ವಾಷಿಂಗ್ಟನ್: ಜಾಗತಿಕ ಎಲೆಕ್ಟ್ರಿಕ್ ಕಾರು ಉತ್ಪಾದನಾ ಕಂಪನಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ (Elon Musk) ಅವರು ಟ್ವಿಟರ್‌ಅನ್ನು ಖರೀದಿಸಿ, ಅದರ ಸಿಇಒ ಪರಾಗ್ ಅಗ್ರವಾಲ್ ಅವರಿಂದ ಹಿಡಿದು ಬಹುತೇಕ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿದ್ದಾರೆ. ಭಾರತದಲ್ಲೂ ನೌಕರರನ್ನು ಮನೆಗೆ ಕಳುಹಿಸಿದ್ದಾರೆ. ಇದರ ಬೆನ್ನಲ್ಲೇ ಟ್ವಿಟರ್ ಸಂಸ್ಥಾಪಕ ಜಾಕ್ ಡೋರ್ಸೆ (Jack Dorsey Apology) ಅವರು ಜಾಲತಾಣದ ಉದ್ಯೋಗಿಗಳಿಗೆ ಕ್ಷಮೆ ಕೋರಿದ್ದಾರೆ.
“ಸಹೋದ್ಯೋಗಿ ಮಿತ್ರರೆ, ಟ್ವಿಟರ್‌ನ ಭೂತ ಹಾಗೂ ವರ್ತಮಾನವು ಸೃದೃಢವಾಗಿಯೇ ಇದೆ. ಆದರೆ, ಪ್ರಸ್ತುತ ಸ್ಥಿತಿಯಲ್ಲಿ ಸಹೋದ್ಯೋಗಿ ಮಿತ್ರರಾದ ನೀವು ನನ್ನ ಮೇಲೆ ಕೋಪಗೊಂಡಿದ್ದೀರಿ ಎಂಬುದು ಗೊತ್ತಿದೆ. ಇಂತಹ ದುಸ್ಥಿತಿ ಬಂದೊದಗಿರುವುದರ ಜವಾಬ್ದಾರಿಯನ್ನು ನಾನೇ ಹೊರುತ್ತೇನೆ. ಇದಕ್ಕಾಗಿ ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ” ಎಂದು ಜಾಕ್ ಟ್ವೀಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣವನ್ನು ಖರೀದಿಸಿದ ಹುಮ್ಮಸ್ಸಿನಲ್ಲಿರುವ ಎಲಾನ್ ಮಸ್ಕ್ ಅವರು ಏಕಾಏಕಿ ಎಲ್ಲ ವ್ಯವಸ್ಥೆ ಬದಲಾಯಿಸುತ್ತಿದ್ದಾರೆ. ಸಿಇಒ ಅವರಿಂದ ಹಿಡಿದು ಸಾಮಾನ್ಯ ನೌಕರರವರೆಗೆ ಶೇ.50ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ್ದಾರೆ. ಇಂತಹ ಪರಿಸ್ಥಿತಿ ನಾನೇ ಕಾರಣನಾದೆ ಎಂಬ ಪಶ್ಚಾತ್ತಾಪ ಭಾವದಿಂದ ಜಾಕ್ ಡೋರ್ಸೆ ಕ್ಷಮೆಯಾಚಿಸಿದ್ದಾರೆ.
ಇದನ್ನೂ ಓದಿ | Twitter India Employees | ಭಾರತದಲ್ಲೂ ಟ್ವಿಟರ್ ನೌಕರರ ವಜಾ, ಮಾರ್ಕೆಟಿಂಗ್‌ನ ಎಲ್ಲರಿಗೂ ಗೇಟ್‌ಪಾಸ್