐಸಿಸಿ ಕ್ರಿಕೆಟ್​ ಟೂರ್ನಿಯ ಆತಿಥ್ಯವಹಿಸಿಕೊಂಡಿ​ದೆ. ವೆಸ್ಟ್‌ ಇಂಡೀಸ್‌ನಲ್ಲಿ ಆರು ಹಾಗೂ ಅಮೆರಿಕದ ಮೂರು ಸೇರಿದಂತೆ ಒಟ್ಟು ಒಂಬತ್ತು ತಾಣಗಳಲ್ಲಿ ವಿಶ್ವಕಪ್ ಆಯೋಜನೆಯಾಗಲಿದೆ.

ಭಾಗವಹಿಸುವ ತಂಡಗಳು


ಭಾರತ, ವೆಸ್ಟ್‌ ಇಂಡೀಸ್, ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನೆದರ್ಲೆಂಡ್ಸ್, ಅಫಘಾನಿಸ್ತಾನ, ಬಾಂಗ್ಲಾದೇಶ, ಐರ್ಲೆಂಡ್, ಸ್ಕಾಟ್ಲೆಂಡ್, ಕೆನಡಾ, ನೇಪಾಳ, ಒಮಾನ್, ನಮೀಬಿಯಾ, ಉಗಾಂಡ ಮತ್ತು ಪಪುವಾ ನ್ಯೂಗಿನಿ.

ಟಿ20 ವಿಶ್ವಕಪ್ ವಿಜೇತ ತಂಡಗಳು

ದೇಶವರ್ಷ
ಭಾರತ2007
ಪಾಕಿಸ್ತಾನ2009
ಇಂಗ್ಲೆಂಡ್2010
ವೆಸ್ಟ್‌ಇಂಡೀಸ್2012
ಶ್ರೀಲಂಕಾ2014
ವೆಸ್ಟ್‌ಇಂಡೀಸ್2016
ಆಸ್ಟ್ರೇಲಿಯಾ2021
ಇಂಗ್ಲೆಂಡ್2022

ಪಂದ್ಯ ನಡೆಯುವ ತಾಣ

ವೆಸ್ಟ್‌ಇಂಡೀಸ್ಅಮೆರಿಕ
ನೌರ್ತ್ ಸೌಂಡ್ (ಆಯಂಟಿಗುವಾ ಮತ್ತು ಬಾರ್ಬುಡಾ)ಫ್ಲೋರಿಡಾ (ಲೌಂಡರ್‌ಹಿಲ್ )
ಬ್ರಿಡ್ಜ್‌ಟೌನ್ (ಬಾರ್ಬಡೋಸ್)ನ್ಯೂಯಾರ್ಕ್
ಜಾರ್ಜ್‌ಟೌನ್ (ಗಯಾನ)ಟೆಕ್ಸಾಸ್ (ಡಲ್ಲಾಸ್)
ಗ್ರಾಸ್‌ ಐಲ್ (ಸೇಂಟ್ ಲೂಸಿಯಾ)
ಕಿಂಗ್ಸ್‌ಟೌನ್ (ಸೇಂಟ್ ವಿನ್ಸೆಂಟ್)
ತರೌಬಾ (ಟ್ರಿನಿಡಾಡ್‌ ಆಯಂಡ್‌ ಟೊಬಾಗೊ).

ನಾಲ್ಕು ಗುಂಪುಗಳು


‘ಎ’ ಗುಂಪು: ಭಾರತ, ಪಾಕಿಸ್ತಾನ, ಅಮೆರಿಕ, ಕೆನಡಾ, ಐರ್ಲೆಂಡ್

‘ಬಿ’ ಗುಂಪು: ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಒಮಾನ್, ಇಂಗ್ಲೆಂಡ್

‘ಸಿ’ ಗುಂಪು: ವೆಸ್ಟ್‌ಇಂಡೀಸ್, ಅಪಘಾನಿಸ್ತಾನ, ಉಗಾಂಡ, ಪಪುವಾ ನ್ಯೂಗಿನಿ, ನ್ಯೂಜಿಲೆಂಡ್.

‘ಡಿ’ ಗುಂಪು: ನೆದರ್ಲೆಂಡ್ಸ್, ನೇಪಾಳ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ.

ಭಾರತದ ಪಂದ್ಯಗಳ ಪ್ರಸಾರ

ಟೀಮ್​ ಇಂಡಿಯಾದ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8ಗಂಟೆಗೆ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಹಾಗೂ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನೇರ ಪ್ರಸಾರದ ಹಕ್ಕನ್ನು ಹೊಂದಿದೆ. ಭಾರತದಲ್ಲಿನ ಸ್ಮಾರ್ಟ್‌ಫೋನ್ ಬಳಕೆದಾರರು ಈ ವರ್ಷದ ಐಸಿಸಿ ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಅನ್ನು OTT ಪ್ಲಾಟ್‌ಫಾರ್ಮ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಡಿಸ್ನಿ + ಹಾಟ್‌ಸ್ಟಾರ್​ನಲ್ಲಿ ಪ್ರಸಾರಗೊಳ್ಳಲಿದೆ. 

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ಗೆ ಕ್ಷಣಗಣನೆ; ಭಾರತ ಸೇರಿ ಬಲಿಷ್ಠ ತಂಡಗಳ ಪಂದ್ಯದ ವೇಳಾಪಟ್ಟಿ ಇಲ್ಲಿದೆ

20 ತಂಡಗಳು ಭಾಗಿ


ಈ ಬಾರಿ ಟೂರ್ನಿಯಲ್ಲಿ ಗರಿಷ್ಠ 20 ತಂಡಗಳು ಕಣಕ್ಕಿಳಿಯಲಿವೆ. 2022ರ ಆವೃತ್ತಿಯಲ್ಲಿ 12 ತಂಡಗಳು ಭಾಗಿಯಾಗಿದ್ದವು. ಟೂರ್ನಿಯಲ್ಲೂ ವಿಭಿನ್ನ ಸ್ವರೂಪವಿದೆ. 20 ತಂಡಗಳನ್ನು ತಲಾ ಐದು ತಂಡಗಳಂತೆ ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಗುಂಪು ವಿಭಾಗದಲ್ಲಿ ಪ್ರತಿ ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಆಡಲಿವೆ. ಪ್ರತಿ ಗುಂಪಿನಿಂದ ತಲಾ ಎರಡು ತಂಡಗಳು ಸೂಪರ್ ಎಂಟರ ಹಂತಕ್ಕೆ ತೇರ್ಗಡೆ ಪಡೆಯಲಿವೆ. ಅಲ್ಲೂ ತಲಾ ನಾಲ್ಕು ತಂಡಗಳ ಎರಡು ಗುಂಪುಗಳು ಇದ್ದು, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಡಲಿವೆ.

Continue Reading

ರಾಜಕೀಯ

ಮಾರಣ ಶತ್ರು ಭೈರವಿ ಯಾಗ ಎದುರಿಸಲು ರಕ್ಷಣಾಕವಚ ಮಾಡಿಸಿದ ಡಿಕೆಶಿ! ಹೀಗಿರುತ್ತೆ ನೋಡಿ ಯಾಗ

ಮಾರಣ ಯಾಗಗಳು ಶತ್ರುವನ್ನು ನಾಶ ಮಾಡಲೆಂದೇ ನಡೆಲಾಗುತ್ತದೆ. ಶತ್ರು ಭೈರವಿ ಯಾಗ ಒಂದು ಬಗೆಯ ಮಾರಣ ಯಾಗವಾಗಿದೆ. ಇದರಲ್ಲಿ ಅಘೋರಿಗಳು, ಕಾಪಾಲಿಕರು, ಮಾಂತ್ರಿಕರು ಭಾಗವಹಿಸುತ್ತಿದ್ದಾರೆ.

VISTARANEWS.COM


on

Shatru Bhairavi yaga ಶತ್ರು ಭೈರವಿ ಯಾಗ
Koo

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೆ ಮಾಟ- ಮಂತ್ರ (Black Magic) ಪಾಲಿಟಿಕ್ಸ್ ಸದ್ದು ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಅವರಿಗೆ ʼರಾಜಕಂಟಕʼ ತರಲು ಉದ್ದೇಶಿಸಿ ಕೇರಳದಲ್ಲಿ ʼಶತ್ರು ಭೈರವಿ ಯಾಗ’ (Shatru Bhairavi yaga) ನಡೆಯುತ್ತಿದೆ ಎಂದು ಡಿಕೆ ಶಿವಕುಮಾರ್‌ ನಿನ್ನೆ ಆರೋಪಿಸಿದ್ದರು. ಇದೀಗ ಪುರೋಹಿತರ ಸೂಚನೆಯಂತೆ, ಈ ಯಾಗದಿಂದ ಉಂಟಾಗಬಹುದಾದ ಹಾನಿಗೆ ರಕ್ಷಣಾ ಕವಚ ಮಾಡಿಸಲು ಡಿಕೆಶಿ ಮುಂದಾಗಿದ್ದಾರೆ.

ಡಿಸಿಎಂ ಅವರಿಂದ ಕೇರಳದಲ್ಲಿ ನಡೆಯುತ್ತಿರುವ ಬ್ಲ್ಯಾಕ್ ಮ್ಯಾಜಿಕ್ ಬಗ್ಗೆ ಸುಳಿವು ದೊರೆತಿತ್ತು. ʼʼನನ್ನ ಮತ್ತು ಸಿಎಂ ವಿರುದ್ಧ ದೊಡ್ಡ ವಾಮಾಚಾರ ಪ್ರಯೋಗ ನಡೆಯುತ್ತಿದೆ” ಎಂದು ಡಿಕೆಶಿ ಹೇಳಿದ್ದರು. ಡಿಸಿಎಂ ಹಾಗೂ ಸಿಎಂ ವಿರುದ್ಧ ಶತ್ರು ಭೈರವಿ ಯಾಗ ಕೇರಳದ ಯಾವುದೋ ಊರಿನ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸೇರಿದ ನಿರ್ಜನ ಪ್ರದೇಶದಲ್ಲಿ ನಡೆಯುತ್ತಿದೆ. ಆಘೋರಿಗಳ ಮೊರೆ ಹೋಗಿ ಈ ಯಾಗ ಮಾಡಿಸಲಾಗುತ್ತಿದೆ. ನನ್ನ ವಿರುದ್ಧ ಕೆಲವು ರಾಜಕಾರಣಿಗಳೇ ಮಾಡಿಸುತ್ತಿದ್ದಾರೆ ಎಂದಿದ್ದರು ಡಿಸಿಎಂ.

“ಈಗ ಯಾಗ ನಡೆಯುತ್ತಿದ್ದು, ಅವರ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ಆದರೆ, ನಾವು ನಂಬಿದ ದೇವರು ನಮ್ಮನ್ನು ಕಾಪಾಡುತ್ತಾನೆ. ಎಲ್ಲ ಡೀಟೇಲ್ಸ್‌ ಅನ್ನು ಚೀಟಿ ಬರೆದುಕೊಟ್ಟಿದ್ದಾರೆ. ಯಾರು ಭಾಗಿಯಾಗಿದ್ದರೋ ಅವರೇ ನನಗೆ ಮಾಹಿತಿ ಕೊಟ್ಟಿದ್ದಾರೆ. ಇದೆಲ್ಲವನ್ನು ರಾಜಕೀಯದವರಲ್ಲದೆ ಬೇರೆ ಯಾರು ಮಾಡಲು ಸಾಧ್ಯ. ಆದರೆ, ಇದೆಲ್ಲವನ್ನು ನಾವು ನಂಬುವುದಿಲ್ಲ” ಎಂಬುದಾಗಿ ಡಿ.ಕೆ.ಶಿವಕುಮಾರ್‌ ಹೇಳಿದ್ದರು.

ಇದು ಶತ್ರು ನಾಶಕ್ಕಾಗಿಯೇ ಮಾಡುವ ಯಾಗ!

ಯಜ್ಞಕಾಂಡ ಹಾಗೂ ಪುರಾಣಗಳಲ್ಲಿ ಹಲವು ಬಗೆಯ ಯಾಗಗಳ ಉಲ್ಲೇಖವಿದೆ. ಒಳ್ಳೆಯ ಉದ್ದೇಶದಿಂದ ಹಾಗೂ ಕೆಟ್ಟ ಉದ್ದೇಶದಿಂದ ನಡೆಯುವ ಯಾಗಗಳೆಂದು ಎರಡು ವಿಧಗಳಿವೆ. ದುಷ್ಟ ಉದ್ದೇಶದ ಯಾಗಗಳಲ್ಲಿ ಸ್ತಂಭನ ಹಾಗೂ ಮಾರಣ ಯಾಗಗಳು ಪ್ರಮುಖವಾಗಿವೆ. ಸ್ತಂಭನ ಯಾಗಗಳು ವಾಮಾಚಾರದ ಭಾಗವಾಗಿದ್ದು, ಶತ್ರುಗಳಿಗೆ ಸಂಕಷ್ಟ ನೀಡುವ ಉದ್ದೇಶದಿಂದ ನಡೆಯುತ್ತವೆ. ಮಾರಣ ಯಾಗಗಳು ಶತ್ರುವನ್ನು ನಾಶ ಮಾಡಲೆಂದೇ ನಡೆಲಾಗುತ್ತದೆ. ಶತ್ರು ಭೈರವಿ ಯಾಗವು ಒಂದು ಬಗೆಯ ಮಾರಣ ಯಾಗವಾಗಿದೆ.

ಮೂರು ಪ್ರಯೋಗಗಳು, ಪಂಚಬಲಿ

ತ್ರು ಭೈರವಿ ಎಂಬ ಶಕ್ತಿಯನ್ನು ಪ್ರಸನ್ನಗೊಳಿಸಲು ಈ ಮಾರಣ ಯಾಗ ನಡೆಯುತ್ತದೆ. ಶತ್ರು ಭೈರವಿಯನ್ನು ಬಲಿಗಳಿಂದ ಪ್ರಸನ್ನಗೊಳಿಸಿ, ವೈರಿ ನಾಶಕ್ಕಾಗಿ ಕಳಿಸಿಕೊಡಲಾಗುತ್ತದೆ. ಶತ್ರು ಭೈರವಿ ಯಾಗದಲ್ಲಿ ಮೂರು ಪ್ರಯೋಗಗಳು ನಡೆದಿವೆ. ಮಾರಣ, ಮೋಹನ, ಸ್ತಂಭನ ಎಂಬ ಮೂರು ಪ್ರಯೋಗಗಳು ಇವೆ. ರಾಜಕಂಟಕ ತರಲು ಈ ಭೈರವಿ ಯಾಗದಲ್ಲಿ ಮೂರು ಪ್ರಯೋಗಗಳು ಇರುತ್ತವೆ. ಮೂರು ಪ್ರಯೋಗಕ್ಕೆ 50 ಪ್ರಾಣಿಗಳ ಬಲಿ ಕೊಡಲಾಗಿದೆ.

21 ಕೆಂಪು ಬಣ್ಣದ ಮೇಕೆಗಳು, 3 ಎಮ್ಮೆಗಳು, 21 ಕಪ್ಪು ಬಣ್ಣದ ಕುರಿಗಳು, 5 ಹಂದಿಗಳನ್ನು ಬಲಿ ಕೊಡಲಾಗಿದೆ. ಈ ಯಾಗದಲ್ಲಿ ಎಂಟು ಮಂದಿ ವಾಮಾಚಾರ- ಅಭಿಚಾರ ಕರ್ಮಗಳನ್ನು ಬಲ್ಲ ಜ್ಯೋತಿಷಿಗಳು ಭಾಗವಹಿಸುತ್ತಿದ್ದಾರೆ. ಮದ್ಯ ಮಾಂಸಗಳನ್ನು ಯಥೇಚ್ಛವಾಗಿ ದೇವತೆಗೆ ಕೊಡಲಾಗುತ್ತಿದ್ದು, ದೇವತೆಯನ್ನು ರೊಚ್ಚಿಗೆಬ್ಬಿಸುವ ಪ್ರಕ್ರಿಯೆ ನಡೆಯುತ್ತಿದೆ. ಕೇರಳದಲ್ಲಿ ಜ್ಯೋತಿಷಿಗಳ ಸ್ವರೂಪದಲ್ಲಿರುವ ಹಲವು ಮಂದಿ ಅಘೋರಿಗಳಿದ್ದು, ಇದನ್ನು ನೆರವೇರಿಸುವಲ್ಲಿ ಪಳಗಿದ್ದಾರೆ. ಇವರು ಅನೇಕ ಯಾಗಗಳನ್ನು ಈ ಹಿಂದೆ ನೆರವೇರಿಸಿದ ನಿದರ್ಶನಗಳಿವೆ.

ಅಘೋರಿಗಳು, ಕಾಪಾಲಿಕರು ಮಾತ್ರ ಮಾಡುತ್ತಾರೆ

ಈ ಯಾಗವನ್ನು ಸಾಮಾನ್ಯ ಪುರೋಹಿತರಿಂದ ಮಾಡಲು ಸಾಧ್ಯವಿಲ್ಲ. ಅಘೋರಿಗಳನ್ನು ಕರೆಸಿ ಸ್ಮಶಾನದಲ್ಲಿ ಯಾಗ ನಡೆಸಲಾಗುತ್ತದೆ. ಸ್ಮಶಾನ ಕಾಳಿಯನ್ನು ಪ್ರಧಾನವಾಗಿಟ್ಟು ಅಷ್ಟ ಭೈರವಿಯನ್ನು ಕರೆದು ಯಾಗ ಮಾಡಿಸಲಾಗುತ್ತದೆ. ಮೊದಲು ಪ್ರಾಣಿಯ ಮೇಲೆ ನಡೆಯುತ್ತದೆ. ಪ್ರಾಣಿ ಸತ್ತು ಬೀಳುತ್ತದೆ. ಇದಕ್ಕೆ ಮಾಮೂಲಿ ತುಪ್ಪ, ಸಮಿತ್ತುಗಳನ್ನು ಬಳಸುವುದಿಲ್ಲ. ಹಂದಿ, ಎಮ್ಮೆ ತುಪ್ಪ ಬಳಕೆ ಮಾಡಲಾಗುತ್ತದೆ. ವಿಷಯುಕ್ತ ಮರದ ಚಕ್ಕೆಗಳನ್ನು ಹೋಮಕ್ಕೆ ಹಾಕಲಾಗುತ್ತದೆ. ಮಣ್ಣಿನ ದೇವಿ ಮೂರ್ತಿಗೆ ರಕ್ತ ನೀಡಿದಾಗ ರಕ್ತ ಹೀರುತ್ತದೆ. ಈ ಯಾಗ 9 ದಿನಗಳ ಕಾಲ ಪ್ರತಿ ರಾತ್ರಿ ನಡೆಯುತ್ತದೆ. ಕಾಪಾಲಿಕರು, ಅಘೋರಿಗಳು ನಡೆಸುವ ಈ ಯಾಗದಲ್ಲಿ ಶ್ರದ್ಧೆ ಅಥವಾ ಪ್ರಯೋಗದಲ್ಲಿ ಸ್ವಲ್ಪ ವ್ಯತ್ಯಾಸವಾದ್ರೂ ಮಾಡಿಸುವ ಕರ್ತೃ ಹಾಗೂ ಮಾಂತ್ರಿಕ ಇಬ್ಬರಿಗೂ ಮಾರಣಾಂತಿಕ ಹಾನಿ ಸಂಭವಿಸಬಹುದು. ಉನ್ನತ ತಂತ್ರ ವಿದ್ಯೆ ಗೊತ್ತಿರುವ ಮಂದಿಗೆ ಮಾತ್ರ ಈ ಯಾಗ ಮಾಡುವ ಕ್ರಮ ಗೊತ್ತಿದ್ದು, ಅದರ ಅರ್ಹತೆ- ಅಧಿಕಾರ ಪಡೆದಿದ್ದಾರೆ.

ಯಾಗದಲ್ಲಿ ಭಾಗಿಯಾದವರಿಂದಲೇ ಡಿಸಿಎಂ ಡಿಕೆಶಿಗೆ ಈ ಬಗ್ಗೆ ಮಾಹಿತಿ ದೊರೆತಿದೆ ಎಂದು ಅವರು ಹೇಳಿದ್ದಾರೆ. ಮಾಹಿತಿ ಸಿಕ್ಕ ಬೆನ್ನಲ್ಲೇ ಅಲರ್ಟ್ ಆಗಿರುವ ಡಿಕೆ ಶಿವಕುಮಾರ್ ಪುರೋಹಿತರ ಮೊರೆ ಹೋಗಿದ್ದು, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಸೂಕ್ತ ದಿಗ್ಬಂಧನಗಳನ್ನು ಮಾಡಿಸಿಕೊಳ್ಳುವುದು ಸೇರಿದಂತೆ ಒಂದಷ್ಟು ಮಹತ್ವದ ಸಲಹೆಗಳನ್ನು ಜ್ಯೋತಿಷಿಗಳು ಅವರಿಗೆ ನೀಡಿದ್ದಾರೆ. “ನನ್ನ ರಕ್ಷಣೆಗೆ ನನ್ನ ಶಕ್ತಿ ಇದೆ” ಎಂದು ಡಿಕೆ ಶಿವಕುಮಾರ್ ಹೇಳಿದ್ದು, ಈ ಶಕ್ತಿ ಹಾಗೂ ತಾವು ಕೈಗೊಳ್ಳುತ್ತಿರುವ ರಕ್ಷಣಾ ಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: DK Shivakumar: ಸಿಎಂ, ನನ್ನ ಮೇಲೆ ಶತ್ರು ಭೈರವಿ ಯಾಗ ನಡೆಯುತ್ತಿದೆ; ಡಿಕೆಶಿ ಹೊಸ ಬಾಂಬ್

Continue Reading

ಕ್ರಿಕೆಟ್

T20 World Cup 2024: ಟಿ20 ವಿಶ್ವಕಪ್​ಗೆ ಕ್ಷಣಗಣನೆ; ಭಾರತ ಸೇರಿ ಬಲಿಷ್ಠ ತಂಡಗಳ ಪಂದ್ಯದ ವೇಳಾಪಟ್ಟಿ ಇಲ್ಲಿದೆ

T20 World Cup 2024: ಟೂರ್ನಿಯ ಲೀಗ್​ ಮತ್ತು ಸೂಪರ್​ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು ದಿನ ಇರಲಿದೆ.

VISTARANEWS.COM


on

T20 World Cup 2024
Koo

ನ್ಯೂಯಾರ್ಕ್​: ಬುನಿರೀಕ್ಷಿತ ಪುರುಷರ ಐಸಿಸಿ ಟಿ20 ವಿಶ್ವಕಪ್​ ಟೂರ್ನಿ(T20 World Cup 2024) ನಾಳೆಯಿಂದ ಆರಂಭಗೊಳ್ಳಲಿದೆ. ಭರ್ತಿ ಒಂದು ತಿಂಗಳ ಕಾಲ ಟೂರ್ನಿ ನಡೆತಲಿದ್ದು ಕ್ರಿಕೆಟ್​ ಅಭಿಮಾನಿಗಳಿಗೆ ಈ ಒಂದು ತಿಂಗಳು ರಸದೌತಣ ಸಿಗಲಿದೆ. ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ 20 ತಂಡಗಳು ಭಾಗವಹಿಸುತ್ತಿವೆ. ಭಾರತ ಮತ್ತು, ಇನ್ನುಳಿದ ಬಲಿಷ್ಠ ತಂಡಗಳ ಪಂದ್ಯದ(T20 World Cup Schedule) ವೇಳಾಪಟ್ಟಿ ಇಂತಿದೆ.

ಭಾರತದ ಪಂದ್ಯಗಳು

ದಿನಾಂಕಎದುರಾಳಿಸ್ಥಳ
ಜೂನ್​ 5ಐರ್ಲೆಂಡ್​ನ್ಯೂಯಾರ್ಕ್​
ಜೂನ್​ 9ಪಾಕಿಸ್ತಾನನ್ಯೂಯಾರ್ಕ್​
ಜೂನ್​ 12ಅಮೆರಿಕನ್ಯೂಯಾರ್ಕ್
ಜೂನ್​ 15ಕೆನಡಾಫ್ಲೋರಿಡಾ

ಮೊದಲ ಸುತ್ತಿನ ಇತರ ಪಂದ್ಯಗಳು

ದಿನಾಂಕಪಂದ್ಯಸ್ಥಳ
ಜೂನ್ 3ಶ್ರೀಲಂಕಾ-ದಕ್ಷಿಣ ಆಫ್ರಿಕಾನ್ಯೂಯಾರ್ಕ್
ಜೂನ್​ 7ನ್ಯೂಜಿಲ್ಯಾಂಡ್​-ಅಫಘಾನಿಸ್ತಾನಗಯಾನ
ಜೂನ್​ 7 ಶ್ರೀಲಂಕಾ-ಬಾಂಗ್ಲಾದೇಶಡಲ್ಲಾಸ್
ಜೂನ್​ 8ಆಸ್ಟ್ರೇಲಿಯಾ-ಇಂಗ್ಲೆಂಡ್ಬಾರ್ಬಡೋಸ್​
ಜೂನ್​ 10ದಕ್ಷಿಣ ಆಫ್ರಿಕಾ-ಬಾಂಗ್ಲಾದೇಶನ್ಯೂಯಾರ್ಕ್
ಜೂನ್​ 12ವೆಸ್ಟ್​ ಇಂಡೀಸ್​-ನ್ಯೂಜಿಲ್ಯಾಂಡ್ನ್ಯೂಯಾರ್ಕ್
ಜೂನ್​ 15ಆಸ್ಟ್ರೇಲಿಯಾ-ಸ್ಕಾಟ್ಲೆಂಡ್ಸೇಂಟ್​ ಲೂಸಿಯಾ
ಜೂನ್​ 17ವೆಸ್ಟ್​ ಇಂಡೀಸ್​-ಅಫಘಾನಿಸ್ತಾನಸೇಂಟ್​ ಲೂಸಿಯಾ

ನಾಕೌಟ್​ ಪಂದ್ಯಗಳ ವೇಳಾಪಟ್ಟಿ

ದಿನಾಂಕಪಂದ್ಯಸ್ಥಳ
ಜೂನ್​ 26 ಮೊದಲ ಸೆಮಿಫೈನಲ್ಗಯಾನ
ಜೂನ್​ 27ದ್ವಿತೀಯ ಸೆಮಿಫೈನಲ್ಟ್ರಿನಿಡಾಡ್
ಜೂನ್​ 29ಫೈನಲ್ಬಾರ್ಬಡೋಸ್

ಅಮೆರಿಕದಲ್ಲೇ ಭಾರತದ ಬಹುಪಾಲು ಪಂದ್ಯ


ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆಯಲಿವೆ. ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ T20 World Cup 2024: ನಾಳೆಯಿಂದ ಟಿ20 ವಿಶ್ವಕಪ್​ ಸಮರ ಆರಂಭ; 20 ತಂಡಗಳ ಮಾಹಿತಿ ಹೀಗಿದೆ

ಮೀಸಲು ದಿನ


ಟೂರ್ನಿಯ ಲೀಗ್​ ಮತ್ತು ಸೂಪರ್​ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್​ ಫೈನಲ್​ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.

4 ಗುಂಪುಗಳ ತಂಡಗಳ ಪಟ್ಟಿ

ಗುಂಪು ಎ- ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಯುಎಸ್​ಎ.

ಗುಂಪು ಬಿ- ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಓಮನ್.

ಗುಂಪು ಸಿ- ನ್ಯೂಜಿಲ್ಯಾಂಡ್​, ಅಫಘಾನಿಸ್ತಾನ, ವೆಸ್ಟ್ ಇಂಡೀಸ್, ಉಗಾಂಡಾ, ಪಿಎನ್​ಜಿ.

ಗುಂಪು ಡಿ- ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್, ಶ್ರೀಲಂಕಾ, ನೇಪಾಳ.

ಸ್ವರೂಪ ಬದಲು

2022ರ ಆವೃತ್ತಿಯಲ್ಲಿ 12 ತಂಡಗಳು ಭಾಗಿಯಾಗಿದ್ದವು. ಆದರೆ 2024ರ ಟೂರ್ನಿಯಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ.  ಹಿಂದಿನ ಆವೃತ್ತಿಗಳಿಗಿಂತ ಈ ಬಾರಿ ಟೂರ್ನಿ ವಿಭಿನ್ನ ಸ್ವರೂಪವನ್ನು ಹೊಂದಿದೆ. ಒಟ್ಟು 20 ತಂಡಗಳನ್ನು ತಲಾ ಐದು ತಂಡಗಳಂತೆ ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಗುಂಪು ವಿಭಾಗದಲ್ಲಿ ಪ್ರತಿ ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಆಡಲಿವೆ. ಪ್ರತಿ ಗುಂಪಿನಿಂದ ತಲಾ ಎರಡು ತಂಡಗಳು ಸೂಪರ್ ಎಂಟರ ಹಂತಕ್ಕೆ ತೇರ್ಗಡೆ ಪಡೆಯಲಿವೆ. ಅಲ್ಲೂ ತಲಾ ನಾಲ್ಕು ತಂಡಗಳ ಎರಡು ಗುಂಪುಗಳು ಇದ್ದು, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಡಲಿವೆ.

Continue Reading

ಪ್ರಮುಖ ಸುದ್ದಿ

Prajwal Revanna Case: ಇಂದು ರೇವಣ್ಣ ಕುಟುಂಬದ ಮೂವರಿಗೂ ಅಗ್ನಿಪರೀಕ್ಷೆ !

ಪ್ರಜ್ವಲ್‌ ರೇವಣ್ಣ (Hassan MP Prajwal revanna Case) ಅವರಿಗೆ ಜಾಮೀನೋ, ಜೈಲೋ ಎಂಬುದು ಇಂದು ನಿರ್ಧಾರವಾಗಲಿದೆ. ಜೊತೆಗೆ ಭವಾನಿ ರೇವಣ್ಣ (Bhavani Revanna) ಅವರ ಜಾಮೀನು ಅರ್ಜಿಯೂ ಇಂದೇ ವಿಚಾರಣೆಗೆ ಬರಲಿದೆ. ಎಚ್‌ಡಿ ರೇವಣ್ಣ (HD revanna) ಅವರು ತಮ್ಮ ಮೇಲಿನ ಎಫ್‌ಐಆರ್‌ ರದ್ದತಿಗೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯೂ ಇಂದು ನಡೆಯಲಿದೆ.

VISTARANEWS.COM


on

Prajwal Revanna Case Another case against Revanna transferred to SIT Notice to Bhavani
Koo

ಬೆಂಗಳೂರು: ಇಂದು ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna) ಅವರ ಕುಟುಂಬದ ಮೂವರಿಗೂ ಅಗ್ನಿಪರೀಕ್ಷೆ ಕಾದಿದೆ. ಅಶ್ಲೀಲ ವಿಡಿಯೋ (obscene video) ಹಾಗೂ ಲೈಂಗಿಕ ದೌರ್ಜನ್ಯ (physical abuse) ಪ್ರಕರಣದಲ್ಲಿ ನಿನ್ನೆ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (kempegowda international airport) ಆರೆಸ್ಟ್ ಆಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Hassan MP Prajwal revanna Case) ಅವರಿಗೆ ಜಾಮೀನೋ, ಜೈಲೋ ಎಂಬುದು ಇಂದು ನಿರ್ಧಾರವಾಗಲಿದೆ. ಜೊತೆಗೆ ಭವಾನಿ ರೇವಣ್ಣ (Bhavani Revanna) ಅವರ ಜಾಮೀನು ಅರ್ಜಿಯೂ ಇಂದೇ ವಿಚಾರಣೆಗೆ ಬರಲಿದೆ. ಎಚ್‌ಡಿ ರೇವಣ್ಣ (HD revanna) ಅವರು ತಮ್ಮ ಮೇಲಿನ ಎಫ್‌ಐಆರ್‌ ರದ್ದತಿಗೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯೂ ಇಂದು ನಡೆಯಲಿದೆ.

ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ‌ ಅವರ ಪರ ವಕೀಲರು ಜನಪ್ರತಿನಿಧಿಗಳ ಕೋರ್ಟ್‌ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮೇ 29ರಂದೇ ನಿರೀಕ್ಷಣಾ ಜಾಮೀನಿಗೆ ವಕೀಲ ಅರುಣ್ ಮೂಲಕ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಪ್ರಜ್ವಲ್ ರೇವಣ್ಣ ಬಂಧನವಾಗಿರುವ ಹಿನ್ನೆಲೆಯಲ್ಲಿ ಇನ್ನು ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ‌ ಅವಶ್ಯಕತೆ ಇಲ್ಲ. ಹಾಗಾಗಿ ಇಂದು ಪ್ರಜ್ವಲ್ ರೇವಣ್ಣ ಪರ ವಕೀಲರು ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ಕೋರ್ಟ್‌ ಮುಂದೆ ಸಲ್ಲಿಸಲಿದ್ದಾರೆ.

ಎಸ್‌ಐಟಿ ಕೂಡ ಇಂದು ಅಗತ್ಯ ಮೆಡಿಕಲ್‌ ಟೆಸ್ಟ್‌ಗಳ ಬಳಿಕ ಪ್ರಜ್ವಲ್‌ ಅವರನ್ನು ಕೋರ್ಟ್‌ ಮುಂದೆ ಹಾಜರುಪಡಿಸಬೇಕಿದೆ. ನ್ಯಾಯಾಲಯಕ್ಕೆ‌ ಹಾಜರುಪಡಿಸಿ ಕನಿಷ್ಠ 14 ದಿನಗಳ ಕಸ್ಟಡಿಗೆ ಎಸ್ಐಟಿ ಅಧಿಕಾರಿಗಳು ಮನವಿ ಮಾಡಲಿದ್ದಾರೆ ಎಂದು ಗೊತ್ತಾಗಿದೆ. ಯಾಕೆಂದರೆ ಅಷ್ಟೊಂದು ಅಗಾಧ ಪ್ರಮಾಣದ ತನಿಖೆ ನಡೆಯಬೇಕಿದೆ. ಪ್ರಕರಣದ ಗಂಭೀರತೆ ಹೆಚ್ಚು ಇರುವುದರಿಂದ ಎಸ್ಐಟಿ ಅಧಿಕಾರಿಗಳ ವಶಕ್ಕೆ ಪ್ರಜ್ವಲ್‌ ಅವರನ್ನು ನೀಡುವ ಸಾಧ್ಯತೆಯೇ ಅಧಿಕವಾಗಿದೆ.

ಭವಾನಿಗೂ ಕಷ್ಟ

ಅತ್ತ ಭವಾನಿ ರೇವಣ್ಣ ಅವರಿಗೂ ಇಂದು ಜಾಮೀನು ಟೆನ್ಷನ್ ಇದೆ. ಕೆ.ಆರ್‌.ನಗರ ತಾಲೂಕಿನ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿರುವ ಭವಾನಿ ರೇವಣ್ಣ, ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಜನಪ್ರತಿನಿಧಿಗಳ ಕೋರ್ಟ್​ ಜಡ್ಜ್ ಇಂದು ಬೇಲ್ ಅರ್ಜಿ ತೀರ್ಪು ಪ್ರಕಟಿಸಲಿದ್ದಾರೆ. ಸಂತ್ರಸ್ತೆಯ ಅಪಹರಣದ ಆರೋಪದಲ್ಲಿ SIT ಪರ ವಕೀಲ ಹಾಗೂ ಭವಾನಿ ಪರ ವಕೀಲರ ವಾದವನ್ನು ಆಲಿಸಿದ್ದ ಕೋರ್ಟ್​ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಇಂದು ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರಿಂದ ತೀರ್ಪು ಹೊರಬೀಳಲಿದೆ.

ರೇವಣ್ಣ ಎಫ್‌ಐಆರ್‌ ರದ್ದು ಅರ್ಜಿ

ಎಫ್ಐಆರ್ ರದ್ದು ಕೋರಿ ರೇವಣ್ಣ ಸಲ್ಲಿಸಿರುವ ಅರ್ಜಿ ಸಹ ಇಂದು ವಿಚಾರಣೆ ನಡೆಯಲಿದೆ. ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ತಮ್ಮ ಮೇಲಿರುವ ದೂರನ್ನು ಕೈಬಿಡಲು ರೇವಣ್ಣ ಕೋರಿದ್ದಾರೆ. ಅಪಹರಣ ಪ್ರಕರಣದಲ್ಲೂ, ಹೊಳೆನರಸೀಪುರ (Holenarasipura) ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ (physical abuse) ಪ್ರಕರಣದಲ್ಲೂ ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna case) ಅವರಿಗೆ ಜಾಮೀನು (Bail) ಮಂಜೂರಾಗಿದೆ. ಆದರೆ ಜನಪ್ರತಿನಿಧಿಗಳ ಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಎಸ್ಐಟಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಆದೇಶವನ್ನು ಪ್ರಶ್ನೆ ಮಾಡಲಿದೆ.

ಎಚ್‌ಡಿಕೆ ಎಲ್ಲಿದ್ದಾರೆ?

ಅತ್ತ ಪ್ರಜ್ವಲ್ ರಾಜ್ಯಕ್ಕೆ ಎಂಟ್ರಿ ಆಗುತ್ತಾರೆ ಅನ್ನುವ ಸುದ್ದಿ ಬಂದ ತಕ್ಷಣ ಎಚ್‌ಡಿ ಕುಮಾರಸ್ವಾಮಿ ಹಾಗೂ ಕುಟುಂಬ ಬೆಂಗಳೂರು ಬಿಟ್ಟು ಹೊರ ಹೋಗಿದ್ದು, ಜಂಗಲ್‌ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಪ್ರತಿಯೊಂದು ಕಾನೂನು ಹೋರಾಟದ ವಿವರಗಳನ್ನು ಪಡೆದುಕೊಳ್ಳುತ್ತಿದ್ದು, ರಾಜಕೀಯವಾಗಿಯೂ ಈ ಪ್ರಕರಣದಲ್ಲಿ ಮುಂದಿನ ನಡೆ ಹೇಗೆ ಎಂಬ ಬಗ್ಗೆ ಪಕ್ಷದ ಮುಖಂಡರು ಹಾಗೂ ಆಪ್ತರ ಜೊತೆ ಚರ್ಚಿಸುತ್ತಿದ್ದಾರೆ.

ಪ್ರಜ್ವಲ್‌ ಪುರುಷತ್ವ ಪರೀಕ್ಷೆ

ಆರೆಸ್ಟ್ ಆಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಇಂದು ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಎಸ್‌ಐಟಿ ಮುಂದಾಗಿದೆ. ಆರೋಪಿ ತನಿಖೆಗೆ ಸಹಕರಿಸಲು ದೈಹಿಕ- ಮಾನಸಿಕವಾಗಿ ಸಿದ್ಧನಾಗಿದ್ದಾನೆಯೇ ಎಂಬುದನ್ನು ಈ ಪರೀಕ್ಷೆಗಳ ಮೂಲಕ ತಿಳಿದುಕೊಳ್ಳಲಾಗುತ್ತದೆ.

ಪ್ರಕರಣದ ತನಿಖೆ ಹಾಗೂ ವಿಚಾರಣೆಗೆ ಎಲ್ಲಾ ರೀತಿಯ ಸಿದ್ಧತೆಯನ್ನು ಎಸ್‌ಐಟಿ ನಡೆಸಿದೆ. ಒಂದು ವೇಳೆ, ವಿಡಿಯೋದಲ್ಲಿ ಇರುವಂಥ ಕಾಮಕಾಂಡ ತಾನೇನೂ ಮಾಡಿಲ್ಲ ಎಂದು ಪ್ರಜ್ವಲ್ ಅಫಿಡವಿಟ್ ಸಲ್ಲಿಸಿದರೆ, ಪ್ರಜ್ವಲ್ ರೇವಣ್ಣಗೆ ಪುರುಷತ್ವ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ತಾನು ಅತ್ಯಾಚಾರ ಮಾಡಿಲ್ಲ ಎಂದು ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸುವ ಸಾಧ್ಯತೆಯೂ ಇರುವುದರಿಂದ, ಮುಂದಿನ ಹಂತದಲ್ಲಿ ಪ್ರಜ್ವಲ್ ರೇವಣ್ಣರ ಪುರುಷತ್ವ ಪರೀಕ್ಷೆಯನ್ನು ಎಸ್‌ಐಟಿ ಮಾಡಿಸಲಿದೆ.

ನಂತರ ಹಾಸನ ಸಂಸದರ ನಿವಾಸದಲ್ಲಿ ಸಂಗ್ರಹಿಸಲಾದ ಹಾಸಿಗೆ- ಹೊದಿಕೆ ಇತ್ಯಾದಿಗಳಲ್ಲಿ ಕಂಡುಬಂದಿರುವ ಡಿಎನ್‌ಎಗೂ, ಪ್ರಜ್ವಲ್‌ ಡಿಎನ್‌ಎಗೂ ಮ್ಯಾಚ್‌ ಮಾಡಲಾಗುತ್ತದೆ. ಒಟ್ಟು ಮೂರು ಹಂತದಲ್ಲಿ ಪ್ರಜ್ವಲ್ ರೇವಣ್ಣ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಈ ಹಿಂದೆಯೂ ಅನೇಕರಿಗೆ ಅತ್ಯಾಚಾರ ಪ್ರಕರಣದಲ್ಲಿ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು. ಸ್ವಾಮಿ ನಿತ್ಯಾನಂದ, ಮುರುಘಾ ಶ್ರೀ, ಅಸಾರಾಂ ಬಾಪು ಸೇರಿದಂತೆ ಹಲವರಿಗೆ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು.

ಇದನ್ನೂ ಓದಿ: Prajwal Revanna Case: ವಿದೇಶದಲ್ಲಿಯೇ ಮೊಬೈಲ್‌ ನಾಶ ಮಾಡಿದರಾ ಪ್ರಜ್ವಲ್?

Continue Reading
Advertisement
Donald Trump
ವಿದೇಶ5 mins ago

ʼಹಷ್‌ ಮನಿʼ ಪ್ರಕರಣದಲ್ಲಿ ಟ್ರಂಪ್‌ ದೋಷಿ; ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ಅಮೆರಿಕದ ಮಾಜಿ ಅಧ್ಯಕ್ಷರಿಗೆ ಶತಕೋಟಿ ರೂ. ನಷ್ಟ

Nandamuri Balakrishna pushed incident Anjali breaks silence
South Cinema14 mins ago

Nandamuri Balakrishna: ವೇದಿಕೆ ಮೇಲೆ ತಳ್ಳಿದ್ದ ಬಾಲಯ್ಯ ಬಗ್ಗೆ ಕೊನೆಗೂ ಪ್ರತಿಕ್ರಿಯೆ ಕೊಟ್ಟ ನಟಿ ಅಂಜಲಿ!

T20 World Cup 2024
ಕ್ರಿಕೆಟ್15 mins ago

T20 World Cup 2024: ಟಿ20 ವಿಶ್ವಕಪ್​ ಪಂದ್ಯ ನಡೆಯುವ ತಾಣ,ಭಾರತದ ಪಂದ್ಯಗಳ ಪ್ರಸಾರದ ಮಾಹಿತಿ ಹೀಗಿದೆ

Shatru Bhairavi yaga ಶತ್ರು ಭೈರವಿ ಯಾಗ
ರಾಜಕೀಯ36 mins ago

ಮಾರಣ ಶತ್ರು ಭೈರವಿ ಯಾಗ ಎದುರಿಸಲು ರಕ್ಷಣಾಕವಚ ಮಾಡಿಸಿದ ಡಿಕೆಶಿ! ಹೀಗಿರುತ್ತೆ ನೋಡಿ ಯಾಗ

T20 World Cup 2024
ಕ್ರಿಕೆಟ್52 mins ago

T20 World Cup 2024: ಟಿ20 ವಿಶ್ವಕಪ್​ಗೆ ಕ್ಷಣಗಣನೆ; ಭಾರತ ಸೇರಿ ಬಲಿಷ್ಠ ತಂಡಗಳ ಪಂದ್ಯದ ವೇಳಾಪಟ್ಟಿ ಇಲ್ಲಿದೆ

Shilpa Shetty Shares Special Video From KD Kannada Movie
ಸ್ಯಾಂಡಲ್ ವುಡ್53 mins ago

Shilpa Shetty: ʻಕೆಡಿʼಸಿನಿಮಾ ಶೂಟಿಂಗ್‌ ಮುಗಿಸಿ ಹೊಸ ವಿಡಿಯೊ ಹಂಚಿಕೊಂಡ ಶಿಲ್ಪಾ ಶೆಟ್ಟಿ!

World No Tobacco Day
ಆರೋಗ್ಯ60 mins ago

World No Tobacco Day: ಇಂದು ವಿಶ್ವ ತಂಬಾಕು ರಹಿತ ದಿನ; ತಂಬಾಕು ಸೇವನೆಯಿಂದ ವರ್ಷಕ್ಕೆ 60 ಲಕ್ಷ ಜನರ ಸಾವು!

Air India Flight
ದೇಶ1 hour ago

Air India Flight: ಏರ್ ಇಂಡಿಯಾ ವಿಮಾನ 20 ಗಂಟೆ ವಿಳಂಬ; ಎಸಿ ಇಲ್ಲದೆ ಪ್ರಜ್ಞೆ ತಪ್ಪಿ ಬಿದ್ದ ಪ್ರಯಾಣಿಕರು

PM Narendra Modi
ದೇಶ1 hour ago

PM Narendra Modi: ಕನ್ಯಾಕುಮಾರಿಯಲ್ಲಿ ʼನಮೋʼ- ಪ್ರಧಾನಿ ಮೋದಿಯ 33 ವರ್ಷ ಹಳೆಯ ಫೊಟೋ ವೈರಲ್‌

T20 World Cup 2024
ಕ್ರೀಡೆ1 hour ago

T20 World Cup 2024: ನಾಳೆಯಿಂದ ಟಿ20 ವಿಶ್ವಕಪ್​ ಸಮರ ಆರಂಭ; 20 ತಂಡಗಳ ಮಾಹಿತಿ ಹೀಗಿದೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ21 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು3 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ4 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ5 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು5 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌